LATEST NEWS
ಗೀಸರ್ ಬಳಸಿ ಕರೆಂಟ್ ಬಿಲ್ ಜಾಸ್ತಿ ಬರುತ್ತೆ ಅನ್ನೋರು ಟೆನ್ಶನ್ ಬಿಡಿ! ಈ ಟಿಪ್ಸ್ ಫಾಲೋ ಮಾಡಿ
ಮಂಗಳೂರು: ಬಹುತೇಕರಿಗೆ ಸ್ನಾನ ಮಾಡಲು ಬಿಸಿ ನೀರಿನ ಅವಶ್ಯಕತೆ ಇದ್ದೇ ಇರುತ್ತೆ. ಹಾಗಿರುವಾಗ ಗೀಸರ್ ಬಳಕೆ ಮಾಡುವುದು ಅನಿವಾರ್ಯ. ಹಾಗಂತ ಗೀಸರ್ ಬಳಸಿದ್ರೆ ಹೆಚ್ಚಿನವರು ಕರೆಂಟ್ ಬಿಲ್ ಹೆಚ್ಚು ಬರುತ್ತೆ ಅಂತಾ ಟೆನ್ಶನ್ ಮಾಡಿಕೊಳ್ಳುವುದು ಹೆಚ್ಚಾಗಿದೆ. ಅದಕ್ಕಾಗಿ ಸದ್ಯ ನಿಮಗೂ ಗೀಸರ್ ಬಳಕೆ ಮಾಡಿದ್ರೆ, ಕರೆಂಟ್ ಬಿಲ್ ಕಡಿಮೆ ಬರ್ಬೇಕು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ ಸಾಕು.
ಹೌದು, ನೀವು ಗೀಸರ್ ಯೂಸ್ ಮಾಡುತ್ತಲೇ ವಿದ್ಯುತ್ ಬಿಲ್ ಕಡಿಮೆ ಬರಬೇಕು ಅಂದುಕೊಂಡಿದ್ದರೆ ಅದಕ್ಕಾಗಿ ಉತ್ತಮ ಗುಣಮಟ್ಟದ ಗೀಸರ್ ಅನ್ನು ಬಳಸಬೇಕು. ಏಕೆಂದರೆ ಗೀಸರ್ ಗಾತ್ರಕ್ಕಿಂತ ಹೆಚ್ಚಾಗಿದ್ದರೆ, ಅದು ನಿಮಗೆ ಅಗತ್ಯಕ್ಕಿಂತ ಹೆಚ್ಚು ನೀರನ್ನು ಬಿಸಿ ಮಾಡುತ್ತದೆ ಮತ್ತು ಅದಕ್ಕೆ ಹೆಚ್ಚಿನ ಕರೆಂಟ್ ಬೇಕಾಗುತ್ತದೆ.
5 ಸ್ಟಾರ್ ರೇಟೆಡ್ ಗೀಸರ್ ಗಳು ವಿದ್ಯುತ್ ಉಳಿತಾಯ ಮಾಡುವಂತಹ ಗೀಸರ್ ಆಯ್ಕೆ ಮಾಡಿ. ಹೊಸ ಗೀಸರ್ ಖರೀದಿಸುವಾಗ 5 ಸ್ಟಾರ್ ರೇಟ್ನ ಗೀಸರ್ ಖರೀದಿಸಿದರೆ ಇವು ಅತಿ ಹೆಚ್ಚು ವಿದ್ಯುತ್ ಉಳಿತಾಯ ಮಾಡುತ್ತವೆ.
ವಿದ್ಯುತ್ ಉಳಿಸಲು ಸರಿಯಾದ ತಾಪಮಾನದಲ್ಲಿ ಗೀಸರ್ ಅನ್ನು ಆನ್ ಮಾಡಿ. ಯಾಕೆಂದರೆ ಗೀಸರ್‌ನ ಸಾಮಾನ್ಯ ತಾಪಮಾನವು 55 ಡಿಗ್ರಿ ಸೆಲ್ಸಿಯಸ್‌ನಿಂದ 65 ಡಿಗ್ರಿ ಸೆಲ್ಸಿಯಸ್‌ವರೆಗೆ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ತಾಪಮಾನವನ್ನು 55 ಡಿಗ್ರಿ ಸೆಲ್ಸಿಯಸ್ನಲ್ಲಿ ಹೊಂದಿಸಿ ನಂತರ ಆನ್ ಮಾಡಿ. ಏಕೆಂದರೆ ಕಡಿಮೆ ತಾಪಮಾನದಲ್ಲಿ ವಿದ್ಯುತ್ ಬಳಕೆ ಕಡಿಮೆ ಇರುತ್ತದೆ.
ಗೀಸರ್ ನಲ್ಲಿ ಟೈಮರ್ ಹೊಂದಿಸುವುದು ಗೀಸರ್‌ನ ಸಮಯವನ್ನು ಕಡಿಮೆ ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅನಗತ್ಯವಾಗಿ ವಿದ್ಯುತ್ ಬಳಕೆಯಾಗುವುದಿಲ್ಲ.ಇನ್ನು ಗೀಸರ್ ಅನ್ನು ದೀರ್ಘಕಾಲ ಆನ್ನಲ್ಲೇ ಇಟ್ಟಾಗ ಇದರಿಂದ್ ಕರೆಂಟ್ ಬಿಲ್ ಹೆಚ್ಚಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅದಕ್ಕಾಗಿ ಗೀಸರ್ ಅನ್ನು ಹೆಚ್ಚು ಹೊತ್ತು ಆನ್ ಮಾಡಬೇಡಿ. ಗೀಸರ್ ಅನ್ನು ಎಷ್ಟು ಬೇಕು ಅಷ್ಟು ಬಳಸಿ ನಂತರ ಸ್ವಿಚ್ ಆಫ್ ಮಾಡಲು ಮರೆಯಬೇಡಿ.
LATEST NEWS
ಮಂಗಳೂರು: ಮನೆಯ ಗೋಡೆ ಕುಸಿದು ಇಬ್ಬರು ಮೃ*ತ್ಯು
ಮಂಗಳೂರು: ಹಳೆಯ ಮನೆಯನ್ನು ಕೆಡವುತ್ತಿದ್ದ ವೇಳೆ ಗೋಡೆ ಕುಸಿದ ಪರಿಣಾಮ ಇಬ್ಬರು ಮೃ*ತಪಟ್ಟಿರುವ ಘಟನೆ ನಗರದ ಜೈಲ್ ರಸ್ತೆಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಜೇಮ್ಸ್ ಜತ್ತನ್ನ ಮತ್ತು ಅಡ್ವಿನ್ ಜೆರಾಲ್ಡ್ ಮೊಬಿನ್ ಮೃ*ತರು ಎಂದು ಗುರುತಿಸಲಾಗಿದೆ.
ಹಳೆಯ ಮನೆಯನ್ನು ಕೆಡವುತ್ತಿದ್ದ ವೇಳೆ ಗೋಡೆ ಕುಸಿದ ಪರಿಣಾಮ ಇಬ್ಬರು ಮೃ*ತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ವಿಡಿಯೋ ನೋಡಿ:
LATEST NEWS
ಭರ್ಜರಿ ಶಾಕ್ ಕೊಟ್ಟ ಕೇಂದ್ರ ಸರ್ಕಾರ ! ಪೆಟ್ರೋಲ್ , ಡೀಸೆಲ್ ಬೆಲೆ ಇಳಿಕೆ ಸಾಧ್ಯತೆ !
ಮಂಗಳೂರು/ನವದೆಹಲಿ: ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಇಳಿಕೆ ಆಗಿರುವುದರಿಂದ ಭಾರತದಲ್ಲೂ ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳನ್ನು ಇಳಿಸಲು ಸರ್ಕಾರ ಆಲೋಚಿಸುತ್ತಿರುವುದು ತಿಳಿದುಬಂದಿದೆ. ಪೆಟ್ರೋಲ್ ಸಚಿವಾಲಯದ ಕಾರ್ಯದರ್ಶಿ ಪಂಕಜ್ ಜೈನ್ ಈ ಬಗ್ಗೆ ಸುಳಿವು ನೀಡಿದ್ದಾರೆ. ಮಾಧ್ಯಮಗಳಿಗೆ ಮಾಹಿತಿ ಹಂಚಿಕೊಂಡ ಅವರು, ತೈಲ ಕಂಪನಿಗಳಿಗೆ ಹಾಕಲಾಗುವ ವಿಂಡ್ಫಾಲ್ ತೆರಿಗೆಯನ್ನು ತೆಗೆದುಹಾಕುವ ಪ್ರಸ್ತಾಪವೊಂದು ಸರ್ಕಾರದ ಪರಾಮರ್ಶೆಯಲ್ಲಿರುವುದನ್ನು ತಿಳಿಸಿದ್ದಾರೆ.
ವಿಂಡ್ಫಾಲ್ ಟ್ಯಾಕ್ಸ್ ಎಂದರೇನು ?
ಇದು ಆದಾಯ ತೆರಿಗೆಯಲ್ಲಿನ ಕ್ಯಾಪಿಟಲ್ ಗೇಯ್ನ್ ಟ್ಯಾಕ್ಸ್ ರೀತಿಯಂಥದ್ದು. ಅಸ್ವಾಭಾವಿಕವಾಗಿ ಲಾಭ ಹೆಚ್ಚಳ ಆದಾಗ ವಿಂಡ್ಫಾಲ್ ಟ್ಯಾಕ್ಸ್ ವಿಧಿಸಲಾಗುತ್ತದೆ. ಪೆಟ್ರೋಲಿಯಂ ಸೇರಿ ಕೆಲ ಉದ್ಯಮಗಳಲ್ಲಿ ಸರ್ಕಾರ ಈ ತೆರಿಗೆ ಹಾಕುತ್ತದೆ. 2022ರಲ್ಲಿ ಮೊದಲ ಬಾರಿಗೆ ಸರ್ಕಾರ ವಿಂಡ್ಫಾಲ್ ಟ್ಯಾಕ್ಸ್ ಜಾರಿಗೆ ತಂದಿತು. ಜಾಗತಿಕ ತೈಲ ಬೆಲೆಯಲ್ಲಿ ದಿಢೀರ್ ಏರಿಳಿತಗಳಾಗಿ ತೈಲ ಕಂಪನಿಗಳು ದೊಡ್ಡ ಲಾಭ ಗಳಿಸಿದಾಗ ಅದಕ್ಕೆ ತೆರಿಗೆ ವಿಧಿಸಲೆಂದು ಇದನ್ನು ತರಲಾಗಿತ್ತು.
ಜಾಗತಿಕ ತೈಲ ಬೆಲೆಗಳ ಅನುಸಾರವಾಗಿ ತಿಂಗಳಿಗೆ ಎರಡು ಬಾರಿ ಸರ್ಕಾರ ವಿಂಡ್ಫಾಲ್ ಟ್ಯಾಕ್ಸ್ ಅನ್ನು ಪರಿಷ್ಕರಿಸುತ್ತದೆ. ಈಗ ಪೂರ್ಣವಾಗಿ ಟ್ಯಾಕ್ಸ್ ತೆಗೆದುಹಾಕುವ ಪ್ರಸ್ತಾಪ ಸರ್ಕಾರದ ಮುಂದಿದೆ. ತೈಲ ಸಂಸ್ಕರಣಾ ಕಂಪನಿಗಳಿಗೆ ಲಾಭದ ಮಾರ್ಜಿನ್ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ವಿಂಡ್ಫಾಲ್ ಟ್ಯಾಕ್ಸ್ ತೆಗೆದುಹಾಕಲು ಯೋಚಿಸಲಾಗುತ್ತಿದೆ ಎನ್ನಲಾಗಿದೆ. ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಸಾಕಷ್ಟು ಇಳಿಕೆ ಆಗಿರುವುದರಿಂದ ಭಾರತದಲ್ಲಿ ಪೆಟ್ರೋಲ್, ಡೀಸಲ್ ಇತ್ಯಾದಿ ಪೆಟ್ರೋಲಿಯಂ ಉತ್ಪನ್ನಗಳ ರೀಟೇಲ್ ಬೆಲೆಗಳನ್ನು ಇಳಿಸಲು ಸರ್ಕಾರ ಚಿಂತನೆ ನಡೆಸಿದೆ. ಶೀಘ್ರದಲ್ಲೇ ಈ ಸಂಬಂಧ ನಿರ್ಧಾರ ಕೈಗೊಳ್ಳಬಹುದಾದ ಸಾಧ್ಯತೆ ಇದೆ.
LATEST NEWS
ಭಾರತೀಯ ಕ್ರೀಡಾಪಟುಗಳನ್ನು ಶ್ಲಾಘಿಸಿದ ಮೋದಿ
ನವದೆಹಲಿ: ಪ್ಯಾರಿಸ್ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತ ಇತಿಹಾಸ ಸೃಷ್ಟಿಸಿದ ಬೆನ್ನಲ್ಲೇ ಭಾರತೀಯ ಕ್ರೀಡಾಪಟುಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದಾರೆ. ಕ್ರೀಡಾಪಟುಗಳನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿದ್ದ ಅವರು, ದಾಖಲೆಯ 29 ಪದಕಗಳನ್ನು ಗೆದ್ದ ಕ್ರೀಡಾಪಟುಗಳು ಮತ್ತು ತರಬೇತುದಾರರನ್ನು ಶ್ಲಾಘಿಸಿದರು.
ಜೂಡೋದಲ್ಲಿ ಪ್ಯಾರಾಲಿಂಪಿಕ್ ಪದಕ ಗೆದ್ದು ಇತಿಹಾಸ ನಿರ್ಮಿಸಿದ ಕಪಿಲ್ ಪರ್ಮಾರ್ ಅವರು ಪ್ರಧಾನಿ ಮೋದಿಗೆ ಸ್ಮರಣಿಕೆಯನ್ನು ಉಡುಗೊರೆಯಾಗಿ ನೀಡಿದರು. ಬಳಿಕ ಪ್ರಧಾನಿ ಮೋದಿ ಕಪಿಲ್‌ಗೆ ಆಟೋಗ್ರಾಫ್‌ನ್ನು ಸಹ ನೀಡಿದರು. ಇದೇ ವೇಳೆ ಅವನಿ ಲೆಖರಾ ಅವರು ಪ್ರಧಾನಿ ಮೋದಿಯವರಿಗೆ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದರು. ಅಲ್ಲದೇ ಪ್ರಧಾನಿ ಮೋದಿಯವರ ಬೆಂಬಲಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು.
ಮಂಗಳವಾರ ದೇಶಕ್ಕೆ ಮರಳಿದ್ದ ಭಾರತೀಯ ಅಥ್ಲೀಟ್‌ಗಳು, ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ 7 ಚಿನ್ನ, 9 ಬೆಳ್ಳಿ ಮತ್ತು 13 ಕಂಚು ಸೇರಿದಂತೆ 29 ಪದಕಗಳನ್ನು ಗೆದ್ದಿದೆ. ಈ ಮೂಲಕ ಟೋಕಿಯೊ ಪ್ಯಾರಾಲಿಂಪಿಕ್ಸ್‌ನ 19 ಪದಕಗಳನ್ನು ಗೆದ್ದ ದಾಖಲೆಯನ್ನು ಮುರಿದಿದೆ. ಈ ಸಾಧನೆಯ ಮೂಲಕ ಪದಕ ಪಟ್ಟಿಯಲ್ಲಿ 24 ನೇ ಸ್ಥಾನದಲ್ಲಿದ್ದ ಭಾರತ 18 ನೇ ಸ್ಥಾನಕ್ಕೆ ಏರಿದೆ. ಈ ಬಾರಿ 25 ಪದಕ ಗೆಲ್ಲುವ ಗುರಿಯೊಂದಿಗೆ ಭಾರತ ಪ್ಯಾರಾಲಿಂಪಿಕ್ಸ್‌ಗೆ ತೆರಳಿತ್ತು.
ಕ್ರೀಡಾಪಟುಗಳ ಜೊತೆ ಮೋದಿ ಮಾತುಕತೆ ನಡೆಸಿದ ವೇಳೆ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಪಿಸಿಐ ಅಧ್ಯಕ್ಷ ದೇವೇಂದ್ರ ಜಜಾರಿಯಾ ಇದ್ದರು.
- LATEST NEWS4 days ago
ಕನ್ನಡದಲ್ಲೇ ಔಷಧ ಚೀಟಿ ಬರೆಯಲಾರಂಭಿಸಿದ ವೈದ್ಯರು..! ವೈರಲ್ ಆಗ್ತಿದೆ ಈ ಪ್ರಿಸ್ಕ್ರಿಪ್ಶನ್
- FILM3 days ago
ಕನ್ನಡ ಬಿಗ್ ಬಾಸ್ ಸೀಸನ್ 11ಕ್ಕೆ ಮುಹೂರ್ತ ಫಿಕ್ಸ್! ಹೋಸ್ಟ್ ಕೂಡ ಕನ್ಫರ್ಮ್!
- DAKSHINA KANNADA4 days ago
WATCH : ಕದ್ರಿ ಪಾರ್ಕ್ ನ ರಸ್ತೆಯಲ್ಲಿ ‘ಅಪರೇಷನ್ ಹೆಬ್ಬಾವು’; ಭಾರಿ ಗಾತ್ರದ ಹಾವನ್ನು ಕಂಡು ಬೆಚ್ಚಿ ಬಿದ್ದ ಜನ
- LATEST NEWS2 days ago
ನೃತ್ಯ ಮಾಡಲು ನಿರಾಕರಿಸಿದ ನೃತ್ಯಗಾರ್ತಿಯರ ಮೇಲೆ ಸಾಮೂಹಿಕ ಅತ್ಯಾಚಾ*ರ
Pingback: ಉಡುಪಿ : ಪುತ್ತಿಗೆ ಕಿರಿಯ ಶ್ರೀಗಳ 34ನೇ ಜನ್ಮ ನಕ್ಷತ್ರ ಕಾರ್ಯಕ್ರಮ ಸಂಪನ್ನ - NAMMAKUDLA NEWS - ನಮ್ಮಕುಡ್ಲ ನ್ಯೂಸ್