Connect with us

    LATEST NEWS

    ವೈದ್ಯಕೀಯ ಸೀಟು ಕೊಡಿಸುವುದಾಗಿ ಹೇಳಿ ವಂಚನೆ; ಮೂವರು ಆರೋಪಿಗಳ ಬಂಧನ

    Published

    on

    ಉಡುಪಿ : ವೈದ್ಯಕೀಯ ಕ್ಷೇತ್ರದಲ್ಲಿ ಉನ್ನತ ಸಾಧನೆಯನ್ನು ಮಾಡುವ ನಿಟ್ಟಿನಲ್ಲಿ ಹೆಚ್ಚಿನ ವಿದ್ಯಾಭ್ಯಾಸವನ್ನು ಮಾಡಲು ಯುಕೆಯಲ್ಲಿ ಎಂ ಪಿಎಚ್‌ ಮಾಡಲು ಸೀಟು ತೆಗೆಸಿಕೊಡುವುದಾಗಿ ಹೇಳಿ ಮೂವರು ವಂಚನೆ ಮಾಡಿದ್ದಾರೆ ಎಂದು ಉಡುಪಿ ನಗರ ಠಾಣೆಯಲ್ಲಿ ಸಂತೋಷ ಎಂಬವರು ದೂರು ದಾಖಲಿಸಿದ್ದರು.

    ವೈದ್ಯಕೀಯ ಸೀಟು ಪಡೆಯುವ ನಿಟ್ಟಿನಲ್ಲಿ ದುಬೈಗೆ ತೆರಳಿದ ಸಂತೋಷ್, ಅಫ್ತಾಬ್ ಅವರನ್ನು ಭೇಟಿ ಮಾಡಿದ್ದರು. ನಂತರ ಯುಕೆಯಲ್ಲಿ ಎಂಪಿಎಚ್‌ ವಿದ್ಯಾಭ್ಯಾಸಕ್ಕಾಗಿ ಸೀಟಿಗೆ 18 ಲಕ್ಷಕ್ಕೆ ಇಬ್ಬರ ನಡುವೆ ಒಪ್ಪಂದವಾಗಿದೆ.

    ಅಫ್ತಾಬ್ ದುರುದಾರರಿಗೆ ಕರೆ ಮಾಡಿ M.PH ವಿದ್ಯಾಭ್ಯಾಸಕ್ಕಾಗಿ ಸೀಟನ್ನು ಖಾಯಂ ಮಾಡಲು ಮೊದಲಿಗೆ 8.5 ಲಕ್ಷವನ್ನು ನೀಡುವಂತೆ ಕೇಳಿದ್ದಾರೆ. ಇವರು ಎನ್‌ಆರ್‌ಎ ಖಾತೆಯನ್ನು ಹೊಂದಿರದ ಕಾರಣ ಹಣವನ್ನು ಜಮಾ ಮಾಡಲು ಅಫ್ತಾಬ್ ಆತನಿಗೆ ಪರಿಚಯವಿರುವ 2ನೇ ಆರೋಪಿ ಸುಮನ್ ಎಸ್ ಎಂಬುವವರನ್ನು ಭೇಟಿ ಆಗುವಂತೆ ತಿಳಿಸಿದ್ದಾನೆ.

    ಇದನ್ನೂ ಓದಿ: ಅರೆಬೈಲ್ ಘಾಟ್‌ನಲ್ಲಿ ತರಕಾರಿ ತುಂಬಿದ್ದ ಲಾರಿ ಪಲ್ಟಿ: 9 ಜನರ ಸಾವು

    ಸಂತೋಷ್ ಅವರು ಉಡುಪಿಗೆ ಆಗಮಿಸಿ ಸುಮನ್ ಎಸ್ ಅವರನ್ನು ಉಡುಪಿ ತಾಲ್ಲೂಕು ಮೂಡನಿಡಂಬೂರು ಗ್ರಾಮದ ಎಂಟಿಆರ್ ಹೋಟೆಲ್ ನ ಹತ್ತಿರ ಭೇಟಿಯಾಗಿ 8.5 ಲಕ್ಷ ಹಣವನ್ನು ವರ್ಗಾವಣೆ ಮಾಡಿದ್ದಾರೆ. ಬಳಿಕ ಆರೋಪಿಗಳು ಸಂತೊಷ್ ಅವರ ಕರೆಯನ್ನು ಸ್ವೀಕರಿಸದೇ ಹಣವನ್ನು ಕೂಡಾ ಮರಳಿ ನೀಡದೇ ಮೋಸ ಮಾಡಿದ್ದಾರೆ ಎಂದು ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ಈ ಹಿನ್ನೆಲೆಯಲ್ಲಿ ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ಆರೋಪಿಗಳನ್ನು ಬಂಧಿಸಿ ಅವರಿಂದ 5 ಲಕ್ಷ ರೂಪಾಯಿ ಹಾಗೂ ಕಾರು, 2 ಮೊಬೈಲ್ ಫೋನ್‌ ವಶಪಡಿಸಿಕೊಳ್ಳಲಾಗಿದೆ.

    LATEST NEWS

    ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್; ಇನ್ಮುಂದೆ ಹಾಯಾಗಿ ಕಳೆಬಹುದು ನಿವೃತ್ತಿ ಜೀವನ

    Published

    on

    ಉದ್ಯೋಗಿಗಳು ಹಾಗೂ ಕುಟುಂಬದ ಮೇಲೆ ಪರಿಣಾಮ ಬೀರುವ ಮಹತ್ವದ ವಿಷ್ಯಗಳಲ್ಲಿ ನಿವೃತ್ತಿ ವಯಸ್ಸು ಒಂದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಆಗಾಗ ಚರ್ಚೆಗಳು ನಡೆಯುತ್ತಿರುತ್ತವೆ. ಸರ್ಕಾರಿ ನೌಕರರ ನಿವೃತ್ತಿಗೆ ಸಂಬಂಧಿಸಿದಂತೆ ದೊಡ್ಡ ಬದಲಾವಣೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ಉದ್ಯೋಗಿಗಳ ನಿವೃತ್ತಿ ವಯಸ್ಸು, ಪಿಂಚಣಿ ಸೇರಿದಂತೆ ಕೆಲ ಬದಲಾವಣೆಗಳು ಮಾಡಲಾಗತ್ತಿದೆ ಎಂಬ ಸುದ್ಧಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 2025 ರ ಮಾರ್ಚ್ 1 ರಿಂದ ಈ ಹೊಸ ನಿಯಮಗಳು ಜಾರಿಯಾಗಲಿದೆ ಎನ್ನಲಾಗುತ್ತಿದ್ದು, ಒಂದು ವೇಳೆ  ಹೊಸ ಮಾರ್ಗಸೂಚಿ ಜಾರಿಗೆ ಬಂದರೆ ಏನೆಲ್ಲ ಬದಲಾವಣೆ ಆಗಲಿದೆ ಎಂಬ ವಿವರ ಇಲ್ಲಿದೆ.

    ನಿವೃತ್ತಿ ವಯಸ್ಸಿನಲ್ಲಿ ಬದಲಾವಣೆ : ಸದ್ಯ ನಿವೃತ್ತಿ ವಯಸ್ಸು ಕೇಂದ್ರ ಸರ್ಕಾರಿ ನೌಕರರಿಗೆ 60 ಆದ್ರೆ ರಾಜ್ಯ ಸರ್ಕಾರಿ ನೌಕರರ ವಯಸ್ಸು 58 -60 ವರ್ಷವಿದೆ. ಈ ವಯಸ್ಸನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ಬದಲಿಸಲಿದೆ. ಮುಂದಿನ ದಿನಗಳಲ್ಲಿ ವಯಸ್ಸು 62 ಆಗಲಿದೆ ಎಂಬ ಸುದ್ದಿ ಹರಡಿದೆ.

    ಪಿಂಚಣಿ ವೃದ್ಧಿ : ನಿವೃತ್ತಿ ವಯಸ್ಸಿನ ಜೊತೆ ಸರ್ಕಾರ ಪಿಂಚಣಿಯನ್ನೂ ಹೆಚ್ಚಿಸಲಿದೆ. ಇದ್ರಿಂದ ಉದ್ಯೋಗಿಗಳ ಮುಂದಿನ ಭವಿಷ್ಯ ಉತ್ತಮವಾಗಿರಲಿದೆ.

    ಗ್ರಾಚ್ಯುಟಿ ಸುಧಾರಣೆ : ಸರ್ಕಾರಿ ನೌಕರರಿಗೆ ಗ್ರಾಚ್ಯುಟಿಯಲ್ಲಿ ಮತ್ತಷ್ಟು ಸುಧಾರಣೆ ತರುವ ಸಾಧ್ಯತೆ ಇದೆ ಎಂದು ವರದಿ ಮಾಡಲಾಗಿದೆ.

    ವಯಸ್ಸು ಹೆಚ್ಚಳ : ನಿವೃತ್ತಿ ವಯಸ್ಸು ಏರಿಕೆ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ನಿವೃತ್ತಿ ವಯಸ್ಸನ್ನು ಹೆಚ್ಚಿಸಬೇಕು ಎನ್ನುವ ವಾದ ಹಿಂದಿನಿಂದಲೂ ಕೇಳಿ ಬರ್ತಿದೆ. ಅದಕ್ಕೆ ಕಾರಣ ಜೀವಿತಾವಧಿಯಲ್ಲಿ ಹೆಚ್ಚಳ. ಹಿಂದೆ 1998ರಲ್ಲಿ ಸರಾಸರಿ ಜೀವಿತಾವಧಿ 61.4 ವರ್ಷವಿತ್ತು. ಆದ್ರೀಗ ಅದು 72.24 ವರ್ಷವಾಗಿದೆ. ಸರ್ಕಾರಕ್ಕೆ ಇನ್ನೆರಡು ವರ್ಷ ಅನುಭವಿ ಉದ್ಯೋಗಿಗಳು ಲಭ್ಯವಾಗ್ತಾರೆ ಹಾಗೂ ನಿವೃತ್ತಿ ವಯಸ್ಸು ಹೆಚ್ಚಿಸುವುದರಿಂದ ಪಿಂಚಣಿ ಎರಡು ವರ್ಷ ವಿಳಂಬವಾಗುತ್ತದೆ. ಇದ್ರಿಂದ ಸರ್ಕಾರಕ್ಕೆ ಲಾಭವಾಗುತ್ತದೆ ಎಂದು ಕೆಲವರ ವಾದವಾಗಿದೆ.

    ವಯಸ್ಸಿನ ಹೆಚ್ಚಳದ ಲಾಭ : ಒಂದ್ವೇಳೆ ಸರ್ಕಾರ ವಯಸ್ಸಿನಲ್ಲಿ ಹೆಚ್ಚಳ ಮಾಡಿದ್ರೆ ಕೆಲ ಉದ್ಯೋಗಿಗಳಿಗೆ ಲಾಭವಾದ್ರೆ ಕೆಲ ಉದ್ಯೋಗಿಗಳು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಉದ್ಯೋಗಿಗಳಿಗೆ ದೀರ್ಘಾವಧಿಯವರೆಗೆ ಕೆಲಸ ಮಾಡಲು ಮತ್ತು ಗಳಿಸಲು ಅವಕಾಶ ಸಿಗುತ್ತದೆ. ಅನುಭವಿ ಉದ್ಯೋಗಿಗಳಿಂದ ಕೆಲಸ ಸುಲಭವಾಗುತ್ತದೆ.

    ನಕಾರಾತ್ಮಕ ಪ್ರಭಾವ : ಯುವಕರಿಗೆ ಉದ್ಯೋಗಾವಕಾಶಗಳು ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಉದ್ಯೋಗಿಗಳು ದೀರ್ಘ ಗಂಟೆಗಳ ಕಾಲ ಕೆಲಸ ಮಾಡಬೇಕಾಗಬಹುದು. ಆರೋಗ್ಯ ಸಮಸ್ಯೆಗಳು ಹೆಚ್ಚಾಗಬಹುದು. ಪ್ರಸ್ತುತ ಸರ್ಕಾರವು ನಿವೃತ್ತಿ ವಯಸ್ಸನ್ನು ಹೆಚ್ಚಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಸ್ಪಷ್ಟಪಡಿಸಿದೆ. ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್, ಅಂತಹ ಯಾವುದೇ ಪ್ರಸ್ತಾವನೆ ಸರ್ಕಾರದ ಬಳಿ ಬಾಕಿ ಇಲ್ಲ ಎಂದು ಹೇಳಿದ್ದರು.

    Continue Reading

    International news

    ಟರ್ಕಿಯ ಸ್ಕಿ ರೆಸಾರ್ಟ್‌ನಲ್ಲಿ ಅಗ್ನಿ ಅವಘಡ; ಮೃತರ ಸಂಖ್ಯೆ 76ಕ್ಕೆ ಏರಿಕೆ

    Published

    on

    ಮಂಗಳೂರು/ ಅಂಕಾರ : ವಾಯುವ್ಯ ಟರ್ಕಿಯಲ್ಲಿನ ಜನಪ್ರಿಯ ಸ್ಕೀ ರೆಸಾರ್ಟ್‌ನಲ್ಲಿ ನಡೆದ ಭಾರೀ ಅಗ್ನಿ ಅವಘಡದಲ್ಲಿ ಮೃತರ ಸಂಖ್ಯೆ 76ಕ್ಕೆ ಏರಿಕೆಯಾಗಿದ್ದು, ತನಿಖೆಗೆ ಆದೇಶಿಸಲಾಗಿದೆ.

    ಟರ್ಕಿಯ ಬೋಲು ಪ್ರಾಂತ್ಯದ ಕಾರ್ಟಲ್ಕಾಯಾ ರೆಸಾರ್ಟ್‌ನಲ್ಲಿರುವ 12 ಅಂತಸ್ಥಿತಿನ ಗ್ರ್ಯಾಂಡ್ ಕಾರ್ತಾಲ್ ಹೋಟೆಲ್‌ನ ರೆಸ್ಟೋರೆಂಟ್‌ನಲ್ಲಿ ಬೆಳಗಿನ ಜಾವ 3.30ರ ಸುಮಾರಿಗೆ ಹೋಟೆಲ್ ಬೆಂಕಿಗೆ ಆಹುತಿಯಾಯಿತು. ಬೆಂಕಿಯ ಕಾರಣ ಇನ್ನೂ ತಿಳಿದುಬಂದಿಲ್ಲ.

    ಘಟನೆಗೆ ಪ್ರಮುಖ ಕಾರಣ ಇನ್ನೂ ತಿಳಿದುಬಂದಿಲ್ಲ. ರೆಸಾರ್ಟ್‌ನಲ್ಲಿದ್ದ ಇಬ್ಬರೂ ಭಯಭೀತರಾಗಿ ಕಟ್ಟಡದಿಂದ ಹಾರಿ ಸಾವನ್ನಪ್ಪಿದ್ದಾರೆ. ಕೆಲವು ಜನರು ಬೆಡ್‌ರೂಂನ ಬೆಡ್‌ಶೀಟ್‌ಗಳನ್ನು ಬಳಸಿ ತಮ್ಮ ಕೋಣೆಗಳಿಂದ ಕೆಳಗೆ ಇಳಿಯಲು ಪ್ರಯತ್ನಿಸಿದ್ದಾರೆ. ಹೋಟೆಲ್‌ನಲ್ಲಿ 234 ಅತಿಥಿಗಳು ತಂಗಿದ್ದರು ಎಂದು ಸ್ಥಳಿಯ ಮಾಧ್ಯಮಗಳು ಹೇಳಿವೆ.

    ಇದನ್ನೂ ಓದಿ: ಅರೆಬೈಲ್ ಘಾಟ್‌ನಲ್ಲಿ ತರಕಾರಿ ತುಂಬಿದ್ದ ಲಾರಿ ಪಲ್ಟಿ: 9 ಜನರ ಸಾವು

    ಅವಘಡದಲ್ಲಿ ಒಟ್ಟು 76 ಮಂದಿ ಸಾವನ್ನಪ್ಪಿದ್ದು, 51ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. ಹೋಟೆಲ್‌ನಲ್ಲಿ 234 ಅತಿಥಿಗಳು ತಂಗಿದ್ದರು. ಕಟ್ಟಡ ಕುಸಿಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದು ಹೋಟೆಲ್‌ನಲ್ಲಿದ್ದವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

    ಈ ನಡುವೆ ಅಗ್ನಿ ಅವಘಡಕ್ಕೆ ಕಾರಣ ಏನೆಂಬ ಬಗ್ಗೆ ತನಿಖೆ ಮುಂದುವರೆದಿದ್ದು, ತನಿಖೆಗಾಗಿ 6 ಪ್ರಾಸಿಕ್ಯೂಟರ್‌ಗಳನ್ನು ಸರ್ಕಾರ ನೇಮಿಸಿದೆ.

    ಮತ್ತೊಂದು ಅವಘಡ

    ಕೇಂದ್ರ ಟರ್ಕಿಯಲ್ಲಿ ಇರುವ ಮತ್ತೊಂದು ಸ್ಕಿ ರೆಸಾರ್ಟ್‌ನ ಹೋಟೆಲ್‌ವೊಂದರಲ್ಲಿ ಅಡುಗೆ ಅನಿಲ ಸ್ಪೋಟಗೊಂಡಿದ್ದು, ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.

     

    Continue Reading

    LATEST NEWS

    ಪ್ರವೀಣ್ ನೆಟ್ಟಾರು ಕೊ*ಲೆ ಪ್ರಕರಣ: 21ನೇ ಆರೋಪಿಯನ್ನು ಬಂಧಿಸಿದ ಎನ್‌ಐಎ ಅಧಿಕಾರಿಗಳ ತಂಡ

    Published

    on

    ಸುಳ್ಯ : ಬಿಜೆಪಿ ಯುವ ಮುಖಂಡ, ಬೆಳ್ಳಾರೆಯ ಪ್ರವೀನ್‌ ನೆಟ್ಟಾರು ಕೊ*ಲೆ ಪ್ರಕರಣದ 21ನೇ ಆರೋಪಿ ಅತೀಕ್ ಅಹಮ್ಮದ್ ಎಂಬಾತನನ್ನು ರಾಷ್ಟ್ರೀಯ ತನಿಖಾ ದಳದ ಪೊಲೀಸರು ಬಂಧಿಸಿದ್ದಾರೆ.

    ಪಿಎಫ್‌ಐ ನಾಯಕತ್ವದ ಅಡಿಯಲ್ಲಿ ಪ್ರವೀಣ್ ನೆಟ್ಟಾರು ಕೊ*ಲೆ ಪ್ರಕರಣದ ಮುಖ್ಯ ಸಂಚುಕೋರ ಎಂದು ಗುರುತಿಸಲಾದ ಮುಸ್ತಾಫಾ ಪೈಚಾರ್‌ಗೆ ಅತೀಕ್ ಅಹ್ಮದ್‌ ಆಶ್ರಯ ನೀಡಿ ಸಹಾಯ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.

    ಜನರಲ್ಲಿ ಭಯ ಮತ್ತು ಕೋಮುಗಲಭೆಗಳನ್ನು ಪ್ರಚೋದಿಸಲು ಪಿಎಫ್‌ಐ ಅಜೆಂಡಾದ ಭಾಗವಾಗಿ ಪ್ರವೀನ್‌ ನೆಟ್ಟಾರು ಕೊಲೆಯನ್ನು ಮುಸ್ತಾಫಾ ಯೋಜಿಸಿ ಕಾರ್ಯಗತಗೊಳಿಸಿದ್ದ. ಕೃತ್ಯದ ಬಳಿಕ ಮುಸ್ತಫಾ ಪರಾರಿ ಆಗಿದ್ದು, ಈ ವೇಳೆ ಆರೋಪಿ ಅತೀಕ್ ಆತನನ್ನು ಚೆನ್ನೈಗೆ ಕಳುಹಿಸಿರುವುದು ಸಹಿತ ಆತನಿಗೆ ವಿವಿಧ ರೀತಿಯಲ್ಲಿ ಸಹಕಾರ ನೀಡಿದ್ದ.

    ಇದನ್ನೂ ಓದಿ: ಅರೆಬೈಲ್ ಘಾಟ್‌ನಲ್ಲಿ ತರಕಾರಿ ತುಂಬಿದ್ದ ಲಾರಿ ಪಲ್ಟಿ: 9 ಜನರ ಸಾವು

    2024ರ ಮೇ ತಿಂಗಳಿನಲ್ಲಿ ಮುಸ್ತಾಫನನ್ನು ಬಂಧಿಸುವವರೆಗೂ, ಆರೋಪಿ ಅತೀಕ್‌ ಅಹ್ಮದ್ ಸಹಕಾರ ನೀಡಿದ್ದಾನೆ ಎಂದು ತಿಳಿದು ಬಂದಿದೆ. 2022ರ ಆಗಸ್ಟ್‌ನಲ್ಲಿ ಪ್ರವೀಣ್‌ರನ್ನು ದುಷ್ಕರ್ಮಿಗಳು ಹ*ತ್ಯೆ ಮಾಡಿದ್ದರು. ಮೊದಲಿಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಳಿಕ ಪ್ರಕರಣವನ್ನು ಎನ್‌ಐಎ ಕೈಗೆತ್ತಿಕೊಂಡಿತ್ತು.

    ಪಿಎಫ್‌ಐ ಸೇವಾ ತಂಡಗಳು ಎಂದು ಕರೆಯಲ್ಪಡುವ ರಹಸ್ಯ ತಂಡಗಳನ್ನು ರಚಿಸಿದೆ ಮತ್ತು ಉದ್ದೇಶಿತ ಹತ್ಯೆಗಳನ್ನು ನಡೆಸಲು ಶಸ್ತ್ರಾಸ್ತ್ರ ಮತ್ತು ಕಣ್ಗಾವಲು ತರಬೇತಿ ಪಡೆದಿದೆ ಎಂದು ಎನ್‌ಐಎ ತನ್ನ ತನಿಖೆಯಲ್ಲಿ ಕಂಡು ಹಿಡಿದಿತ್ತು. ಪ್ರವೀಣ್ ಕೊಲೆ ಪ್ರಕರಣದ ಉಳಿದ 6 ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ ಎಂದು ಎನ್‌ಐಎ ಹೇಳಿದೆ.

    Continue Reading

    LATEST NEWS

    Trending