Connect with us

    LATEST NEWS

    LPG ಸಿಲಿಂಡರ್ ಸ್ಫೋ*ಟ; ನಾಲ್ವರಿಗೆ ಗಾ*ಯ, ಹಲವು ಮನೆಗಳಿಗೆ ಹಾ*ನಿ

    Published

    on

    ಮಂಗಳೂರು/ಬೆಂಗಳೂರು : ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಸ್ಪೋ*ಟಗೊಂಡು ಓರ್ವನ ಸ್ಥಿತಿ ಗಂಭೀರವಾಗಿದ್ದು,  ಮೂವರಿಗೆ ಗಾ*ಯಗಳಾಗಿರುವ ಘಟನೆ  ಹಳೇ ಬೈಯಪ್ಪನಹಳ್ಳಿ ರಸ್ತೆಯ ಸಂಜಯ್ ಗಾಂಧಿ ನಗರದ 2ನೇ ಕ್ರಾಸ್‌ನಲ್ಲಿ ಸೋಮವಾರ(ಸೆ.16) ನಡೆದಿದೆ. ಘಟನೆಯಿಂದ 12 ಮನೆಗಳಿಗೆ ಹಾ*ನಿಯಾಗಿದೆ.

    ಅಣ್ಣಾದೊರೈ (40) ಗಂಭೀ*ರವಾಗಿ ಗಾ*ಯಗೊಂಡವರು. ಅಲ್ಲದೇ, ಪಕ್ಕದ ಮನೆಯ ಇಂದ್ರೇಶ್ (40), ಅವರ ಪತ್ನಿ ರೇಖಾ (30) ಮತ್ತು 7 ವರ್ಷದ ಬಾಲಕಿಗೆ ಗಾಯಗಳಾಗಿದ್ದು, ಗಾ*ಯಾಳುಗಳು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. –

    ಅಣ್ಣಾದೊರೈ ಅವರ ಮನೆಯಲ್ಲಿ ಬೆಳಗ್ಗೆ 6.50ಕ್ಕೆ ಸಿಲಿಂಡರ್ ಸ್ಫೋ*ಟ ಸಂಭವಿಸಿದೆ. ಸ್ಫೋ*ಟದಿಂದ ಅಕ್ಕಪಕ್ಕದ ನಾಲ್ಕು ಮನೆಗಳಿಗೂ ತೀವ್ರ ಹಾ*ನಿಯಾಗಿದ್ದು, ಎಂಟು ಮನೆಗಳಿಗೆ ಭಾಗಶಃ ಹಾ*ನಿಯಾಗಿದೆ. ಮನೆಯೊಳಗಿನ ವಸ್ತುಗಳು ಮತ್ತು ನಿಲ್ಲಿಸಿದ್ದ ವಾಹನಕ್ಕೂ ಹಾ*ನಿಯಾಗಿದೆ. ಅನಿಲ ಸೋರಿಕೆಯಿಂದ ಸ್ಫೋ*ಟ ಸಂಭವಿಸಿರುವ ಬಗ್ಗೆ ವರದಿಯಾಗಿದೆ.

    ಇದನ್ನೂ ಓದಿ : ಉಡುಪಿ: ಪೊಲೀಸ್ ಸಿಬ್ಬಂದಿ ನಿತ್ಯಾನಂದ ಶೆಟ್ಟಿ ಹೃದಯಾ*ಘಾತದಿಂದ ನಿ*ಧನ

    ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅ*ಗ್ನಿಶಾಮಕ ದಳದ ಸಿಬ್ಬಂದಿ ಬೆಂ*ಕಿ ನಂದಿಸಿದರು. ಘಟನೆ ಬಗ್ಗೆ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Click to comment

    Leave a Reply

    Your email address will not be published. Required fields are marked *

    BELTHANGADY

    ಗಾಂಜಾ ಸಾಗಾಟ ಪ್ರಕರಣ: ಓರ್ವ ಆರೋಪಿ ಸೆರೆ

    Published

    on

    ಮಂಗಳೂರು ನಗರಕ್ಕೆ ಗಾಂಜಾ ಸಾಗಿಸಿ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಗುರುವಾರ ಪತ್ತೆ ಹಚ್ಚಿರುವ ಮಂಗಳೂರು ಸಿಸಿಬಿ ಪೊಲೀಸರು, ಈ ಸಂಬಂಧ ಓರ್ವನನ್ನು ಬಂಧಿಸಿ ಆತನಿಂದ 1 ಲಕ್ಷ ರೂ. ಮೌಲ್ಯದ 4 ಕೆ.ಜಿ. ಗಾಂಜಾ, ದ್ವಿಚಕ್ರ ವಾಹನ ಮತ್ತು ಮೊಬೈಲ್ ಫೋನ್‌ ಸಹಿತ ಒಟ್ಟು 1,75,000 ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.

    ಬೆಳ್ತಂಗಡಿಯ ಕುಕ್ಕೇಡಿಯ ಗೋಳಿಯಂಗಡಿ ನಿವಾಸಿ ಅಬುತಾಹಿರ್ ಯಾನೆ ಅನ್ವರ್ (25) ಬಂಧಿತ ಆರೋಪಿ. ಮಂಗಳೂರು ಸಿಸಿಬಿ ಪೊಲೀಸರು ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಡೀಲ್‌ನಲ್ಲಿ ಈ ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ.

    ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಎಚ್ ಎಂ, ಪಿಎಸ್‌ಐ ನರೇಂದ್ರ, ಎಎಸ್‌ಐ ಯವರಾದ ಮೋಹನ್ ಕೆ ವಿ, ರಾಮ ಪೂಜಾರಿ, ಸುಜನ್ ಶೆಟ್ಟಿ, ಮತ್ತು ಸಿಸಿಬಿ ಸಿಬ್ಬಂದಿ ಪಾಲ್ಗೊಂಡಿದ್ದರು.

    Continue Reading

    DAKSHINA KANNADA

    ಫ್ರಾಡ್ ಕಾಲ್; ಬ್ಯಾಂಕ್ ಖಾತೆಯಿಂದ 76 ಸಾವಿರ ವಂಚನೆ

    Published

    on

    ಕಾರ್ಕಳ: ಬ್ಯಾಂಕ್ ಅಕೌಂಟ್‌ನಲ್ಲಿ ಸಮಸ್ಯೆಯಾಗಿದ್ದು, ಅದನ್ನು ನಿವಾರಿಸುವುದಾಗಿ ವ್ಯಕ್ತಿಯೊಬ್ಬರಿಗೆ 76 ಸಾವಿರ ರೂ. ವಂಚನೆ ಮಾಡಿರುವ ಘಟನೆ ಕಾರ್ಕಾಳದಲ್ಲಿ ನಡೆದಿದೆ.

    ಕಸಬಾ ಗ್ರಾಮದ ಬಾಲಚಂದ್ರ ಅವರು ಆಕ್ಸಿಸ್ ಬ್ಯಾಂಕ್ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್‌ಗಳಲ್ಲಿ ಕ್ರೆಡಿಟ್ ಕಾರ್ಡ್ ಹೊಂದಿದ್ದರು. ಸೆ. 30 ರಂದು ಮನೋಜ್ ಶರ್ಮಾ ಕರೆ ಮಾಡಿ, ಎಚ್‌ಡಿಎಫ್‌ಸಿ ಬ್ಯಾಂಕ್ ಸಮಸ್ಯೆಯನ್ನು ನಿವಾರಿಸುತ್ತೇವೆ ಎಂದು ಹೇಳಿ ಎಲ್ಲಾ ಮಾಹಿತಿಗಳನ್ನು ತೆಗೆದುಕೊಂಡು, ಕೊನೆಯದ್ದಾಗಿ ಒಟಿಪಿ ಪಡೆದುಕೊಂಡನು.
    ಅ.1 ರಂದು ಸಂಜೆ 4 ರಿಂದ 6 ರ ಅವಧಿಯಲ್ಲಿ ಎರಡೂ ಬ್ಯಾಂಕ್‌ನ ಕ್ರೆಡೀಟ್ ಕಾರ್ಡ್ ಮೂಲಕ 76,118 ರೂ. ಕಡಿತವಾಗಿತ್ತು. ಈ ಬಗ್ಗೆ ಕಾರ್ಕಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಸುತ್ತಿದ್ದಾರೆ.

    Continue Reading

    LATEST NEWS

    SHOCKING NEWS : ಮತ್ತೆ ಮೂವರು ಪಾಕಿಸ್ತಾನಿ ಪ್ರಜೆಗಳ ಬಂಧನ

    Published

    on

    ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವ ಪಾಕಿಸ್ತಾನಿ ಪ್ರಜೆಗಳ ಹಾವಳಿ ಹೆಚ್ಚಾಗುತ್ತಿದ್ದು, ಪೀಣ್ಯದಲ್ಲಿ ವಾಸವಿದ್ದ ಮೂವರು ಪಾಕಿಸ್ತಾನಿ ಪ್ರಜೆಗಳನ್ನು ಗುರುವಾರ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


    ಕೆಲವು ದಿನಗಳ ಹಿಂದೆ ಬೆಂಗಳೂರು ಹೊರವಲಯದ ಜಿಗಣಿಯಲ್ಲಿ ನಾಲ್ವರನ್ನು ಬಂಧಿಸಿಲಾಗಿತ್ತು. ಇದೀಗ ಪೀಣ್ಯದಲ್ಲಿ ಗಂಡ, ಹೆಂಡತಿ ಮತ್ತು ಅವರ ಮಗಳನ್ನು ವಶಕ್ಕೆ ಪಡೆಯಲಾಗಿದೆ. ಇವರು ಕೂಡಾ ಜಿಗಣಿಯಲ್ಲಿದ್ದಂತೆ ನಕಲಿ ಗುರುತಿನ ಚೀಟಿ ಬಳಸುತ್ತಿದ್ದರು ಎಂದು ತಿಳಿದು ಬಂದಿದೆ.
    ರಾಜ್ಯ ಹಾಗೂ ದೇಶದ ವಿವಿಧ ಭಾಗಗಳಲ್ಲಿ ನೆಲೆಸಿರುವ ಇತರರನ್ನು ಗುರುತಿಸಲು ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    Continue Reading

    LATEST NEWS

    Trending