Connect with us

LATEST NEWS

ಬಾಲಕಿಯರಿಬ್ಬರ ಮೇಲೆ ಅ*ತ್ಯಾಚಾ*ರವೆಸಗಿ ಬ್ಲ್ಯಾ*ಕ್‌ಮೇಲ್ ಮಾಡಿದ ಗ್ಯಾಂಗ್ ಅರೆಸ್ಟ್

Published

on

ಮಂಗಳೂರು/ಬೆಳಗಾವಿ: ಮೂವರು ಸೇರಿಕೊಂಡು ಬಾಲಕಿಯರಿಬ್ಬರ ಮೇಲೆ ಗ್ಯಾಂ*ಗ್ ರೇ*ಪ್ ಮಾಡಿದ ಘಟನೆ ಬೆಳಗಾವಿಯ ರಾಯಭಾಗ ತಾಲೂಕಿನ ಸವಸುದ್ದಿ ಗ್ರಾಮದ ಬಳಿಯ ಗುಡ್ಡಗಾಡು ಪ್ರದೇಶದಲ್ಲಿ ನಡೆದಿದೆ.

ಆರೋಪಿಗಳಾದ ಅಭಿಷೇಕ್, ಆದಿಲ್ ಜಮಾದಾರ್ ಮತ್ತು ಚಾಲಕ ಕೌತುಕ್ ಬಡಿಗೇರ ಎಂಬುವವರನ್ನು ಬಂಧಿಸಲಾಗಿದೆ.

ಪ್ರಕರಣ ಸಂಬಂಧ ಬೆಳಗಾವಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ್ ಮಾತನಾಡಿ, “ಆರೋಪಿ ಅಭಿಷೇಕ್ ಇನ್‌ಸ್ಟಾಗ್ರಾಂ ಮೂಲಕ ಓರ್ವ ಬಾಲಕಿಗೆ ಪರಿಚಯವಾಗಿದ್ದಾನೆ. ಸವದತ್ತಿಗೆ ಹೋಗುತ್ತಿದ್ದೇನೆ ನೀನು ಬಾ ಎಂದು ಬಾಲಕಿಗೆ ಪುಸಲಾಯಿಸಿದ್ದಾನೆ. ಈತನ ಮಾತು ನಂಬಿ, ನೊಂದ ಬಾಲಕಿ ತನ್ನ ಸ್ನೇಹಿತೆಯನ್ನ ಕರೆದುಕೊಂಡು, ಇಬ್ಬರೂ ಒಟ್ಟಾಗಿ ಹಾರೂಗೇರಿ ಬಸ್ ನಿಲ್ದಾಣದಕ್ಕೆ ಹೋಗಿದ್ದಾರೆ. ಅಲ್ಲಿಂದ ಅಭಿಷೇಕ್ ಬಾಲಕಿಯರನ್ನು ಎರ್ಟಿಗಾ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ಎರ್ಟಿಗಾ ಕಾರಿನಲ್ಲಿ ಮೂರೂ ಜನ ಆರೋಪಿಗಳಿದ್ದರು. ಸಂತ್ರಸ್ತ ಬಾಲಕಿಯರನ್ನು ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಮದ ಬಳಿಯ ಗುಡ್ಡಗಾಡು ಪ್ರದೇಶಕ್ಕೆ ಕರೆದುಕೊಂಡು ಹೋಗಿ ಜನವರಿ 3ರಂದು ಮಧ್ಯಾಹ್ನದ ವೇಳೆಗೆ ಗುಡ್ಡದಲ್ಲಿ ಬಾಲಕಿಯರ ಮೇಲೆ ಅ*ತ್ಯಾಚಾರವೆಸಗಿದ್ದಾರೆ” ಎಂದು ತಿಳಿಸಿದರು.

ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದ ಆರೋಪಿಗಳು ‘ಮುಂದಿನ ವಾರ ಗೋವಾಕ್ಕೆ ಬರಬೇಕು. ಇಲ್ಲವಾದಲ್ಲಿ ವಿಡಿಯೋ ಪಬ್ಲಿಶ್ ಮಾಡುತ್ತೇವೆ. ದೂರು ಕೊಟ್ಟರೆ ಕೊ*ಲೆ ಮಾಡುತ್ತೇವೆ’ ಎಂದು ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ಬಾಲಕಿಯರು ಮನೆಯಲ್ಲಿ ಈ ವಿಚಾರ ತಿಳಿಸಿದ್ದಾರೆ. ಬಳಿಕ, ಸಂತ್ರಸ್ತ ಬಾಲಕಿ ತಮ್ಮ ಸೋದರ ಸಂಬಂಧಿ ಜೊತೆಗೆ ಬಂದು ಜನವರಿ 13ರಂದು ಹಾರೂಗೇರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಕೊಟ್ಟ 24 ಗಂಟೆಯೊಳಗೆ ಇಬ್ಬರು ಆರೋಪಿಯನ್ನ ಬಂಧಿಸಲಾಗಿದೆ. ನಂತರ, ಮತ್ತೋರ್ವ ಆರೋಪಿಯನ್ನು ಬಂಧಿಸಲಾಗಿದೆ. “ಆರೋಪಿಗಳ ಹಿನ್ನಲೆಯನ್ನು ಪರಿಶೀಲನೆ ಮಾಡುತ್ತೇವೆ. ಇನ್‌ಸ್ಟಾಗ್ರಾಂನಲ್ಲಿ ಹುಡಗಿ ಹಾಕಿದ್ದ ರೀಲ್ಸ್ ಪಾಲೋ ಮಾಡುತ್ತಿದ್ದ. ಅವರ ಮೊಬೈಲ್​ಗಳನ್ನು ಜಪ್ತಿ ಮಾಡಿದ್ದು ಅದರಲ್ಲಿ ವಿಡಿಯೋಗಳು ಸಿಕ್ಕಿವೆ. ಗ್ಯಾಂಗ್ ರೇಪ್ ಪ್ರಕರಣ ಅಂತ ಕೇಸ್​ ದಾಖಲಿಸಿದ್ದೇವೆ” ಎಂದು ಮಾಹಿತಿ ನೀಡಿದರು.

LATEST NEWS

ಗಂಟೆಗಟ್ಟಲೆ ಕುಳಿತು ಕೆಲಸ ಮಾಡುವುದರಿಂದ ಬೆನ್ನುನೋವು ಶುರುವಾಗಿದೆಯಾ..? ಹಾಗಾದರೆ ಹೀಗೆ ಮಾಡಿ…!

Published

on

ತಂತ್ರಜ್ಞಾನವು ಮೊದಲಿಗಿಂತ ಕೆಲಸವನ್ನು ಸುಲಭಗೊಳಿಸಿದ್ದರೂ, ಕೆಲಸದ ಒತ್ತಡ ಮಾತ್ರ ಹೆಚ್ಚಾಗುತ್ತಲೇ ಇದೆ. ಕೆಲವೊಮ್ಮೆ ನೀವು ಕೆಲಸದ ವಿಚಾರವಾಗಿ ಗಂಟೆಗಟ್ಟಲೆ ಕುಳಿತುಕೊಳ್ಳಬೇಕಾಗಬಹುದು. ಇದು ಮೂಳೆಗಳ ಮೇಲೆ ಪರಿಣಾಮ ಬೀರುತ್ತದೆ. ಈ ಸಮಸ್ಯೆಗಳನ್ನು ತಡೆಗಟ್ಟಲು ಇಲ್ಲಿ ನೀಡಲಾಗಿರುವ ಸರಳ ವಿಧಾನಗಳನ್ನು ಅನುಸರಿಸಿ ನೋಡಿ.

1) ನೀವು ಗಂಟೆಗಟ್ಟಲೆ ಕುಳಿತರೆ ಅನಾರೋಗ್ಯಕ್ಕೆ ಒಳಗಾಗಬಹುದು. ಅನಾರೋಗ್ಯವನ್ನು ತಡೆಗಟ್ಟಲು ಪ್ರತಿ 30 ನಿಮಿಷಗಳಿಗೊಮ್ಮೆ ಸಣ್ಣ ವಿರಾಮ ತೆಗೆದುಕೊಳ್ಳಿ. ಕೆಲಸದ ನಡುವೆ ಇದನ್ನು ಮಾಡುವುದು ಸ್ವಲ್ಪ ಕಷ್ಟಕರವೆಂದು ತೋರಬಹುದು.ಆದರೆ ನಿಮ್ಮ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಸಣ್ಣ ಬ್ರೇಕ್ ನಲ್ಲಿ ಎದ್ದು ಓಡಾಡಿ.

2) ಕೆಲಸದ ನಡುವೆ ಹಗುರವಾಗಿ ಕೈಕಾಲುಗಳನ್ನು ಹಿಗ್ಗಿಸಿ. ಹೀಗೆ ಮಾಡುವುದರಿಂದ ಸ್ನಾಯುಗಳು ಹೊಂದಿಕೊಳ್ಳುವ ಮತ್ತು ಬಲಗೊಳ್ಳಲು ಸಹಾಯ ಮಾಡುತ್ತದೆ. ಕೆಲಸದ ನಡುವೆ ನಿಮ್ಮ ಕುತ್ತಿಗೆ, ಎದೆ, ಭುಜಗಳು ಮತ್ತು ಮಣಿಕಟ್ಟುಗಳನ್ನು ಹಿಗ್ಗಿಸಲು ಪ್ರಯತ್ನಿಸಿ.

3) ನೀವು ದಿನವಿಡೀ ಕುಳಿತರೆ, ದೇಹವನ್ನು ಆರೋಗ್ಯಕರವಾಗಿಡಲು ಕೆಲವು ವ್ಯಾಯಾಮಗಳನ್ನು ಮಾಡಿ. ಉದಾಹರಣೆಗೆ ಡೆಡ್ ಲಿಫ್ಟ್ ಗಳು, ಆಳವಾದ ಸ್ಮಾಟ್ ಗಳು ಅಥವಾ ಪುಶ್-ಅಪ್ ಗಳನ್ನು ಮಾಡಿ.

4) ಕಚೇರಿಯಲ್ಲಿ ಗಂಟೆಗಟ್ಟಲೆ ಕುಳಿತುಕೊಳ್ಳುವ ಜನರು ವ್ಯಾಯಾಮದ ಚೆಂಡುಗಳನ್ನು ಸಹ ಬಳಸಬಹುದು. ಇದು ನಿಮ್ಮ ಪ್ರಮುಖ ಸ್ನಾಯುಗಳನ್ನು ಬಲಪಡಿಸಲು ಮತ್ತು ಸ್ಥಾನೀಕರಣವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

5) ಕೆಲಸದ ಕಾರಣದಿಂದಾಗಿ ವಾಕಿಂಗ್ ಹೋಗಲು ನಿಮಗೆ ಸಮಯ ಸಿಗದಿದ್ದರೆ, ನಿಮ್ಮ ಕಚೇರಿಯ ಮುಂದೆ ಒಂದು ಕಿಲೋಮೀಟರ್ ದೂರದಲ್ಲಿ ಕಾರನ್ನು ಪಾರ್ಕ್ ಮಾಡಿ ನಂತರ ಅಲ್ಲಿಂದ ಕಚೇರಿಗೆ ನಡೆಯಿರಿ. ವಾಕಿಂಗ್ ಮಾಡಲು ತಜ್ಞರು ನೀಡುವ ಸಲಹೆ ಇದು. ಮನೆಯಿಂದ ಕೆಲಸ ಮಾಡುತ್ತಿದ್ದರೆ, ಕೆಲಸವನ್ನು ಪ್ರಾರಂಭಿಸುವ ಮೊದಲು 15 ನಿಮಿಷಗಳ ವಾಕಿಂಗ್ ಮಾಡಿ.

Continue Reading

LATEST NEWS

ಚಾಹಲ್ ದಾಖಲೆ ಮುರಿದು ಹೊಸ ದಾಖಲೆ ಬರೆದ ಅರ್ಶದೀಪ್ ಸಿಂಗ್

Published

on

ಮಂಗಳೂರು/ಕೋಲ್ಕತ್ತಾ : ಪ್ರವಾಸಿ ಇಂಗ್ಲೆಂಡ್ ವಿರುದ್ದದ ಟಿ20 ಸರಣಿಯಲ್ಲಿ ಭಾರತ ಶುಭಾರಂಭ ಮಾಡಿದೆ. ಕೋಲ್ಕತ್ತಾದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತವು ಏಳು ವಿಕೆಟ್ ಅಂತರದ ಗೆಲುವು ಸಾಧಿಸಿದೆ.

ಇಂಗ್ಲೆಂಡ್ ನೀಡಿದ 133 ರನ್ ಗುರಿ ಬೆನ್ನತ್ತಿದ ಭಾರತವು ಮೂರು ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 20 ಓವರ್ ಗಳಲ್ಲಿ 132 ರನ್‌ಗಳಿಗೆ ಆಲೌಟಾದರೆ, ಭಾರತವು ಅಭಿಷೇಕ್ ಶರ್ಮಾ ಸ್ಪೋಟಕ ಬ್ಯಾಟಿಂಗ್ ಸಹಾಯದಿಂದ 12.5 ಓವರ್‌ಗಳಲ್ಲಿ ಗುರಿ ತಲುಪಿತು.

ಇದನ್ನೂ ಓದಿ: ಮಹಾಕುಂಭ ಮೇಳದಲ್ಲಿ ಭಾಗಿಯಾದ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್

ಅರ್ಶದೀಪ್ ಸಿಂಗ್ ದಾಖಲೆ
ಇದೇ ಪಂದ್ಯದಲ್ಲಿ ಟೀಂ ಇಂಡಿಯಾದ ಎಡಗೈ ಪೇಸರ್ ಅರ್ಶದೀಪ್ ಸಿಂಗ್ ದಾಖಲೆ ಬರೆದರು. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದರು.

61 ಪಂದ್ಯವಾಡಿರುವ ಅರ್ಶದೀಪ್ ಸಿಂಗ್ 97 ವಿಕೆಟ್ ಕಿತ್ತಿದ್ದಾರೆ. ಈ ಹಿಂದೆ ಈ ದಾಖಲೆ ಯುಜುವೇಂದ್ರ ಚಾಹಲ್ ಹೆಸರಿನಲ್ಲಿತ್ತು. 80 ಪಂದ್ಯಗಳಲ್ಲಿ 96 ವಿಕೆಟ್‌ಗಳನ್ನು ಪಡೆದಿರುವ ಲೆಗ್ ಸ್ಪಿನ್ನರ್ ಯುಜಿ ಚಾಹಲ್, ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಪರ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.

110 ಪಂದ್ಯಗಳಲ್ಲಿ 91 ವಿಕೆಟ್‌ಗಳನ್ನು ಪಡೆದಿರುವ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಮೂರನೇ ಬೌಲರ್ ಆಗಿದ್ದಾರೆ.

 

Continue Reading

LATEST NEWS

ಸುಳ್ಳು ಸುದ್ದಿ ನಂಬಿ ಚಲಿಸುತ್ತಿರುವ ರೈಲಿನಿಂದ ನೆ*ಗೆದ 12 ಜನರ ದೇ*ಹ ಛಿ*ದ್ರ ಛಿ*ದ್ರ

Published

on

ಮಂಗಳೂರು/ಮುಂಬೈ: ರೈಲಿನಡಿ ಸಿಲುಕಿ 11 ಜನರ ದು*ರಂತವಾಗಿ ಸಾ*ವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಜಲಗಾಂವ್​​ನ ಪರಾಂಡ ನಿಲ್ದಾಣದಲ್ಲಿ ನಡೆದಿದೆ.

ರೈಲಿನಲ್ಲಿ ಬೆಂ*ಕಿ ಕಾಣಿಸಿಕೊಂಡ ವದಂತಿ ಹರಡಿತ್ತು. ಇದರಿಂದ ಹೆದರಿದ ಪ್ರಯಾಣಿಕರು ಚಲಿಸುತ್ತಿದ್ದ ರೈಲಿನಿಂದ ಜಿ*ಗಿದಿದ್ದರು. ಪಕ್ಕದ ಹಳಿ ಮೇಲೆ ನಿಂತಾಗ ಮತ್ತೊಂದು ರೈಲು ಡಿ*ಕ್ಕಿಯಾಗಿ ದು*ರಂತ ಸಂಭವಿಸಿ 11 ಜನ ಸಾ*ವನ್ನಪ್ಪಿದ್ದಾರೆ.

ಜಲಗಾಂವ್‌ನ ಪಚೋರಾ ರೈಲು ನಿಲ್ದಾಣದಲ್ಲಿ ಪುಷ್ಪಕ್ ಎಕ್ಸ್‌ಪ್ರೆಸ್‌ನಲ್ಲಿ ಬೆಂ*ಕಿ ಕಾಣಿಸಿಕೊಂಡಿದೆ ಎಂಬ ವದಂತಿ ಹರಡಿ ಗೊಂದಲ ಸೃಷ್ಟಿಯಾಯಿತು. ಹಾಗಾಗಿ ಪ್ರಯಾಣಿಕರು ರೈಲಿನ ಚೈನ್​ ಎಳೆದು ರೈಲು ನಿಲ್ಲಿಸಿ ಪಕ್ಕದ ಹಳಿಗೆ 30-40 ಜನ ಜಿಗಿದಿದ್ದಾರೆ. ಕೆಲವರು ದೂರ ಓಡಿಹೋದರೆ ಇನ್ನು ಕೆಲವರು ಪಕ್ಕದ ಹಳಿ ಮೇಲೆ ನಿಂತಿದ್ದರು. ಈ ವೇಳೆ ಮತ್ತೊಂದು ಹಳಿಯಲ್ಲಿ ಬರುತ್ತಿದ್ದ ಕರ್ನಾಟಕ ಎಕ್ಸ್​ಪ್ರೆಸ್ ರೈಲು ಡಿ*ಕ್ಕಿಯಾಗಿದೆ.

ಬ್ರೇಕ್‌ಗಳನ್ನು ಹಾಕುತ್ತಿದ್ದಂತೆ, ರೈಲಿನ ಚಕ್ರಗಳಿಂದ ಕಿ*ಡಿಗಳು ಹೊರಹೊಮ್ಮಿದವು. ಇದರಿಂದ ರೈಲಿನಲ್ಲಿ ಬೆಂ*ಕಿ ಕಾಣಿಸಿಕೊಂಡಿದೆ ಎಂಬ ವದಂತಿ ಹರಡಿತು. ಚಲಿಸುವ ರೈಲಿನಿಂದ ಜಿ*ಗಿದಿದ್ದರಿಂದ ಹಲವರಿಗೆ ಗಾ*ಯಗಳಾಗಿವೆ. ಗಾ*ಯಾಳು ಪ್ರಯಾಣಿಕರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಹತ್ತಿರದ ಗ್ರಾಮೀಣ ಆಸ್ಪತ್ರೆಗೆ ಸಾಗಿಸಲಾಯಿತು. ಕೂಡಲೇ ಮುಂಬೈ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

Continue Reading

LATEST NEWS

Trending

Exit mobile version