Tuesday, January 31, 2023

ಕೆಬಿಸಿ ಬಹುಮಾನದ ಹೆಸರಿನಲ್ಲಿ ಮಂಗಳೂರು ದಂಪತಿಗೆ ವಂಚನೆ ಯತ್ನ

ಮಂಗಳೂರು: ಕೆಬಿಸಿ ಬಹುಮಾನದ ಹೆಸರಿನಲ್ಲಿ ದಂಪತಿಯನ್ನು ವಂಚಿಸಲು ಯತ್ನಿಸಿದ ಆರೋಪಿಗಳನ್ನು ನಿನ್ನೆ ಪೊಲೀಸರು ಬಂಧಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ದಂಪತಿಗೆ ಮೇ 26ರಂದು ‘ನೀವು 25 ಲಕ್ಷ ರೂ. ಬಹುಮಾನ ಗೆದ್ದಿದ್ದು, ಬಹುಮಾನ ಸ್ವೀಕರಿಸಲು ಬ್ಯಾಂಕ್‌ ವಿವರಗಳೊಂದಿಗೆ ವಾಟ್ಸಾಪ್‌ ಕಾಲ್‌‌ ಮಾತ್ರ ಮಾಡಬೇಕು ಎಂದು +92 ಸಂಖ್ಯೆಯಿಂದ ಆರಂಭವಾಗುವ ಅಲ್ಲದೆ ಅಮಿತಾಬ್‌ ಬಚ್ಚನ್‌ ಚಿತ್ರ ಮತ್ತು ಕೆಬಿಸಿ ಲೋಗೊ ಮುದ್ರಿತವಾಗಿದ್ದ ಮೊಬೈಲ್‌ ‌ಸಂಖ್ಯೆಯಿಂದ ವಾಟ್ಸಾಪ್‌ ಮೆಸೇಜ್ ಬಂದಿತ್ತು.


ನವದೆಹಲಿಯಲ್ಲಿಯೂ ಮಹಿಳೆಯೋರ್ವರಿಗೆ ಈ ರೀತಿಯ ವಂಚನೆ ನಡೆದಿದ್ದು, 25 ಲಕ್ಷ ರೂ. ಬಹುಮಾನ ಗೆದ್ದಿದ್ದು, ಅದನ್ನು ಪಡೆದುಕೊಳ್ಳಲು 12,500 ರೂ. ತೆರಿಗೆ ಕಳುಹಿಸಬೇಕು ಎಂದು ತಿಳಿಸಿದ್ದರು. ಅದನ್ನು ಕಳುಹಿಸಿದಾಗ ಮತ್ತೆ 25000 ರೂ. ಕಳುಹಿಸಲು ಹೇಳಿದ್ದಾರೆ. ಇದರಿಂದ ಸಂಶಯಗೊಂಡ ಅವರು ಪೊಲೀಸ್‌ ದೂರು ನೀಡಿದ್ದಾರೆ.

ದೂರಿನ ಮೇರೆಗೆ ವಂಚಕರಾದ ಬಿಹಾರ ಮೂಲದ ಪ್ರಣವ್‌ಕುಮಾರ್‌ ಮಿಶ್ರಾ (23) ಮತ್ತು ಜಾರ್ಖಂಡ್‌ನ ಗೌತಮ್‌ಪ್ರಸಾದ್‌ ಯಾದವ್‌ (29) ಅವರನ್ನು ಮಂಗಳವಾರ ಬಂಧಿಸಿದ್ದಾರೆ.

ಆರೋಪಿಗಳು ಹರಿಯಾಣದಲ್ಲೂ ಇಂತಹುದೇ ಕೃತ್ಯ ಎಸಗಿದ್ದರು ಎನ್ನಲಾಗಿದೆ. ಐದು ಮೊಬೈಲ್‌ ಫೋನ್, 33 ಸಿಮ್‌ ಕಾರ್ಡ್, 11 ಡೆಬಿಟ್‌ ಕಾರ್ಡ್, 5 ಬ್ಯಾಂಕ್‌ ಪಾಸ್‌ಬುಕ್‌ ಮತ್ತು ನಕಲಿ ಐಡಿ ಕಾರ್ಡ್‌‌ಗಳನ್ನು ಪೊಲೀಸರು ಆರೋಪಿಗಳಿಂದ ವಶಪಡಿಸಿಕೊಂಡಿದ್ದಾರೆ.

 

 

LEAVE A REPLY

Please enter your comment!
Please enter your name here

Hot Topics

15 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ 32ರ ಮಹಿಳೆ..!

ಮುಂಬೈ: ಮಹಿಳೆಯೊಬ್ಬಳು 15 ವರ್ಷದ ಬಾಲಕನ ಮೇಲೇ ಲೈಂಗಿಕ ದೌರ್ಜನ್ಯ (Sexual Abuse) ಎಸಗಿರುವ ಘಟನೆ ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯಲ್ಲಿ ನಡೆದಿದೆ.ಈ ಸಂಬಂಧ ಮಹಿಳೆಯ ವಿರುದ್ಧ ಪೋಸ್ಕೋ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.32...

ಮುಂಬೈ- ಅಹ್ಮದಾಬಾದ್ ಹೆದ್ದಾರಿಯಲ್ಲಿ ಬಸ್‌ ಗೆ ಕಾರು ಡಿಕ್ಕಿ : ನಾಲ್ವರು ಮೃತ್ಯು..!

ಮುಂಬೈ:ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ದಹಾನು ಎಂಬಲ್ಲಿ ಮುಂಬೈ-ಅಹ್ಮದಾಬಾದ್ ರಾಷ್ಟ್ರೀಯ ಹೆದ್ದಾರಿಯ ಚರೋಟಿಯಲ್ಲಿ  ಮುಂಜಾನೆ ಐಷಾರಾಮಿ ಬಸ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ.ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಸೈರಸ್...

ಕಾರವಾರ : ಕಾಡುಹಂದಿ ಮಾಂಸ ಎಂದು ನಂಬಿಸಿ ನಾಯಿ ಮಾಂಸ ಮಾರಾಟ..! ಇಬ್ಬರ ಬಂಧನ

ಕಾಡುಹಂದಿ ಮಾಂಸ ಎಂದು ನಂಬಿಸಿ ಊರು ಹಂದಿ, ನಾಯಿ ಮಾಂಸ ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳನ್ನು ಹಿಡಿದು ಸಾರ್ವಜನಿಕರು ಥಳಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಕಾರವಾರ:...