Monday, January 24, 2022

ನಕಲಿ ದಾಖಲೆ ಕೊಟ್ಟು ಬಿಪಿಎಲ್‌ ಕಾರ್ಡ್ ಪಡೆದಾತನಿಗೆ ಜೈಲು ಹಾಗೂ ದಂಡ

ಬೆಂಗಳೂರು: ಹತ್ತು ಎಕ್ರೆ ಭೂಮಿ, ಕಾರು ಇದ್ದರೂ ನಕಲಿ ದಾಖಲೆ ಕೊಟ್ಟು ಬಿಪಿಎಲ್‌ ಪಡಿತರ ಚೀಟಿ ಪಡೆದಿದ್ದ ವ್ಯಕ್ತಿಯೋರ್ವ ಜೈಲುಪಾಲಾದ ಘಟನೆ ರಾಣೆಬೆನ್ನೂರು ತಾಲೂಕಿನಲ್ಲಿ ನಡೆದಿದೆ.


ರಾಣೆಬೆನ್ನೂರು ತಾಲೂಕಿನ ಹರನಗಿರಿ ಗ್ರಾಮದ ಈ ವ್ಯಕ್ತಿಯ ವಿರುದ್ಧ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಸಲ್ಲಿಸಿದ ದೂರು ಮತ್ತು ಸಾಕ್ಷ್ಯಗಳನ್ನು ಪರಿಗಣಿಸಿ ರಾಣೆಬೆನ್ನೂರಿನ 2ನೇ ಹೆಚ್ಚುವರಿ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.

ಹತ್ತು ಎಕರೆ ಕೃಷಿ ಭೂಮಿ, ಪತ್ನಿ ಹೆಸರಿನಲ್ಲಿ ಕಾರು ಹೊಂದಿದ್ದರೂ ‘ನಾನು ಬಡವ’ ಎಂದು ನಕಲಿ ದಾಖಲೆ ಕೊಟ್ಟು ಬಿಪಿಎಲ್‌ ಪಡಿತರ ಚೀಟಿ ಪಡೆದಿದ್ದನು.


ಕೆಲವರಿಂದ ಅದುವರೆಗೆ ಪಡೆದ ಪಡಿತರದ ದಂಡ ವಸೂಲಿ ಮಾಡಲು ಸೂಚನೆ ನೀಡಲಾಗಿದೆ. ಕೆಲವು ವಿಶೇಷ ಪ್ರಕರಣಗಳಲ್ಲಿ ಜೈಲು ಶಿಕ್ಷೆಯನ್ನೂ ವಿಧಿಸಲಾಗಿದೆ.

ಹಾಲಿ ಪ್ರಕರಣದಲ್ಲಿ ಆರೋಪಿಯು ಸುಶಿಕ್ಷಿತನಾಗಿದ್ದರೂ ಸರಕಾರಕ್ಕೆ ತಪ್ಪು ಮಾಹಿತಿ ನೀಡಿರುವುದು ಸಾಕ್ಷ್ಯಾಧಾರಗಳಿಂದ ದೃಢಪಟ್ಟಿತ್ತು. ಹೀಗಾಗಿ ಆರೋಪಿಯು ಒಂದೂವರೆ ವರ್ಷ ಜೈಲು ಶಿಕ್ಷೆ ಮತ್ತು 4 ಸಾವಿರ ರೂ. ದಂಡ ಪಾವತಿಯ ಶಿಕ್ಷೆಗೆ ಒಳಗಾಗಿದ್ದಾನೆ.

Hot Topics

ಮಂಗಳೂರು: ಮಾಲೀಕನ ಎದುರೇ ಸ್ಕೂಟರ್‌ ಕದ್ದೊಯ್ದ ಕಳ್ಳ

ಮಂಗಳೂರು: ಮಾಲೀಕನ ಎದುರಿನಲ್ಲಿಯೇ ಕಳ್ಳನೊಬ್ಬ ಸ್ಕೂಟರ್‌ ಕಳವು ಮಾಡಿದ ಘಟನೆ ನಗರದಲ್ಲಿ ನಡೆದಿದೆ.ರಿನ್ಸ್‌ ಮೋನ್‌ ಕ್ಸೇವಿಯರ್‌ ಅವರು ಜ.7ರಂದು ಬೆಳಗ್ಗೆ 11.30ರ ವೇಳೆಗೆ ಪಾರ್ಸಲ್‌ ಬಸ್‌ಗೆ ನೀಡಲು ಜ್ಯೋತಿ ವೃತ್ತದ ಬಳಿ ಸ್ಕೂಟರ್‌...

ಯಕ್ಷಗಾನ ಕಲಾವಿದ ಗೋವಿಂದ ಶೇರಿಗಾರ್ ನಿಧನ: ಯಕ್ಷಗಾನ ಕಲಾರಂಗ ಸಂತಾಪ

ಕುಂದಾಪುರ: ಗಂಡುಕಲೆಯಲ್ಲಿ ಸ್ತ್ರೀ ವೇಷಧಾರಿ ಪಾತ್ರ ಮಾಡುತ್ತಿದ್ದ ಮಾರ್ಗೋಳಿ ಗೋವಿಂದ ಶೇರಿಗಾರ್ (96) ನಿಧನರಾಗಿದ್ದು ಇಬ್ಬರು ಪುತ್ರರು ಹಾಗೂ ಪುತ್ರಿಯರನ್ನು ಅಗಲಿದ್ದಾರೆ.ಬಡಗುತಿಟ್ಟು ಪುರಾಣ ಪ್ರಸಂಗಗಳಲ್ಲಿ ಅತ್ಯಂತ ಪ್ರಸಿದ್ಧವಾದ ದೇವಿ ಮಹಾತ್ಮೆ ಪ್ರಸಂಗಗಳಲ್ಲಿ ಮೊದಲು...

ಮಲಗಿದ್ದ ಅತ್ತೆಯನ್ನು ಸುತ್ತಿಗೆಯಿಂದ ಹೊಡೆದು ಕೊಂದ ಸೊಸೆ

ಚಿತ್ರದುರ್ಗ: ಅತ್ತೆ-ಸೊಸೆ ನಡುವೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರೋ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ರಾಮಜೋಗಿಹಳ್ಳಿಯಲ್ಲಿ ನಡೆದಿದೆ.ರುದ್ರಮ್ಮ(60) ಹತ್ಯೆಗೀಡಾದ ದುರ್ದೈವಿಯಾಗಿದ್ದು, ಆರೋಪಿ ಸೊಸೆ ಮುದ್ದಕ್ಕ (38)ಳನ್ನು ಪೊಲೀಸರ ವಶಕ್ಕೆ ಪಡೆದುಕೊಂಡಿದ್ದಾರೆ. ಅತ್ತೆ-ಸೊಸೆ ನಡುವೆ ಹೊಂದಾಣಿಕೆ...