ಬಹುತೇಕ ಜನರು ಗೂಗಲ್ ಕ್ರೋಮ್ ಬಳಸುತ್ತಾರೆ. ಏಕೆಂದರೆ, ಬ್ರೌಸಿಂಗ್ ಕ್ಷೇತ್ರದಲ್ಲಿ ಗೂಗಲ್ ಏಕಸ್ವಾಮ್ಯ ಸಾಧಿಸಿದೆ. ಗೂಗಲ್ ಕ್ರೋಮ್ ಬಿಟ್ಟರೆ ಈ ಮಟ್ಟಿಗೆ ಸೇವೆ ನೀಡುವ ಮತ್ತೊಂದು ಬ್ರೌಸರ್ ಯಾವುದೂ ಇಲ್ಲ. ಒಂದು ವೇಳೆ ಇದ್ದರೂ ಗೂಗಲ್ ಮುಂದೆ ಎಲ್ಲವೂ ಕಡೆಗಣಿಸಲ್ಪಟ್ಟಿದೆ. ಗೂಗಲ್ ಏಕಸ್ವಾಮ್ಯ ಮುರಿಯಲು ಅಮೆರಿದದಲ್ಲಿ ಕಾನೂನು ಪ್ರಕ್ರಿಯೆಗಳು ಆರಂಭಗೊಂಡಿದೆ. ಗೂಗಲ್ ಕ್ರೋಮ್ ಕಾನೂನು ಬಾಹಿರವಾಗಿ ವೆಬ್ ಬ್ರೌಸರ್‌ನಲ್ಲಿ ಏಕಸ್ವಾಮ್ಯ ಸಾಧಿಸಿದೆ ಅನ್ನೋದು ಗಂಭೀರ ಆರೋಪವಾಗಿದ್ದು, ಕ್ರೋಮ್‌ಗೆ ನಿರ್ಬಂಧ ಹೇರುವ ಪ್ರಕ್ರಿಯೆಗಳು ಶುರುವಾಗಿದೆ. ಇದರ ಬೆನ್ನಲ್ಲೇ ಚಾಟ್‌ಜಿಪಿಟಿ ಮೂಲಕ ಸಂಚಲನ ಸೃಷ್ಟಿಸಿರುವ OpenAI ಅತ್ಯಾಧುನಿಕ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಸಹಾಯದ ವೆಬ್ ಬ್ರೌಸರ್ ಆರಂಭಿಸುತ್ತಿದೆ. ಈ ನಡೆ ಮುಂದಿನ ದಿನಗಳಲ್ಲಿ ಬ್ರೌಸಿಂಗ್ ಪರಿಕಲ್ಪನೆ, ಅಭ್ಯಾಸವನ್ನೇ ಬದಲಾಯಿಸಬಹುದು ಕಲ್ಪಿಸಲಾಗಿದೆ.
OpenAI ಬೌಸರ್‌ಗೆ ಎಐ ಚಾಟ್‌ಬಾಟ್ ಅತ್ಯಾಧುನಿಕ ಟೆಕ್ ತಂತ್ರಜ್ಞಾನದ ನೆರವಿದೆ. ಹೀಗಾಗಿ OpenAI ವೆಬ್ ಬ್ರೌಸರ್ ಪ್ರಮುಖವಾಗಿ ನಿಖರ ಮಾಹಿತಿ ನೀಡಲಿದೆ. ಗೂಗಲ್ ಕ್ರೋಮ್ ಮೇಲೆ ಹೆಚ್ಚಿನ ಒತ್ತಡ ತರಲಿದೆ. ಕಾರಣ, ಗೂಗಲ್ ಕ್ರೋಮ್ ಹುಡುಕುತ್ತಿರುವ ವಿಷಯ ಕುರಿತು ಜಾಲತಾಣದಲ್ಲಿರುವ ಎಲ್ಲಾ ಮಾಹಿತಿ ನೀಡಲಿದೆ. ಇದರಲ್ಲಿ ಸತ್ಯ ಯಾವುದು, ನಕಲಿ ಯಾವುದು ಅನ್ನೋದು ಪತ್ತೆ ಹಚ್ಚಬೇಕು. ಆದರೆ OpenAI ವೆಬ್ ಬ್ರೌಸರ್ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಮೂಲಕ ನಿಖರ ಹಾಗೂ ಸ್ಪಷ್ಟ ಮಾಹಿತಿಯನ್ನು ಒದಗಿಸಲಿದ್ದು ಗೂಗಲ್ ಕ್ರೋಮ್‌ನ ಏಕಸ್ವಾಮ್ಯ , ಪ್ರಾಬಲ್ಯ ಮುರಿಯುವ ಎಲ್ಲಾ ಸಾಧ್ಯತೆ ಇದೆ.
ಸ್ಯಾಮ್ ಆಲ್ಟ್‌ಮನ್ ನೇತೃತ್ವದ OpenAI ಕಂಪನಿ ಈಗಾಗಲೇ ವೆಬ್ ಬ್ರೌಸರ್ ಲಾಂಚ್ ಮಾಡುವ ತಯಾರಿಯಲ್ಲಿದ್ದು, ಜಗನತ್ತಿನ ಅತ್ಯುತ್ತಮ ಆ್ಯಪ್ ಡೆವಲಪ್ಪರ್ಸ್ , ವೆಬ್‌ಸೈಟ್ ಡೆವಲಪ್ಪರ್ಸ್ ಜೊತೆ ಮಾತುಕತೆ ನಡೆಸಿದೆ. ಕೊಂಡೆ ನಾಸ್ಟ್, ರೆಡ್‌ಫಿನ್ ಹಾಗೂ ಪ್ರೈಸ್‌ಲೈನ್ ಡೆವಲಪ್ಪರ್ಸ್ ಜತೆ ಮಾತುಕತೆ ನಡೆಸಲಾಗುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಹೆಚ್ಚು ಪರಿಣಾಮಕಾರಿಯಾದ ವೆಬ್ ಬ್ರೌಸರ್ ಬಿಡುಗಡೆ ಮಾಡಲು OpenAI ಸಜ್ಜಾಗಿದೆ.
ಚಾಟ್‌ಜಿಪಿಟಿ(ChatGPT) ಮೂಲಕ ಬಾರಿ ಯಶಸ್ಸು ಗಳಿಸಿರುವ OpenAI ಇದೀಗ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಸಪೋರ್ಟ್ ಮೂಲಕ ಆರಂಭಿಸುತ್ತಿರುವ ವೆಬ್ ಬ್ರೌಸರ್ ಭವಿಷ್ಯದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡುತ್ತದೆ ಎಂಬುವುದಾಗಿ ತಜ್ಞರು ವಿಶ್ಲೇಷಿಸುತ್ತಿದ್ದಾರೆ. OpenAIಯ ಈ ನಡೆ ಗೂಗಲ್ ಕ್ರೋಮ್ ನಿದ್ದೆಗೆಡಿಸಿದೆ. ಅಮೆರಿಕ ಡಿಪಾರ್ಟ್ಮೆಂಟ್ ಆಫ್ ಜಸ್ಟೀಸ್ ಈಗಾಗಲೇ ಕೋರ್ಟ್ನಲ್ಲಿ ಗೂಗಲ್ ಕ್ರೋಮ್ ಏಕಸ್ವಾಮಿ ಮುರಿಯಲು ಮನವಿ ಮಾಡಿದ್ದು, ಕಾನೂನು ಬಾಹಿರವಾಗಿ ಕ್ರೋಮ್ ಬ್ರೌಸಿಂಗ್ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಿದೆ. ಹೀಗಾಗಿ ಕೋರ್ಟ್ ಕ್ರೋಮ್ ಮಾರಾಟ ಮಾಡುವಂತೆ, ಇತರ ಪ್ರತಿಸ್ಪರ್ಧಿಗಳಿಗೆ ಅನುವು ಮಾಡಿಕೊಡುಂತೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಎಪ್ರಿಲ್ ತಿಂಗಳ ಅಂತ್ಯದಲ್ಲಿ ಇದರ ವಿಚಾರಣೆ ಪೂರ್ತಿಯಾಗಿ ನಡೆಯಲಿದೆ.
ಮಂಗಳೂರು/ಶೆನ್ಜೆನ್: ಕಂಪನಿ ಉದ್ಯೋಗಿಗಳಿಗೆ ದೀಪಾವಳಿ ಸೇರಿದಂತೆ ಕೆಲ ವಿಶೇಷ ಸಂದರ್ಭಗಳಲ್ಲಿ ಕಾರು, ಬೈಕ್, ಬೋನಸ್ ಸೇರಿದಂತೆ ಹಲವು ರೀತಿಯ ಉಡುಗೊರೆ ನೀಡುವುದು ಸಾಮಾನ್ಯ. ಕನಿಷ್ಠ ಒಂದು ಸ್ವೀಟ್ ಬಾಕ್ಸ್ ಆದರೂ ಕೊಡುತ್ತಾರೆ. ಆದರೆ , ಟೆಕ್ ಕಂಪನಿ ಒಂದು ಭರ್ಜರಿ ಆಫರ್ ನೀಡಿದೆ. ಕಂಪನಿಯ ಉದ್ಯೋಗಿಯಾಗಿದ್ದು ಕಚೇರಿ ಹೊರಗಿನವರನ್ನು ಡೇಟಿಂಗ್ ಮಾಡಿ ಕಂಪನಿಯ ಪ್ಲಾಟ್‌ಫಾರ್ಮ್‌ನಲ್ಲಿ ಡೇಟಿಂಗ್ ಫೋಟೋ ಹಾಕಿದರೆ 760 ರೂಪಾಯಿಯನ್ನು ಕಂಪನಿ ನೀಡಲಿದೆ. ಜೊತೆಗೆ ಅಷ್ಟು ಮಾತ್ರ ಅಲ್ಲದೆ, ಕನಿಷ್ಠ 3 ತಿಂಗಳು ಡೇಟ್ ಸಂಬಂಧ ಉಳಿದರೆ 11,650 ರೂಪಾಯಿ ಜೋಡಿಗೆ ಸಿಗಲಿದೆ. ಇನ್ಯಾಕೆ ತಡ ಮಾಡೋದು ? ಈ ಕಂಪನಿಗೆ ಬೇಗ ಜಾಯಿನ್ ಆಗೋಣ ಅಂತಾ ಯೋಚಿಸುತ್ತಿದ್ದೀರಾ? ಆದರೆ ಈ ಟೆಕ್ ಕಂಪನಿ ಇರೋದು ದಕ್ಷಿಣ ಚೀನಾದ ಶೆನ್ಜೆನ್‌ನಲ್ಲಿ.
‘ಇನ್‌ಸ್ಟಾ 360’ ಎಂಬ ಟೆಕ್ ಕಂಪನಿ ತನ್ನ ಉದ್ಯೋಗಿಗಳಿಗೆ ಈ ಆಫರ್ ನೀಡಿದ್ದು, ಬಹುತೇಕರು ಯುವ ಉದ್ಯೋಗಿಗಳು ಕಂಪನಿಯಲ್ಲಿದ್ದಾರೆ. ಆಡಳಿತ ಮಂಡಳಿ, ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಮಾತ್ರ ಅನುಭವಿಗಳಿದ್ದು, ಯುವ ಉತ್ಸಾಹ ಹೆಚ್ಚಿರುವ ಕಾರಣ ಈ ಕಂಪನಿ ಯುವ ಸಮೂಹವನ್ನೇ ನೇಮಿಸಿಕೊಂಡಿದೆ. ಆದರೆ ಇಲ್ಲಿ ಕಾಡುವ ಒಂದು ಸಮಸ್ಯೆ ಯಾವುದೆಂದರೆ, ಸಿಂಗಲ್ ಆಗಿರುವವರು ಸಂತೋಷವಾಗಿಲ್ಲ. ಇದರಿಂದ ಕಂಪನಿ ಕೆಲಸದ ಮೇಲೆ ಹೊಡೆತ ಬೀಳುತ್ತಿದೆ. ಹೀಗಾಗಿ ಈ ‘ಡೇಟಿಂಗ್ ಆಫರ್’ ಘೋಷಿಸಿದೆ.
ಕಂಪನಿಯು ಸಿಂಗಲ್ ಆಗಿರುವ ಉದ್ಯೋಗಿಗಳಿಗೆ ಈ ಆಫರ್ ನೀಡಿದೆ. ಯಾವುದೇ ಮ್ಯಾಚ್‌ಮೇಕರ್ ಅಥವಾ ಆನ್‌ಲೈನ್ ಪ್ಲಾಟ್‌ಫಾರ್ಮ್ ಮೂಲಕ ಸಂಗಾತಿಯನ್ನು ಕಂಡುಕೊಂಡು ಡೇಟಿಂಗ್ ಮಾಡಿದರೆ ಸಾಕು, ಕ್ಯಾಶ್ ರಿವಾರ್ಡ್ ಆಗುತ್ತದೆ. ಡೇಟಿಂಗ್ ಸತ್ಯವಾಗಿದ್ದರೆ ಸಾಕು. ಫೋಟೋವನ್ನು ಕಂಪನಿ ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್ ಮಾಡಬೇಕು ಆದರೆ ಬ್ಲರ್ ಮಾಡಿ ಪೋಸ್ಟ್ ಮಾಡುವಂತಿಲ್ಲ. ಕಾರಣ ಸಮಾಜಕ್ಕೆ ಧೈರ್ಯವಾಗಿ ಡೇಟಿಂಗ್ ವಿಚಾರವನ್ನು ಹೇಳಬೇಕು. ಹೀಗೆ ಫೋಟೋ ಪೋಸ್ಟ್ ಮಾಡಿದರೆ ‘ಇನ್‌ಸ್ಟಾ 360’ ಕಂಪನಿ ಇಬ್ಬರಿಗೂ 760 ರೂಪಾಯಿ ನೀಡಲಿದೆ.
ಸಂಬಂಧ ಕನಿಷ್ಠ 3 ತಿಂಗಳು ಉಳಿಸಿಕೊಂಡರೆ ಮುಂದಿನ ನಗದು ರಿವಾರ್ಡ್‌ಗೆ ಅರ್ಹರಾಗುತ್ತಾರೆ. 3 ತಿಂಗಳು ಅಥವಾ ಅದಕ್ಕಿಂತ ಹೆಚ್ಚು ದಿನಗಳ ಕಾಲ ಸಂಬಂಧ ಉಳಿಸಿಕೊಂಡಿದ್ದರೆ, ತಲಾ 11,650 ರೂಪಾಯಿಯನ್ನು ಟೆಕ್ ಕಂಪನಿ ರಿವಾರ್ಡ್ ರೂಪದಲ್ಲಿ ನೀಡಲಿದೆ. ಇಲ್ಲಿ ಇರುವ ಮತ್ತೊಂದು ವಿಶೇಷತೆ ಎಂದರೆ, ಯಾವುದೇ ಮ್ಯಾಚ್‌ಮೇಕರ್ ಮೂಲಕ ಸಂಬಂಧ ಕುದರಿಸಿಕೊಂಡು ಡೇಟಿಂಗ್ ಮಾಡಿದರೆ ಅಂತವರಿಗೂ 11,650 ರೂಪಾಯಿ ರಿವಾರ್ಡ್ ಸಿಗಲಿದೆ.
ಕಂಪನಿಯು ಈ ಆಫರ್ ಘೋಷಿಸಿದ ಬಳಿಕ ಈಗಾಗಲೇ 500 ಫೋಟೋಗಳು ಕಂಪನಿ ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್ ಮಾಡಿದ್ದು, ಅವರಿಗೆ ಒಟ್ಟು 10,000 ಯುವನ್(ಚೀನಾ ಕರೆನ್ಸಿ) ವಿತರಿಸಿದೆ ಎಂದು ಇನ್‌ಸ್ಟಾ 360 ಹೇಳಿದೆ. ‘ಈ ಕಂಪನಿ ನನ್ನ ತಾಯಿಗಿಂತ ಹೆಚ್ಚು ನನ್ನ ಮದುವೆ ವಿಚಾರದಲ್ಲಿ ಆಸಕ್ತಿ ಹೊಂದಿದೆ’ ಎಂದು ಉದ್ಯೋಗಿಗಳೇ ಟ್ರೋಲ್ ಮಾಡುತ್ತಿದ್ದಾರೆ. ಮತ್ತೆ ಕೆಲವರು ‘ಈ ಕಂಪನಿ ನೇಮಕಾತಿ ಏನಾದರು ಮಾಡುವ ಪ್ಲಾನ್ ಇದ್ದರೆ ತಿಳಿಸಿ ನಿಮ್ಮ ಡೋರ್ ಮುಂದೆ ನಾನಿದ್ದೇನೆ’ ಎಂದು ಕಮೆಂಟ್ ಮಾಡಿದ್ದಾರೆ.
ಚೀನಾದಲ್ಲಿ ಮದುವೆ ಹಾಗೂ ಜನನ ಪ್ರಮಾಣ ಭಾರಿ ಕುಸಿತ ಕಂಡಿದ್ದು, 2024ರ ಅಂಕಿ ಅಂಶ ಪ್ರಕಾರ ಚೀನಾದಲ್ಲಿ 4.74 ಮಿಲಿಯನ್ ಜೋಡಿಗಳು ಮದುವೆ ರಿಜಿಸ್ಟ್ರೇಶನ್ ಮಾಡಿಸಿಕೊಂಡಿದ್ದಾರೆ. 2023ರ ಇದೇ ಸಮಯಕ್ಕೆ ಹೋಲಿಸಿದರೆ ಶೇಕಡಾ 16.6ರಷ್ಟು ಕುಸಿತ ಕಂಡಿದೆ. ಇನ್ನು ಜನನ ಪ್ರಮಾಣದಲ್ಲೂ ಭಾರಿ ಕುಸಿತ ಕಂಡಿದ್ದು, 2022ರಲ್ಲಿ ಚೀನಾದ ಜನನ ಪ್ರಮಾಣ 1000 ಮಂದಿಗೆ 6.77ರಷ್ಟಿತ್ತು. 2023ರ ವೇಳೆಗೆ ಇದು 6.39ಕ್ಕೆ ಇಳಿಕೆಯಾಗಿದೆ.
ಮಂಗಳೂರು/ ಸ್ವಿಟ್ಜರ್ಲ್ಯಾಂಡ್ : ಹೆಚ್ಚಿನ ಮುಸ್ಲಿಂ ಮಹಿಳೆಯರು ಮನೆಯಿಂದ ಹೊರಗೆ ಹೋಗುವಾಗ ಬುರ್ಖಾ ಧರಿಸಿ ಹೋಗುತ್ತಾರೆ. ಇಸ್ಲಾಂ ಧರ್ಮದ ಆಚರಣೆ ಮತ್ತು ಸಂಪ್ರದಾಯದ ಭಾಗವಾಗಿ ಬುರ್ಖಾವನ್ನು ಗುರುತಿಸಲಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಅದನ್ನು ಧರಿಸಿಯೇ ಓಡಾಡುತ್ತಾರೆ. ಆದ್ರೆ ಫ್ರಾನ್ಸ್, ಚೀನಾ, ಡೆನ್ಮಾರ್ಕ್, ಬಲ್ಗೇರಿಯಾ, ಆಸ್ಟ್ರೀಯಾ, ಬೆಲ್ಜಿಯಮ್ ಇತ್ಯಾದಿ ದೇಶಗಳು ಸಾರ್ವಜನಿಕ ಸ್ಥಳಗಳಲ್ಲಿ ಕಣ್ಣು, ಮೂಗು, ಬಾಯಿ ಮುಖವನ್ನು ಮುಚ್ಚುವ ಬುರ್ಖಾ ಧರಿಸಿ ಓಡಾಡುವುದಕ್ಕೆ ನಿಷೇಧವನ್ನು ಹೇರಿವೆ. ಇದೀಗ ಈ ಪಟ್ಟಿಗೆ ಸ್ವಿಟ್ಜರ್ಲ್ಯಾಂಡ್ ದೇಶವೂ ಕೂಡಾ ಸೇರ್ಪಡೆಯಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸಿ ಓಡಾಡುವಂತಿಲ್ಲ ಎಂಬ ಕಠಿಣ ಕಾನೂನು ಕ್ರಮವನ್ನು ಸ್ವಿಟ್ಜರ್ಲ್ಯಾಂಡ್ ಸರ್ಕಾರವು ಜಾರಿಗೊಳಿಸಿದೆ.
ಸ್ವಿಟ್ಜರ್ಲ್ಯಾಂಡ್‌ನ ಬಲಪಂಥೀಯ ಆಡಳಿತದ ಪೀಪಲ್ಸ್ ಪಾರ್ಟಿ ‘ಬುರ್ಖಾ ಬ್ಯಾ’ನ್ ಮಾಡಲು ಸ್ವಿಸ್ ಸಂಸತ್ ಮೇಲ್ಮನೆಯಲ್ಲಿ ಅಂಗೀಕಾರ ಪಡೆದಿತ್ತು. ಅಲ್ಲದೆ 2021 ರ ಜನಾಭಿಪ್ರಾಯ ಸಂಗ್ರಹಣೆಯಲ್ಲಿಯೂ ಬಹು ಸಂಖ್ಯೆಯ ಜನರು ಬುರ್ಖಾ ನಿಷೇಧದ ಪರವಾಗಿ ಓಟ್ ಹಾಕಿದ್ದರು. ಬುರ್ಖಾ ಮತ್ತು ಮುಖಗವಸುಗಳನ್ನು ನಿಷೇಧಿಸಬೇಕೆಂದು 51 ಪ್ರತಿಶತದಷ್ಟು ಜನರು ಬೆಂಬಲ ನೀಡಿದ್ದರು. ಇನ್ನೂ ಸ್ವಿಟ್ಜರ್ಲ್ಯಾಂಡ್ ಸರ್ಕಾರದ ಈ ನಿರ್ಧಾರಕ್ಕೆ ಭಾರೀ ಆಕ್ರೋಶವೂ ವ್ಯಕ್ತವಾಗಿತ್ತು. ಈ ಎಲ್ಲದರ ನಡುವೆಯೂ ಇದೀಗ ಸರ್ಕಾರ ಅಧೀಕೃತವಾಗಿ ಬುರ್ಖಾ ನಿಷೇಧದ ಕಾನೂನನ್ನು ಜಾರಿಗೊಳಿಸಿದೆ.
ಜನವರಿ 1, 2024 ರಿಂದ ಈ ಕಠಿಣ ನಿಯಮ ಜಾರಿಯಾಗಲಿದ್ದು, ನಿಯಮವನ್ನು ಉಲ್ಲಂಘಿಸಿದವರಿಗೆ 1,000 ಸ್ವಿಸ್ ಫ್ರಾಂಕ್ ಅಂದರೆ ಅಂದಾಜು 96,280 ರೂ. ದಂಡವನ್ನು ವಿಧಿಸಲಾಗುವುದು ಎಂಬ ಕಾನೂನನ್ನು ಸ್ವಿಟ್ಜರ್ಲ್ಯಾಂಡ್ ಸರ್ಕಾರ ಜಾರಿಗೊಳಿಸಿದೆ ಎಂದು ವರದಿಯಾಗಿದೆ.
ಮಂಗಳೂರು/ಚೀನಾ: ಒಂದು ಸಂಬಧವನ್ನೇ ಕಾಪಾಡಿಕೊಳ್ಳುದು ಕಠಿಣವಾಗಿರುವ ಇಂದಿನ ದಿನಮಾನಗಳಲ್ಲಿ, ಚೀನಾದ ವಿವಾಹಿತ ವ್ಯಕ್ತಿ ಒಂದೇ ವಸತಿ ಸಂಕೀರ್ಣದಲ್ಲಿ ತನ್ನ ಪತ್ನಿ ಮತ್ತು ನಾಲ್ವರು ಪ್ರೇಯಆಸಿಯರೊಂದಿಗೆ ವಾಸಿಸುತ್ತಿದ್ದು, ಇದೀಗ ಸಂಗತಿ ಬಯಲಾದ ಬಳಿಕ ಎಲ್ಲರೂ ದಂಗಾಗಿದ್ದಾರೆ.
ಒಬ್ಬಳ ಜೊತೆ ಪತ್ನಿಯಂತೆ ಒಂದು ಕಟ್ಟಡದಲ್ಲಿ ವಾಸಿಸುತ್ತಿದ್ದು, ಇತರ ನಾಲ್ವರು ಪ್ರೇಯಸಿಯರಾಗಿದ್ದರು. ನಾಲ್ಕು ವರ್ಷಗಳ ಕಾಲ ಅವರಿಗೆ ಈ ವಿಷಯದ ಅರಿವೇ ಇರಲಿಲ್ಲ. ಆದರೆ, ಈ ಸ್ಟೋರಿ ಈಗ ಚೀನಾದಲ್ಲಿ ಫುಲ್ ವೈರಲ್ ಆಗಿದ್ದು, ಇಷ್ಟು ದಿನಗಳ ಕಾಲ ಇಂತಹ ಮಹಾ ಮೋಸದ ಸಂಬಂಧ ಅದೇಗೆ ಬಯಲಾಗದಂತೆ ಈತ ಕಾಪಾಡಿಕೊಂಡ ಎಂಬುದನ್ನು ಚರ್ಚಿಸುತ್ತಿದ್ದಾರೆ.
ಕ್ಸಿಯೋಜುನ್ ಎಂಬ ಹೆಸರಿನ ಈ ವ್ಯಕ್ತಿ ಈಶಾನ್ಯ ಚೀನಾದ ಜಿಲಿನ್ ಪ್ರಾಂತ್ಯದಿಂದ ಬಂದವನಾಗಿದ್ದು, ಐಷಾರಾಮಿ ಜೀವನ ನಡೆಸುತ್ತಿದ್ದ ಈತ ಮೊದಲು ಓರ್ವಳೊಂದಿಗೆ ಸಂಬಂಧ ಹೊಂದಿದ್ದು, ಆಕೆ ಗರ್ಭಿಣಿಯಾದ ಬಳಿಕ ವಿವಾಹ ಮಾಡಿಕೊಂಡಿದ್ದ. ಈತನ ಐಷಾರಾಮಿ ಜೀವನದ ಪರಿಣಾಮ ಹಣಕಾಸು ಅಡಚಣೆ ಎದುರಾಗಿದ್ದು, ಹೀಗಾಗಿ ಆತನ ಪತ್ನಿ ವಿಚ್ಛೇದನವನ್ನು ಆಯ್ಕೆ ಮಾಡುವ ಬದಲು, ತಮ್ಮ ಮಗುವನ್ನು ಒಂಟಿಯಾಗಿ ಬೆಳೆಸಲು ನಿರ್ಧರಿಸಿದ್ದರು.
ಇದರ ಮಧ್ಯೆ ಕ್ಸಿಯಾಜುನ್, ಆನ್‌ಲೈನ್‌ನಲ್ಲಿ ಭೇಟಿಯಾದ ಕ್ಸಿಯಾಹೋಂಗ್ ಜೊತೆ ಸಂಬಂಧ ಬೆಳೆಸಿದ್ದು, ಸುಳ್ಳು ನೆಪದಲ್ಲಿ ಆಕೆಯಿಂದ 140,000 ಯುವಾನ್‌ಗಳ ಭಾರಿ ಮೊತ್ತವನ್ನು ಪಡೆದು ಅವಳೊಂದಿಗೆ ಫ್ಲಾಟ್ ನಲ್ಲಿ ವಾಸಿಸುತ್ತಿದ್ದ. ಆದರೂ ಆತನ ಮೋಸ ನಿಂತಿರಲಿಲ್ಲ. Xiaojun ಮೂರು ಇತರ ಮಹಿಳೆಯರೊಂದಿಗೆ ತನ್ನ ಸಂಬಂಧವನ್ನು ಮುಂದುವರೆಸಿದ್ದು ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯರಾದ Xiaomin ಮತ್ತು Xiaoxin, ಮತ್ತು ನರ್ಸ್ Xiaolan ಇವರೊಂದಿಗೂ ಪ್ರೀತಿಯ ನಾಟಕವಾಡಿ ಅವರ ಹಣದಿಂದಲೇ ಅದೇ ವಸತಿ ಸಮುಚ್ಚಯದ ಬೇರೆ ಬೇರೆ ಫ್ಲಾಟ್ ಗಳಲ್ಲಿ ವಾಸಿಸುತ್ತಿದ್ದ.
ಅಂತಿಮವಾಗಿ ಪರಿತ್ಯಕ್ತ ಪತ್ನಿಗೆ ಈತನ ಕುರಿತು ಅನುಮಾನ ಬಂದಿದ್ದು, ಪೊಲೀಸರಿಗೆ ದೂರು ನೀಡಿದ ಬಳಿಕ ಅಸಲಿ ವಿಚಾರ ಬಯಲಾಗಿದೆ. ಈತನಿಂದ ವಂಚನೆಗೊಳಗಾದ ಎಲ್ಲ ಮಹಿಳೆಯರೂ ಈಗ ಪರಿತಪಿಸುತ್ತಿದ್ದಾರೆ. ಆರೋಪಿಯನ್ನು ಪೊಲೀಸರು ಜೀವಾವಧಿ ಶಿಕ್ಷೆಗೆ ಒಳಪಡಿಸಿದ್ದಾರೆ.