Friday, July 1, 2022

ಮಂಗಳೂರಿನಲ್ಲಿ ಗುದನಾಳದಲ್ಲಿಟ್ಟು ಚಿನ್ನ ಸಾಗಾಟ: ಓರ್ವ ವಶಕ್ಕೆ

ಮಂಗಳೂರು: ದುಬೈನಿಂದ‌ ಆಗಮಿಸಿದ ಪ್ರಯಾಣಿಕನೋರ್ವನಿಂದ  ಅಕ್ರಮವಾಗಿ ಸಾಗಿಸುತ್ತಿದ್ದ 20.89 ಲಕ್ಷ ರೂ. ಮೌಲ್ಯದ ಚಿನ್ನವನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.


ದುಬೈನಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ IX 248 ವಿಮಾನದಲ್ಲಿ ಮಂಗಳೂರು ವಿಮಾನ‌ ನಿಲ್ದಾಣದಲ್ಲಿ ಬಂದಿಳಿದ ಕಾಸರಗೋಡು ಮೂಲದ ಪ್ರಯಾಣಿಕನಿಂದ ಈ ಚಿನ್ನವನ್ನು ಪತ್ತೆ ಹಚ್ಚಲಾಗಿದೆ. ತಪಾಸಣೆ ವೇಳೆ ಆರೋಪಿಯು 430 ಗ್ರಾಂ ತೂಕದ ಚಿನ್ನವನ್ನು ಪೌಡರ್ ಮಾಡಿ ಗಮ್‌ನೊಂದಿಗೆ ಮಿಕ್ಸ್ ಮಾಡಿ ಗುದನಾಳದಲ್ಲಿಟ್ಟು ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

LEAVE A REPLY

Please enter your comment!
Please enter your name here

Hot Topics

ಬೆಳ್ತಂಗಡಿ: ಬೀದಿ ಬದಿ ಅಂಗಡಿ ತೆರವು ಪ್ರಕರಣದ ವಿರುದ್ಧ ಪ್ರತಿಭಟನೆ

ಬೆಳ್ತಂಗಡಿ: ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಿಂದ ಕೊಕ್ಕಡ ಸಂಪರ್ಕಿಸುವ ನಿಡ್ಲೆ ಪಂಚಾಯತ್‌ ವ್ಯಾಪ್ತಿಯ ಪಾರ್ಪಿಕಲ್‌ ರಸ್ತೆಯಲ್ಲಿರುವ ಬೀದಿ ಬದಿ ವ್ಯಾಪಾರಸ್ಥರನ್ನು PWD ತೆರವುಗೊಳಿಸಿರುವ ವಿರುದ್ಧ ಬೃಹತ್ ಪ್ರತಿಭಟನೆ ಇಂದು ಬೆಳ್ತಂಗಡಿಯ ಪಿಡಬ್ಲ್ಯೂಡಿ...

ಕನ್ಹಯ್ಯಾಲಾಲ್ ಹತ್ಯೆ ಪ್ರಕರಣ: ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

ಜೈಪುರ: ದೇಶಾದ್ಯಂತ ಸುದ್ದಿಯಾದ ಉದಯಪುರದಲ್ಲಿ ಟೈಲರ್ ಕನ್ಹಯ್ಯಾ ಲಾಲ್ ತೇಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳಾದ ಮೊಹಮ್ಮದ್ ರಿಯಾಜ್ ಅಖ್ತರ್ ಮತ್ತು ಮೊಹಮ್ಮದ್ ಗೌಸ್ ಉದಯಪುರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು...

ಟೈಲರ್ ಕನ್ನಯ್ಯ ಲಾಲ್ ಕೊಲೆಗೈದವರಿಗೆ ಮರಣದಂಡನೆ ವಿಧಿಸಿ: ಶಾಸಕ ಕಾಮತ್‌ ಆಗ್ರಹ

ಮಂಗಳೂರು: ರಾಜಸ್ಥಾನದ ಉದಯಪುರದಲ್ಲಿ ಬಡ ಟೈಲರ್ ಕನ್ನಯ್ಯ ಲಾಲ್ ಹತ್ಯೆಗೈದು ಪ್ರಧಾನಮಂತ್ರಿಗಳಿಗೆ ಬೆದರಿಕೆಯೊಡ್ಡಿದ ಹಂತಕರಿಗೆ ಮರಣ ದಂಡನೆ ವಿಧಿಸುವ ಮೂಲಕ ಮುಂದಿನ ದಿನಗಳಲ್ಲಿ ಇಂತಹ ಕುಕೃತ್ಯ ಎಸಗುವವರಿಗೆ ಎಚ್ಚರಿಕೆಯ ಸಂದೇಶ ನೀಡಬೇಕೆಂದು ಮಂಗಳೂರು...