Saturday, April 1, 2023

ಜರ್ಮನಿಯಲ್ಲಿ ಚರ್ಚ್ ಮೇಲೆ ಗುಂಡಿನ ದಾಳಿ – 7 ಮಂದಿ ಸಾವು – ಹಲವರು ಗಂಭೀರ..!

ಬರ್ಲಿನ್: ಅಪರಿಚಿತರು ನಡೆಸಿದ ಗುಂಡಿನ ದಾಳಿಯಲ್ಲಿ 7 ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡ ಘಟನೆ ಜರ್ಮನಿಯ (Germany) ಹ್ಯಾಮ್‍ಬರ್ಗ್‍ನ ಯೆಹೋವ್‌ನ ವಿಟ್‍ನೆಸ್ ಚರ್ಚ್‍ನಲ್ಲಿ ನಡೆದಿದೆ.

ಘಟನೆಯಲ್ಲಿ 8 ಜನರಿಗೆ ಗಂಭೀರ ಗಾಯಗಳಾಗಿವೆ. ಹಲವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗುಂಡಿನ ದಾಳಿ ನಡೆಸಿದವರು ಪರಾರಿಯಾಗಿರುವ ಅಥವಾ ಸಾವಿಗೀಡಾದ ಬಗ್ಗೆ ಮಾಹಿತಿ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾತ್ರಿ 9:15ರ ಸಮಯದಲ್ಲಿ ಪೊಲೀಸರಿಗೆ ತುರ್ತು ಕರೆಯೊಂದು ಬಂದಿದೆ.

ಕರೆಯ ಆಧಾರದ ಮೇಲೆ ಚರ್ಚ್ ಬಳಿಗೆ ತೆರಳಿದ ಪೊಲೀಸರು ಗಾಯಗೊಂಡವರ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಗುಂಡಿನ ದಾಳಿ ನಡೆಸಿದ ಆರೋಪಿಗಳಿಗಾಗಿ ಪೊಲೀಸರು ಹೆಲಿಕಾಪ್ಟರ್ ಮೂಲಕ ಥರ್ಮಲ್ ಇಮ್ಯಾಜಿಂಗ್ ಕ್ಯಾಮೆರಾ ಬಳಸಿ ಕಾರ್ಯಾಚರಣೆ ಆರಂಭಿಸಿದ್ದಾರೆ.

ಕಾರ್ಯಾಚರಣೆಗೆ ಅನುಕೂಲವಾಗುವಂತೆ ಸ್ಥಳೀಯ ನಿವಾಸಿಗಳಿಗೆ ಬೇರೆ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.

ಗುಂಡಿನ ದಾಳಿಯ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ. ಜನರು ವದಂತಿಗಳಿಗೆ ಕಿವಿಗೊಡದಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here

Hot Topics