Saturday, May 21, 2022

ಕಾಂಡೋಮ್‌ನಲ್ಲಿ ರಂಧ್ರ ಮಾಡಿ ಬಾಯ್‌ಫ್ರೆಂಡ್‌ಗೆ ಮೋಸ: ಯುವತಿಗೆ ಜೈಲು..!

ಜರ್ಮನಿ: ದೈಹಿಕ ಸಂಪರ್ಕದ ವೇಳೆ ಕಾಂಡೋಮ್‌ನಲ್ಲಿ ರಂಧ್ರ ಮಾಡಿ ತನ್ನ ಬಾಯ್‌ಫ್ರೆಂಡ್‌ಗೆ ಮೋಸ ಮಾಡಿದ ಕಾರಣಕ್ಕೆ ಯುವತಿಯೊಬ್ಬಳಿಗೆ ಕೋರ್ಟ್‌ ಆರು ತಿಂಗಳು ಶಿಕ್ಷೆ ವಿಧಿಸಿದೆ. ಇಂಥಹದ್ದೊಂದು ವಿಚಿತ್ರ ಕೇಸ್‌ ಪಶ್ಚಿಮ ನಡೆದಿರುವುದು ಜರ್ಮನಿಯಲ್ಲಿ.


39 ವರ್ಷದ ಮಹಿಳೆಗೆ 42 ವರ್ಷದ ವ್ಯಕ್ತಿಯ ಪರಿಚಯವಾಗಿತ್ತು. ನಂತರ ಇವರಿಬ್ಬರ ಮಧ್ಯೆ ಸ್ನೇಹ-ಪ್ರೇಮಕ್ಕೆ ತಿರುಗಿ ಇಬ್ಬರೂ ಮದುವೆಯಾಗುವುದಾಗಿ ನಿಶ್ಚಯಿಸಿರುತ್ತಾರೆ. ಇದೇ ಭರವಸೆಯಲ್ಲಿ ಬಾಯ್‌ಫ್ರೆಂಡ್‌ ಲೈಂಗಿಕ ಸಂಪರ್ಕಕ್ಕೆ ಈಕೆಯ ಬಳಿ ಅನುಮತಿ ಕೇಳುತ್ತಾನೆ.

ಆಗ ಆಕೆ ಸೆಕ್ಸ್‌ಗೆ ಒಪ್ಪಿಗೆ ನೀಡುತ್ತಾಳೆ. ಆದರೊಂದು ಷರತ್ತು. ಲೈಂಗಿಕ ಸಂಪರ್ಕದ ವೇಳೆ ಕಾಂಡೋಮ್‌ ಬಳಸಬೇಕು ಎಂದು. ಇದಕ್ಕೆ ಒಪ್ಪಿಕೊಳ್ಳುತ್ತಾನೆ. ಆದರೆ ಆತ ಲೈಂಗಿಕ ಸಂಪರ್ಕ ಮಾಡಿ ತನಗೆ ಕೈಕೊಟ್ಟುಬಿಟ್ಟರೆ ಎಂದು ಚಿಂತೆ ಈಕೆಗೆ ಕಾಡಿದೆ. ಹೀಗೆ ಮಾಡದಿರಲು ಏನು ಮಾಡಬೇಕು ಎಂದು ಯೋಚಿಸಿದ್ದಾಳೆ.

ಕೊನೆಗೆ ಆಕೆಗೆ ಒಂದು ಉಪಾಯ ಹೊಳೆದಿದೆ.
ಅದೇನೆಂದರೆ, ಲೈಂಗಿಕ ಸಂಪರ್ಕದಿಂದ ತಾನು ಗರ್ಭಿಣಿಯಾದರೆ ಆತ ತನಗೆ ಕೈಕೊಡುವುದಿಲ್ಲ ಎಂದು. ಇದೇ ಕಾರಣಕ್ಕೆ ಆಕೆ ಕಾಂಡೋಮ್‌ಗೆ ರಂಧ್ರ ಮಾಡಿದ್ದಾಳೆ. ದೈಹಿಕ ಸಂಪರ್ಕಕ್ಕೆ ಹಾತೊರೆಯುತ್ತಿದ್ದ ಬಾಯ್‌ಫ್ರೆಂಡ್‌ಗೆ ಕಾಂಡೋಮ್‌ನಲ್ಲಿ ರಂಧ್ರ ಆಗಿರುವುದು ತಿಳಿಯಲಿಲ್ಲ.

ತಿಂಗಳ ನಂತರ ತಾನು ಗರ್ಭಿಣಿಯಾಗಿದ್ದೇನೆ ಎಂದು ಆಕೆ ಬಾಯ್‌ಫ್ರೆಂಡ್‌ಗೆ ತಿಳಿಸಿದ್ದಾಳೆ. ಇದು ಆತನಿಗೆ ಶಾಕ್‌ ಆಗಿದೆ. ಹೀಗಾಗಲು ಸಾಧ್ಯವೇ ಇಲ್ಲ

ಎಂದು ವಾದಿಸಿದಾಗ ಕೊನೆಗೆ ಮಹಿಳೆ ತಾನು ಮಾಡಿರುವ ಕೃತ್ಯದ ಬಗ್ಗೆ ಹೇಳಿದ್ದಾಳೆ. ಇದರಿಂದ ಸಿಟ್ಟುಗೊಂಡ ವ್ಯಕ್ತಿ ಮಹಿಳೆ ವಿರುದ್ಧ ಕ್ರಿಮಿನಲ್‌ ಕೇಸ್‌ ಹೂಡಿದ್ದಾನೆ.
ಈ ಕೇಸ್‌ ಕೋರ್ಟ್‌ನಲ್ಲಿ ವಿಚಾರಣೆ ನಡೆಯುವ ವೇಳೆ,

ದೈಹಿಕ ಸಂಬಂಧದ ವೇಳೆ ತನಗೆ ಗೊತ್ತಿಲ್ಲದ ರೀತಿಯಲ್ಲಿ ಕಾಂಡೋಮ್​ಗೆ ರಂಧ್ರ ಮಾಡಿದ್ದು, ಇದೊಂದು ಕ್ರಿಮಿನಲ್​ ಕೇಸ್​ ಆಗಿದೆ ಎನ್ನುವ ಬಾಯ್‌ಫ್ರೆಂಡ್‌ ವಾದವನ್ನು ಕೋರ್ಟ್‌ ಮಾನ್ಯ ಮಾಡಿದೆ.

ಮಹಿಳೆ ಮೋಸ ಮಾಡಿದ್ದಾಳೆ ಎಂದು ಹೇಳಿದ ನ್ಯಾಯಮೂರ್ತಿ ಆಸ್ಟ್ರಿಡ್‌ ಸಾಲೆವ್‌ಸ್ಕಿ ಮಹಿಳೆಗೆ ಆರು ತಿಂಗಳ ಶಿಕ್ಷೆ ವಿಧಿಸಿದೆ.

LEAVE A REPLY

Please enter your comment!
Please enter your name here

Hot Topics

‘ಟಿಪ್ಪು ಸುಲ್ತಾನ್ ಪ್ರತಾಪನಂತೆ ಬೆತ್ತಲೆ ಲೇಖನಿ ಸಿಂಹವಲ್ಲ’- ಕೆ.ಅಶ್ರಫ್

ಮಂಗಳೂರು: ಬೆತ್ತಲೆ ಜಗತ್ತಿನಲ್ಲಿ ಸುಳ್ಳುಗಳನ್ನು ಪೋಣಿಸಿ ಬರೆದು ಇಸ್ಲಾಮೂ ಫೋಬಿಯಾದ ಮೂಲಕ ಈ ರಾಜ್ಯದ ಹಿಂದುಳಿದ, ದಲಿತರ, ಪರಿಶಿಷ್ಟರ ಮತ್ತು ಬುಡಕಟ್ಟು ಜನಾಂಗದ ದೃಷ್ಟಿಯಲ್ಲಿ ಈ ದೇಶದ ಮುಸ್ಲಿಮರ ಬಗ್ಗೆ ವೈರತ್ವವನ್ನು ಸೃಷ್ಟಿಸಿ,ಕೇಶವ...

ಪಠ್ಯಪುಸ್ತಕದಲ್ಲಿ ನಾರಾಯಣ ಗುರು ವಿಷಯ ಕೈಬಿಟ್ಟಿಲ್ಲ: ಸುಳ್ಳು ವದಂತಿ ನಂಬಬೇಡಿ ಎಂದ ಸಚಿವ ಕೋಟ

ಬೆಂಗಳೂರು: ಶಾಲಾ ಪಠ್ಯಪುಸ್ತಕದಲ್ಲಿ ನಾರಾಯಣ ಗುರು ವಿಷಯ ಕೈಬಿಟ್ಟಿಲ್ಲ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟನೆ ನೀಡಿದ್ದಾರೆ.ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು...

ಮಳೆಯ ನೀರಿನಿಂದ ಕೆರೆಯಂತಾದ ಬಿ.ಸಿ ರೋಡ್ ಬಸ್ ನಿಲ್ದಾಣ

ಬಂಟ್ವಾಳ: ಬಿ.ಸಿರೋಡಿನಿಂದ ಮಂಗಳೂರು ಭಾಗಕ್ಕೆ ತೆರಳುವ ಬಸ್ಸುಗಳು ನಿಲ್ಲುವ ಸ್ಥಳದಲ್ಲಿ ಕೃತಕ ನೀರು ನಿಂತು ಪ್ರಯಾಣಿಕರು ಅದೇ ನೀರಿನಲ್ಲಿ ನಿಂತು ಬಸ್ಸಿಗಾಗಿ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.ಪುತ್ತೂರು, ಧರ್ಮಸ್ಥಳ, ಉಪ್ಪಿನಂಗಡಿ, ವಿಟ್ಲ ಭಾಗದಿಂದ ಆಗಮಿಸುವ...