Connect with us

    LATEST NEWS

    “18-21 ವರ್ಷಕ್ಕೆ ಮದುವೆಯಾಗಿ 3ಕ್ಕೂ ಅಧಿಕ ಮಕ್ಕಳನ್ನು ಮಾಡಿಕೊಳ್ಳಿ” : ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಕರೆ

    Published

    on

    ಮಂಗಳೂರು/ಬೆಂಗಳೂರು: ಅಖಿಲ ಹವ್ಯಕ ಮಹಾಸಭಾ ಇಲ್ಲಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ‘ತೃತೀಯ ವಿಶ್ವ ಹವ್ಯಕ ಸಮ್ಮೇಳನ’ ದ ಕೊನೆಯ ದಿನವಾದ ಭಾನುವಾರ ನಡೆದ ಸಹಸ್ರಚಂದ್ರ ಸಭೆಯಲ್ಲಿ ಸಾನ್ನಿಧ್ಯ ವಹಿಸಿ, ಮಾತನಾಡಿದ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ‘ಹವ್ಯಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದರೆ ಸಮುದಾಯದ ಯುವಕ-ಯುವತಿಯರಿಗೆ 18- 21 ವರ್ಷಕ್ಕೆ ವಿವಾಹ ಮಾಡಿಸಬೇಕು. ಹವ್ಯಕ ಸಂತತಿ ವೃದ್ಧಿಗೆ ಕನಿಷ್ಠ ಮೂರು ಮಕ್ಕಳನ್ನಾದರೂ ಪಡೆಯಬೇಕು. ಮೂರಕ್ಕಿಂತ ಹೆಚ್ಚು ಮಕ್ಕಳಿದ್ದರೆ ನಮ್ಮ ಮಠಕ್ಕೆ ನೀಡಬಹುದು’ ಎಂದರು.

    ‘ಜನಸಂಖ್ಯೆ ಕುಸಿತ ಹಾಗೂ ಸಂಸ್ಕೃತಿಯ ತೀವ್ರ ಹಿನ್ನಡೆ, ನೈತಿಕತೆ ಪತನದಂತಹ ಸಮಸ್ಯೆಗಳನ್ನು ಹವ್ಯಕ ಸಮುದಾಯವೂ ಎದುರಿಸುತ್ತಿದೆ. ಹವ್ಯಕ ಸಮುದಾಯವು ಸುಟ್ಟ ಮನೆಯಂತೆ ಜ್ವಲಿಸುತ್ತಿದೆ. ಈ ಬೆಂಕಿ ಆರಿಸಲು ನೀರು ಸಾಲುತ್ತಿಲ್ಲ. ಯುವಕ-ಯುವತಿಯರು ಧರ್ಮಸಮ್ಮತವಲ್ಲದ ವಿಧಾನದಿಂದ ಶರೀರ ಮತ್ತು ಮನಸ್ಸಿನ ಅಪೇಕ್ಷೆ ಪೂರೈಸಿಕೊಳ್ಳುತ್ತಿದ್ದಾರೆ. ಅದಕ್ಕೆ ಆಧುನಿಕ ವಿಜ್ಞಾನ ಸಮ್ಮತಿ ಸೂಚಿಸುತ್ತಿದೆ. ಈ ವಿಜ್ಞಾನವು ಅಧರ್ಮದ ಮಾರ್ಗದಲ್ಲಿ ಸಾಗುವ ದಾರಿ ತೋರಿಸುತ್ತಿದೆ. ಈ ಮಾರ್ಗದಿಂದ ರೋಗಿಯಾದರೆ ಅದಕ್ಕೆ ಔಷಧವಿದೆ ಎನ್ನುತ್ತದೆ. ಇಂತಹ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ 18 ವರ್ಷಕ್ಕೆ ಹಾಗೂ ಗಂಡು ಮಕ್ಕಳಿಗೆ 21 ವರ್ಷಕ್ಕೆ ವಿವಾಹ ಮಾಡಿಸುವುದೇ ಪರಿಹಾರೋಪಾಯ’ ಎಂದರು.

    ಸ್ವರ್ಣವಲ್ಲಿ ಮಠದ ಕಿರಿಯ ಸ್ವಾಮೀಜಿ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ, ‘ಹವ್ಯಕರು ಇತ್ತೀಚೆಗೆ ಅನಿವಾರ್ಯ ಹಾಗೂ ಆಕರ್ಷಣೆಯಿಂದ ನಗರಕ್ಕೆ ಹೋಗುತ್ತಿದ್ದಾರೆ. ಎಲ್ಲೇ ಇದ್ದರೂ ತಮ್ಮ ಮೂಲವನ್ನು ಮರೆಯಬಾರದು. ಕೃಷಿಯನ್ನು ಮುನ್ನಡೆಸಿಕೊಂಡು ಸಾಗುವ ಜತೆಗೆ ಮಕ್ಕಳಲ್ಲಿ ಕೃಷಿ ಬಗ್ಗೆ ಆಸಕ್ತಿ ಮೂಡಿಸಬೇಕು. ವಿವಾಹ ಮೊದಲಾದ ಶುಭಕಾರ್ಯದಲ್ಲಿ ಆಡಂಬರಕ್ಕೆ ಆದ್ಯತೆ ನೀಡದೆ, ವಿಧಿವಿಧಾನಕ್ಕೆ ಆದ್ಯತೆ ನೀಡಬೇಕು. ಹವ್ಯಕ ಸಮುದಾಯ ವೃದ್ಧಿಗೆ ಮೂರು ಮಕ್ಕಳನ್ನಾದರು ಹೊಂದಬೇಕು. ಒಬ್ಬರು ವೇದ-ಸಂಸ್ಕೃತಿ ರಕ್ಷಣೆಗಾದರೆ, ಇನ್ನೊಬ್ಬರು ದೇಶ ರಕ್ಷಣೆಗೆ, ಮತ್ತೊಬ್ಬರನ್ನು ಕೃಷಿ ಮತ್ತು ಕುಟುಂಬ ರಕ್ಷಣೆಗೆ ಬಿಡಬೇಕು’ ಎಂದರು. ‘ವಿವಾಹದ ಬಳಿಕವೂ ಶಿಕ್ಷಣ ಮುಂದುವರಿಸಿ, ಉದ್ಯೋಗ ಮಾಡಬಹುದಾಗಿದೆ. ತಮಿಳು ಬ್ರಾಹ್ಮಣರಲ್ಲಿ ಕನಿಷ್ಠ ವಯೋಮಿತಿಗೆ ವಿವಾಹ ಮಾಡಲಾಗುತ್ತಿದೆ. ಸೂಕ್ತ ವಯಸ್ಸಿಗೆ ಶಾಸ್ತ್ರೀಯ ವಿವಾಹವಾದರೆ ಅನೇಕ ಸಮಸ್ಯೆಗಳು ನಿವಾರಣೆಯಾಗಲಿವೆ. ಹವ್ಯಕ ಸಂತತಿ ವೃದ್ಧಿಗೆ ಹೆಚ್ಚಿನ ಮಕ್ಕಳನ್ನು ಸಮುದಾಯದವರು ಪಡೆಯಬೇಕಿದೆ. ಮೂರಕ್ಕಿಂತ ಅಧಿಕ ಮಕ್ಕಳನ್ನು ಹೊಂದಿದವರು ಆ ಮಕ್ಕಳನ್ನು ಮಠಕ್ಕೆ ಒಪ್ಪಿಸಿದಲ್ಲಿ ಅವರನ್ನು ನಾವು ನೋಡಿಕೊಳ್ಳುತ್ತೇವೆ. ಪಾರಮಾರ್ಥಿಕ ಸಾಧನೆಗೆ ನಿತ್ಯ ಗೀತಾ ಪಾರಾಯಣ ಮಾಡಬೇಕು. ಹವ್ಯಕರು ಯಾವಾಗಲೂ ಬ್ರಾಹ್ಮಣರಾಗಿಯೇ ಉಳಿಯಬೇಕು’ ಎಂದು ಹೇಳಿದರು.

    ಹವ್ಯಕ ಗುರುಪೀಠಗಳಿಗೆ ಯತಿಗಳನ್ನು ನೀಡಿದ ಪೂರ್ವಾಶ್ರಮದ ತಂದೆ- ತಾಯಿಗಳಿಗೆ ಹವ್ಯಕ ಮಹಾಸಭೆ ವತಿಯಿಂದ ಸನ್ಮಾನ ಮಾಡಲಾಯಿತು. ರಾಮಚಂದ್ರಾಪುರಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ತಂದೆ ಶ್ರೀನಿವಾಸ ಭಟ್ ಚದರವಳ್ಳಿ ಮತ್ತು ತಾಯಿ ವಿಜಯಲಕ್ಷ್ಮಿ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅವರ ತಾಯಿ ಶರಾವತಿ ಶಿವರಾಮ ಭಟ್ ನಡಗೋಡು ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಅವರ ಸಹೋದರ ಲಕ್ಷ್ಮೀಕಾಂತ್ ಗಣಪತಿ ಭಟ್‌ ಈರಾಪುರ ನೆಲೆಮಾವು ಮಠದ ಮಾಧವಾನಂದ ಭಾರತೀ ಸ್ವಾಮೀಜಿ ಅವರ ತಂದೆ ಗಣಪತಿ ಸೀತಾರಾಮ ಭಟ್ ಮಾಳಗಿಮನೆ ಮತ್ತು ತಾಯಿ ಸುನಂದಾ ಗಣಪತಿ ಭಟ್ ಅವರನ್ನು ಸನ್ಮಾನಿಸಲಾಯಿತು. 81 ಯೋಧರಿಗೆ ‘ಹವ್ಯಕ ದೇಶರತ್ನ ಪುರಸ್ಕಾರ’ ಹಾಗೂ 81 ಸಾಧಕರಿಗೆ ‘ಹವ್ಯಕ ಸ್ಫೂರ್ತಿರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.ರಾಮಕೃಷ್ಣ ಆಶ್ರಮದ ಚಂದ್ರೇಶಾನಂದಜೀ ಮಹಾರಾಜ್, ಶಾಸಕ ಅಶೋಕ್ ಕುಮಾ‌ರ್ ರೈ, ಸಮ್ಮೇಳನದ ಗೌರವಾಧ್ಯಕ್ಷರೂ ಆಗಿರುವ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ. ಗಿರಿಧರ ಕಜೆ ಉಪಸ್ಥಿತರಿದ್ದರು.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಸುಳ್ಯ: ಸ್ಕೂಟಿ ಸವಾರನ ಮೇಲೆ ಕಾಡಾನೆ ದಾಳಿ; ಸಣ್ಣಪುಟ್ಟ ಗಾಯಗಳೊಂದಿಗೆ ವ್ಯಕ್ತಿ ಪಾರು

    Published

    on

    ಸುಳ್ಯ: ಸ್ಕೂಟಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಕಾಡಾನೆಯೊಂದು ದಾಳಿ ಮಾಡಿದ್ದು, ಅದೃಷ್ಟವಶಾತ್ ಸವಾರ ಪ್ರಾಣಾಪಾಯದಿಂದ ಪಾರಾದ ಘಟನೆ ದೇವರ ಕೊಲ್ಲಿಯಲ್ಲಿಯ 10ನೇ ಮೈಲಿನಲ್ಲಿ ಜ.4 ರಂದು ನಡೆದಿದೆ.

    ದೇವರಕೊಲ್ಲಿಯ ಸ್ಥಳೀಯ ನಿವಾಸಿ ಮುತ್ತು ಕಾಡಾನೆ ದಾಳಿಗೊಳಗಾದ ವ್ಯಕ್ತಿ.

    ಮುತ್ತು ಅವರು ಎಸ್ಟೇಟ್ ನಲ್ಲಿ ರಾತ್ರಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದು, ಬೆಳಗ್ಗೆ ಸ್ಕೂಟಿಯಲ್ಲಿ ಮನೆಗೆ ಹಿಂತಿರುಗುತ್ತಿದ್ದರು. ಈ ವೇಳೆ ಕಾಡಾನೆಯೊಂದು ದಿಡೀರ್ ದಾಳಿ ಮಾಡಿದೆ.

    ಈ ಸಂದರ್ಭ ಮುತ್ತು ಓಡಿ ತಪ್ಪಿಸಿಕೊಂಡಿದ್ದು, ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾಡಾನೆಯು ಸ್ಕೂಟಿಯನ್ನು ಜಖಂಗೊಳಿಸಿದ್ದು, ಗಾಯಳುವನ್ನು ಮಡಿಕೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

    Continue Reading

    DAKSHINA KANNADA

    ಮಂಗಳೂರಿನಲ್ಲಿ ಮತ್ತೊಂದು ಕಾರು ಬೆಂ*ಕಿಗಾಹುತಿ

    Published

    on

    ಮಂಗಳೂರು : ರಸ್ತೆಯ ಮಧ್ಯದಲ್ಲೇ ಕಾರುಗಳು ಬೆಂ*ಕಿಗೆ ಆಹುತಿಯಾಗುತ್ತಿರುವ ಘಟನೆ ನಗರದಲ್ಲಿ ಪದೇ ಪದೇ ನಡೆಯುತ್ತಿವೆ. ಇದೀಗ ಶನಿವಾರ(ಜ.4) ರಾತ್ರಿ ಮತ್ತೊಂದು ಕಾರು ಹೊ*ತ್ತಿ ಉರಿದಿದೆ. ಶನಿವಾರ ವಾಹನ ದಟ್ಟಣೆ ಹೆಚ್ಚಾಗಿದ್ದ ಸಮಯದಲ್ಲಿ ಮಂಗಳಾ ಸ್ಟೇಡಿಯಂ ಸಮೀಪ ಲೇಡಿ ಹಿಲ್ ಬಳಿ ಸ್ವಿಫ್ಟ್ ಕಾರೊಂದು ಹೊತ್ತಿ ಉರಿದಿದೆ. ಕಾರಿನಲ್ಲಿ ಹೊಗೆ ಕಾಣಿಸಿಕೊಂಡ ತಕ್ಷಣ ಚಾಲಕ ಕಾರನ್ನು ರಸ್ತೆಯ ಬದಿಗೆ ತಂದು ನಿಲ್ಲಿಸುವಷ್ಟರಲ್ಲಿ ಕಾರಿನಲ್ಲಿ ಬೆಂ*ಕಿ ಕಾಣಿಸಿಕೊಂಡಿದೆ. ಕೂಡಲೇ ಕಾರಿನಿಂದ ಇಳಿದು ಚಾಲಕ ಬಚಾವ್ ಆಗಿದ್ದಾರೆ.

     

    ಇದರಿಂದ ಕೆಲ ಹೊತ್ತು ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಟ್ರಾಫಿಕ್ ಪೊಲೀಸರು ಕೆಲ ಕಾಲ ವಾಹನಗಳು ಈ ರಸ್ತೆಯಲ್ಲಿ ಸಂಚರಿಸದಂತೆ ನಿರ್ಬಂಧಿಸಿದ್ದಾರೆ. ಬಳಿಕ ಅ*ಗ್ನಿಶಾಮಕದಳ ಸ್ಥಳಕ್ಕೆ ಆಗಮಿಸಿಕ ಕಾರಿನ ಬೆಂ*ಕಿ ನಂದಿಸಿದ್ದಾರೆ. ಆದರೆ, ಅದಾಗಲೇ ಕಾರು ಸಂಪೂರ್ಣ ಸು*ಟ್ಟು ಭಸ್ಮವಾಗಿದೆ.

    ಇದನ್ನೂ ಓದಿ : ಪ್ರೇಯಸಿಯನ್ನು ಅರಸಿ ಹೋಗಿ ಜೈಲು ಪಾಲಾದ ಪಾಗಲ್ ಪ್ರೇಮಿ..!

    ಕಾರುಗಳಲ್ಲಿ ಏಕಾಏಕಿ ಸಂಭವಿಸುತ್ತಿರುವ ಈ ಅ*ಗ್ನಿ ಅವ*ಘಡಕ್ಕೆ ನಿಖರ ಕಾರಣ ಏನು ಅನ್ನೋದು ಇನ್ನೂ ಗೊತ್ತಾಗಿಲ್ಲವಾದ್ರೂ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ನಡೆಯುತ್ತಿದೆ ಎಂಬ ಶಂಕೆ ವ್ಯಕ್ತವಾಗಿದೆ. ಇತ್ತೀಚೆಗೆ ಇಲ್ಲೇ ಸಮೀಪದ ಪೆಟ್ರೋಲ್ ಪಂಪ್ ಬಳಿಯಲ್ಲಿ ಮಾರುತಿ ಕಾರೊಂದು ಹೊ*ತ್ತಿ ಉರಿದಿತ್ತು.

    Continue Reading

    LATEST NEWS

    ಮಂಗಳೂರು – ಪುಣೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಹಾರಾಟ ಆರಂಭ

    Published

    on

    ಮಂಗಳೂರು: ಮಹಾರಾಷ್ಟ್ರದ ಪುಣೆಗೆ ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜ.4ರಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೇರ ಹಾರಾಟವನ್ನು ಆರಂಭಿಸಿದೆ. ವಾರದ ಪ್ರತಿ ಶನಿವಾರ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಎರಡು ವಿಮಾನಗಳು ಮಂಗಳೂರು ಮತ್ತು ಪುಣೆ ನಡುವೆ ಹಾರಾಟ ನಡೆಸಲಿವೆ.

    ಏರ್ ಇಂಡಿಯಾ ಎಕ್ಸ್‌ಪ್ರೆಸ್ (ನಂ.2256) ಉದ್ಘಾಟನಾ ವಿಮಾನವು ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಎಂಐಎ) ಬೆಳಗ್ಗೆ 8 ಗಂಟೆಗೆ ಹೊರಟಿತು. 9:25ಕ್ಕೆ ಪುಣೆ ವಿಮಾನ ನಿಲ್ದಾಣಕ್ಕೆ ತಲುಪಿದೆ. ವಿಮಾನ ನಂ.2257 ಪುಣೆಯಿಂದ ಬೆಳಗ್ಗೆ 9:55ಕ್ಕೆ ಹೊರಟು 11:45 ಕ್ಕೆ ಮಂಗಳೂರಿಗೆ ಬಂದಿಳಿಯಿತು. ಕ್ಯಾಪ್ಟನ್ ಅಸತ್ಕರ್ ದೀಪಕ್ ದೌಲತ್ ವಿಮಾನದ ಕಮಾಂಡರ್ ಆಗಿದ್ದರು.ಸಹ ಪೈಲಟ್ ಮತ್ತು ನಾಲ್ಕು ಮಂದಿ ಸಿಬ್ಬಂದಿ ಉದ್ಘಾಟನಾ ವಿಮಾನದಲ್ಲಿ ತೆರಳಿದರು.

    ಶನಿವಾರ ರಾತ್ರಿ ವಿಮಾನ 2236 ಮಂಗಳೂರಿನಿಂದ ಸಂಜೆ 6:30ಕ್ಕೆ ಹೊರಟು ರಾತ್ರಿ 8 ಗಂಟೆಗೆ ಪುಣೆಗೆ ಆಗಮಿಸುತ್ತದೆ. ಹಿಂದಿರುಗುವ ವಿಮಾನ ವಿಮಾನ 2237 ಪುಣೆಯಿಂದ ರಾತ್ರಿ 8:35 ಕ್ಕೆ ಹೊರಟು ರಾತ್ರಿ 10:05 ಕ್ಕೆ ಮಂಗಳೂರನ್ನು ತಲುಪುತ್ತದೆ.

    ಎರಡು ಹೊಸ ವಿಮಾನಗಳು ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರಯಾಣಿಕರಿಗೆ ತಡೆರಹಿತ ಸಂಪರ್ಕವನ್ನು ಒದಗಿಸಲು ಒತ್ತು ನೀಡಲಿದೆ ಎಂದು ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.

    Continue Reading

    LATEST NEWS

    Trending