ಉಡುಪಿ: ಇಲ್ಲಿನ ಪ್ರತಿಷ್ಠಿತ ಜುವೆಲ್ಲರಿಗೆ ನುಗ್ಗಿ 60 ಗ್ರಾಂ ತೂಕದ ರೂ. 3,00,000 ಮೌಲ್ಯದ 4 ಚಿನ್ನದ ಬಳೆಗಳನ್ನು ಎಗರಿಸಿದ ಪ್ರಕರಣದಲ್ಲಿ ಪೊಲೀಸರು ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಆಸೀಫ್ ಅಸ್ಪಾಕ್ ಶೇಖ್, ನಾಜಿಯಾ ಆಸೀಫ್ ಶೇಖ್ ಹಾಗೂ ಸೌದಾಗರ್ ದಿಲಿಪ್ ಗೋಂದ್ ಕರ್ ಎಂದು ಗುರುತಿಸಲಾಗಿದೆ.
ಘಟನೆ ಹಿನ್ನೆಲೆ
ನ. 23 ರಂದು ಸರಿಸುಮಾರು ಸಂಜೆ 6 ಗಂಟೆಯ ವೇಳೆ ಇಬ್ಬರು ಬುರ್ಖಾ ಧರಿಸಿದ ಮಹಿಳೆಯವರು ಓರ್ವ ಗಂಡಸು ಮಗುವಿನೊಂದಿಗೆ ಜುವೆಲ್ಲರಿಗೆ ಬಂದು ಬೇರೆ ಬೇರೆ ಬಳೆಗಳನ್ನು ನೋಡುತ್ತಾ ಒಟ್ಟು 60 ಗ್ರಾಂ ತೂಕದ ರೂ. 3,00,000 ಮೌಲ್ಯದ 4 ಚಿನ್ನದ ಬಳೆಗಳನ್ನು ಎಗರಿಸಿದ್ದರು. ಈ ಬಗ್ಗೆ ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ಕೈಗೊಂಡ ಉಡುಪಿ ನಗರ ಪೊಲೀಸರು ಸಿ.ಸಿ ಟಿವಿ ಪುಟೆಜ್ ಪರಿಶೀಲನೆ ವೇಳೆ ಮಹಾರಾಷ್ಟ್ರ ಮೂಲದ ಕಾರು ಕೃತ್ಯಕ್ಕೆ ಬಳಕೆಯಾದ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ನಂತರ ಆರೋಪಿತರ ಜಾಡು ಹಿಡಿದು ಮಹಾರಾಷ್ಟ್ರ ರಾಜ್ಯದ ಸೋಲಾಪುರಕ್ಕೆ ಹೋಗಿದ್ದಾರೆ.
ಸೋಲಾಪುರದ ನಯಿ ಜಿಂದಗಿ ಎಂಬಲ್ಲಿ ವಾಹನ ಸಮೇತ ವಶಕ್ಕೆ ಪಡೆದು ಆಸೀಫ್ ಅಸ್ಪಾಕ್ ಶೇಖ್, ನಾಜಿಯಾ ಆಸೀಫ್ ಶೇಖ್, ಸೌದಾಗರ್ ದಿಲಿಪ್ ಗೋಂದ್ ಕರ್ ಎಂಬವರನ್ನು ವಿಚಾರಣೆ ನಡೆಸಿ, ದಸ್ತಗಿರಿ ಮಾಡಿದ್ದಾರೆ.
ಆರೋಪಿಗಳಿಂದ 1 ತವೇರಾ ವಾಹನ, 1 ಮೊಬೈಲ್ ಹಾಗೂ ರೂ 2,99,792 ಮೌಲ್ಯದ 4 ಚಿನ್ನದ ಬಳೆಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಎಲ್ಲಾ ಆರೋಪಿಗಳಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಪ್ರಕರಣದಲ್ಲಿ ಆರೋಪಿತರ ಪತ್ತೆಯ ಬಗ್ಗೆ ಪೊಲೀಸ್ ಅಧೀಕ್ಷಕ ಎನ್. ವಿಷ್ಣುವರ್ಧನ್, ಐ.ಪಿ.ಎಸ್, ಉಡುಪಿ ರವರ ಆದೇಶದಂತೆ, ಕುಮಾರಚಂದ್ರ ಹೆಚ್ಚುವರಿ ಪೊಲೀಸ್ ಅಧೀಕ್ಷಕ, ಸುಧಾಕರ ಸದಾನಂದ ನಾಯ್ಕ್,
ಡಿವೈಎಸ್‌ಪಿ ಉಡುಪಿ ರವರ ಮಾರ್ಗದರ್ಶನದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಮೋದ ಕುಮಾರ್ ಪಿ,
ಪೊಲೀಸ್ ಉಪ-ನಿರೀಕ್ಷಕ ವಾಸಪ್ಪ ನಾಯ್ಕ್, ಪ್ರೋಬೇಷನರಿ ಪಿ.ಎಸ್.ಐ ರವರಾದ ಪ್ರಸಾದ, ಸುಹಾಸ್ ಸಿಬ್ಬಂದಿ ಸತೀಶ್, ಸಂತೋಷ್ ರಾಠೋಡ್, ಗಡ್ಡಯ್ಯ ಹೀರೆಮಠ್, ಮಲ್ಲಯ್ಯ, ನಾಗರತ್ನ, ಬಾಲಕೃಷ್ಣ, ಶ್ರೀಮತಿ ಸುಷ್ಮ,
ರಿಯಾಜ್ ಅಹ್ಮದ್, ಲೋಕೇಶ್, ಜೀವನ್ ಕುಮಾರ್, ಆನಂದ ಗಾಣಿಗ, ಹೇಮಂತ್, ಶಿವಕುಮಾರ್ ಹಾಗೂ ಚಾಲಕ ರಾಘವೇಂದ್ರ ರವರು ರವರು ಪಾಲ್ಗೊಂಡಿದ್ದಾರೆ.