Connect with us

LATEST NEWS

ಕೊಡಗಿನ ಪುಟ್ಟ ತಬ್ಬಲಿ ಬಾಲಕಿಗೆ ಹೊಸ ಮೊಬೈಲ್ ನೀಡಿ ನೆಟ್ಟಿಗರ ಆಕ್ರೋಶಕ್ಕೆ ಕಾರಣರಾದರೇ ಕೊಡಗು ಜಿಲ್ಲಾ ಯುವ ಕಾಂಗ್ರೆಸ್ಸಿಗರು..!

Published

on

ಮಡಿಕೇರಿ: ಮಡಿಕೇರಿಯಲ್ಲಿ  ಕೊರೊನಾ ಸೋಂಕಿಗೆ ಬಲಿಯಾದ ಅಮ್ಮನ ಶಾಶ್ವತ ನೆನಪಿಗಾಗಿ ಆಕೆ ಬಳಸುತಿದ್ದ ಮೊಬೈಲ್​ ಅನ್ನು ನನಗೆ ದಯವಿಟ್ಟು ವಾಪಾಸ್ ಸಿಗುವಂತೆ ಮಾಡಿ ಎಂದು ಕೊಡಗಿನ ಬಾಲಕಿಯೊಬ್ಬಳು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಬರೆದಿದ್ದಳು.ಈ ಬಾಲಕಿಯ ಮನವಿಯ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಅಗಿದ್ದು ಲಕ್ಷಾಂತರ ಜನರು ಪ್ರತಿಕ್ರಿಯೆ ನೀಡಿದ್ದಾರೆ. ಬಾಲಕಿ ಮನವಿಗೆ ಸ್ಪಂದಿಸಿದ್ದ ಕೊಡಗು ಜಿಲ್ಲಾ ಯುವ ಕಾಂಗ್ರೆಸ್‌  ಹೊಸ ಮೊಬೈಲ್​ ಫೋನ್ ಕೊಡಿಸಿತ್ತು. ಬಾಲಕಿಗೆ ಮೊಬೈಲ್‌ ನೀಡುತ್ತಿರುವ ಚಿತ್ರಗಳು ಕೂಡ ಜಾಲತಾಣಗಳಲ್ಲಿ ಸಾಕಷ್ಟು ಪ್ರಚಾರ ಪಡೆದುಕೊಂಡಿತ್ತು. ಆದರೆ ಈ ಹೊಸ ಮೊಬೈಲ್‌ ಕೊಡಿಸಿರುವ ವಿಚಾರ ನೆಟ್ಟಿಗರ ವ್ಯಾಪಕ ಟೀಕೆಗೂ ಗುರಿಯಾಗಿದೆ.ಬಾಲಕಿಯು ಹಂಬಲಿಸಿದ್ದು ತನ್ನ ಅಮ್ಮನ ನೆನಪುಗಳಿರುವ ಫೋಟೋಗಳನ್ನು ಹೊಂದಿದ್ದ ಮೊಬೈಲ್‌ ಮಾತ್ರ. ಹೊಸ ಮೊಬೈಲ್‌ನೊಂದಿಗೆ ಬಾಲಕಿಗೆ ಯಾವುದೇ ಭಾವನಾತ್ಮಕ ಸಂಬಂಧ ಇಲ್ಲ, ಉಂಟಾಗುವುದೂ ಸಾಧ್ಯವಿಲ್ಲ ಎಂದು ಜನರು ಕಮೆಂಟ್‌ಗಳನ್ನು ಮಾಡಿದ್ದಾರೆ.

ಕುಶಾಲನಗರದ ನಿವಾಸಿ ಪುಟ್ಟ ಬಾಲಕಿ ಹೃತಿಕ್ಷಳಿಗೆ ಮತ್ತು ಅವಳ ತಂದೆ ತಾಯಿಗೆ ಇತ್ತೀಚೆಗೆ ಕೊರೊನಾ ಸೋಂಕು ದೃಢವಾಗಿತ್ತು. ಅವಳೂ ಮತ್ತು ತಂದೆ ಮನೆಯಲ್ಲೇ ಚಿಕಿತ್ಸೆ ಪಡೆದರು.

ತಾಯಿಯನ್ನು ಮಡಿಕೇರಿ ಕೋವಿಡ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಮೇ 16ರಂದು ಚಿಕಿತ್ಸೆ ಫಲಿಸದೆ ಬಾಲಕಿ ತಾಯಿ ಮೃತಪಟ್ಟರು. ಆ ವೇಳೆ ತಾಯಿಯ ಜೊತೆಗಿದ್ದ ಮೊಬೈಲ್ ವಾಪಸ್ ಸಿಕ್ಕಿರಲಿಲ್ಲ.ಈ ಕುರಿತಾಗಿ ಬಾಲಕಿ ಜಿಲ್ಲಾಧಿಕಾರಿಗಳು, ಶಾಸಕರು ಮತ್ತು ಆಸ್ಪತ್ರೆಯ ಸಿಬ್ಬಂದಿಗೆ ಒಂದು ಪತ್ರ ಬರೆದಿದ್ದಳು.

“ನಾನು ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿದ್ದೇನೆ. ನನ್ನ ತಾಯಿಯ ನೆನಪುಗಳು ಆ ಮೊಬೈಲ್‌ನಲ್ಲಿದೆ ಆದ್ದರಿಂದ ಯಾರಾದರೂ ತೆಗೆದುಕೊಂಡಿದ್ದರೆ ಅಥವಾ ಯಾರಿಗಾದರೂ ಸಿಕ್ಕಿದ್ದರೆ ದಯವಿಟ್ಟು ಈ ತಬ್ಬಲಿಗೆ ಅದನ್ನು ತಲುಪಿಸಿ” ಎಂದು ಮನವಿ ಮಾಡಿದ್ದಳು.

ಈ ವಿಚಾರ ಸುದ್ದಿಯಾಗಿ ಕೆಲವೇ ಗಂಟೆಗಳಲ್ಲಿ ಜಿಲ್ಲಾ ಯುವ ಕಾಂಗ್ರೆಸ್​ ಘಟಕ ಬಾಲಕಿಗೆ ಹೊಸ ಫೋನ್​ ಅನ್ನು ಕೊಡಿಸಿದೆ. ಆದರೆ ನೆಟ್ಟಿಗರು  ಬಾಲಕಿಗೆ  ಅಮ್ಮನ ಫೋಟೋಗಳಿರುವ ಹಳೆಯ ಮೊಬೈಲ್​ ಬೇಕಿದ್ದದ್ದು ಎಂದು ಆಕ್ರೋಶ ಹೊರಹಾಕಿದ್ದಾರೆ.

ಅದರಲ್ಲೂ ಕೊರೊನಾ ಮಹಾಮಾರಿಯು ತಾಂಡವವಾಡುತ್ತಿರುವ ಸಮಯದಲ್ಲೇ  ಮಾಸ್ಕ್​ ಹಾಕದೆ ಆರೇಳು ಜನರು ಒಟ್ಟಾಗಿ ಬಾಲಕಿಯನ್ನು ಭೇಟಿ ಮಾಡಿರುವುದರ ಬಗ್ಗೆಯೂ  ಪ್ರಶ್ನಿಸಲಾಗಿದೆ.

ಇನ್ನು ಲಾಕ್​ಡೌನ್​ ಸಮಯದಲ್ಲಿ ಯಾವುದೇ ಅಂಗಡಿಗಳು ತೆರೆದಿಲ್ಲದಿದ್ದರೂ ಇವರಿಗೆ ಹೊಸ ಮೊಬೈಲ್​ ಕೊಳ್ಳಲು ಸಾಧ್ಯವಾಗಿದ್ದು ಹೇಗೆ? ಎಂದು ಹಲವು ಜನರು ಕೇಳಿದ್ದಾರೆ.

ಬಾಲಕಿಗೆ ಸಾಂತ್ವನ ನೀಡುವದಕ್ಕಿಂತ ಹೆಚ್ಚಾಗಿ ಪ್ರಚಾರದ ಆಶಯವಿತ್ತೆ? ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

 

BANTWAL

ಅನಾರೋಗ್ಯದ ನಡುವೆಯೂ ಮತ ಚಲಾಯಿಸಿ ಕೊ*ನೆಯುಸಿರೆಳೆದ ನಿವೃತ್ತ ಯೋಧ

Published

on

ಬಂಟ್ವಾಳ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಮಾಜಿ ಸೈನಿಕರೊಬ್ಬರು ಮತದಾನ ಪೂರೈಸಿ ಮರಳಿ ಅಸ್ಪತ್ರೆಗೆ ದಾಖಲಾಗಿದ್ದು, ಈಗ ಚಿಕಿತ್ಸೆಗೆ ಸ್ಪಂದಿಸದೆ ಮೃ*ತಪಟ್ಟಿದ್ದಾರೆ.

ಬಂಟ್ವಾಳ ವಗ್ಗ ನಿವಾಸಿ, ನಿವೃತ್ತ ಯೋಧ ಮಾಧವ ಪ್ರಭು (83) ಅನಾರೋಗ್ಯದ ನಡುವೆಯೂ ಪವಿತ್ರ ಮತದಾನ ಕರ್ತವ್ಯ ಪೂರೈಸಿದವರು.

ಮಾಧವ ಪ್ರಭುಗಳು ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 85 ವರ್ಷ ಮತ್ತು ಮೇಲ್ಪಟ್ಟವರಿಗೆ ಮನೆಯಲ್ಲೇ ಮತದಾನಕ್ಕೆ ಚುನಾವಣಾ ಆಯೋಗ ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ಮಾಧವ ಪ್ರಭುಗಳು ವೈದ್ಯರ ಅನುಮತಿ ಪಡೆದು ನೇರವಾಗಿ ಮನೆಗೆ ತೆರಳಿ ಅಲ್ಪಿ ಏ.15 ರಂದು ಮತದಾನ ಕರ್ತವ್ಯ ಪೂರೈಸಿ ಆಸ್ಪತ್ರೆಗೆ ಮರಳಿದ್ದರು. ಮಾಧವ ಪ್ರಭುಗಳು ಆಸ್ಪತ್ರೆಯಲ್ಲಿ ಬುಧವಾರ ಮೃ*ತಪಟ್ಟಿದ್ದಾರೆ.

ಸೈನ್ಯಕ್ಕೆ ಸೇರುವ ಮೊದಲು ಮಲೇರಿಯಾ ನಿರ್ಮೂಲನಾ ವಿಭಾಗದ ಇನ್‌ಸ್ಪೆಕ್ಟರ್ ಆಗಿದ್ದರು. ಸೈನ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ ನಂತರ ಇವರು ಪೂರ್ಣಾನಂದ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷರಾಗಿದ್ದರು. ಮೃ*ತರು ಪತ್ನಿ ಹಾಗೂ ಇಬ್ಬರು ಪುತ್ರಿ ಮತ್ತು ಪುತ್ರರನ್ನು ಅ*ಗಲಿದ್ದಾರೆ.

Continue Reading

LATEST NEWS

ನಟಿ ಅಮೂಲ್ಯ ಮಾವನ ಮನೆಗೆ ಚುನಾವಣಾ ಅಧಿಕಾರಿಗಳ ದಾಳಿ.. 31 ಲೀಟರ್ ಮದ್ಯ ವಶ..!!

Published

on

ಬೆಂಗಳೂರು: ನಟಿ ಅಮೂಲ್ಯ  ಅವರ ಮಾವ ರಾಜರಾಜೇಶ್ವರಿ ನಗರ  ಮಾಜಿ ಕಾರ್ಪೋರೇಟರ್ ರಾಮಚಂದ್ರಪ್ಪರವರ  ಮನೆ ಮೇಲೆ ಎ.24ರಂದು ರಾತ್ರಿ ಚುನಾವಣಾ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಆರ್.ಆರ್ ನಗರದಲ್ಲಿರುವ ಮನೆ ಮೇಲೆ ದಾಳಿ ಮಾಡಿದ ಅಧಿಕಾರಿಗಳು ಮನೆಯಲ್ಲಿ ಶೋಧ ಮಾಡಿದ್ದಾರೆ. ರಾತ್ರಿ ‌10 ಗಂಟೆ ಸುಮಾರಿಗೆ 10 ವಾಹನಗಳಲ್ಲಿ ಬಂದಿದ್ದ 30ಕ್ಕೂ ಹೆಚ್ಚು ಚುನಾವಣಾ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದು, ಈ ವೇಳೆ ರಾಮಚಂದ್ರ, ನಟಿ ಅಮೂಲ್ಯ ಮತ್ತು ಪತಿ ಜಗದೀಶ್ ಮನೆಯಲ್ಲೇ ಇದ್ದರು. ಚುನಾವಣಾ ಅಧಿಕಾರಿ, ಅಬಕಾರಿ ಪೊಲೀಸ್, ವಾಣಿಜ್ಯ ತೆರಿಗೆ ಅಧಿಕಾರಿಗಳಿಂದ ನಡೆದ ಜಂಟಿ ದಾಳಿಯಲ್ಲಿ ಸತತ 4 ಗಂಟೆಗಳ ಕಾಲ‌ ಶೋಧ‌ ನಡೆಸಿದ್ದಾರೆ.

amulya

31 ಲೀಟರ್ ಮದ್ಯ ವಶ:

ಇನ್ನು ಚುನಾವಣಾ ಅಧಿಕಾರಿಗಳ ದಾಳಿ ವೇಳೆ ರಾಮಚಂದ್ರಪ್ಪ ಅವರ ನಿವಾಸದಲ್ಲಿ ಬೆಲೆ ಬಾಳುವ ವಸ್ತುಗಳು ಪತ್ತೆಯಾಗಿಲ್ಲ ಬದಲಾಗಿ 31 ಲೀಟರ್ ಮದ್ಯವನ್ನು ವಶ ಪಡಿಸಿಕೊಳ್ಳಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ರಾಮಚಂದ್ರಪ್ಪ ಮೊಮ್ಮಕ್ಕಳ ಹುಟ್ಟುಹಬ್ಬಕ್ಕಾಗಿ ಮದ್ಯ ತರಿಸಿದ್ದೆವು. ಆದರೆ ಚುನಾವಣೆ ಹಿನ್ನೆಲೆ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಮಾಡಲು ಆಗುವುದಿಲ್ಲ. ಇದೀಗ ಮದ್ಯವನ್ನು ವಶಕ್ಕೆ ಪಡೆದಿದದ್ದಾರೆ. ಇನ್ನು ವಶಕ್ಕೆ ಪಡೆದಿದ್ದಾರೆ ಎನ್ನುವುದಕ್ಕೆ ನನ್ನ ಸಹಿಯನ್ನು ಪಡೆದುಕೊಂಡು ಹೋಗಿದ್ದಾರೆ. ಈ ಭಾಗದಲ್ಲಿ ಬಿಜೆಪಿ ಲೀಡ್ ಬರುತ್ತೆ. ಇದನ್ನು ಸಹಿಸಲಾಗದ ಕೆಲವರು ಅಧಿಕಾರವನ್ನು ದುರುಪಯೋಗ ಮಾಡುತ್ತಿದ್ದಾರೆ. ಈ ಭಾಗದಲ್ಲಿ ಕಾಂಗ್ರೆಸ್ ಹಣವನ್ನು ಹಂಚಿಕೆ ಮಾಡುತ್ತಿತ್ತು. ಅದಕ್ಕೆ ನಾವು ಅಡ್ಡಿ ಪಡಿಸುತ್ತೇವೆ ಎಂದು ನಮ್ಮ ಮನೆ ಮೇಲೆ‌ ದಾಳಿ ಮಾಡಿದ್ದಾರೆ ಎಂದು ದೂರಿದರು.

amulya

ಮುಂದೆ ಓದಿ..; ಬಡಗುತಿಟ್ಟು ಯಕ್ಷಗಾನದ ಗಾನ ಕೋಗಿಲೆ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ..

ಅಧಿಕಾರಿಗಳಿಗೆ ಪದೇ ಪದೇ ಬರುತ್ತಿದ್ದ ಫೋನ್ ಕಾಲ್:

ದಾಳಿ ವೇಳೆ ಆರ್‌ಓಗೆ ಪದೇ ಪದೇ ಫೋನ್ ಬರುತಿತ್ತು. ಅವರನ್ನು ಎರಡು ದಿನ ಒಳಗಡೆ ಹಾಕಿಸಿ ಎಂದು ಫೋನಿನಲ್ಲಿ ಇದ್ದ ವ್ಯಕ್ತಿ ಹೇಳುತ್ತಿದ್ದರು. ಮೊಮ್ಮಕ್ಕಳ ಹುಟ್ಟುಹಬ್ಬಕ್ಕೆ ಮದ್ಯ ತರಿಸಿದ್ದೆ. ‌‌ಚುನಾವಣೆ ಸಮಯದಲ್ಲಿ ದೊಡ್ಡ ಮಟ್ಟದಲ್ಲಿ ಹುಟ್ಟುಹಬ್ಬ ಆಚರಿಸಬಾರದು ಎಂದು ಸುಮ್ಮನೆ ಆಗಿದ್ದೆವು. ಏನೋ ದೊಡ್ಡದಾಗಿ ಸಿಗುತ್ತೆ ಎಂದು ಕೂಲ್ ಆಗಿ ಬಂದ ಅಧಿಕಾರಿಗಳು ಹಾಟ್ ಆಗಿ ಹೊರ ನಡೆದರು ಎಂದು ರಾಮಚಂದ್ರಪ್ಪ ಹೇಳಿದ್ದಾರೆ.

 

Continue Reading

DAKSHINA KANNADA

ಕೇರಳದ ಹಕ್ಕಿ ಜ್ವರ…ದಕ್ಷಿಣ ಕನ್ನಡದ ಗಡಿಯಲ್ಲಿ ಕಟ್ಟೆಚ್ಚರ..!

Published

on

ಮಂಗಳೂರು: ಕೇರಳದ ಅಲಪ್ಪುಳ ಜಿಲ್ಲೆಯ ಎರಡು ಗ್ರಾಮ ಪಂಚಾಯಿತಿಗಳಲ್ಲಿ ಹಕ್ಕಿ ಜ್ವರ ದೃಢಪಟ್ಟಿದೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಕೇರಳದ ಗಡಿ ಭಾಗಗಳಲ್ಲಿ ವಿಸೇಷ ನಿಗಾ ವಹಿಸಲಾಗಿದೆ.

ಇಂದಿನಿಂದ ತಲಪಾಡಿ, ಜಾಲ್ಸೂರು ಮತ್ತು ಸಾರಡ್ಕದಲ್ಲಿ ವಿಶೇಷ ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಲಾಗುವುದು. ಈ ಚೆಕ್ ಪೋಸ್ಟ್‌ಗಳಲ್ಲಿ ಕೋಳಿ ಉತ್ಪನ್ನಗಳನ್ನು ಕೇರಳಕ್ಕೆ ತಲುಪಿಸಿದ ನಂತರ ದಕ್ಷಿಣ ಕನ್ನಡಕ್ಕೆ ಹಿಂದಿರುಗುವ ವಾಹನಗಳನ್ನು ಸ್ಯಾನಿಟೈಸ್ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಮಂಗಳೂರಿನಿಂದ ಸುಮಾರು 400 ಕಿಲೋಮೀಟರ್ ದೂರದಲ್ಲಿರುವ ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ಹಕ್ಕಿ ಜ್ವರ ದೃಢಪಟ್ಟಿದೆ. ಆ ಜಿಲ್ಲೆಯಲ್ಲಿ ಇದು ಎರಡನೇ ಪ್ರಕರಣವಾಗಿದೆ. ಇದುವರೆಗೆ ದಕ್ಷಿಣ ಕನ್ನಡದಲ್ಲಿ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ನಾವು ಜಾಗರೂಕರಾಗಿರುತ್ತೇವೆ ಮತ್ತು ಮೂರು ಆಯಕಟ್ಟಿನ ಸ್ಥಳಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸುತ್ತೇವೆ ಎಂದು ಕರ್ನಾಟಕ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ ಇದು ಕೋವಿಡ್‌ಗಿಂತ ಭೀಕರ ಸೋಂಕು…ಜಗತ್ತಿಗೆ ಹರಡುವ ಆತಂಕದಲ್ಲಿ ತಜ್ಞರು..!

ಏನಿದು ಹಕ್ಕಿ ಜ್ವರ?

ಹೆಚ್​​5ಎನ್​​1 ವೈರಸ್​​ನಿಂದ ಹರಡುವ ಸೋಂಕನ್ನು ಹಕ್ಕಿ ಜ್ವರ ಎಂದು ಕರೆಯಲಾಗುತ್ತದೆ. ಈ ವೈರಸ್ ಹೆಚ್ಚಿನ ಮರಣ ಪ್ರಮಾಣದೊಂದಿಗೆ ತೀವ್ರವಾದ ಜ್ವರವನ್ನು ಉಂಟುಮಾಡಬಲ್ಲದ್ದಾಗಿದೆ. ಆದರೆ, ಮನುಷ್ಯರಲ್ಲಿ ಈ ರೋಗದ ಹರಡುವಿಕೆ ಬಹಳ ಅಪರೂಪ. ಇಲ್ಲಿಯವರೆಗೆ, ಈ ವೈರಸ್ ಮಾನವರಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಹರಡಿದ ಬಗ್ಗೆ ವರದಿಯಾಗಿಲ್ಲ. ಆದರೂ ಈ ಬಗ್ಗೆ ನಿರ್ಲಕ್ಷ್ಯ ತೋರುವಂತಿಲ್ಲ.

ಹಕ್ಕಿ ಜ್ವರ ವಿಶಿಷ್ಟವಾಗಿ ವಲಸೆ ಹಕ್ಕಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಪ್ರಸ್ತುತ ಬೇಸಿಗೆಯಲ್ಲಿ ಹಕ್ಕಿಗಳ ವಲಸೆ ಸಾಮಾನ್ಯವಾಗಿ ಕಡಿಮೆ ಇರುತ್ತದೆ. ವೈರಸ್ ಸೋಂಕಿತ ಕೋಳಿಗಳಿಂದ ಇತರ ಪಕ್ಷಿಗಳಿಗೆ ಮತ್ತು ಮನುಷ್ಯರಿಗೆ, ವಿಶೇಷವಾಗಿ ಕೋಳಿ ಸಾಕಣೆ ಕೇಂದ್ರಗಳು ಮತ್ತು ಮಾಂಸ ಸಂಸ್ಕರಣಾ ಘಟಕಗಳಲ್ಲಿ ಕೆಲಸ ಮಾಡುವವರಿಗೆ ಹರಡಬಹುದು. ಆದಾಗ್ಯೂ, ಇದು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.

Continue Reading

LATEST NEWS

Trending