Home ಪ್ರಮುಖ ಸುದ್ದಿ ಸುಳ್ಯದ ಆಲೆಟ್ಟಿಯಲ್ಲಿ ಗ್ಯಾಸ್ ಸಿಲಿಂಡರ್ ಬ್ಲಾಸ್ಟ್: ಪಾರಾದ ಮನೆ ಮಂದಿ..!!

ಸುಳ್ಯದ ಆಲೆಟ್ಟಿಯಲ್ಲಿ ಗ್ಯಾಸ್ ಸಿಲಿಂಡರ್ ಬ್ಲಾಸ್ಟ್: ಪಾರಾದ ಮನೆ ಮಂದಿ..!!

ಸುಳ್ಯದ ಆಲೆಟ್ಟಿಯಲ್ಲಿ ಗ್ಯಾಸ್ ಸಿಲಿಂಡರ್ ಬ್ಲಾಸ್ಟ್: ಪಾರಾದ ಮನೆ ಮಂದಿ..!!

ಸುಳ್ಯ : ಗ್ಯಾಸ್ ಸಿಲಿಂಡರ್ ಒಡೆದು ಮನೆ ಸಂಪೂರ್ಣ ಬೆಂಕಿಗಾಹುತಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಲೆಟ್ಟಿ ಗ್ರಾಮದಲ್ಲಿ ಸಂಭವಿಸಿದೆ.

ಇಂದು ಸಂಜೆ ಈ ದುರ್ಘಟನೆ ಸಂಭವಿಸಿದ್ದು ಸದೃಶ್ಯವಶತ್ ಮನೆಯಲ್ಲಿ ಯಾರು ಇರಲಿಲ್ಲ. ಸಂಜೆ 4 ಗಂಟೆ ಸುಮಾರಿಗೆ ಮನೆಯಲ್ಲಿ ಹೊಗೆ ಕಾಣಿಸಿಕೊಂಡಿದೆ. ಸ್ವಲ್ಪ ಹೊತ್ತಿನಲ್ಲೇ ಭಾರಿ ಸದ್ದು ಕೇಳಿಸಿದೆ.

ನೋಡು ನೋಡುತಿದ್ದಂತೆ ಮನೆ ಹೊತ್ತಿ ಉರಿಯಲಾರಂಭಿಸಿದೆ. ಮನೆಯ ಒಳಗೆ ಗ್ಯಾಸ್ ಸಿಲಿಂಡರ್ ಬ್ಲಾಸ್ಟ್ ಆಗಿದೆ. ಸಿಲಿಂಡರ್ ಸ್ಪೋಟದ ಪರಿಣಾಮ ಮನೆಯಲ್ಲಿದ್ದ ವಸ್ತುಗಳಲ್ಲಿ ಕೆಲವು ಚೆಲ್ಲಾಪಿಲಿಯಾಗಿ ಹೋದರೆ ಉಳಿದವು ಸುಟ್ಟು ಕರಕಲಾಗಿವೆ.

ಬೆಂಕಿಯ ಉಂಡೆ ಮನೆಯ ಮುಂದಿದ್ದ ತೆಂಗಿನ ಮರದ ತುದಿಯವರೆಗೆ ಹಾರಿ ತೆಂಗಿನ ಮರಕ್ಕೂ ಬೆಂಕಿ ಹತ್ತಿಕೊಂಡಿದೆ. ಕೃಷ್ಣ ಎಂಬವರಿಗೆ ಸೇರಿದ ಈ ಮನೆಯಾಗಿದ್ದು ಆತನ ಪತ್ನಿ ಮತ್ತು ಮಗಳು ಮಾತ್ರ ವಾಸವಿದ್ದರು.

ಇಂದು ಬೆಳಿಗ್ಗೆ ಅವರಿಬ್ಬರು ಕಾರ್ಯ ನಿಮಿತ್ತ ಸುಳ್ಯ ಪೇಟೆಗೆ ಹೋಗಿದ್ದರು. ಸ್ಥಳಿಯರು ಮತ್ತು ಅಗ್ನಿಶಾಮಕ ದಳದ ಸಿಬಂದಿಗಳು ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ.

ಮನೆಯಲ್ಲಿದ್ದ ಸೊತ್ತುಗಳು ಮತ್ತು ಮನೆ ಸಂಪೂರ್ಣ ನಾಶವಾಗಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ತೀರ ಬಡತನದ ಕುಟುಂಬ ಇದೀಗ ಬೀದಿಗೆ ಬಂದಿದೆ.

ವಿಡಿಯೋಗಾಗಿ..

RECENT NEWS

ಮಂಗಳೂರಿನಲ್ಲಿ ಅಮಾಯಕ ಯುವಕನ ಪ್ರಾಣ ತೆಗೆದ ಸರಕಾರಿ ಅಧಿಕಾರಿ ವಿರುದ್ಧ ಕ್ರಮವಿಲ್ಲವೇ..??

ಮಂಗಳೂರಿನಲ್ಲಿ ಅಮಾಯಕ ಯುವಕನ ಪ್ರಾಣ ತೆಗೆದ ಸರಕಾರಿ ಅಧಿಕಾರಿ ವಿರುದ್ಧ ಕ್ರಮವಿಲ್ಲವೇ..?? ಮಂಗಳೂರು : ಇಂದು ಶನಿವಾರ ಮದ್ಯಾಹ್ನದಂದು ಹೊಸ ಕಾರು ಖರೀದಿಸಿದ ಸೋಮೇಶ್ವರ ಪುರಸಭಾ ಅಧಿಕಾರಿ ಕೃಷ್ಣ ಅವರ ಮೋಜು ಮಸ್ತಿನ ಧಾವಂತಕ್ಕೆ...

ಪ್ರೀತಿಸಿ ಮದುವೆಯಾಗಿದ್ದಕ್ಕೆ ಪ್ರತಿಕಾರ-ರಾಯಚೂರಿನಲ್ಲಿ ಯುವತಿ ಸಂಬಂಧಿಕರಿಂದ ನಾಲ್ವರ ಬರ್ಬರ ಕೊಲೆ..!

ಪ್ರೀತಿಸಿ ಮದುವೆಯಾಗಿದ್ದಕ್ಕೆ ಪ್ರತಿಕಾರ-ರಾಯಚೂರಿನಲ್ಲಿ ಯುವತಿ ಸಂಬಂಧಿಕರಿಂದ ನಾಲ್ವರ ಬರ್ಬರ ಕೊಲೆ..! ರಾಯಚೂರು: ಪ್ರೀತಿಸಿ ಮದುವೆಯಾದ ಕಾರಣಕ್ಕೆ ಯುವತಿಯ ಸಂಬಂಧಿಕರು ಯುವಕನ ಕಡೆಯ ನಾಲ್ವರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ರಾಯಚೂರಿನ ಸಿಂಧನೂರಿನ ಸುಕಾಲಪೇಟೆಯಲ್ಲಿ...

ಬೆಂಗಳೂರಿನಲ್ಲಿ ನಿಯಂತ್ರಣಕ್ಕೆ ಬಾರದ ಕೊರೊನಾ ಜುಲೈ 14 ರಿಂದ ಒಂದು ವಾರ ಬೆಂಗಳೂರು ಲಾಕ್​ಡೌನ್..!

ಬೆಂಗಳೂರಿನಲ್ಲಿ ನಿಯಂತ್ರಣಕ್ಕೆ ಬಾರದ ಕೊರೊನಾ ಜುಲೈ 14 ರಿಂದ ಒಂದುವಾರ ಬೆಂಗಳೂರು ಲಾಕ್​ಡೌನ್..! ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ಕೈಮೀರಿ ಹರಡುತ್ತಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಕೊರೊನಾ ಮಿತಿಮೀರಿದೆ. ಈ ಹಿನ್ನೆಲೆಯಲ್ಲಿ...

ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್ ತಂಡದ ಕಾರ್ಯಾಚರಣೆ : ವಿಕಾಸ್ ದುಬೆ ಸಹಚರರ ಬಂಧನ..!

ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್ ತಂಡದ ಕಾರ್ಯಾಚರಣೆ : ವಿಕಾಸ್ ದುಬೆ ಸಹಚರರ ಬಂಧನ..! ಮುಂಬೈ : ಉತ್ತರ ಪ್ರದೇಶ ಪೊಲೀಸ್‌ ಎನ್‌ಕೌಂಟರ್‌ನಲ್ಲಿ ಹತ್ಯೆಗೀಡಾದ ಕುಖ್ಯಾತ ರೌಡಿಶೀಟರ್‌ ವಿಕಾಸ್‌ ದುಬೆಯ ಸಹಚರರರನ್ನು ಮುಂಬೈ ಪೊಲಿಸರು...
error: Content is protected !!