Saturday, August 20, 2022

ಸ್ನೇಹಿತನ ಜೊತೆಗಿದ್ದ ಬಾಲಕಿ ಮೇಲೆರಗಿದ ಕಾಮುಕರು

ಛತ್ತೀಸ್‌ಗಢ: ಸ್ನೇಹಿತನೊಂದಿಗಿದ್ದ ಬಾಲಕಿ ಮೇಲೆ ನಾಲ್ವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿ ಆಕೆಯ ಸ್ನೇಹಿತನನ್ನು ಥಳಿಸಿರುವ ಘಟನೆ ಸರ್ಗುಜಾದಲ್ಲಿ ನಡೆದಿದೆ. ಆರೋಪಿಗಳಲ್ಲಿ ಓರ್ವ ಅಪ್ರಾಪ್ತನೂ ಸೇರಿದ್ದಾನೆ.


ಅಭಿಷೇಕ್ ಯಾದವ್, ನಾಗೇಂದ್ರ ಯಾದವ್
ಬಾಲಕಿಯು ಸ್ನೇಹಿತನ ಜೊತೆ ಇರುವ ವೇಳೆ ಅಲ್ಲಿಗೆ ಬಂದ ಆರೋಪಿಗಳು ಬಲವಂತವಾಗಿ ಹತ್ತಿರದ ಕಾಡಿಗೆ ಕರೆತಂದು ಅತ್ಯಾಚಾರ ಎಸಗಿದ್ದಾರೆ.

ಒಬ್ಬರ ನಂತರ ಒಬ್ಬರಂತೆ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದು, ಬಳಿಕ ಸಂತ್ರಸ್ತೆಯ ಬ್ಯಾಗ್‌ನಲ್ಲಿದ್ದ ಹಣದೊಂದಿಗೆ ದುಷ್ಕರ್ಮಿಗಳು ಪರಾರಿಯಾಗಿದ್ದರು.

ಇದೀಗ ಪೊಲೀಸರು ಆರೋಪಿಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

LEAVE A REPLY

Please enter your comment!
Please enter your name here

Hot Topics