Connect with us

DAKSHINA KANNADA

ಗೋಡೆ ಬರಹದ ಹಿಂದಿನ ಷಡ್ಯಂತ್ರವನ್ನು ಬಯಲಿಗೆಳೆಯಲು SDPI ಆಗ್ರಹ..!

Published

on

ಗೋಡೆ ಬರಹದ ಹಿಂದಿನ ಷಡ್ಯಂತ್ರವನ್ನು ಬಯಲಿಗೆಳೆಯಲು SDPI ಆಗ್ರಹ..!

ಮಂಗಳೂರು : ಮಂಗಳೂರು ನಗರದಲ್ಲಿ ದುಷ್ಕರ್ಮಿಗಳು ಲಷ್ಕರ್ ಉಗ್ರರ ಪರ ಮತ್ತು ವಿವಾದಾತ್ಮಕ ಗೋಡೆ ಬರಹಗಳನ್ನು ಬರೆದ ಘೋರ ಕೃತ್ಯವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತೀವ್ರವಾಗಿ ಖಂಡಿಸಿದೆ.  

ಇ ಬಗ್ಗೆ ಮಂಗಳೂರಿನಲ್ಲಿ ಕರೆದ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ನಗರದ ಕದ್ರಿ ಪೋಲಿಸ್ ಠಾಣಾ ವ್ಯಾಪ್ತಿಯ ಬಿಜೈ ಬಳಿಯ ರಸ್ತೆಯ ಗೋಡೆಯೊಂದರಲ್ಲಿ ಮೊದಲಿಗೆ ಉಗ್ರರ ಪರ ಬರಹ ಕಂಡು ಬಂದಿತ್ತು,

ಆದರೆ ಆರೋಪಿಗಳನ್ನು ಪತ್ತೆ ಹಚ್ಚಲು ಪೋಲಿಸ್ ಇಲಾಖೆ ನಿರ್ಲಕ್ಷ್ಯ ಧೋರಣೆ ತೋರಿದ್ದರಿಂದ ನಂತರ ಪಿ.ವಿ.ಎಸ್ ಸಮೀಪದ ನ್ಯಾಯಾಲಯದ ಆವರಣದ ಪೊಲೀಸ್ ಚೌಕಿಯ ಹಳೆ ಕಟ್ಟಡದ ಗೋಡೆಯಲ್ಲಿ ಪುನಃ ವಿವಾದಾತ್ಮಕ ಬರಹ ಕಂಡು ಬಂದಿದೆ.

ಇದೆಲ್ಲವೂ ಜಿಲ್ಲೆಯ ಶಾಂತಿಯನ್ನು ಕದಡಿಸಿ ಗಲಭೆ ಸೃಷ್ಟಿಸಲು ಕೋಮುವಾದಿ ಶಕ್ತಿಗಳು ನಡೆಸುತ್ತಿರುವ ಷಡ್ಯಂತ್ರದ ಭಾಗವಾಗಿದೆ.

ಪೋಲಿಸ್ ಇಲಾಖೆ ಮತ್ತು ದಕ್ಷಿಣ ಕನ್ನಡ ಜಿಲ್ಲಾಡಳಿತ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷಿಸಿದ ಕಾರಣದಿಂದಲೇ ಇಂತಹ ಘಟನೆಗಳು ಪುನರಾವರ್ತನೆ ಯಾಗುತ್ತಿರುವುದು.

ಪೋಲಿಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಯಾಕಾಗಿ ಬಂದಿಸಿಲ್ಲ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಕಲ್ಲಡ್ಕ ಪ್ರಭಾಕರ್ ಭಟ್ ಉಳ್ಳಾಲವನ್ನು ಪಾಕಿಸ್ತಾನಕ್ಕೆ ಹೋಲಿಸಿ ದೇಶದ್ರೋಹದ ಹೇಳಿಕೆ ನೀಡಿದ ಸಂದರ್ಭದಲ್ಲೂ ಅದನ್ನು ಪೋಲಿಸ್ ಇಲಾಖೆ ಗಂಭೀರವಾಗಿ ಪರಿಗಣಿಸದೆ ಸಂಘಪರಿವಾರದ ತಾಳಕ್ಕೆ ತಕ್ಕಂತೆ ಕುಣಿದಿತ್ತು.

ಇದರಿಂದಾಗಿ ಇಂತಹ ಮನಸ್ಥಿತಿಯ ದುಷ್ಕರ್ಮಿಗಳಿಗೆ ದೇಶದ್ರೋಹದ ಬರಹ ಬರೆಯಲು ಮತ್ತು ಹೇಳಿಕೆ ನೀಡಲು ಧೈರ್ಯ ಸಿಕ್ಕಿದಂತಾಗಿದೆ.

ಈ ಹಿಂದೆಯು ಹಲವಾರು ಬಾರಿ ಸಂಘಪರಿವಾರ ಶಾಂತಿ ಕದಡಲು ಈ ರೀತಿಯ ಉಗ್ರ ಕೃತ್ಯ ಮಾಡಿದ್ದನ್ನು ಈ ರಾಜ್ಯ ಕಂಡಿದೆ.

ಸಿಂಧಗಿಯಲ್ಲಿ ಪಾಕಿಸ್ತಾನದ ದ್ವಜ ಹಾರಿಸಿರುವುದು, ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟ ಘಟನೆ, ಚಾಮಾರಾಜನಗರದಲ್ಲಿ ದೇವಸ್ಥಾನಕ್ಕೆ ದನದ ರುಂಡ ಎಸೆದಿರುವುದು, ಕೆಲವೇ ದಿನಗಳ ಹಿಂದೆ ಶೃಂಗೇರಿಯ ಶಂಕರಾಚಾರ್ಯರ ಪ್ರತಿಮೆಯ ಮೇಲೆ ಧ್ವಜ ಹಾರಿಸಿದ ಕೃತ್ಯ ಈ ರೀತಿಯ ಘಟನೆಗಳು ನಡೆದಾಗ ಅದನ್ನು ಅಲ್ಪಸಂಖ್ಯಾತರ ತಲೆಗೆ ಕಟ್ಟಲು ಪ್ರಯತ್ನ ಪಟ್ಟಿರುವುದನ್ನು ಕಾಣಲು ಸಾದ್ಯವಾಗಿದೆ.

ಆ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದರಿಂದ ಸಂಭಾವ್ಯ ಗಲಭೆ ತಪ್ಪಿತ್ತು.

ಗ್ರಾ.ಪಂ ಚುನಾವಣೆ ಸಮೀಪಿಸಿದ ಈ ಸಮಯದಲ್ಲಿ ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿರುವ ಫ್ಯಾಶಿಸ್ಟ್ ಶಕ್ತಿಗಳ ಕೋಮು ಧ್ರುವೀಕರಣ ಯತ್ನವನ್ನು ಪೋಲಿಸ್ ಇಲಾಖೆ ಮತ್ತು ದಕ್ಷಿಣ ಕನ್ನಡ ಜಿಲ್ಲಾಡಳಿತ ಕಡಿವಾಣ ಹಾಕಲೇಬೇಕಾಗಿದೆ.

ಅದೇ ರೀತಿಯಲ್ಲಿ ಉಗ್ರರ ಪರ ಮತ್ತು ವಿವಾದಾತ್ಮಕ ಗೋಡೆ ಬರಹ ಬರೆದ ದುಷ್ಕರ್ಮಿಗಳನ್ನು ಶೀಘ್ರದಲ್ಲಿ ಬಂಧಿಸಿ ಕಠಿಣ ಕಾನೂನು ಕ್ರಮ ಜರಗಿಸಬೇಕು ಈ ಬಗ್ಗೆ ನಿರ್ಲಕ್ಷ್ಯ ತೋರಿದರೆ ಎಸ್‌ಡಿಪಿಐ ಇದರ ವಿರುದ್ಧ ಜಿಲ್ಲಾದ್ಯಂತ ಹೋರಾಟವನ್ನು ನಡೆಸಲಿದೆ ಎಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪ್ರ. ಕಾರ್ಯದರ್ಶಿ ಎಸ್‌ಡಿಪಿಐ ದ.ಕ ಶಾಹುಲ್ ಹಮೀದ್, ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ,   ಅನ್ವರ್ ಸಾದತ್ ಬಜತ್ತೂರು ಜಮಾಲ್ ಜೋಕಟ್ಟೆ  ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

BANTWAL

ಪುತ್ತೂರು ಜಾತ್ರೆಯಿಂದ ಹಿಂದಿರುಗುವ ವೇಳೆ ಜವರಾಯನ ಅಟ್ಟಹಾಸ; ಜೀಪ್ ಡಿಕ್ಕಿ; ಬೈಕ್ ಸವಾರ ಸಾ*ವು

Published

on

ಪುತ್ತೂರು : ಜೀಪೊಂದು ಬೈಕ್ ಗೆ ಡಿ*ಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃ*ತಪಟ್ಟು, ಅವರ ಇಬ್ಬರು ಮಕ್ಕಳು ಗಂಭೀ*ರ ಗಾ*ಯಗೊಂಡ ಘಟನೆ ಬುಧವಾರ ರಾತ್ರಿ ಪುತ್ತೂರು ಸುಬ್ರಹ್ಮಣ್ಯ ರಸ್ತೆಯಲ್ಲಿನ ನರಿಮೊಗರು ಗ್ರಾಮದ ಪಾಪೆತ್ತಡ್ಕ ಎಂಬಲ್ಲಿ ನಡೆದಿದೆ. ಪುತ್ತೂರು ತಾಲೂಕಿನ ಬಡಕ್ಕೋಡಿ ಕಡ್ಯ ನಿವಾಸಿ ಪ್ರಸ್ತುತ ಮಂಗಳೂರಿನಲ್ಲಿ ಲಾರಿ ಚಾಲಕರಾಗಿರುವ ಲೋಕೇಶ್ (48) ಮೃ*ತಪಟ್ಟವರು. ಅವರ ಇಬ್ಬರು ಮಕ್ಕಳು ಗಂಭೀ*ರ ಗಾಯಗೊಂಡಿದ್ದು, ಗಾ*ಯಾಳುಗಳನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

 

ಲೋಕೇಶ್ ಅವರು  ಮಕ್ಕಳೊಂದಿಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ನಡೆಯುತ್ತಿರುವ ಜಾತ್ರೆಗೆ ಆಗಮಿಸಿ ಹಿಂದಿರುಗುತ್ತಿದ್ದ ವೇಳೆಯಲ್ಲಿ ಮುಂಭಾಗದಿಂದ ಆಗಮಿಸಿದ ಜೀಪು ಅವರು ಚಲಾಯಿಸುತ್ತಿದ್ದ ಬೈಕ್ ಗೆ ಡಿ*ಕ್ಕಿಯಾಗಿತ್ತು.

ಇದನ್ನೂ ಓದಿ : ಕರಡಿಗೂ ಕ್ಯಾಪ್ಟನ್ ಗೂ ಫೈಟ್; ಮನೆಯಂಗಳದಲ್ಲೇ ಕಾದಾಟ! ವೀಡಿಯೋ ವೈರಲ್

ಡಿ*ಕ್ಕಿಯ ರಭಸಕ್ಕೆ ಬೈಕ್ ಎರಡು ತುಂಡಾಗಿದೆ. ಸುಮಾರು 50 ಮೀಟರ್ ದೂರದ ತನಕ ಬೈಕನ್ನು ಜೀಪ್‌ ಎಳೆದುಕೊಂಡು ಹೋಗಿದೆ. ಈ ಸಂದರ್ಭದಲ್ಲಿ ರಸ್ತೆಗೆ ಎಸೆಯಲ್ಪಟ್ಟ ಲೋಕೇಶ್ ಅವರು ಸ್ಥಳದಲ್ಲಿಯೇ ಸಾ*ವನ್ನಪ್ಪಿದ್ದಾರೆ. ಪುತ್ತೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

DAKSHINA KANNADA

ರಾಜಕೀಯ ಲಾಭಕ್ಕಾಗಿ ಮಾತನಾಡುತ್ತಿರುವ ಬಿಜೆಪಿ ಜಿಲ್ಲಾಧ್ಯಕ್ಷ- ಬಿರುವೆರ್ ಕುಡ್ಲ ಉದಯ್ ಪೂಜಾರಿ

Published

on

ಮಂಗಳೂರು : ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ನರೇಂದ್ರ ಮೋದಿಯವರು ರೋಡ್ ಶೋ ನಡೆಸಿದ್ದರು. ಮುಂಬರುವ ಚುನಾವಣೆಯಲ್ಲಿ ದ.ಕ ಜಿಲ್ಲಾ ಅಭ್ಯರ್ಥಿ ಬ್ರಿಜೇಶ್ ಚೌಟ ಹಾಗೂ ಉಡುಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಪರ ಬ್ಯಾಟ್ ಬೀಸಿದ್ದರು. ಈ ವೇಳೆ ನಾರಾಯಣ ಗುರು ಸರ್ಕಲ್ ನಲ್ಲಿರುವ ಗುರುಗಳ ಮೂರ್ತಿಗೆ ಮಾಲಾರ್ಪಣೆ ಮಾಡಿದ್ದರು.

udaya poojary

ಆದರೆ ಈ ಸಂದರ್ಭ ಬಿಜೆಪಿ ಬೆಂಬಲಿಗರಾದ ಬಿರುವೆರ್‌ ಕುಡ್ಲ ಸಂಘಟನೆಯನ್ನು ಕಡೆಗಣಿಸಿರುವುದಕ್ಕೆ ಬಿರುವೆರ್ ಕುಡ್ಲ ಸಂಸ್ಥಾಪಕ ಉದಯ ಪೂಜಾರಿ ಬೇಸರ ವ್ಯಕ್ತಪಡಿಸಿದ್ದಾರೆ.

ನಾರಾಯಣ ಗುರು ವೃತ್ತ ನಿರ್ಮಾಣ ಮಾಡುವಾಗ ಸತೀಶ್‌ ಕುಂಪಲ ಎಲ್ಲಿದ್ದರು…?

ಮಂಗಳೂರಿನಲ್ಲಿ ನಾರಾಯಣ ಗುರು ವೃತ್ತವನ್ನು ಲೇಡಿಹಿಲ್ ಸರ್ಕಲ್‌ ಬಳಿ ನೂತನವಾಗಿ ನಿರ್ಮಾಣ ಮಾಡುವ ಸಂದರ್ಭದಲ್ಲಿ ಸತೀಶ್‌ ಕುಂಪಲ ಎಲ್ಲಿದ್ದರು…? ನಾವು ಸರ್ಕಲ್‌ ಮಾಡಲು ಹೋರಾಟ ಮಾಡುವಾಗ ಅವರು ಎಲ್ಲಿದ್ದರು..? ಇಂದು ಕೇವಲ ತನ್ನ ರಾಜಕೀಯ ಲಾಭಕ್ಕಾಗಿ ಮಾತನಾಡುತ್ತಿದ್ದಾರೆ. ಅವರು ಬಿಲ್ಲವ ಎನ್ನುವ ಕಾರಣಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷರನ್ನಾಗಿ ಮಾಡಲಾಗಿದೆ. ಆದರೆ, ಅವರು ಬಿಲ್ಲವರಿಗೋಸ್ಕರ, ಬಿಲ್ಲವ ಸಮುದಾಯಕ್ಕೆ ಏನು ಕೊಡುಗೆ ನೀಡಿದ್ದಾರೆ ಎನ್ನುವುದನ್ನು ಮೊದಲು ಹೇಳಲಿ ಎಂದು ಉದಯ ಪೂಜಾರಿ ಹೇಳಿದ್ದಾರೆ.

ಇದನ್ನೂ ಓದಿ..;ಜೆಪಿಯಿಂದ ಬಿಲ್ಲವ ನಾಯಕ ಔಟ್..? ನಾರಾಯಣ ಗುರು ಹೈಜಾಕ್..!

ಬಿಲ್ಲವ ಸಂಘಟನೆಗಳ ಮನವಿ ಬಳಿಕ ನಾರಾಯಣ ಗುರು ವೃತ್ತ ನಿರ್ಮಾಣ

ನಾರಾಯಣ ಗುರು ವೃತ್ತ ನಿರ್ಮಾಣ ಮಾಡಿದ್ದು, ಬಿಜೆಪಿ ನಾಯಕರು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ ಬೆನ್ನಲ್ಲೇ ಬಿರುವೆರ್ ಕುಡ್ಲದ ಮುಖಂಡ ಉದಯ್‌ ಪೂಜಾರಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.  ಕಳೆದ 13 ವರ್ಷಗಳ ಹಿಂದೆ ನಾವು ಕಾಂಗ್ರೆಸ್ ಸರಕಾರ ಇದ್ದಾಗ ಅಲ್ಲಿ ನಾರಾಯಣ ಗುರು ವೃತ್ತ ಮಾಡಲು ಮನವಿ ಮಾಡಿದ್ದೆವು. ಸಂಸದ ನಳಿನ್‌ ಕುಮಾರ್ ಸಹಿತ ಎಲ್ಲಾ ಶಾಸಕರಿಗೂ ಮನವಿ ನೀಡಿದ್ದೆವು. ಸುಮಾರು 200 ಬಿಲ್ಲವ ಸಂಘಟನೆಗಳು ಮನವಿ ನೀಡಿದ ಬಳಿಕ ಅಲ್ಲಿ ನಾರಾಯಣ ಗುರು ವೃತ್ತ ಮಾಡಲಾಗಿದೆ ಎಂದು ಹೇಳಿದ್ರು.

ಬಿರುವೆರ್ ಕುಡ್ಲ ಸಂಘಟನೆ ದೂರವಿಟ್ಟಿದ್ದಕ್ಕೆ ಆಕ್ರೋಶ

ಆದರೆ, ಭಾನುವಾರದಂದು ಪ್ರಧಾನಿ ನರೇಂದ್ರ ಮೋದಿಯನ್ನು ಸ್ವಾಗತಿಸಲು ಉದ್ಯಮಿಗಳು, ಪಕ್ಷ ವಿರೋಧಿ ಚಟುವಟಿಕೆ ಮಾಡಿದವರನ್ನು ಕರೆದುಕೊಂಡು ಹೋಗಿದ್ದಾರೆ. ಆದರೆ ನಮ್ಮ ಸಂಘಟನೆಯನ್ನು ದೂರ ಇಟ್ಟಿರುವುದು ನಮಗೆ ಬೇಸರ ಮೂಡಿಸಿದೆ ಎಂದರು. ಕನಿಷ್ಠ ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಎಚ್ ಎಸ್ ಸಾಯಿರಾಂ ಅವರನ್ನಾದರೂ ಕರೆಯಬಹುದಿತ್ತು ಎಂದರು. ನಳಿನ್‌ ಕುಮಾರ್ ಕಟೀಲು, ವೇದವ್ಯಾಸ ಸಹಿತ ಹಲವು ಮಂದಿ ನಾಯಕರು ನಮ್ಮ ಕಷ್ಟಕ್ಕೆ ಸ್ಪಂದಿಸಿದ್ದವರು. ಆದರೆ ಇಂದು ಬಿಜೆಪಿಯಲ್ಲೇ ಎರಡು ಬಣ ಆಗಿದೆ. ಇದು ನಮಗೆ ಬೇಸರ ತರುವ ಕೆಲಸ ಎಂದರು. ಬಿಜೆಪಿ ನಡೆಯಿಂದ ನಮ್ಮ ಸಂಘಟನೆಗೆ ಬೇಸರವಾಗಿದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ನಾವು ಇಂಥವರಿಗೇ ಮತ ಚಲಾಯಿಸಿ ಎಂದು ಯಾರಿಗೂ ಹೇಳಲ್ಲ. ಯಾರು ಒಳ್ಳೆಯ ಅಭ್ಯರ್ಥಿ ಇದ್ದಾರೋ ಅವರಿಗೆ ಮತ ಹಾಕಿ ಎಂದರು.

Continue Reading

DAKSHINA KANNADA

ನಾಳೆ ನಿಮ್ಮೂರಿಗೆ ಬರ್ತಿದ್ದಾನೆ ಮೇಘರಾಜ: ತಂಪಾಗಲಿದೆ ಇಳೆ

Published

on

ಬೆಂಗಳೂರು: ರಾಜ್ಯದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆಯಾಗಲಿದೆ. ಮಲೆನಾಡು, ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ ಮಾಹಿತಿ ನೀಡಿದೆ.

ಈ ಬಾರಿ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಜೂನ್ ವೇಳೆಗೆ ರಾಜ್ಯದಲ್ಲಿ ನೀರಿನ ಸಮಸ್ಯೆ ದೂರವಾಗಲಿದೆ ಎಂದು ಹೇಳಲಾಗುತ್ತಿದೆ.

ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆ

ಈ ಬಾರಿ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚಾಗುವ ಸಾಧ್ಯತೆಗಳಿದ್ದು, 85.2 ಸೆಂ.ಮಿ ಮಳೆ ಬೀಳುವ ನಿರೀಕ್ಷೆಗಳಿವೆ. ಜೂನ್​, ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ನಲ್ಲಿ ಕ್ರಮವಾಗಿ 19.9 ಸೆಂ.ಮೀ., 27.1 ಸೆಂ.ಮೀ., ಆಗಸ್ಟ್​ 22 ಸೆಂ.ಮೀ ಹಾಗೂ 16.1 ಸೆಂಮೀ ಮಳೆಯಾಗುವ ನಿರೀಕ್ಷೆಗಳಿವೆ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ ಹೇಳಿದೆ.

ನಾಳೆ ಈ ಜಿಲ್ಲೆಗಳಲ್ಲಿ ಆಗಲಿದೆ ಮಳೆ

ನಾಳೆ ದಕ್ಷಿಣ ಕನ್ನಡ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ವಿಜಯಪುರ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಚಿಕ್ಕಮಗಳೂಉರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆಗಳಿವೆ. ಇನ್ನುಳಿದ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ.

Continue Reading

LATEST NEWS

Trending