DAKSHINA KANNADA
ಪ್ರಧಾನಿ ಮೋದಿ ಜನ್ಮದಿನಾಚರಣೆ ವಿವೇಕ್ ಟ್ರೇಡರ್ಸ್ ನಿಂದ 1 ತಿಂಗಳಿಗಾಗುವಷ್ಟು ಆಯುಷ್ ಕ್ವಾಥ್ ಚೂರ್ಣ ಮಾತ್ರೆ ಉಚಿತ
Published
4 years agoon
By
Adminಪ್ರಧಾನಿ ಮೋದಿ ಜನ್ಮದಿನಾಚರಣೆ ವಿವೇಕ್ ಟ್ರೇಡರ್ಸ್ ನಿಂದ 1 ತಿಂಗಳಿಗಾಗುವಷ್ಟು ಆಯುಷ್ ಕ್ವಾಥ್ ಚೂರ್ಣ ಮಾತ್ರೆ ಉಚಿತ..!
ಮಂಗಳೂರು : ಪ್ರಧಾನಿ ನರೇಂದ್ರ ಮೋದಿ ಜನ್ಮದಿನಾಚರಣೆ ಹಿನ್ನಲೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಯುಷ್ ಕ್ವಾಥ್ ಚೂರ್ಣ ಮಾತ್ರೆಯನ್ನು ಗ್ರಾಹಕರಿಗೆ ಮಂಗಳೂರಿನ ವಿವೇಕ ಟ್ರೇಡರ್ಸ್ ಉಚಿತವಾಗಿ ಹಂಚಲಿದೆ.
ಸೆಪ್ಟೆಂಬರ್ 17 ರಂದು ಮೋದಿಯವರ ಜನ್ಮದಿನ ಹಿನ್ನಲೆ ಈ ಮಂಗಳೂರಿನ ಆಯುರ್ವೇದ ಉತ್ಪನ್ನಗಳ ಮಳಿಗೆ ವಿವೇಕ ಟ್ರೇಡರ್ಸ್ ತನ್ನ ಗ್ರಾಹಕರಿಗೆ 1 ತಿಂಗಳಿಗಾಗುಷ್ಟು ಆಯುಷ್ ಕ್ವಾಥ್ ಚೂರ್ಣ ಮಾತ್ರೆ ಯನ್ನು ಸಂಪೂರ್ಣ ಉಚಿತವಾಗಿ ವಿತರಿಸಲಿದೆ.
ವಿಶ್ವಗುರು ಭಾರತದ ನಿರ್ಮಾತೃ, ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜಿಯವರು ನಮ್ಮ ದೇಶ ಕೊರೊನಾ ವಿರುದ್ಧ ಯುದ್ಧ ಸಾರಿರುವ ಈ ಹಂತದಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನ ಆರೋಗ್ಯ ರಕ್ಷಣೆಗಾಗಿ ಕಳೆದು ಆರೇಳು ತಿಂಗಳುಗಳಿಂದ ಊಟ, ನಿದ್ದೆಯ ಪರಿವೇ ಇಲ್ಲದೇ ಅವಿರತವಾಗಿ ಶ್ರಮಿಸುತ್ತಿದ್ದಾರೆ.
ಅವರ ಈ ಸಂಕಲ್ಪದಲ್ಲಿ ದೇಶದ ಜವಾಬ್ದಾರಿಯುತ ಸಂಸ್ಥೆಯಾಗಿ ನಾಡಿನ ಖ್ಯಾತ ಆಯುರ್ವೇದ ಉತ್ಪನ್ನಗಳ ಮಳಿಗೆ ವಿವೇಕ ಟ್ರೇಡರ್ಸ್ ಇದರ ಆಯುರ್ವೇದ ಬಿಡಿ ಉತ್ಪನ್ನಗಳ ಮಳಿಗೆ ಆಯುರ್ ವಿವೇಕ್ ಕೂಡ ಕೈ ಜೋಡಿಸಲು ನಿರ್ಧರಿಸಿದೆ.
ಇದೇ ಸೆಪ್ಟೆಂಬರ್ 17 ರಂದು ನರೇಂದ್ರ ಮೋದಿಜಿಯವರ ಜನ್ಮದಿನ. ಅಂದು ನಮ್ಮ ಗ್ರಾಹಕರಿಗೆ ಆರೋಗ್ಯಭಾಗ್ಯದ ಸಂಕಲ್ಪದೊಂದಿಗೆ ಒಂದು ತಿಂಗಳು ಮನೆಮಂದಿ, ವಯಸ್ಸಿನ ಭೇದವಿಲ್ಲದೇ, ಸೈಡ್ ಎಫೆಕ್ಟ್ ತೊಂದರೆ ಇಲ್ಲದೆ, ಸೇವಿಸಬಹುದಾದ ಆಯುಷ್ ಕ್ವಾಥ್ ಚೂರ್ಣ ಮಾತ್ರೆಯನ್ನು ಒಂದು ತಿಂಗಳಿಗೆ ಆಗುವಷ್ಟು ಉಚಿತವಾಗಿ ನೀಡಲು ಸಂಸ್ಥೆಯ ಪ್ರವರ್ತಕರು ಯೋಜನೆ ಹಾಕಿದ್ದಾರೆ.
ರೋಗ ನಿರೋಧಕ ಶಕ್ತಿಯಿಂದಲೇ ತುಂಬಿರುವ ಭಾರತದ ಆಯುಷ್ ಇಲಾಖೆ ಅಂಗೀಕರಿಸಿದ ಆಯುಷ್ ಕ್ವಾಥ್ ಚೂರ್ಣ ಶುಂಠಿ, ಕರಿಮೆಣಸು, ತುಳಸಿ, ತ್ವಕ್ ಮಿಶ್ರಣಗಳ ಔಷಧವೂ ಆಗಿದೆ. ನಮ್ಮ ಗ್ರಾಹಕರ ಆರೋಗ್ಯವನ್ನು ಆದ್ಯತೆಯಲ್ಲಿಟ್ಟು ನಮ್ಮ ಸಂಸ್ಥೆ ಆಯುರ್ ವಿವೇಕ್ ಉಚಿತವಾಗಿ ನೀಡಲಿದೆ.
ಆಯುಷ್ ಕ್ವಾಥ್ ಚೂರ್ಣ ಮಾತ್ರೆಯನ್ನು ಬೆಳಗ್ಗೆ ಮತ್ತು ರಾತ್ರಿ ಒಂದು ಗ್ಲಾಸು ಕುದಿಸಿದ ನೀರಿನಲ್ಲಿ ಸೇರಿಸಿ ಕರಗಿಸಿ ಸಿಹಿಗೆ ಬೇಕಾದಲ್ಲಿ ಬೆಲ್ಲದ ಮಿಶ್ರಣ ಬೆರೆಸಿ ನಿಂಬೆರಸ ಒಂದೆರಡು ಹನಿ ಸೇರಿಸಿ ದಿನನಿತ್ಯ ಎರಡು ಹೊತ್ತು ಸೇವಿಸಬಹುದಾಗಿದೆ.
ಈ ಔಷಧಗಳ ನಿರಂತರ ಸೇವನೆಯಿಂದ Antivirus Antioxidant Antibiotic ಗುಣಗಳು ಇರುವುದರಿಂದ ಹಲವು ಖಾಯಿಲೆಗಳಿಂದ ದೇಹವನ್ನು ಆರೋಗ್ಯವಾಗಿಡಲು ವೈರಾಣು ವೈರಸ್ ಸಂಬಂಧಿತ ಖಾಯಿಲೆಗಳಿಂದ ದೇಹವನ್ನು ಸುರಕ್ಷಿತವಾಗಿಡಲು,ಶೀತ ನೆಗಡಿ ಕಫ ವೈರಲ್ ಜ್ವರಗಳಿಂದ ದೂರವಿರಲು ಶ್ವಾಸಕೋಶದ ಆರೋಗ್ಯಕ್ಕೆ ಸಹಾಯಕಾರಿ..
DAKSHINA KANNADA
ಮಂಗಳೂರು : ನ್ಯೂ ಇಯರ್ ಶುಭಾಶಯಗಳ ಲಿಂಕ್ ಓಪನ್ ಮಾಡುವಾಗ ಇರಲಿ ಎಚ್ಚರ
Published
12 hours agoon
30/12/2024ಮಂಗಳೂರು : ಸೈಬರ್ ವಂಚಕರು ಹೊಸ ವರ್ಷದ ಸಂದರ್ಭ ಬಳಸಿಕೊಂಡು ವಂಚಿಸುವ ಸಾಧ್ಯತೆ ಇದೆ. ಹಾಗಾಗಿ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮನವಿ ಮಾಡಿದ್ದಾರೆ.
2025ನೇ ಹೊಸ ವರ್ಷಕ್ಕೆ ಶುಭಾಶಯವನ್ನು ಕೋರುವ ಲಿಂಕ್‌ಗಳನ್ನು ಎಪಿಕೆ ಫೈಲ್‌ಗಳಲ್ಲಿ (APK) ಮೊಬೈಲ್‌ಗೆ ಕಳುಹಿಸಿ ಮೊಬೈಲ್‌ನ್ನು ಹ್ಯಾಕ್ ಮಾಡುವ ಸಾಧ್ಯತೆ ಇದೆ. ಮೊಬೈಲ್ ಹ್ಯಾಕ್ ಮಾಡಿದ ಅನಂತರ ಆ ಮೊಬೈಲ್‌ನಿಂದ ವಾಟ್ಸ್‌ಆ್ಯಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಹಾನಿಕಾರಕ ಲಿಂಕ್ ಮತ್ತು ಎಪಿಕೆ ಫೈಲ್‌ಗಳನ್ನು ದೊಡ್ಡ ಮಟ್ಟದಲ್ಲಿ ಶೇರ್ ಮಾಡುವ ಸಾಧ್ಯತೆ ಇರುತ್ತದೆ. ಸಾರ್ವಜನಿಕರು ಈ ರೀತಿಯ ಹೊಸ ವರ್ಷದ ಶುಭಾಶಯ ಕೋರುವ ಯಾವುದೇ ಎಪಿಕೆ ಫೈಲ್‌ಗಳನ್ನು ವಾಟ್ಸ್‌ಆ್ಯಪ್ ಸಹಿತ ಸಾಮಾಜಿಕ ಜಾಲತಾಣದಿಂದ ಸ್ವೀಕರಿಸಿಕೊಂಡರೆ ಅದನ್ನು ಕೂಡಲೇ ಡಿಲೀಟ್ ಮಾಡಬೇಕು. ಒಂದು ವೇಳೆ ಅಂತಹ ಎಪಿಕೆ ಫೈಲ್‌ಗಳನ್ನು ಯಾವುದೇ ವಾಟ್ಸ್‌ಆ್ಯಪ್ ಗ್ರೂಪ್‌ಗಳಿಗೆ ಪರಿಚಿತ ವಾಟ್ಸ್‌ಆ್ಯಪ್ ಸಂಖ್ಯೆಯಿಂದಲೇ ಪೋಸ್ಟ್ ಮಾಡಿದ್ದರೆ ಅಂತಹ ಗ್ರೂಪ್‌ನ ಅಡ್ಮಿನ್‌ಗಳು ಫೈಲ್‌ಗಳನ್ನು ಡಿಲೀಟ್ ಮಾಡಬೇಕು.
ಯಾವುದೇ ಸೈಬರ್ ಅಪರಾಧಕ್ಕೆ ಒಳಗಾದರೆ ಕೂಡಲೇ 1930ಗೆ ಕರೆ ಮಾಡಬೇಕು ಅಥವಾ www.cybercrime.gov.in ನಲ್ಲಿ ದೂರು ಸಲ್ಲಿಸುವಂತೆ ಸೂಚಿಸಿದ್ದಾರೆ.
DAKSHINA KANNADA
ಮೂಡುಬಿದ್ರೆ : ಆಯತಪ್ಪಿ ಬಸ್ಸಿನಿಂದ ಪೊದೆಗೆ ಬಿ*ದ್ದ ವಿದ್ಯಾರ್ಥಿ
Published
12 hours agoon
30/12/2024ಮೂಡುಬಿದ್ರೆ : ಚಲಿಸುತ್ತಿದ್ದ ಖಾಸಗಿ ಬಸ್‌ನ ಬಾಗಿಲಲ್ಲಿ ನಿಂತಿದ್ದ ಕಾಲೇಜು ವಿದ್ಯಾರ್ಥಿಯೊಬ್ಬ ನಿಯಂತ್ರಣ ತಪ್ಪಿ ಪೊದೆಗೆ ಬಿ*ದ್ದ ಘಟನೆ ಇಂದು (ಡಿ.30) ಮುಂಜಾನೆ ಮೂಡುಬಿದ್ರೆ ಸಮೀಪ ತೊಡಾರಿನ ಖಾಸಗಿ ಕಾಲೇಜು ಬಳಿ ಸಂಭವಿಸಿದೆ.
ಇತ್ತೀಚಿನ ದಿನಗಳಲ್ಲಿ ಬಸ್ಸಿನಿಂದ ಬಿದ್ದು ಮೃ*ತಪಡುತ್ತಿರುವ ಘಟನೆ ಹೆಚ್ಚಾಗಿ ನಡೆಯುತ್ತಿವೆ. ಬಸ್ ಚಾಲಕರು, ನಿರ್ವಾಹಕರು ಎಷ್ಟೇ ಎಚ್ಚರಿಕೆ ನೀಡಿದರೂ ಅದನ್ನು ನಿರ್ಲಕ್ಷ್ಯಿಸಿ ತಮ್ಮಿಷ್ಟದಂತೆ ನಡೆದುಕೊಳ್ಳುವ ಮೂಲಕ ಯುವ ಜನಾಂಗ ಹೆಚ್ಚಿನ ಅ*ನಾಹುತಗಳನ್ನು ತಂದೊಡ್ಡುತ್ತಿದೆ. ಇದೀಗ ನಡೆದಿರುವ ಘಟನೆಯೂ ಅಂತಹದ್ದೇ ಆಗಿದ್ದು, ಅದೃಷ್ಟವಶಾತ್ ಬಸ್ಸಿಂದ ಬಿದ್ದ ವಿದ್ಯಾರ್ಥಿ ಪ್ರಾ*ಣಾಪಾ*ಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.
ಕಾರ್ಕಳ-ಮೂಡುಬಿದರೆ-ಮಂಗಳೂರು ನಡೆವೆ ಸಂಚರಿಸುವ ಖಾಸಗಿ ಬಸ್‌ನಲ್ಲಿ ತೋಡಾರಿನ ಕಾಲೇಜು ವಿದ್ಯಾರ್ಥಿಯೊಬ್ಬ ಕಾಲೇಜಿಗೆ ಬರುತ್ತಿರುವ ವೇಳೆ ತನ್ನ ನಿಲ್ಧಾಣ ಬರುವ ಮುನ್ನವೇ ಇಳಿಯುವ ಗಡಿಬಿಡಿಯಲ್ಲಿ ಬಾಗಿಲ ಬಳಿ ಬಂದು ನಿಂತಿದ್ದ. ಈ ವೇಳೆ ರಸ್ತೆಯ ತಿರುವೊಂದರಲ್ಲಿ ನಿ*ಯಂತ್ರಣ ಕಳೆದುಕೊಂಡ ವಿದ್ಯಾರ್ಥಿ ಪೊದೆಗೆ ಬಿ*ದ್ದಿದ್ದಾನೆ. ಬಿದ್ದ ರಭಸಕ್ಕೆ ಮುಖಕ್ಕೆ ಗಾ*ಯವಾಗಿತ್ತು. ಕೂಡಲೇ ಬಸ್ ನಿರ್ವಾಹಕ ಸ್ಥಳೀಯರ ಸಹಕಾರದೊಂದಿಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಸಿನಲ್ಲಿದ್ದ ಉಳಿದ ಪ್ರಯಾಣಿಕರಿಗೆ ತಕ್ಷಣವೇ ಬದಲಿ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಯ ಜೀ*ವಕ್ಕೆ ಯಾವುದೇ ತೊಂ*ದರೆಯಿಲ್ಲ ಎಂದು ವೈದ್ಯರು ಪರಿಶೀಲಿಸಿ ತಿಳಿಸಿದ್ದಾರೆ. ಘಟನೆಯ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
DAKSHINA KANNADA
ಮಂಜನಾಡಿ ಗ್ಯಾಸ್ ಸ್ಪೋ*ಟ ಪ್ರಕರಣ : ಮತ್ತೋರ್ವ ಬಾಲಕಿ ಸಾ*ವು, ಕುಟುಂಬಕ್ಕೆ ಯು.ಟಿ.ಖಾದರ್ ಸಾಂತ್ವನ
Published
1 day agoon
29/12/2024By
NEWS DESK4ಉಳ್ಳಾಲ : ಡಿಸೆಂಬರ್ 8 ರಂದು ಉಳ್ಳಾಲದ ಮಂಜನಾಡಿಯಲ್ಲಿ ನಡೆದಿದ್ದ ಗ್ಯಾಸ್ ಸ್ಫೋ*ಟ ಪ್ರಕರಣದಲ್ಲಿ ಸಾ*ವಿನ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ರಾತ್ರಿ ಮನೆಯವರು ಮಲಗಿದ್ದ ವೇಳೆ ನಡೆದಿದ್ದ ಗ್ಯಾಸ್ ಸ್ಪೋ*ಟದಿಂದ ತಾಯಿ ಹಾಗೂ ಮೂವರು ಮಕ್ಕಳು ಗಂಭೀ*ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಡಿಸೆಂಬರ್ 13 ರಂದು ತಾಯಿ ಖುಬ್ರಾ ಮೃ*ತಪಟ್ಟಿದ್ದರೆ, ಡಿಸೆಂಬರ್ 26 ರಂದು ಹಿರಿಯ ಪುತ್ರಿ ಝುಲೇಖ ಮೆಹದಿಯಾ ಇಹಲೋಕ ತ್ಯಜಿಸಿದ್ದರು.
ಇದೀಗ ಕೊನೆಯ ಪುತ್ರಿ 9 ವರ್ಷ ಪ್ರಾಯದ ಫಾತಿಮತ್ ಮಾಯಿಝ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃ*ತಪಟ್ಟಿದ್ದಾರೆ. ಇನ್ನೊಂದು ಹೆಣ್ಣು ಮಗು ಮಝಿಯಾಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಯು.ಟಿ.ಖಾದರ್ ಸಾಂತ್ವನ:
ಗಾ*ಯಾಳು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಸ್ಪೀಕರ್ ಯು.ಟಿ ಖಾದರ್ ಭೇಟಿ ನೀಡಿದ್ದಾರೆ. ಮನೆಯಲ್ಲಿ ಇದ್ದ ಹೆಚ್ಚುವರಿ ಗ್ಯಾಸ್ ಸಿಲಿಂಡರ್‌ನಿಂದ ಗ್ಯಾಸ್ ಸೋರಿಕೆ ಆಗಿ ಈ ಸ್ಪೋ*ಟ ಸಂಭಿಸಿದೆ ಎಂದು ಮೇಲ್ನೋಟಕ್ಕೆ ಗೊತ್ತಾಗಿತ್ತು. ಗ್ಯಾಸ್ ಏಜನ್ಸಿ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ : 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಿಸಿದ ಬುಮ್ರಾ !
ಘಟನೆ ನಡೆದ ಮನೆಗೆ ಸ್ಪೀಕರ್ ಖಾದರ್ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಈ ಘಟನೆಯ ಪರಿಹಾರದ ವಿಚಾರವಾಗಿ ಯಾರೂ ರಾಜಕೀಯ ಮಾಡಬಾರದು ಅಂತ ಮನವಿ ಮಾಡಿದ್ದಾರೆ. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗಿದೆ . ಚಿಕಿತ್ಸೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನೂ ಮಾಡಲಾಗಿದೆ ಎಂದು ಖಾದರ್ ಹೇಳಿದ್ದಾರೆ.
LATEST NEWS
ಕರಾವಳಿ ಉತ್ಸವ ಪ್ರಯುಕ್ತ ಜ.4, 5 ರಂದು ಕದ್ರಿ ಪಾರ್ಕ್ ನಲ್ಲಿ ಶ್ವಾನ ಪ್ರದರ್ಶನ, ಕಾರ್- ಬೈಕ್ ಎಕ್ಸ್ಪೊ
ಅಯ್ಯಪ್ಪ ಮಾಲಾಧಾರಿಗಳು ಕಪ್ಪು ಬಟ್ಟೆ ಯಾಕೆ ಧರಿಸುತ್ತಾರೆ ಗೊತ್ತಾ?
ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಹಗ್ಗ ತುಂಡಾಗಿ ಬಿದ್ದು ಸಾವು
ಮೀನುಗಾರಿಕೆಗೆ ತೆರಳಿದ್ದ ಇಬ್ಬರು ಸಮುದ್ರಪಾಲು, ಓರ್ವನ ರಕ್ಷಣೆ
ದಕ್ಷಿಣ ಕೊರಿಯಾದ ವಿಮಾನ ಪತನಕ್ಕೆ ಕಾರಣ ಬಹಿರಂಗ; ಬದುಕುಳಿದ ಇಬ್ಬರು ಹೇಗಿದ್ದಾರೆ ?
ಮದುವೆಗೆ ಹೋಗುವಾಗ ನದಿಗೆ ಟ್ರಕ್ ಬಿದ್ದು ಘೋರ ದುರಂತ : ಮಕ್ಕಳು ಸೇರಿ 60 ಮಂದಿ ಸಾವು
Trending
- DAKSHINA KANNADA3 days ago
ದಿ।ಮನಮೋಹನ್ ಸಿಂಗ್ ಸಹಿ ಇರುವ ರೂ 1ರ ನೋಟು ರೂ.100 ಕ್ಕೆ ಮಾರಾಟ…!
- FILM6 days ago
ಆ ಒಂದು ದೃಶ್ಯದಿಂದ ಪುಷ್ಪ 2 ಚಿತ್ರಕ್ಕೆ ಮತ್ತೆ ಸಂಕಷ್ಟ!
- FILM5 days ago
ಶಿವರಾಜ್ಕುಮಾರ್ಗೆ ಕ್ಯಾನ್ಸರ್ ತಗುಲಿದ್ದು ದೇಹದ ಈ ಭಾಗಕ್ಕೆ
- bangalore6 days ago
ಡಿಕೆ ಸುರೇಶ್ ತಂಗಿ ಎಂದು ಹೇಳಿಕೊಂಡು ಚಿನ್ನ ಖರೀದಿಸಿ ವಂಚನೆ; ನಟ ಧಮೇಂದ್ರ ವಿರುದ್ದ ಎಫ್ ಐ ಆರ್ ದಾಖಲು !