Tuesday, July 27, 2021

ಮಾರ್ಕೆಟ್‌ನಲ್ಲಿ ತರಕಾರಿ ಫ್ರೆಶ್‌ ಅಂತ ತಗೋಳ್ತೀರಾ ಎಚ್ಚರಿಕೆ..!

ಮಂಗಳೂರು: ಮಾರುಕಟ್ಟೆ ತರಕಾರಿಗಳನ್ನು ಕೊಳ್ಳುವಾಗ ನಾವು ಫ್ರೆಶ್ ಇದ್ದರಷ್ಟೇ ಕೊಳ್ಳುತ್ತೇವೆ. ಸೊಪ್ಪುಗಳು ತಾಜಾ ಇದ್ದರೆ ಒಂದು ಕಟ್ಟು ಕೊಳ್ಳೋಕೆ ಹೋದವರು ಎರಡು ಕಟ್ಟು ತೆಗೆದುಕೊಂಡು ವ್ಹಾ ಇವತ್ತು ಫ್ರೆಶ್ ಸೊಪ್ಪು ಸಿಕ್ಕಿತು ಎಂದು ಖುಶಿ ಪಡುತ್ತೇವೆ.

ಆದರೆ ಈ ತಾಜಾ ಸೊಪ್ಪುಗಳ ಹಿಂದಿನ ಅಸಲಿ ಕಹಾನಿಯನ್ನು ನೋಡಿದ್ರೆ. ಇನ್ಮೇಲೆ ಸೊಪ್ಪು ಸಹವಾಸ ಬೇಡ ಎಂದು ನೀವು ಅಂದುಕೊಳ್ಳಬಹುದು. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಮಾರ್ಕೆಟ್ ನಲ್ಲಿ ಸೊಪ್ಪನ್ನು ತಾಜಾವಾಗಿರಿಸಲು ಅವರು ಅದನ್ನು ಯಾವ ರೀತಿ ಕೆಮಿಕಲ್ ನಲ್ಲಿ ಅದ್ದುತ್ತಾರೆ. ಅದ್ದಿದ ಬಳಿಕ ಕೆಲನವೇ ನಿಮಿಷಗಳಲ್ಲಿ ಬಾಡ ಬೆಂಡಾಗಿ ಹೋಗಿದ್ದ ಸೊಪ್ಪು ಯಾವ ರೀತಿ ಫ್ರೆಶ್ ಆಗುತ್ತೆ ಅನ್ನೋದನ್ನು ನೋಡಬಹುದು.

ನಿಜಕ್ಕೂ ಈ ವಿಡಿಯೋ ನೋಡಿದ್ಮೇಲೆ ಮಾರುಕಟ್ಟೆಯಲ್ಲಿ ಸೊಪ್ಪು, ತರಕಾರಿ, ಹಣ್ಣುಗಳನ್ನು ಖರೀದಿಸುವಾಗ ನಾವು ಹತ್ತಾರು ಬಾರಿ ಯೋಚಿಸುವಂತಾಗಿದೆ. ದುಡ್ಡಿನ ಆಸೆಗೆ ಮನುಷ್ಯರು ಇನ್ನೊಬ್ಬರ ಜೀವದ ಜೊತೆ ಹೇಗೆಲ್ಲಾ ಆಟ ಆಡುತ್ತಾರೆ ಅನ್ನೋದಕ್ಕೆ ಸಾಕ್ಷಿಯಂತಿದೆ ಈ ವಿಡಿಯೋ..

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ: ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..! 

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..!  ಮಂಗಳೂರು: ಟೆರೇಸ್ ನಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ವಿಟ್ಲದ ಕೇಪು ಎಂಬಲ್ಲಿ...