ಕುಖ್ಯಾತ ದರೋಡೆಕೋರನ ಬಂಧಿಸಿದ ಪಣಂಬೂರು ಪೊಲೀಸರು..!
ಕುಖ್ಯಾತ ದರೋಡೆಕೋರನ ಬಂಧಿಸಿದ ಪಣಂಬೂರು ಪೊಲೀಸರು..!
ಮಂಗಳೂರು : ದರೋಡೆ, ಹಲ್ಲೆ, ಅಪಘಾತ ಸಹಿತ ಹತ್ತಕ್ಕೂ ಅಧಿಕ ಅಪರಾಧ ಪ್ರಕರಣದಲ್ಲಿದ್ದು ತಲೆ ತಪ್ಪಿಸಿಕೊಂಡು ತಿರುಗುತ್ತಿದ್ದ ದರೋಡೆಕೋರ ಶಮ್ಮಿ ಯಾನೇ ಶಮೀರ್ ಕಾಟಿಪಳ್ಳನನ್ನು ಎಸಿಪಿ ಬೆಳ್ಳಿಯಪ್ಪ ನೇತೃತ್ವದ ಪಣಂಬೂರು ರೌಡಿ ನಿಗ್ರಹದಳ ಹಾಗೂ ಪಣಂಬೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಈತ ಪಣಂಬೂರು ಬಂದರು ವ್ಯಾಪ್ತಿಯಲ್ಲಿ ಬರುವ ಲಾರಿ ಚಾಲಕರಿಗೆ ಹಲ್ಲೆಗೈದು ದರೋಡೆ ಮಾಡಿ ಪರಾರಿಯಾಗುತ್ತಿದ್ದ. ಈ ಹಿಂದೆ ಎಎಸ್ಐ ಒಬ್ಬರಿಗೆ ರಾಡ್ ನಿಂದ ಮಾರಣಾಂತಿಕ ಹಲ್ಲೆಗೈದಿದ್ದ.
ಬೆಂಜನ ಪದವಿನಲ್ಲಿ ದ್ವಿಚಕ್ರ ವಾಹನಕ್ಕೆ ತನ್ನ ವಾಹನ ಢಿಕ್ಕಿ ಹೊಡೆಸಿ ಪರಾರಿಯಾಗಿದ್ದ. ಈತನ ವಿರುದ್ದ ಹಲವಾರು ವಾರೆಂಟ್ ಜಾರಿಯಾಗಿದ್ದು ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಂಡು ತಿರುಗಾಡುತ್ತಿದ್ದ.
ಬುಧವಾರ ಈತನ ಅಡಗುತಾಣದ ಬಗ್ಗೆ ಸುಳಿವು ಪಡೆದು ದಾಳಿ ನಡೆಸಿ ಬಂಧಿಸಲಾಯಿತು. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಈ ಕಾರ್ಯಾಚರಣೆ ನಡೆಯಿತು.
LATEST NEWS
ದಸರಾ ಆನೆಗಳ ಕಾದಾಟ..! ಬೆಚ್ಚಿಬಿದ್ದ ಜನರು, ಅಧಿಕಾರಿಗಳು..!!
ಮೈಸೂರು/ಮಂಗಳೂರು: ಮೈಸೂರು ದಸರಾ ಮಹೋತ್ಸವಕ್ಕೆ ಆಗಮಿಸಿರುವ ಗಜಪಡೆಯ ಆನೆಗಳು ಶುಕ್ರವಾರ(ಸೆ.20) ರಾತ್ರಿ ದಿಢೀರ್ ಕಾದಾಟಕ್ಕೆ ಇಳಿದಿದ್ದು ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ದಸರಾ ಹಬ್ಬದ ಪ್ರಯುಕ್ತ ಆನೆಗಳಿಗೆ ತಾಲೀಮು ನಡೆಸಲಾಗುತ್ತಿದೆ. ಮಳೆಯಿರುವ ಕಾರಣ ಅರಮನೆ ಮೈದಾನದಲ್ಲೇ ಆನೆಗಳಿಗೆ ತಾಲೀಮನ್ನು ಕೈಗೊಳ್ಳಲಾಗಿತ್ತು. ನಿನ್ನೆ ರಾತ್ರಿ 8 ಗಂಟೆಯ ಸುಮಾರಿಗೆ ಧನುಂಜಯ್ ಹಾಗೂ ಕಂಜನ್ ಆನೆಗಳ ಮಧ್ಯೆ ಗುದ್ದಾಟ ಆಋಂಭವಾಗಿದೆ. ಊಟದ ಸಮಯದಲ್ಲಿ ಈ ಜಗಳ ಶುರುವಾಗಿದ್ದು ಧನುಂಜಯ್ ಆನೆ ಕಂಜನ್ನನ್ನು ಅರಮನೆಯಿಂದ ಹೊರಗೆ ಓಡಿಸಿಕೊಂಡು ಬಂದಿದೆ. ಈ ವೇಳೆ ಕಜನ್ ತನನ್ ಮಾವುತನನನ್ಉ ಕೆಳಗೆ ಬೀಳಿಸಿದೆ. ಧನುಂಜಯ್ ಆನೆ ಕಂಜನ್ನನ್ನು ಓಡಿಸಿಕೊಂಡು ಹೋಗಿದ್ದು ಜಯಮಾರ್ತಾಂಡ ದ್ವಾರದಿಂದ ಹೊರಗೆ ಬಂದಿದೆ. ಇದರಿಂದ ಕೆಲಕಾಲ ಜನ, ಮಾವುತರು, ಅಧಿಕಾರಿಗಳಲ್ಲಿ ಆತಂಕ ಸೃಷ್ಟಿಯಾಯಿತು. ಆನೆಗಳು ದೊಡ್ಡಕೆರೆ ಮೈದಾನ ಬಳಿ ಬ್ಯಾರಿಕೇಡ್ ತಳ್ಳಿಕೊಂಡು ರಸ್ತೆಗೆ ಪ್ರವೇಶಿಸುತ್ತಿದ್ದಂತೆ ಜನರು ಭಯದಿಂದ ದಿಕ್ಕಾಪಾಲಾಗಿ ಓಡಿಹೋದರು.
ಸಾಹಿತಿ ಹಂಪ ನಾಗರಾಜಯ್ಯ ಅವರಿಂದ ದಸರಾ ಉದ್ಘಾಟನೆ : ಸಿಎಂ ಸಿದ್ಧರಾಮಯ್ಯ
ದೊಡ್ಡಕೆರೆ ಮೈದಾನದ ಬೆಂಗಳೂರು- ನೀಲಗಿರಿ ರಸ್ತೆಯಲ್ಲಿನ ವಾಹನಗಳನ್ನು ನೋಡುತ್ತಿದ್ದಂತೆ ಕಂಜನ್ ಬೆದರಿ ನಿಂತಿತು. ಮಾವುತರು ಕಾವಾಡಿಗರು ಸಮಾಧಾನ ಪಡಿಸಿದರು. ಯಾವುದೇ ಅನಾಹುತ ಸಂಭವಿಸಿಲ್ಲ. ಕಾವಾಡಿಗಳ ಚಾಣಾಕ್ಷತದಿಂದ ಆನೆಗಳ ಆಟೋಟಕ್ಕೆ ಬ್ರೇಕ್ ಬಿದ್ದಿದೆ. ಬಳಿಕ ಅರಮನೆಗೆ ಆನೆಗಳನ್ನು ಸಿಬ್ಬಂದಿ ಕರೆತಂದಿದ್ದಾರೆ. ಸದ್ಯ ಕೋಡಿಸೋಮೇಶ್ವರ ದೇವಸ್ಥಾನ ಸಮೀಪ ಇರುವ ಆನೆಗಳು ಬಿಡಾರ ಬಿಟ್ಟಿವೆ.
DAKSHINA KANNADA
ಮಂಗಳೂರು : ಬೈಕ್ಗೆ ಲಾರಿ ಡಿ*ಕ್ಕಿ; ವಿದ್ಯಾರ್ಥಿ ಸಾ*ವು
ಮಂಗಳೂರು : ಲಾರಿಯೊಂದು ಬೈಕ್ಗೆ ಡಿ*ಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಯೊಬ್ಬ ಮೃ*ತಪಟ್ಟ ಘಟನೆ ಕುಂಟಿಕಾನ ಪ್ಲೈಓವರ್ನ ಮೇಲೆ ಶುಕ್ರವಾರ(ಸೆ.21) ನಡೆದಿದೆ.
ಪಾಣೆಮಂಗಳೂರು ಸಮೀಪದ ಮೆಲ್ಕಾರ್ ನಿವಾಸಿ ಜಾಸಿಮ್ (18) ಮೃ*ತಪಟ್ಟ ವಿದ್ಯಾರ್ಥಿ. ನಗರ ಹೊರಲವಲಯದ ಕೂಳೂರಿನಲ್ಲಿರುವ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಎಂಬಿಎ ಓದುತ್ತಿದ್ದ ಜಾಸಿಮ್ ಶುಕ್ರವಾರ ಸಂಜೆ ಕೂಳೂರಿನಿಂದ ಕೆಪಿಟಿ ಕಡೆಗೆ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಲಾರಿಯೊಂದು ಡಿ*ಕ್ಕಿ ಹೊಡೆಯಿತು ಎನ್ನಲಾಗಿದೆ.
ಇದನ್ನೂ ಓದಿ : ನಾಲ್ಕನೇ ಮಗುವೂ ಹೆಣ್ಣಾಯಿತೆಂದು ಹಸುಗೂಸನ್ನು ನೆಲಕ್ಕೆ ಬಡಿದು ಕೊಂ*ದ ತಂದೆ
ಪರಿಣಾಮ ನಿಯಂತ್ರಣ ತಪ್ಪಿದ ಜಾಸಿಮ್ ರಸ್ತೆಗೆ ಬಿದ್ದಿದ್ದರು. ಇದರಿಂದ ಗಂಭೀ*ರ ಗಾ*ಯಗೊಂಡ ಅವರು ಮೃ*ತಪಟ್ಟಿದ್ದಾರೆ. ಈ ಬಗ್ಗೆ ಮಂಗಳೂರು ದಕ್ಷಿಣ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
DAKSHINA KANNADA
ದತ್ತಿ ಇಲಾಖೆ ದೇವಸ್ಥಾನದಲ್ಲಿ ನಂದಿನಿ ತುಪ್ಪ ಬಳಕೆಗೆ ಸೂಚನೆ..!
ಮಂಗಳೂರು : ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆಯ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಕರ್ನಾಟಕದ ದತ್ತಿ ಇಲಾಖೆ ಫುಲ್ ಅರ್ಲರ್ಟ್ ಆಗಿದೆ. ಕರ್ನಾಟಕ ದತ್ತಿ ಇಲಾಖೆಯ ದೇವಸ್ಥಾನಗಳಲ್ಲಿ ಕಡ್ಡಾಯವಾಗಿ ನಂದಿನಿ ತುಪ್ಪವನ್ನೇ ಬಳಕೆ ಮಾಡಬೇಕು ಎಂದು ಆದೇಶ ಹೊರಡಿಸಲಾಗಿದೆ.
ಮುಜರಾಯಿ ಇಲಾಖೆಯ ಸಚಿವ ರಾಮಲಿಂಗಾರೆಡ್ಡಿ ಅವರು ಈ ಬಗ್ಗೆ ಇಲಾಖೆಗೆ ಸೂಚನೆ ನೀಡಿದ್ದಾರೆ. ಈ ಕುರಿತು ಸುತ್ತೋಲೆ ಹೊರಡಿಸಿರುವ ದತ್ತಿ ಇಲಾಖೆ ದೇವಸ್ಥಾನದ ಸೇವೆಗಳಿಗೆ , ದೀಪಗಳಿಗೆ, ಪ್ರಸಾದ ತಯಾರಿಗೆ ಮತ್ತು ಅನ್ನಛತ್ರದಲ್ಲಿ ಕಡ್ಡಾಯವಾಗಿ ನಂದಿನಿ ತುಪ್ಪ ಬಳಸುವಂತೆ ಸೂಚಿಸಿದೆ.
ತಿರುಪತಿ ದೇವಾಲಯದ ಲಡ್ಡು ತಯಾರಿಗೆ ಕರ್ನಾಟಕದ ನಂದಿನಿ ತುಪ್ಪವೇ ರವಾನೆ ಆಗುತ್ತಿದೆ. ಆದ್ರೆ ಜಗನ್ ರೆಡ್ಡಿಯ ಸರ್ಕಾರದ ನಾಲ್ಕು ವರ್ಷ ನಂದಿನಿ ತುಪ್ಪ ತಿರುಪತಿಗೆ ಪೂರೈಕೆ ಮಾಡಿರಲಿಲ್ಲ. ಹೀಗಾಗಿ ತಿರುಪತಿ ಲಡ್ಡುವಿಗೆ ಬಳಕೆ ಮಾಡಿದ ತುಪ್ಪಕ್ಕೂ ನಂದಿನಿ ತುಪ್ಪಕ್ಕೂ ಯಾವುದೇ ಸಂಭಂಧ ಇಲ್ಲ ಎಂದು ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಹೇಳಿದ್ದಾರೆ.