ಬೆಂಗಳೂರು: ಗಾಂಜ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬೆಂಗಳೂರಿನ ಸಂಜಯ್ ನಗರ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ವಿಜಯ್ ಹಾಗೂ ಶಿವಕುಮಾರ್ ಬಂಧಿತ ಆರೋಪಿಗಳು. ಒರಿಸ್ಸಾದಿಂದ ಬೆಂಗಳೂರಿಗೆ ಗಾಂಜಾ ತಂದು ಮಾರಾಟ ಮಾಡುತ್ತದ್ದ ಆರೋಪಿಗಳು, ನಗರಕ್ಕೆ ಬರುವ ಗೂಡ್ಸ್ ಗಾಡಿ ಚಾಲಕರಿಗೆ ಹೆಚ್ಚಿನ ಹಣ ಆಮಿಷ ಒಡ್ಡಿ ನಗರದಾದ್ಯಂತ ಗಾಂಜಾ ಸಾಗಾಟ ಮಾಡುತ್ತಿದ್ದರು.
ಹೆಬ್ಬಾಳದ ಮೇಲ್ಸೇತುವೆ ಬಳಿ ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ಮಾಡಿ ಆರೋಪಿಗಳಿಂದ ನಾಲ್ಕು ಮೂಟೆ ಗಾಂಜಾವನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಚಾಮರಾಜನಗರ: ಶಬರಿಮಲೆಗೆ ತೆರಳಿ ವಾಪಸ್ ಆಗುತ್ತಿದ್ದ ವೇಳೆ, ಭೀಕರವಾದಂತಹ ಅಪಘಾತ ಸಂಭವಿಸಿದ್ದು, ಈ ಒಂದು ಅಪಘಾತದಲ್ಲಿ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಮೂಲದ ಇಬ್ಬರು ಅಯ್ಯಪ್ಪ ಭಕ್ತರು ಸಾವನ್ನಪ್ಪಿದ್ದು, ಉಳಿದ ಮೂವರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಕೊಯಮತ್ತೂರಿನಲ್ಲಿ ನಡೆದಿದೆ.
ಶಬರಿ ಮಲೆಯಿಂದ ಕೊಳ್ಳೇಗಾಲಕ್ಕೆ ವಾಪಸ್ ಬರುತ್ತಿದ್ದಾಗ ಈ ಒಂದು ಅಪಘಾತ ಸಂಭವಿಸಿದೆ.ಅಯ್ಯಪ್ಪ ಭಕ್ತರಾದ ನಾಗಣ್ಣ (66) ವೆಂಕಟದ್ರಿ (70) ಸಾವನ್ನಪ್ಪಿದ್ದರೆ, ಘಟನೆಯಲ್ಲಿ ಮಹೇಶ್ ಕುಮಾರ್, ಸ್ವಾಮಿ ಹಾಗೂ ದೊರೆಸ್ವಾಮಿಗೆ ಗಂಭೀರವಾದ ಗಾಯಗಳಾಗಿದ್ದು ಕೊಯಮತ್ತೂರು ಆಸ್ಪತ್ರೆಯಲ್ಲಿ ಮೂವರಿಗೂ ಚಿಕಿತ್ಸೆ ಮುಂದುವರೆದಿದೆ.
ಮಂಗಳೂರು/ಮುಧೋಳ: ಮದುವೆ ವಯಸ್ಸು ಮೀರಿ ಹೆಣ್ಣು ಸಿಗದ ಕೊರಗಿನಲ್ಲಿದ್ದ ಯುವಕನಿಗೆ ಮದುವೆ ಮಾಡಿಸುವುದಾಗಿ ಹೇಳಿ ಲಕ್ಷಾಂತರ ರೂ. ವಂಚಿಸಿ ಪತ್ತಿ ಹಾಗೂ ಮದುವೆ ಮಾಡಿಸಿದ್ದ ಬ್ರೋಕರ್‌ಗಳು ನಾಪತ್ತೆಯಾದ ಘಟನೆ ಮುಧೋಳ ಸಮೀಪದ ಬಿದರಿ ಗ್ರಾಮದಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಯುವಕನೊಬ್ಬನಿಂದ 4ಲಕ್ಷ ರೂ. ಪಡೆದ ವಂಚಕರ ಗುಂಪು ಶಿವಮೊಗ್ಗ ಮೂಲದ ಮಹಿಳೆಯೊಂದಿಗೆ ಮದುವೆ ಮಾಡಿಸಿದ್ದಾರೆ. ಮದುವೆ ಬಳಿಕ ವಿವಾಹಿತ ಮಹಿಳೆ ಹಾಗೂ ಹಣ ಪಡೆದ ಬ್ರೋಕರ್ ಗಳು ಪರಾರಿಯಾಗಿದ್ದು, ಮೋಸಹೋಗಿರುವ ಯುವಕ ಮುಧೋಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ನ್ಯಾಯ ದೊರೆಕಿಸಿಕೊಡುವಂತೆ ಅಂಗಲಾಚುತ್ತಿದ್ದಾನೆ.
ಬಿದರಿ ಗ್ರಾಮದ ಸೋಮಶೇಖರ ಗುಲಗಾಲಜಂಬಗಿ ಎಂಬಾತ ಕಳೆದ ವರ್ಷ ತನ್ನ ಮದುವೆ ಮಾಡಿಸುವಂತೆ ಬ್ರೋಕರ್ ಗಳಿಗೆ ನಾಲ್ಕು ಲಕ್ಷ ರೂ. ನೀಡಿದ್ದ ಹಣ ಪಡೆದ ಬ್ರೋಕರ್ ಗಳು ಶಿವಮೊಗ್ಗ ಮೂಲದ ಮಹಿಳೆಯೊಂದಿಗೆ ಸೋಮಶೇಖರನ ಮದುವೆಯನ್ನು ನಗರದ ಕಾಳಿಕಾದೇವಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ಮಾಡಿದ್ದರು. ಆದರೆ ಮದುವೆಯಾದ ಒಂದೇ ತಿಂಗಳಿನಲ್ಲಿ ಮಹಿಳೆ ಸೋಮಶೇಖರನನ್ನು ಬಿಟ್ಟು ಹೊರಟುಹೋಗಿದ್ದಾಳೆ. ಈ ಬಗ್ಗೆ ವಿಚಾರಿಸಲು ಸೋಮಶೇಖರ ಬ್ರೋಕರ್ ಗಳನ್ನು ಸಂಪರ್ಕಿಸಲು ಮುಂದಾದಾಗ ಅವರು ನಾಪತ್ತೆಯಾಗಿದ್ದಾರೆ. ಪತ್ನಿ ಹಾಗೂ ಹಣ ಎರಡನ್ನೂ ಕಳೆದುಕೊಂಡು ಕಂಗಾಲಾಗಿರುವ ಸೋಮಶೇಖರ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
ಮಧುಮಗಳ ಮೂರನೇ ಮದುವೆ :
ಸೋಮಶೇಖರನನ್ನು ವಿವಾಹವಾಗಿರುವ ಮಹಿಳೆ ಶಿವಮೊಗ್ಗ ಮೂಲದವಳಿದ್ದು, ಈ ಹಿಂದಯೇ ಆಕೆಗೆ ಎರಡು ಮದುವೆಯಾಗಿ ಮಕ್ಕಳಿರುವುದಾಗಿ ತಿಳಿದುಬಂದಿದೆ. ಹಣ ಹಾಗೂ ಚಿನ್ನಾಭರಣದ ಆಸೆಗಾಗಿ ಯುವಕನ ಜೀವನದಲ್ಲಿ ಚೆಲ್ಲಾಟವಾಡಿರುವ ಮಹಿಳೆಗಾಗಿ ಬಲೆ ಬೀಸಿರುವ ಪೊಲೀಸರು ವಂಚಕರ ಪತ್ತೆಗೆ ಮುಂದಾಗಿದ್ದಾರೆ. ಘಟನೆ ನಡೆದು ಒಂದುವರ್ಷ ಕಳೆದರೂ ಆರೋಪಿತರು ಹಣ ಮರಳಿಸದಿದ್ದಾಗ ಸೋಮಶೇಖರ ಅವರು ಮದುವೆಯಾಗಿರುವ ಮಂಜುಳಾ ಎ., ಸತ್ಯಪ್ಪ ಶಿರೂರ, ಸಂಜು ಮಾಳಿ, ರವಿ ಅರಭಾವಿ, ಲಕ್ಷ್ಮಿ ಗೋಲಭಾವಿ, ನಾಗವ್ವ ಆಚಾರಿ, ಸಿದ್ದಪ್ಪ ಸೂರ್ಯವಂಶಿ ಅವರ ವಿರುದ್ದ ದೂರು ದಾಖಲಿಸಿದ್ದಾರೆ.
ಸಾಲ ಮಾಡಿ ನೀಡಿದ ಹಣ :
ಮದುವೆಯಾಗಿ ಹೊಸ ಜೀವನ ರೂಪಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಸಾಲಸೋಲ ಮಾಡಿ ಹಣ ನೀಡಿರುವೆ ಇದೀಗ ವಂಚನೆಗೊಳಗಾಗಿ ಆಕಾಶವೇ ಕಳಚಿ ಬಿದ್ದಂತಾಗಿದೆ ಎಂದು ಯುವಕನ ಪೋಷಕರು ತಮ್ಮ ಅಸಾಯಕತೆ ಹೊರಹಾಕಿದರು ಎಂದು ಯುವಕ ಸಂತಾಪ ವ್ಯಕ್ತಪಡಿಸಿದ್ದಾನೆ. ಹೇಗಾದರೂ ಮಾಡಿ ಮದುವೆಯಾಗಿ ಸುಂದರ ಜೀವನದ ಕನಸ್ಸು ಕಂಡಿದ್ದ ಯುವಕ ತನ್ನ ಸಂಬಂಧಿಕರನ್ನು ನಂಬಿ ತನಗರಿವಿಲ್ಲದಂತೆ ಟ್ರ್ಯಾಪ್ ಬಲೆಗೆ ಬಿದ್ದಿರುವ ಶಂಕೆ ವ್ಯಕ್ತವಾಗುತ್ತಿದೆ. ಆರೋಪಿತರಲ್ಲಿ ಸಂಜು ಮಾಳಿ ಎಂಬಾತ ಸೋಮಶೇಖರನ ದೂರದ ಸಂಬಂಧಿ. ಸಂಬಂಧಿಕರನ್ನು ನಂಬಿ ಹಣ ನೀಡಿರುವ ಯುವಕನಿಗೆ ಇತ್ತ ಮಡದಿಯೂ ಇಲ್ಲ ಅತ್ತ ಹಣವೂ ಇಲ್ಲ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೆಣ್ಣು ಸಿಗದೆ ವಯಸ್ಸಾದವರನ್ನು ಗುರಿಯಾಗಿಸಿಕೊಂಡು ವಂಚಿಸುವ ಗುಂಪಿನಿಂದ ಈ ಕೃತ್ಯ ನಡೆದಿರುವ ಶಂಕೆ ಇದೆ. ಜೊಲ್ಲೆಯಲ್ಲಿಯೇ ಮೊದಲ ಇದು ಮೊದಲ ಪ್ರಕರಣವಾಗಿದ್ದು, ಇಂತಹ ವಂಚನೆ ಗುಂಪಿನಿಂದ ಇದೇ ರೀತಿ ಪಕ್ಕದ ಜಿಲ್ಲೆಗಳಲ್ಲೂ ಕೃತ್ಯಗಳು ನಡೆದಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಿ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ತಿಳಿಸಿದ್ದಾರೆ.
ತಿರುಪತಿ: ಕಾಲ್ತುಳಿತದಿಂದ ಗಾಯಗೊಂಡ ಗಾಯಾಳುಗಳಿಗೆ ವಿಶೇಷ ದರ್ಶನಕ್ಕೆ ತಿರುಮಲ ತಿರುಪತಿ ದೇವಸ್ಥಾನ ಅವಕಾಶ ಮಾಡಿಕೊಟ್ಟಿದೆ.
ಸಿಎಂ ಚಂದ್ರಬಾಬು ನಾಯ್ಡು ಹಾಗೂ ಡಿಸಿಎಂ ಪವನ್ ಕಲ್ಯಾಣ್ ಸೂಚನೆ ಮೇರೆಗೆ ಸ್ವಿಮ್ಸ್ ಆಸ್ಪತ್ರೆಯಲ್ಲಿರುವ ಗಾಯಾಳುಗಳಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.
20 ಮಂದಿ ಗಾಯಾಳುಗಳುಗಳು ಸರ್ಕಾರಿ ಬಸ್ಸಿನಲ್ಲಿ ಆಸ್ಪತ್ರೆಯಿಂದ ದೇವಾಲಯಕ್ಕೆ ಪ್ರಯಾಣ ಮಾಡಿ ದೇವರ ದರ್ಶನ ಮಾಡಲಿದ್ದಾರೆ.
ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ತಿರುಪತಿ ತಿರುಮಲಕ್ಕೆ ಭಕ್ತ ಸಾಗರವೇ ಹರಿದು ಬಂದಿದೆ. ಕಾಲ್ತುಳಿತದ ಬಳಿಕ ಎಚ್ಚೆತ್ತ ಆಂಧ್ರಪ್ರದೇಶ ಸರ್ಕಾರ ಹಾಗೂ ಟಿಟಿಡಿ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರ ವಹಿಸಿದೆ.