LATEST NEWS
ವಿಮಾನ ಸ್ಫೋಟಿಸುವುದಾಗಿ ಬೆದರಿಕೆ ಹಾಕುವವರಿಗೆ ಬೀಳುತ್ತೆ ಕೋಟಿಗಟ್ಟಲೆ ದಂಡ
Published
4 days agoon
By
NEWS DESK2ಈ ವರ್ಷ ಹಲವು ವಿಮಾನಯಾನ ಸಂಸ್ಥೆಗಳಿಗೆ ಬಾಂಬ್ ಬೆದರಿಕೆ ಕರೆಗಳು ಬಂದಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ನಾಗರಿಕ ವಿಮಾನಯಾನ ಸಚಿವಾಲಯವು ಇನ್ಮುಂದೆ ಯಾರಾದರೂ ವಿಮಾನವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದರೆ ಒಂದು ಕೋಟಿ ರೂ.ವರೆಗೂ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಅಷ್ಟೇ ಅಲ್ಲದೆ ಬೆದರಿಕೆ ಹಾಕುವ ವ್ಯಕ್ತಿಯನ್ನು ನೋ ಫ್ಲೈ ಲಿಸ್ಟ್ಗೆ ಸೇರಿಸಲಾಗುತ್ತದೆ. ಇದರೊಂದಿಗೆ 1 ಲಕ್ಷ ರೂ.ನಿಂದ ಕೋಟಿವರೆಗೂ ದಂಡ ವಿಧಿಸಲಾಗುತ್ತದೆ. ನಾಗರಿಕ ವಿಮಾನಯಾನ ಸಚಿವಾಲಯವು 2023 ರ ಏರ್‌ಕ್ರಾಫ್ಟ್ (ಭದ್ರತೆ) ನಿಯಮಗಳಿಗೆ ತಿದ್ದುಪಡಿ ತಂದಿದ್ದು, ನಕಲಿ ಕರೆಗಳ ವಿರುದ್ಧ ದಂಡ ವಿಧಿಸಲು ಅವಕಾಶ ಕಲ್ಪಿಸಿದೆ.
ಕಾಲಕಾಲಕ್ಕೆ, ಇಂತಹ ವದಂತಿಗಳನ್ನು ಹರಡುವುದರಿಂದ, ಹಲವಾರು ಅನಾನುಕೂಲಗಳನ್ನು ಎದುರಿಸಬೇಕಾಗುತ್ತದೆ ಮತ್ತು ಇದು ಜನರಲ್ಲಿ ಭಯವನ್ನು ಸಹ ಸೃಷ್ಟಿಸುತ್ತದೆ. ಡಿಸೆಂಬರ್ 9 ರಂದು ಈ ಕುರಿತು ಅಧಿಸೂಚನೆ ಹೊರಡಿಸಲಾಗಿತ್ತು.ಏರ್‌ಕ್ರಾಫ್ಟ್ (ಸುರಕ್ಷತೆ) ನಿಯಮಗಳನ್ನು ತಿದ್ದುಪಡಿ ಮಾಡುವ ಮೂಲಕ, ಎರಡು ಕ್ರಮಗಳಿಗೆ ನಿಬಂಧನೆಯನ್ನು ಮಾಡಲಾಗಿದೆ.
ಡೈರೆಕ್ಟರ್ ಜನರಲ್ (BCAS) ಪ್ರಕಾರ, ಭದ್ರತೆಯ ಹಿತದೃಷ್ಟಿಯಿಂದ ಹಾಗೆ ಮಾಡುವುದು ಅವಶ್ಯಕ, ಇದರಿಂದಾಗಿ ಬೆದರಿಕೆ ಹಾಕುವ ಮುನ್ನ ತಮ್ಮ ಪರಿಸ್ಥಿತಿ ಮುಂದೇನಾಗಲಿದೆ ಎಂದು ಆಲೋಚಿಸಲೇಬೇಕು.
2024 ರಲ್ಲಿ ಮಾತ್ರ, ಸುಮಾರು 1,000 ಬೆದರಿಕೆಗಳು ವಿಮಾನ ಕಾರ್ಯಾಚರಣೆಯನ್ನು ಅಡ್ಡಿಪಡಿಸಿದ್ದವು. ಇದು ವಿಮಾನಯಾನ ಸಂಸ್ಥೆಗಳಿಗೆ ಆರ್ಥಿಕ ನಷ್ಟವನ್ನು ಉಂಟುಮಾಡಿತು ಮತ್ತು ಪ್ರಯಾಣಿಕರಿಗೆ ಗಮನಾರ್ಹ ಅನಾನುಕೂಲತೆಯನ್ನು ಉಂಟುಮಾಡಿತು.
ಈ ಸಮಸ್ಯೆಯನ್ನು ಪರಿಹರಿಸಲು, ಸುಳ್ಳು ಬೆದರಿಕೆಗಳನ್ನು ನೀಡುವಲ್ಲಿ ತಪ್ಪಿತಸ್ಥರೆಂದು ಕಂಡುಬಂದ ವ್ಯಕ್ತಿಗಳು ಈಗ 1 ಲಕ್ಷದವರೆಗೆ ದಂಡವನ್ನು ಎದುರಿಸಬೇಕಾಗುತ್ತದೆ. ತೀವ್ರ ಕ್ರಿಮಿನಲ್ ಆರೋಪಗಳನ್ನು ಎದುರಿಸಬೇಕಾಗುತ್ತದೆ. 2024 ರ ಜನವರಿ ಮತ್ತು ನವೆಂಬರ್ ಮಧ್ಯದ ನಡುವೆ 994 ಘಟನೆಗಳು ವರದಿಯಾಗಿವೆ, 2022 ರ ಆಗಸ್ಟ್‌ನಿಂದ ಇಂತಹ 1,143 ಬೆದರಿಕೆಗಳು ಬಂದಿದ್ದವು.
ಕಾಸರಗೋಡು: ಆರು ಅಂಗಡಿಗಳಿಗೆ ದಿ*ಢೀರನೆ ಬೆಂ*ಕಿ ಹೊ*ತ್ತಿಕೊಂಡು ಉ*ರಿದ ಘಟನೆ ಶನಿವಾರ (ಡಿ.21) ತಡರಾತ್ರಿ ಪೆರ್ಲ ಬಳಿ ನಡೆದಿದೆ.
ಪೆರ್ಲ ಪೇಟೆಯಲ್ಲಿ ಇರುವಂತಹ ಪೂಜಾ ಫ್ಯಾನ್ಸಿ , ಗೋಪಿನಾಥ್ ಪೈ ಕ್ಲೋತ್ ಸೆಂಟರ್, ಪತ್ರಿಕಾ ವಿತರಣಾ ಮಳಿಗೆ, ಪ್ರವೀಣ್ ಆಟೋ ಮೊಬೈಲ್, ಸಾದತ್ ಸ್ಟೋರ್, ಗೌತಮ್ ಕೋಲ್ಡ್ ಹೌಸ್ ಮೊದಲಾದವು ಸಂಪೂರ್ಣ ಅ*ಗ್ನಿಗಾ*ಹುತಿಯಾಗಿರುವ ಅಂಗಡಿಗಳು ಎಂದು ಗುರುತಿಸಲಾಗಿದೆ.
ಇದನ್ನೂ ಒದಿ : ಮೊಹಾಲಿ ಕಟ್ಟಡ ಕು*ಸಿತ ಪ್ರಕರಣ; ಎರಡು ಸಾ*ವು, ಹಲವರು ಕಟ್ಟಡದಡಿ ಇರುವ ಶಂಕೆ !!
ಮೂರು ಗಂಟೆಗೂ ಅಧಿಕ ಸಮಯದ ಬಳಿಕ ಬೆಂ*ಕಿಯನ್ನು ನಂದಿಸಲಾಯಿತು. ಶಾ*ರ್ಟ್ ಸ*ರ್ಕ್ಯೂಟ್ ಬೆಂ*ಕಿ ಅ*ನಾಹುತಕ್ಕೆ ಕಾರಣ ಎಂದು ಶಂಕಿಸಲಾಗಿದೆ. ರಾತ್ರಿ 12ಗಂಟೆ ಸುಮಾರಿಗೆ ಘಟನೆ ನಡೆದಿದ್ದು , ಉಪ್ಪಳ ಕಾಸರಗೋಡಿನಿಂದ ಆಗಮಿಸಿದ ಐದು ಅ*ಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರ ಸಹಕಾರದಿಂದ ಬೆಂ*ಕಿಯನ್ನು ನಂದಿಸಿ ಹೆಚ್ಚಿನ ಅ*ನಾಹುತ ತಪ್ಪಿಸಲಾಗಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
LATEST NEWS
ಮೊಹಾಲಿ ಕಟ್ಟಡ ಕು*ಸಿತ ಪ್ರಕರಣ; ಎರಡು ಸಾ*ವು, ಹಲವರು ಕಟ್ಟಡದಡಿ ಇರುವ ಶಂಕೆ !!
Published
2 hours agoon
22/12/2024ಮಂಗಳೂರು/ಪಂಜಾಬ್: ಕಟ್ಟಡ ಕು*ಸಿತದಿಂದ ಹಿಮಾಚಲ ಪ್ರದೇಶದ 20 ವರ್ಷದ ಯುವತಿ ಸೇರಿದಂತೆ ಇಬ್ಬರು ಮೃ*ತಪಟ್ಟ ಘಟನೆ ಶನಿವಾರ (ಡಿ.21) ಸಂಜೆ ಪಂಜಾಬ್‌ನ ಮೊಹಾಲಿಯಲ್ಲಿ ನಡೆದಿದ್ದು, ಹಲವರು ಇನ್ನೂ ಕಟ್ಟಡದ ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ ಎಂಬ ಶಂ*ಕೆ ವ್ಯಕ್ತವಾಗಿ ತೀ*ವ್ರ ಪರಿಶೀಲನೆ ನಡೆಸುತ್ತಿದ್ದಾರೆ.
ಥಿಯೋಗ್‌ನ ದೃಷ್ಟಿ ವರ್ಮ (20) ಓರ್ವ ಮೃ*ತ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಕಳೆದ ರಾತ್ರಿ ಅವಶೇಷಗಳಡಿ ಸಿಲುಕಿಕೊಂಡು ಗಂ*ಭೀರ ಸ್ಥಿತಿಯಲ್ಲಿದ್ದವರನ್ನು ರಕ್ಷಿಸಿ, ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃ*ತಪಟ್ಟಿದ್ದರು. ಇಂದು(ಡಿ।22) ಬೆಳಗ್ಗೆ ಮತ್ತೊಬ್ಬ ವ್ಯಕ್ತಿಯ ಮೃ*ತದೇಹ ಪ*ತ್ತೆಯಾಗಿದ್ದು, ಅವರನ್ನು ಹರಿಯಾಣದ ಅಂಬಾಲಾ ಜಿಲ್ಲೆಯ ಅಭಿಷೇಕ್ ಎಂದು ಗುರುತಿಸಲಾಗಿದೆ.
ಘಟನೆಯ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿ ದೀಪಕ್ ಪರೀಕ್, “ಪ್ರಾಥಮಿಕ ತನಿಖೆಯಲ್ಲಿ, ಕಟ್ಟಡದ ಮಾಲಕರು ಕಟ್ಟಡದ ಪಕ್ಕದಲ್ಲಿರುವ ನಿವೇಶನದಲ್ಲಿ ಯಾವುದೇ ಅನುಮತಿಯಿಲ್ಲದೆ ಮಣ್ಣು ತೋಡುತ್ತಿದ್ದರು” ಎಂದು ತಿಳಿಸಿದ್ದಾರೆ. ಕಳೆದ 17 ಗಂಟೆಗಳಿಂದ ಭಾರತೀಯ ಸೇನೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದು, ಇನ್ನೂ ಹಲವರು ಕಟ್ಟಡಗಳ ಅವಶೇಷಗಳಡಿ ಸಿಲುಕಿಕೊಂಡಿರುವ ಶಂ*ಕೆ ವ್ಯಕ್ತವಾಗಿದೆ. ಶೇ. 60ರಷ್ಟು ಕಟ್ಟಡದ ಅ*ವಶೇಷಗಳನ್ನು ತೆರವುಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಟ್ಟಡದ ಮಾಲಕರಾದ ಪರ್ವಿಂದರ್ ಸಿಂಗ್ ಹಾಗೂ ಗಗನ್ ದೀಪ್ ಸಿಂಗ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 105ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್, ಸ್ಥಳದಲ್ಲಿನ ಪರಿಸ್ಥಿತಿಯ ಮೇಲೆ ಫೋನ್ ಮೂಲಕ ನಿಗಾ ವಹಿಸಿದ್ದಾರೆ.
LATEST NEWS
ಮೆಲ್ಬೋರ್ನ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಗಾಯಾಳುಗಳ ಬರೆ !
Published
2 hours agoon
22/12/2024By
NEWS DESK3ಮಂಗಳೂರು/ಮೆಲ್ಬೋರ್ನ್: ಬಾರ್ಡರ್ ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯವು ಮೆಲ್ಬೋರ್ನ್ ನ ಎಂಸಿಜಿಯಲ್ಲಿ ಡಿ.26ರಂದು ಆರಂಭವಾಗಲಿದೆ. ಈಗಾಗಲೇ ಸರಣಿ 1-1ರಿಂದ ಸಮಬಲವಾಗಿದ್ದು, ಮುನ್ನಡೆಗಾಗಿ ಉಭಯ ತಂಡಗಳು ಸಿದ್ದತೆಯಲ್ಲಿದೆ.
ಆದರೆ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಹೊಸ ಸಮಸ್ಯೆಯೊಂದು ಎದುರಾಗಿದೆ. ಅದುವೇ ಗಾಯಾಳುಗಳ ಸಮಸ್ಯೆ. ಭಾನುವಾರ ಮೆಲ್ಬೋರ್ನ್ ಮೈದಾನದಲ್ಲಿ ನಡೆದ ಅಭ್ಯಾಸದ ವೇಳೆ ಹಿಟ್ ಮ್ಯಾನ್ ಗಾಯಗೊಂಡಿದ್ದು, ಹೀಗಾಗಿ ಅರ್ಧದಲ್ಲೇ ಪ್ರಾಕ್ಟೀಸ್ ನಿಲ್ಲಿಸಿದ್ದಾರೆ.
ಇದನ್ನೂ ಓದಿ: ಅರೆಸ್ಟ್ ವಾರೆಂಟ್ ಬೆನ್ನಲ್ಲೇ ಮಾಜಿ ಕ್ರಿಕೆಟರ್ ರಾಬಿನ್ ಉತ್ತಪ್ಪ ಸ್ಪಷ್ಟನೆ !
ನೆಟ್ಸ್ ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದಾಗ ಥ್ರೋಡೌನ್ ಸ್ಪೆಷಲಿಸ್ಟ್ ದಯಾ ಅವರು ರೋಹಿತ್ ಶರ್ಮಾಗೆ ಚೆಂಡೆಸೆಯುತ್ತಿದ್ದರು. ಇದೇ ವೇಳೆ ಚೆಂಡು ಅವರ ಎಡ ಮೊಣಕಾಲಿಗೆ ತಾಗಿದೆ. ಇದರಿಂದ ನೋವಿಗೆ ಒಳಗಾದ ರೋಹಿತ್ ಶರ್ಮಾ ತಕ್ಷಣವೇ ಅಭ್ಯಾಸವನ್ನು ನಿಲ್ಲಿಸಿದ್ದಾರೆ. ಅಲ್ಲದೆ ಆ ಬಳಿಕ ಅವರಿಗೆ ಫಿಸಿಯೋ ಆರೈಕೆ ಮಾಡಿದ್ದಾರೆ.
ಈ ಆರೈಕೆಯ ಹೊರತಾಗಿಯೂ ನೋವಿನ ಕಾರಣ ರೋಹಿತ್ ಶರ್ಮಾ ಅಭ್ಯಾಸವನ್ನು ಮುಂದುವರೆಸಲಿಲ್ಲ. ಅಲ್ಲದೆ ನಿಲ್ಲಲು ಕೂಡ ತಡಕಾಡಿದರು. ಹೀಗಾಗಿ ಭಾನುವಾರದ 2ನೇ ಅವಧಿಯ ಅಭ್ಯಾಸದಿಂದ ರೋಹಿತ್ ಶರ್ಮಾ ಹೊರಗುಳಿದರು. ಇದೀಗ ಹಿಟ್ ಮ್ಯಾನ್ ಗಾಯಗೊಂಡಿರುವುದು ಟೀಮ್ ಇಂಡಿಯಾದ ಚಿಂತೆಯನ್ನು ಹೆಚ್ಚಿಸಿದೆ.
ಕೆ.ಎಲ್.ರಾಹುಲ್ ಗೆ ಗಾಯ
ನೆಟ್ಸ್ ನಲ್ಲಿ ಬ್ಯಾಟಿಂಗ್ ಅಭ್ಯಾಸದ ವೇಳೆ ಕೆ.ಎಲ್.ರಾಹುಲ್ ಅವರ ಕೈ ಬೆರಳಿಗೆ ಏಟು ಬಿದ್ದ ಘಟನೆ ಸಂಭವಿಸಿದೆ. ಕೂಡಲೇ ಚಿಕಿತ್ಸೆ ನೀಡಲಾಯಿತು.
ಇದೇನೂ ಗಂಭೀರ ಸ್ವರೂಪದ ಗಾಯವಲ್ಲ ಎನ್ನಲಾಗಿದೆಯಾದರೂ, ಮುಂದಿನ ನಿರ್ಣಾಯಕ ಪಂದ್ಯಕ್ಕೂ ಮುನ್ನ ಭಾರತೀಯ ತಂಡದಲ್ಲಿ ಗಾಯದ ಭೀತಿ ಎದುರಾಗಿದೆ.
LATEST NEWS
ಮಹಾರಾಷ್ಟ್ರ ಸರ್ಕಾರದ ನೂತನ ಸಚಿವರಿಗೆ ಖಾತೆ ಹಂಚಿಕೆ; ಯಾರಿಗೆ ಯಾವ ಖಾತೆ ?
ಬಾಂಗ್ಲಾ ಹಿಂದೂಗಳ ಮೇಲೆ ದಾ*ಳಿ ; ಭಾರತೀಯರ ಮುಗಿಸಲು ಉ*ಗ್ರರ ಸಂಚು!
ಮಹತ್ವದ ನಿರ್ಧಾರ ಕೈಗೊಂಡ ಬೈಡನ್: 4.3 ಶತಕೋಟಿ ಡಾಲರ್ ವಿದ್ಯಾರ್ಥಿ ಸಾಲ ಮನ್ನಾ
ಅರೆಸ್ಟ್ ವಾರೆಂಟ್ ಬೆನ್ನಲ್ಲೇ ಮಾಜಿ ಕ್ರಿಕೆಟರ್ ರಾಬಿನ್ ಉತ್ತಪ್ಪ ಸ್ಪಷ್ಟನೆ !
ಬಾರತೀಯ ಕಾರ್ಮಿಕರೊಂದಿಗೆ ಕುವೈತ್ನಲ್ಲಿ ಮೋದಿ ಸಂವಾದ
ತೆಲಂಗಾಣ ಸರ್ಕಾರದಿಂದ ಟಾಲಿವುಡ್ಗೆ ಭಾರೀ ದೊಡ್ಡ ಹೊಡೆತ !!
Trending
- BIG BOSS6 days ago
ಡ್ರೋನ್ ಪ್ರತಾಪ್ ಪೊಲೀಸ್ ಕಸ್ಟಡಿ ಇಂದಿಗೆ ಅಂತ್ಯ; ವಿಚಾರಣೆಯಲ್ಲಿ ಪೊಲೀಸರಿಗೆ ಸಿಕ್ತು ಮಹತ್ವದ ಮಾಹಿತಿ
- DAKSHINA KANNADA7 days ago
ಕ್ಯಾಟ್ಕದ ನೂತನ ಅಧ್ಯಕ್ಷರಾಗಿ ಲಂಚುಲಾಲ್ ಅವಿರೋಧವಾಗಿ ಆಯ್ಕೆ
- LATEST NEWS4 days ago
ದಹಿ ಪುರಿ ಚಾಟ್ಸ್ ಬದಲು ಪೂರಿ, ಮೊಸರು ಕಳುಹಿಸಿಕೊಟ್ಟ ರೆಸ್ಟೋರೆಂಟ್
- DAKSHINA KANNADA7 days ago
ಉಳ್ಳಾಲ: ಜೀಪ್ ಮತ್ತು ಬೈಕ್ ಭೀ*ಕರ ಅ*ಪಘಾತ; ಹೊಟೇಲ್ ಕಾರ್ಮಿಕ ಸಾ*ವು