ಮಂಗಳೂರು: ‘ಕನ್ನಡ ಬಿಗ್ ಬಾಸ್ ಸೀಸನ್ 11’ರಲ್ಲಿ ಈಗಗಾಲೇ 12ನೇ ವಾರಕ್ಕೆ ಕಾಲಿಡಲು ಸಜ್ಜಾಗಿದೆ. ಇದೆ ಹೊತ್ತಲ್ಲಿ ಬಿಗ್ ಬಾಸ್ ನ ಮನೆಯಿಂದ ಆಚೆ ಹೋಗಲು ಪ್ರಬಲ ಸ್ಪರ್ಧಿಗಳೇ ನಾಮಿನೇಟ್ ಆಗಿದ್ದಾರೆ.
ಈ ನಡುವೆ ಗೌತಮಿ ಹಾಗೂ ಹನುಮಂತ ನೇತೃತ್ವದಲ್ಲಿ ಎರಡು ತಂಡಗಳಾಗಿ ವಿಭಾಗಿಸಿದ್ದು, ನಾಯಕನ ಆಯ್ಕೆಗಾಗಿ ಟಾಸ್ಕ್ ವೊಂದನ್ನು ಕೊಟ್ಟಿದ್ದಾರೆ.
ಬಿಗ್ ಬಾಸ್ ಕೊಟ್ಟ ಟಾಸ್ಕ್ ಆಡಲು ಮನೆ ಮಂದಿ ಹರಸಾಹಸ ಪಟ್ಟಿದ್ದಾರೆ. ಚೆಂಡು ಅಡೆತಡೆಗಳನ್ನು ದಾಟಿ ಅಲ್ಲಿರುವ ಬುಟ್ಟಿಗೆ ಬಂದು ಬೀಳಬೇಕಾಗಿತ್ತು. ಇದೇ ಟಾಸ್ಕ್ ನಲ್ಲಿ ಗೌತಮಿ, ಐಶ್ವರ್ಯ ಆಡುತ್ತಿದ್ದರು. ಆಗ ಉಗ್ರಂ ಮಂಜು ಅವರ ಏಕಾಗ್ರತೆಯನ್ನು ಹಾಳು ಮಾಡಲು ಹಾಡು ಹಾಡಿದ್ದಾರೆ. ಆಗ ಶಿಶಿರ್ ಮಂಜಣ್ಣ ಸ್ವಲ್ಪ ಸುಮ್ನೆ ಇರಿ ಅಂತ ಹೇಳಿದ್ದಾರೆ. ಇದಕ್ಕೆ ಮಂಜು ಕೋಪಗೊಂಡು ಕಿರುಚಾಡಿದ್ದಾರೆ.
ಆಗ ಗೌತಮಿ ಗೆಳೆಯ ಮಂಜು ವಿರುದ್ದ ಗರಂ ಆಗಿದ್ದಾರೆ. ‘ಆಡ್ತೀನೋ, ಸಾಯ್ತಿನೋ ನನ್ನ ಕಡೆ ತಿರುಗಬೇಡಿ, ನೀವು ಮಾಡುವ ತಪ್ಪಿಗೆ ನನಗೆ ಬಹಳಷ್ಟು ತೊಂದರೆಯಾಗಿದೆ’ ಅಂತ ಹೇಳಿದ್ದಾರೆ. ಇದಾದ ನಂತರ ಬೆಡ್ ರೂಮ್ ನಲ್ಲಿ ಗಲಾಟೆ ಮಾಡಿಕೊಂಡು ಮಂಜು ಅವರ ಮೇಲೆ ಗೌತಮಿ ರೇಗಾಡಿದ್ದಾರೆ.
ಇವರಿಬ್ಬರ ಮಾತಿನ ಭರಾಟೆ ಯಾವ ಮಟ್ಟಕ್ಕೆ ತಲುಪಲಿದೆ ಎಂಬುದು ಇಂದಿನ ಸಂಚಿಕೆಯಲ್ಲಿ ನೋಡಬಹುದು.
ಮಂಗಳೂರು: ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ರೇಸ್ ಸ್ಪರ್ಧೆ ಜೋರಾಗಿದೆ. ಹನುಮಂತ ಹಾಗೂ ಗೌತಮಿ ನೇತೃತ್ವದಲ್ಲಿ ಎರಡು ತಂಡಗಳಾಗಿ ವಿಭಾಗಿಸಿದ್ದು, ನಾಯಕನ ಆಯ್ಕೆಯ ಪ್ರಕ್ರಿಯೆಗಳು ಜಾರಿಯಲ್ಲಿವೆ.
ಈ ಮಧ್ಯೆ ಚೈತ್ರಾ ಕುಂದಾಪುರ ಅವರಿಗೆ ಇತ್ತೀಚೆಗೆ ಆಟ ಆಡೋಕೆ ಅವಕಾಶ ಸಿಗುತ್ತಿರಲಿಲ್ಲ. ಅವರನ್ನು ಕೇವಲ ಉಸ್ತುವಾರಿಗೆ ಸೀಮಿತ ಮಾಡಲಾಗುತ್ತಿತ್ತು. ಈ ವಾರವು ಅದು ಮುಂದುವರಿದಿದೆ. ಈ ಮಧ್ಯೆ ಅವಕಾಶಕ್ಕಾಗಿ ಚೈತ್ರಾ ಸಣ್ಣ ಮಕ್ಕಳಂತೆ ಕಣ್ಣಿರು ಇಟ್ಟಿದ್ದಾರೆ.
ನಿನ್ನೆ ನಡೆದ ಒಂದು ಪಂದ್ಯದಲ್ಲಿ ಗೌತಮಿ ತಂಡದ ಪರ ಚೈತ್ರಾ ಹಾಗೂ ಮಂಜು ಆಡಿದ್ದರು. ಚೈತ್ರಾ ಹಾಗೂ ಮಂಜು ಜೋಡಿ ಸೋಲನ್ನು ಕಂಡಿದೆ. ನಂತರದ ಗೇಮ್ ಗೆ ಚೈತ್ರಾ ಅವರನ್ನು ಉಸ್ತುವಾರಿಯಾಗಿ ನೇಮಕ ಮಾಡಿದ್ದರು. ಹೀಗಾಗಿ ಕ್ಯಾಪ್ಟನ್ ಗೌತಮಿ ತಂಡದಲ್ಲಿರುವ ಚೈತ್ರಾ ಕುಂದಾಪುರಗೆ ಆಡಲು ಅವಕಾಶ ಸಿಗುತ್ತಿಲ್ಲ ಎಂಬುದು ಆರೋಪವಾಗಿದೆ.
ಇದಕ್ಕೆ ಬೆಸರಗೊಂಡ ಚೈತ್ರಾ, ನನಗೆ ಆಡೊಕೆ ಕೊಡಲ್ಲ. ಉಸ್ತುವಾರಿ ಮಾಡಲ್ಲ ಅಂತಿನಿ, ನನಗೆ ಅದನ್ನೇ ಕೊಡ್ತಾರೆ. ಕಳೆದ ವಾರ ಎಲಿಮಿನೇಟ್ ಆಗಿ ವಾಪಸ್ ಬಂದಿದ್ದೀನಿ. ಇಡೀ ವಾರ ಆಟ ಆಡಿಲ್ಲ. ಆಡ್ತೀನಿ ಅಂದರೆ ಆಡೊಕೆ ಕೊಡಲ್ಲ. ಆಮೇಲೆ ಆಟಕ್ಕೆ ಉಂಟು, ಲೆಕ್ಕಕ್ಕೆ ಇಲ್ಲ ಅಂತಾರೆ ಎನ್ನುತ್ತ ಕಣ್ಣೀರು ಇಟ್ಟಿದ್ದಾರೆ.
ಆದರೆ ನಂತರ ನಡೆದ ಟಾಸ್ಕ್ ನಲ್ಲೂ ಮತ್ತೆ ಗೌತಮಿ ತಂಡ ಸೋಲನ್ನು ಕಂಡಿದೆ. ಹೀಗಾಗಿ ಬಿಗ್ ಬಾಸ್, ನಿಮ್ಮ ತಂಡದಿಂದ ಒಬ್ಬರನ್ನು ಕ್ಯಾಪ್ಟನ್ಸಿ ರೇಸ್ ನಿಂದ ಹೊರಗೆ ಇಡಬೇಕು ಎನ್ನುತ್ತಾರೆ. ಆಗ ಗೌತಮಿ ಚೈತ್ರಾ ಹೆಸರನ್ನು ತೆಗೆದುಕೊಂಡಿದ್ದಾರೆ. ಇದು ಚೈತ್ರಾ ಅವರಿಗೆ ಮತ್ತಷ್ಟು ನೋವು ಉಂಟುಮಾಡಿದೆ.
ಹೀಗಾಗಿ ಇಂದಿನ ಸಂಚಿಕೆಯಲ್ಲಿ ಯಾವ ರೀತಿಯ ಹೈಡ್ರಾಮಗಳು ನಡೆಯುತ್ತವೆ ಎಂಬುದನ್ನು ಕಾದು ನೋಡಬೇಕಿದೆ.
ಮಂಗಳೂರು/ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಉತ್ತಮ ಗೆಳೆತನ ಹೊಂದಿದ್ದ ಗೌತಮಿ ಹಾಗೂ ಮಂಜು ಈಗ ವೈರಿಗಳಾಗಿದ್ದಾರೆ. ಅದರಲ್ಲೂ ಕಳೆದ ಮೂರು ವಾರಗಳಿಂದ ಬಿಗ್ ಬಾಸ್ ಮನೆಯಲ್ಲಿ ಮಂಜು, ಗೌತಮಿ ವರ್ಸಸ್ ಮೋಕ್ಷಿತಾ ಎನ್ನುವಂತಾಗಿತ್ತು.
ಮಹಾರಾಜ ಮತ್ತು ಯುವರಾಣಿ ಟಾಸ್ಕ್ ನಿಂದ ಆರಂಭವಾಗಿದ್ದ ಇವರ ಜಿದ್ದಾಜಿದ್ದಿನ ಈ ಫೈಟ್ ಗೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ.
ಇಂದು ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಪ್ರೊಮೊದಲ್ಲಿ ಮಂಜುಗೆ ಗೌತಮಿ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಗಾರ್ಡನ್ ಏರಿಯಾದಲ್ಲಿ ಕೂತು ಮಾತನಾಡುವ ವೇಳೆ ಗೌತಮಿ ಮಂಜುಗೆ ಬುದ್ದಿ ಹೇಳಿದ್ದಾರೆ. ಮಂಜುಗೆ ಮೋಕ್ಷಿತಾ ಬಗ್ಗೆ ವಿಚಾರಿಸಿದ್ದಾರೆ. ಮೋಕ್ಷಿತಾ ಅವರು ಏನು ಹೇಳಿದರು? ಅವರು ಇಬ್ಬರೇ ಮಾತನಾಡುತ್ತಾರೆ ಎಂದು ಆರೋಪಿಸಿದರು.
ನಾವು ಇಬ್ಬರೇ ಇರಬೇಕಾದರೂ ಕೂಡ ನೀವೇ ಮಾತನಾಡುತ್ತೀರಿ ಎಂದು ನನಗೆ ಅನಿಸಿತ್ತು. ಅವರು ಹೇಳಿದ ಲೈನ್ ಗಳು ಕೂಡ ನನಗೆ ಸರಿಯಾಗಿ ಹೊಂದಾಣಿಕೆ ಇದೆ ಎಂದು ಅನಿಸಿತ್ತು. ನೀವು ಹೇಳಿದ ಹಾಗೆ ನೀವೇ ಇಲ್ಲ. ಇಲ್ಲಿ ಗೆಳೆಯ, ಗೆಳತಿ ಗೆಳತನ ಇರಲ್ಲ ಎಂದಿದ್ದಾರೆ ಗೌತಮಿ.
ಇಷ್ಟಕ್ಕೂ ಮಂಜು ಅವರ ಕೋಪಕ್ಕೆ ಕಾರಣ, ಗೌತಮಿ ಮಂಜು ಅವರನ್ನು ಕ್ಯಾಪ್ಟನ್ಸಿ ಟಾಸ್ಕ್ ನಿಂದ ಹೊರಗಿಟ್ಟಿರುವುದು. ಇದು ಮಂಜು ಅವರನ್ನು ಗೌತಮಿ ವಿರುದ್ದ ಮತ್ತಷ್ಟು ಕೆರಳಿಸುವಂತೆ ಮಾಡಿದೆ.
ಇನ್ನೊಂದು ಕಡೆ ಗೌತಮಿ, ಮೋಕ್ಷಿತಾ ಬಗ್ಗೆ ತುಂಬಾ ಸಹನೆಯ ಮಾತುಗಳನ್ನಾಡಿದ್ದಾರೆ. ಹೀಗಾಗಿ, ಗೌತಮಿ ಮತ್ತು ಮೋಕ್ಷಿತಾ ಮತ್ತೆ ಒಂದಾಗ್ತಾರಾ ಅನ್ನೋದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
ಮಂಗಳೂರು/ಬೆಂಗಳೂರು: ಕಿರುತೆರೆಯ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್ ಸೀಸನ್ 11’ ದಿನಕ್ಕೊಂದು ಹೊಸ ಹೊಸ ತಿರುವು ಪಡೆದುಕೊಂಡು ಮುನ್ನುಗ್ಗುತ್ತಿದೆ. ಈ ವಾರ ದೊಡ್ಮನೆಯಲ್ಲಿ ಡಬಲ್ ಎಲಿಮಿನೇಷನ್ ಆಗುವ ಸಾಧ್ಯತೆ ಹೆಚ್ಚಿದೆ. ಈ ಹಿಂದಿನ ಸೀಸನ್ ಗಳಲ್ಲಿಯೂ ಡಬಲ್ ಎಲಿಮಿನೇಷನ್ ಪದ್ದತಿ ಇತ್ತು.
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಈ ವಾರ ಭಿನ್ನವಾಗಿ ನಾಮಿನೇಷನ್ ಪ್ರಕ್ರಿಯೆ ನಡೆಸಲಾಗಿದೆ. ಕಳೆದ ಸೀಸನ್ ನ ಸ್ಪರ್ಧಿಗಳು ಬಂದು ನಾಮಿನೇಷನ್ ಪ್ರಕ್ರಿಯೆ ನಡೆಸಿಕೊಟ್ಟಿದ್ದಾರೆ. ಕಾರ್ತಿಕ್ ಮಹೇಶ್, ನಮ್ರತಾ ಗೌಡ, ವರ್ತೂರ್ ಸಂತೋಷ್, ತುಕಾಲಿ ಸಂತೋಷ್ ಮೊದಲಾದವರು ಬಿಗ್ ಬಾಸ್ ಮನೆ ಒಳಗೆ ಬಂದಿದ್ದರು. ಅವರುಗಳು ಫನ್ ಮಾಡುವುದರ ಜೊತೆಗೆ, ಅವರ ನೇತೃತ್ವದಲ್ಲಿ ನಾಮಿನೇಷನ್ ಪ್ರಕ್ರೀಯೆ ನಡೆದಿದೆ.
ಈ ವಾರ ಡಬಲ್ ಎಲಿಮಿನೇಷನ್ ನಡೆಯಬಹುದೇ ಎನ್ನುವ ಪ್ರಶ್ನೆಯೂ ಕಾಡಿದೆ. ಸದ್ಯ ದೊಡ್ಮನೆಯಲ್ಲಿ 12 ಸ್ಪರ್ಧಿಗಳು ಇದ್ದಾರೆ. ಎಲಿಮಿನೇಷನ್ ನಡೆದರೆ ದೊಡ್ಮನೆಯ ಸ್ಪರ್ಧಿಗಳ ಸಂಖ್ಯೆ 10ಕ್ಕೆ ಇಳಿಕೆ ಆಗಲಿದೆ. ಆ ಬಳಿಕ ಆಟ ಮತ್ತಷ್ಟು ದುರ್ಗಮ ಆಗಲಿದೆ.
ದೊಡ್ಮನೆಯಲ್ಲಿರುವ 11 ಸ್ಪರ್ಧಿಗಳ ಪೈಕಿ ಈ ವಾರ ಬಹುತೇಕ ಘಟಾನುಘಟಿಗಳು ನಾಮಿನೇಟ್ ಆಗಿದ್ದಾರೆ. ತ್ರಿವಿಕ್ರಮ್, ಭವ್ಯಾ ಗೌಡ, ಧನರಾಜ್ ಆಚಾರ್, ಶಿಶಿರ್, ರಜತ್ ಕಿಶನ್, ಹನುಮಂತ, ಚೈತ್ರಾ ಹಾಗೂ ಮೋಕ್ಷಿತಾ ನಾಮಿನೇಟ್ ಲಿಸ್ಟ್ ನಲ್ಲಿದ್ದಾರೆ. ಈ ಪೈಕಿ ಯಾರು ಎಲಿಮಿನೇಟ್ ಆಗುತ್ತಾರೆ ಎನ್ನುವ ಕುತೂಹಲ ಮೂಡಿದೆ. ಧನರಾಜ್, ಶಿಶೀರ್ ಹಾಗೂ ಚೈತ್ರಾಗೆ ಹೆಚ್ಚಿನ ಭಯ ಇದೆ.
ಒಂದು ವೇಳೆ ಡಬಲ್ ಎಲಿಮಿನೇಷನ್ ನಡೆದರೆ ಯಾವ ಇಬ್ಬರು ಸ್ಪರ್ಧಿಗಳು ಹೊರಕ್ಕೆ ಬರಬಹುದು ಎಂಬ ಪ್ರಶ್ನೆ ಬಿಗ್ ಬಾಸ್ ನ ವಿಕ್ಷಕರಲ್ಲಿ ಕೂತುಹಲ ಕೆರಳಿಸಿದೆ.