Saturday, August 13, 2022

ಮಂಗಳೂರು KSRTC ನಿಲ್ದಾಣದ ಟಾಯ್ಲೆಟ್‌ಗೆ ಹೋಗಿದ್ದ ಯುವತಿ ನಾಪತ್ತೆ..!

ಮಂಗಳೂರು: ಸಾರ್ವಜನಿಕ ಶೌಚಾಲಯಕ್ಕೆ ತೆರಳಿದ ಯುವತಿಯೊಬ್ಬಳು ನಾಪತ್ತೆಯಾದ ಘಟನೆ ಮಂಗಳೂರು ನಗರದ ಕೆ.ಎಸ್‌.ಆರ್‌.ಟಿ.ಸಿ ಬಸ್‌ ನಿಲ್ದಾಣದಲ್ಲಿ ಜು.2 ರಂದು ಮುಂಜಾನೆ ನಡೆದಿದೆ.
ನಾಪತ್ತೆಯಾದ ಯುವತಿಯನ್ನು ಕು. ದೀಪಿಕಾ (19) ಎಂದು ಗುರುತಿಸಲಾಗಿದೆ.


ಘಟನೆ ವಿವರ
ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ನಾಗರಾಜ್ ಫಕೀರಪ್ಪ ಅವರಿಗೆ ಮಂಡಿ ನೋವು ಇದ್ದ ಕಾರಣ ತನ್ನ ಮಗಳು ದೀಪಿಕಾ ಜೊತೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಜು.1 ರಂದು ರಾತ್ರಿ 9 ಗಂಟೆಗೆ ಹಾನಗಲ್‌ನಿಂದ ಬಸ್‌ನಲ್ಲಿ ಹೊರಟು ಜು.2 ರಂದು ಬೆಳಿಗ್ಗೆ 5 ಗಂಟೆಗೆ ಮಂಗಳೂರಿನ ಕೆ.ಎಸ್.ಆರ್ ಟಿ.ಸಿ ಬಸ್ಸು ನಿಲ್ದಾಣಕ್ಕೆ ತಲುಪಿದ್ದರು.

ಈ ವೇಳೆ ಅಲ್ಲೇ ಇದ್ದ ಶೌಚಾಲಯಕ್ಕೆ ನಾಗರಾಜ್ ತೆರಳಿದ್ದು, ಮಗಳು ಸಹ ಹತ್ತಿದ ಮಹಿಳೆಯರ ಶೌಚಾಲಯಕ್ಕೆ ತೆರಳಿದ್ದಳು.

ಸ್ವಲ್ಪ ಸಮಯದ ನಂತರ ನಾಗರಾಜ್‌ ಶೌಚಾಲಯದಿಂದ ವಾಪಾಸು ಹೊರಗೆ ಬಂದು ಮಗಳು ದೀಪಿಕಾಳಿಗೆ ತುಂಬಾ ಹೊತ್ತು ಕಾದು ಕುಳಿತರೂ ಬಾರದೇ ಏಕಾಏಕಿ ನಾಪತ್ತೆಯಾಗಿದ್ದಾಳೆ.

ತಕ್ಷಣ ನಾಗರಾಜ್‌ ಕೆ.ಎಸ್.ಆರ್.ಟಿ ಬಸ್ಸು ನಿಲ್ದಾಣದ ವಠಾರದಲ್ಲಿ ಹುಡುಕಾಡಿದರೂ ಪತ್ತೆಯಾಗದೇ ಇದ್ದುದರಿಂದ ಬರ್ಕೆ ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Hot Topics

ಬಂಟ್ವಾಳ: ವಿಶ್ವ ಹಿಂದೂ ಪರಿಷದ್, ಬಜರಂಗದಳದಿಂದ ರಕ್ಷಾಬಂಧನ

ಬಂಟ್ವಾಳ: ವಿಶ್ವ ಹಿಂದೂ ಪರಿಷದ್, ಬಜರಂಗದಳ, ಜೈ ಶ್ರೀರಾಮ್ ಶಾಖೆ ಕುಂಟಾಲಫಲ್ಕೆ ಪೆರಿಯಾರು ದೋಟ ಘಟಕದ ವತಿಯಿಂದ ಇತ್ತೀಚೆಗೆ ರಕ್ಷಾಬಂಧನ ಕಾರ್ಯಕ್ರಮ ನಡೆಯಿತು.ಶ್ರೀ ದೇವಿ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಗೀಶ್...

ಜಾತಿ, ಧರ್ಮ, ಪಕ್ಷದ ಬಂಧನ ಹೊರತುಪಡಿಸಿ ಅಮೃತಮಹೋತ್ಸವ ನಡೆಯಲಿದೆ: ಕೇಂದ್ರ ಸಚಿವೆ ಶೋಭಾ

ಉಡುಪಿ: ತ್ರಿವರ್ಣ ಧ್ವಜ ಒಂದು ಧರ್ಮದ ಸಂಕೇತವಲ್ಲ. ಪ್ರತಿ ಮನೆ, ಮನದಲ್ಲೂ ತ್ರಿವರ್ಣ ಧ್ವಜ ಹಾರಬೇಕು. ಜಾತಿ ಧರ್ಮ ಪಕ್ಷದ ಬಂಧನಗಳನ್ನು ಹೊರತುಪಡಿಸಿ ಅಮೃತ ಮಹೋತ್ಸವ ನಡೆಯುವ ವಿಶ್ವಾಸವಿದೆ ಎಂದು ಕೇಂದ್ರ ಸಚಿವೆ...

ತಲಪಾಡಿಯಲ್ಲಿ ಟ್ರಾಫಿಕ್‌ ಪೊಲೀಸ್‌-ಸಿಟಿ ಬಸ್‌ ಸಿಬ್ಬಂದಿ ವಾಗ್ವಾದ: ಟ್ರಿಪ್‌ ಕಡಿತಗೊಳಿಸಿ ಪ್ರತಿಭಟನೆ

ಮಂಗಳೂರು: ಮಂಗಳೂರು ನಗರ ಹೊರವಲಯದ ತಲಪಾಡಿಯಲ್ಲಿ ಸಿಟಿ ಬಸ್‌ ಸಿಬ್ಬಂದಿ ಹಾಗೂ ಸಂಚಾರಿ ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಸಂಚಾರ ರದ್ದುಗೊಳಿಸಿ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ...