Monday, January 24, 2022

ಕಾಸರಗೋಡಿನ ಜ್ಯುವೆಲ್ಲರಿಯಿಂದ ವಜ್ರಾಭರಣ ಕಳವು ಪ್ರಕರಣ: ಬಂಟ್ವಾಳ ಮೂಲದ ಆರೋಪಿಯ ಬ್ಯಾಂಕ್‌ ಖಾತೆ ಮುಟ್ಟುಗೋಲು

ಬಂಟ್ವಾಳ: ಕಾಸರಗೋಡಿನ ಜ್ಯುವೆಲ್ಲರಿಯಿಂದ ಕೋಟ್ಯಾಂತರ ಮೌಲ್ಯದ ವಜ್ರಾಭರಣ ಕಳವು ಪ್ರಕರಣ ಸಂಬಂಧಿಸಿದಂತೆ ಪೊಲೀಸ್ ತನಿಖೆಯು ಚುರುಕುಗೊಳ್ಳುತ್ತಿದ್ದು, ಆರೋಪಿಯಾದ ಅಸಿಸ್ಟೆಂಟ್ ಸೇಲ್ಸ್ ಮ್ಯಾನೇಜರ್ ಬಂಟ್ವಾಳ ಪೊಲೀಸ್ ಠಾಣೆ ವ್ಯಾಪ್ತಿಯ ಮೊಹಮ್ಮದ್ ಫಾರೂಕ್ ಮತ್ತು ಸಹೋದರನ ಬ್ಯಾಂಕ್ ಖಾತೆ ಮುಟ್ಟುಗೋಲು ಮಾಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಕಾಸರಗೋಡು, ವಿದ್ಯಾನಗರ ದಲ್ಲಿ ಆರೋಪಿಯು ಬ್ಯಾಂಕಿನಲ್ಲಿ 15 ಲಕ್ಷದ ಸ್ವರ್ಣಭರಣ ಈಡು ನೀಡಿದ್ದನ್ನು ಕಂಡುಹಿಡಿಯಲಾಗಿದೆ ಎಂದು ತನಿಖಾ ಅಧಿಕಾರಿಗಳು ಮುಂಚಿತವಾಗಿ ಹೇಳಿದ್ದರು. ಇದಾದ ನಂತರ ಬ್ಯಾಂಕ್ ಖಾತೆ ಮುಟ್ಟುಗೋಲು ಮಾಡಲಾಗಿದೆ.
ಕಾಸರಗೋಡು ಡಿವೈಎಸ್ಪಿ ಬಾಲಕೃಷ್ಣನ್ ನಾಯರ್ ನೇತೃತ್ವದಲ್ಲಿ ತನಿಖೆಯು ನಡೆಯುತ್ತಿದ್ದು, ಈತನನ್ನು ಕಂಡುಹಿಡಿಯಲು ಇತರ ರಾಜ್ಯಗಳಲ್ಲಿ ಕೂಡ ತೀವ್ರ ತನಿಖೆಯನ್ನು ನಡೆಸಲಾಗುತ್ತಿದ್ದು, ಅರೋಪಿಯು ವಿದೇಶಕ್ಕೆ ಪರಾರಿಯಾಗುವ ಸಾದ್ಯತೆ ಇದ್ದು, ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ನಾಪತ್ತೆ ಪ್ರಕರಣ ದಾಖಲು

ಅತ್ತ ಕಡೆ ವಜ್ರಾಭರಣ ಕಳವು ಪ್ರಕರಣ ಸಂಬಂಧಪಟ್ಟಂತೆ ತನಿಖೆ ಚುರುಕುಗೊಳ್ಳುತ್ತಿದ್ದರೆ, ಇತ್ತ ಕಡೆ ಆರೋಪಿ ಪತ್ನಿ ಪತಿ ನಾಪತ್ತೆಯಾದ ಬಗ್ಗೆ ದೂರು ದಾಖಲಿಸಿದ್ದಾರೆ.

Hot Topics

ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿಯವರನ್ನು ಭೇಟಿ ಮಾಡಿದ ಬಿಜೆಪಿ ಮುಖಂಡರು

ಬಂಟ್ವಾಳ: ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಇಂದು ಹಿರಿಯ ಮುಖಂಡರಾದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿಯವರ ಬಂಟ್ವಾಳದ ನಿವಾಸಕ್ಕೆ ಭೇಟಿ ಮಾಡಿ ಅವರ ಆರ್ಶೀವಾದ ಪಡೆದರು.ಈ ವೇಳೆ ರಾಜ್ಯ...

“ಬಿಜೆಪಿಗರಿಗೆ ವಿಶ್ವಗುರು ನರೇಂದ್ರ ಮೋದಿ ಒಬ್ಬರೇ”

ಮಂಗಳೂರು: ಬಿಜೆಪಿಗರಿಗೆ ಇಡೀ ಪ್ರಪಂಚದಲ್ಲಿ ಏಕೈಕ ಗುರು ವಿಶ್ವಗುರು ಎನ್ನುವ ನರೇಂದ್ರ ಮೋದಿ ಬಿಟ್ಟು ಬೇರೆ ಯಾವ ಗುರುಗಳಿಗೂ ಗೌರವ ಕೊಡದಿದ್ದುದನ್ನು ನೋಡಿದ್ದೇವೆ ಎಂದು ವಿಧಾನ ಪರಿಷತ್‌ ಸದಸ್ಯ ಬಿ ಕೆ ಹರಿಪ್ರಸಾದ್...

ಕಿನ್ನಿಗೋಳಿ ಶಾಂಭವಿ ನದಿಯಲ್ಲಿನ ಅಕ್ರಮ ಮರಳುಗಾರಿಕೆ ಅಡ್ಡೆಗೆ ಅಧಿಕಾರಿಗಳ ದಾಳಿ..!

ಮಂಗಳೂರು : ಮಂಗಳೂರು ಹೊರವಲಯದ ಕಿನ್ನಿಗೋಳಿ ಸಮೀಪದ ಏಳಿಂಜೆ ಪಟ್ಟೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆಗೆ ಮಂಗಳೂರು ಗಣಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.ಇಲ್ಲಿನ ಶಾಂಭವಿ ನದಿಯಲ್ಲಿ ಕಳೆದ ಹಲವು ವರ್ಷಗಳಿಂದ ರಾತ್ರಿ ಹಗಲೆನ್ನದೆ...