Connect with us

    UDUPI

    ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

    Published

    on

    ಉಡುಪಿ: ಸಮಗ್ರವಾಗಿ ಜೀರ್ಣೋದ್ದಾರಗೊಳ್ಳುತ್ತಿರುವ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮ ಕಲಶ ಪುಣ್ಯ ಉತ್ಸವದ ಕಾರ್ಯಕ್ರಮಗಳು ಏಪ್ರಿಲ್ ತಿಂಗಳ 1 ನೇ ತಾರೀಕಿನಿಂದ 15 ನೇ ತಾರೀಕಿನವರೆಗೆ ವಿಜೃಂಭಣೆಯಿಂದ ನಡೆಯಲಿದೆ.


    ಬ್ರಹ್ಮ ಕಲಶ ಪುಣ್ಯ ಉತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬ್ರಹ್ಮ ಕಲಶ ಪುಣ್ಯ ಉತ್ಸವ ಸಮಿತಿಯ ಅಧ್ಯಕ್ಷರಾದ ನಾಡೋಜ ಡಾ ಜಿ ಶಂಕರ್ ರವರ ಉಪಸ್ಥಿತಿಯಲ್ಲಿ ಜ್ಯೋತಿಷಿ ಮಾಧವನ್ ಪೊದುವಾಳರು ಬಿಡುಗಡೆಗೊಳಿಸಿದರು.


    ಈ ಸಂದರ್ಭದಲ್ಲಿ ದ.ಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ ಕೋಟ್ಯಾನ್, ಉಪಾಧ್ಯಕ್ಷರಾದ ಸುಭಾಸ್ಚಂದ್ರ ಕಾಂಚನ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಗುಂಡು ಬಿ ಅಮೀನ್, ಕ್ಷೇತ್ರ ಆಡಳಿತ ಸಮಿತಿಯ ಅಧ್ಯಕ್ಷರಾದ ವಾಸುದೇವ ಸಾಲ್ಯಾನ್,

    ಭುವನೇಂದ್ರ ಕಿದಿಯೂರ್, ಕ್ಷೇತ್ರದ ಅರ್ಚಕರಾದ ರಾಘವೇಂದ್ರ ಉಪಾಧ್ಯಾಯ ಮತ್ತು ವಿಷ್ಣುಮೂರ್ತಿ ಉಪಾಧ್ಯಾಯ,

    ಮಲ್ಪೆ ಮೀನುಗಾರರ ಸಂಘದ ದ ಅಧ್ಯಕ್ಷರಾದ ದಯಾನಂದ ಸುವರ್ಣ, ಮೋಹನ್ ಬೆಂಗ್ರೆ, ಶ್ರೀಮತಿ ಅಪ್ಪಿ ಎಸ್ ಸಾಲ್ಯಾನ್, ಸರಳಾ ಕಾಂಚನ್ ಮತ್ತಿರರು ಉಪಸ್ಥಿತರಿದ್ದರು.

    Click to comment

    Leave a Reply

    Your email address will not be published. Required fields are marked *

    LATEST NEWS

    ಮೈಕ್ ಪರ್ಮಿಷನ್ ವಿಚಾರವಾಗಿ ಉಡುಪಿಯ ಯಕ್ಷಗಾನದಲ್ಲಿ ಹೈಡ್ರಾಮ

    Published

    on

    ಉಡುಪಿ : ಯಕ್ಷಗಾನ ಎಂಬುವುದು ಕರ್ನಾಟಕದ ಪ್ರಸಿದ್ಧ ಆರಾಧನಾ ಕಲೆಗಳಲ್ಲಿ ಒಂದು. ಆದರೆ ಈಗ ಅದಕ್ಕೆ ಬ್ರೇಕ್‌ ಕಾಟ ಶುರುವಾಗಿದೆ. ‘ಮೈಕ್‌ಗೆ ಅನುಮತಿ ಪಡೆದಿಲ್ಲ’ ಎಂಬ ಕಾರಣಕ್ಕೆ ಕಾರ್ಕಳ ತಾಲೂಕಿನ ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿ ಶಿರ್ಲಾಲುವಿನಲ್ಲಿ ಘಟನೆ ನಡೆದಿದೆ. ಮುಂಡ್ಲಿಯ ಈಶ್ವರ ಯಕ್ಷಗಾನ ಮಂಡಳಿಯಿಂದ ಆಯೋಜನೆಗೊಂಡಿದ್ದ ಪ್ರದರ್ಶನದಲ್ಲಿ ಪೊಲೀಸರು ಈ ರೂಲ್ಸ್‌ ಜಾರಿಗೆ ಮುಂದಾಗಿದ್ದಾರೆ.

    ಅಜೆಕಾರು ಉಪನಿರೀಕ್ಷಕ ಶುಭಕರ್‌ ಅವರಿಂದ ರಾತ್ರಿ 10ರ ನಂತರ ಯಕ್ಷಗಾನ ಪ್ರದರ್ಶನಕ್ಕೆ ಆಕ್ಷೇಪ ವ್ಯಕ್ತವಾಗಿದೆ. 10 ಗಂಟೆ ನಂತರ ಧ್ವನಿವರ್ಧಕ ಬಳಸಿದ್ದಕ್ಕೆ ಯಕ್ಷಗಾನ ಪ್ರದರ್ಶನಕ್ಕೆ ತಡೆಯೊಡ್ಡಲಾಗಿದೆ. ಅಲ್ಲದೆ, ಆಯೋಜಕರನ್ನು ಅರೆಸ್ಟ್ ಮಾಡಲು ಕೂಡ ಪೊಲೀಸರು ಮುಂದಾಗಿದ್ದಾರೆ. ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗಲೇ ಪ್ರದರ್ಶನಕ್ಕೆ ತಡೆಯೊಡ್ಡಿದ್ದಾರೆ. ಈ ವೇಳೆ ಕಿಡಿಕಾರಿದ ಗ್ರಾಮಸ್ಥರು, ಇಡೀ ಗ್ರಾಮದ ಜನರನ್ನು ಅರೆಸ್ಟ್‌ ಮಾಡಿ ಎಂದು ಹೈಡ್ರಾಮಾ ನಡೆಸಿದ್ದಾರೆ. ಕಾರ್ಯಕ್ರಮ ನಿಲ್ಲಿಸದಿದ್ದರೆ ಯಕ್ಷಗಾನ ಮಂಡಳಿ ಅಧ್ಯಕ್ಷನನ್ನು ಬಂಧಿಸುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ ವೇಳೆ ಗ್ರಾಮಸ್ಥರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ.

    ಎಫ್ಐಆರ್ ತೋರಿಸುವಂತೆ ದೂರು ದಾಖಲಾದ ಬಗ್ಗೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಗ್ರಾಮಸ್ಥರ ಆಕ್ರೋಶ ವ್ಯಕ್ತವಾದ ಹಿನ್ನೆಲೆ ಪೊಲೀಸರು ಸ್ಥಳದಿಂದ ತೆರಳಿದ್ದಾರೆ. ಜನವರಿ 10 ರಂದು ಪರವಾನಿಗೆಗೆ ಪಿಡಿಒ ಬಳಿ ಆಯೋಜಕರು ತೆರಳಿದ್ದು ವೇಳೆ ಮೂರು ದಿನಗಳ ರಜೆಯ ಕಾರಣಕ್ಕೆ ಅನುಮತಿ ದೊರಕಿರಲಿಲ್ಲ. ಜನವರಿ 13ರಂದು ಅನುಮತಿಗಾಗಿ ಆಯೋಜಕರು ಅಜೆಕಾರು ಠಾಣೆಗೆ ಹೋಗಿದ್ದರು.  ಪಂಚಾಯತ್ ಅನುಮತಿ ತರುವಂತೆ ಪೊಲೀಸರ ತಾಕಿತು ಮಾಡಿದ್ದಾರೆ. ಈ ಘಟನೆಗೆ ಸಂಬಧಪಟ್ಟಂತೆ ಯಕ್ಷಗಾನ ಮಂಡಳಿ ಅಧ್ಯಕ್ಷ ಸದಾನಂದ ಶೆಟ್ಟಿ ವಿರುದ್ಧ ಪ್ರಕರಣ ದಾಖಲಾಗಿದೆ. ಮಹಾಲಕ್ಷ್ಮಿ ಸೌಂಡ್ಸ್ ಮುಖ್ಯಸ್ಥ ಅಪ್ಪು ವಿರುದ್ಧವೂ ಕೇಸ್‌ ಹಾಕಲಾಗಿದೆ. ಸುಪ್ರೀಂ ಕೋರ್ಟ್ ಆದೇಶದ ಕಟ್ಟುನಿಟ್ಟಿನ ಕ್ರಮಕ್ಕೆ ಜಾರಿಗೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಡಾ .ಅರುಣ್ ಮುಂದಾಗಿದ್ದಾರೆ. ಆದೇಶ ಪಾಲಿಸದಿದ್ದರೆ ಆಯಾ ಠಾಣಾಧಿಕಾರಿ ಮೇಲೆ ಕ್ರಮ ಕೈಗೊಳ್ಳುವುದಾಗಿ ಎಸ್‌ಪಿ ಎಚ್ಚರಿಸಿದ್ದಾರೆ. ಇದರಿಂದಾಗಿ ಪೊಲೀಸರಿಗೆ ಯಕ್ಷಗಾನದ ವಿರುದ್ಧ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ.

    Continue Reading

    LATEST NEWS

    ಸೂಜಿ ಮದ್ದು ಪಡೆದ ಬಳಿಕ ಜ್ವರ ಬಂದು ಸಾ*ವನ್ನಪ್ಪಿದ ಕಂದಮ್ಮ

    Published

    on

    ಮಂಗಳೂರು/ಕೋಟ: ಸೂಜಿ ಮದ್ದು ಹಾಕಿಸಿದ ಬಳಿಕ ಜ್ವರದಿಂದ ಎರಡೂವರೆ ತಿಂಗಳ ಮಗು ಅ*ಸ್ವ*ಸ್ಥಗೊಂಡು ಸಾ*ವನ್ನಪ್ಪಿದ ಘಟನೆ ಕೋಟದ ಯಡಾಡಿ-ಮತ್ಯಾಡಿಯ ನಾಲ್ತೂರು ಗುಡ್ಡೆಯಂಗಡಿಯಲ್ಲಿ ನಿನ್ನೆ (ಜ. 13) ಸಂಭವಿಸಿದೆ.

    ಗುಡ್ಡೆಯಂಗಡಿ ನಿವಾಸಿ ಗುರುರಾಜ್‌ ಗಂಡು ಮಗುವಿಗೆ ಜ. 10 ರಂದು ಎರಡೂವರೆ ತಿಂಗಳ ಇಂಜೆಕ್ಷನ್‌ ಕೊಡಿಸಲಾಗಿತ್ತು. ಸಂಜೆ ವೇಳೆಗೆ ಜ್ವರ ಬಂದಿದ್ದು ಔಷಧ ನೀಡಿದಾಗ ಸ್ವಲ್ಪ ಕಡಿಮೆ ಆಗಿತ್ತು.

    ಇದನ್ನೂ ಓದಿ : ಸಚಿವರು ತೆರಳುತ್ತಿದ್ದ ಕಾರು ಅ*ಪಘಾ*ತ ; ಆಸ್ಪತ್ರೆಗೆ ದಾಖಲು

    ಜ. 13ರಂದು ಮತ್ತೆ ಜ್ವರ ಉಲ್ಬಣಿಸಿದ್ದರಿಂದ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮಗು ಮೃ*ತಪಟ್ಟಿದೆ. ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    LATEST NEWS

    ಉಡುಪಿ : ಡ್ರೈವರ್ ಇಲ್ಲದೆ ಚಲಿಸಿದ ಬಸ್ ಕಾರಿಗೆ ಡಿ*ಕ್ಕಿ

    Published

    on

    ಉಡುಪಿ : ಡ್ರೈವರ್‌ ಇಲ್ಲದೆ ಬಸ್ಸೊಂದು ಚಲಾಯಿಸಿ ನಿಂತಿದ್ದ ಕಾರಿಗೆ ಡಿ*ಕ್ಕಿಹೊಡೆದ ಘಟನೆ ಇಂದು (ಜ.13) ಬೆಳಿಗ್ಗೆ ಕುಂದಾಪುರ ಹೊರವಲಯ ಹಂಗಲೂರು ಎಂಬಲ್ಲಿ ನಡೆದಿದೆ.

    ಡಿಪೋದಲ್ಲಿ ನಿಲ್ಲಿಸಿದ್ದ ಖಾಸಗೊ ಬಸ್ ಚಾಲಕನಿಲ್ಲದೆಯೇ ಚಲಾಯಿಸಿ ಎರಡು ಸರ್ವೀಸ್ ರೋಡ್ ಹಾಗೂ ಹೆದ್ದಾರಿ ಬ್ಯಾರಿಕೇಡ್ ದಾಟಿ ಹೋಟೆಲೊಂದರ ಮುಂದೆ ನಿಲ್ಲಿಸಿದ್ದ ಕಾರಿಗೆ ಸರಿಸುಮಾರು ಬೆಳಿಗ್ಗೆ 7 ಗಂಟೆಗೆ ಡಿ*ಕ್ಕಿ ಹೊಡೆದು ನಿಂತಿದೆ.

    ಬಸ್ ಶುಚಿಗೊಳಿಸಿ ಸಿಬ್ಬಂದಿಗಳು ಬಸ್ಸಿಂದ ಇಳಿದಿದ್ದರು. ಇದಾದ ಬಳಿಕ ಡಿಪೋದಿಂದ ಬಸ್ಸು ಮುಂದಕ್ಕೆ ಚಲಿಸಿ ಸರ್ವೀಸ್ ರದ್ತೆಗೆ ಅಡ್ಡಲಾಗಿದ್ದ ಬ್ಯಾರಿಕೇಡ್ ಮುರಿದು ಸಾಗಿದೆ. ಹೆದ್ದಾರಿ ಹಾಗೂ ಸರ್ವೀಸ್ ರಸ್ತೆಯಲ್ಲಿ ವಾಹನಗಳು ಕಮ್ಮಿಯಿದ್ದರಿಂದ ಜೊತೆಗೆ ಪಾದಚಾರಿಗಳ ಓಡಾಟ ಅಷ್ಟಾಗಿ ಇರದ ಕಾರಣ ಭಾರೀ ಅ*ವಘಡ ತಪ್ಪಿದೆ.

    ಕುಂದಾಪುರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ

    Continue Reading

    LATEST NEWS

    Trending