Connect with us

LATEST NEWS

ಪಾಲಡ್ಕ ಕಡಂದಲೆ ನದಿಯಲ್ಲಿ ಈಜಲು ತೆರಳಿದ ನಾಲ್ವರು ನೀರು ಪಾಲು..!

Published

on

ಪಾಲಡ್ಕ ಕಡಂದಲೆ ನದಿಯಲ್ಲಿ ಈಜಲು ತೆರಳಿದ ನಾಲ್ವರು ನೀರು ಪಾಲು 

ಮೂಡುಬಿದಿರೆ: ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂದಲೆ ನದಿಯಲ್ಲಿ ಮುಳುಗಿ ನಾಲ್ವರು ಮೃತಪಟ್ಟಿದ್ದಾರೆ‌.ಕಡಂದಲೆ ಶ್ರೀಧರ ಆಚಾರ್ಯ ಅವರ ಮನೆಗೆ ಮದುವೆ ಸಮಾರಂಭಕ್ಕೆ ಬಂದಿದ್ದ ಮೂವರು ಯುವಕರು ಹಾಗೂ ಯುವತಿ ಸಾವನ್ನಪ್ಪಿದವರುಶಾಂಭವಿ ನದಿಯ ತುಲೆಮುಗೇರ್ ಎಂಬಲ್ಲಿ ನದಿಯಲ್ಲಿ ಈಜಲು ಹೋದಾಗ ಘಟನೆ ನಡೆದಿದೆ. ಮೃತರನ್ನು ವಾಮಂಜೂರು ಮೂಡುಶೆಡ್ಡೆ ನಿವಾಸಿ ನಿಖಿಲ್ (18),  ಹರ್ಶಿತಾ( 20), ವೇಣೂರಿನ ಸುಬಾಸ್(19), ಬಜ್ಪೆ ಪೆರಾರದ ರವಿ (30) ಎಂದು ಗುರುತಿಸಲಾಗಿದೆ.ಪೊಲೀಸರಿಂದ ಶೋಧ ಕಾರ್ಯ ಮುಂದುವರಿದಿದೆ.

ಅಪ್ ಡೇಟ್ಸ್

ಮೂಡಬಿದ್ರೆ: ಕಡಂದಲೆ ನದಿಯಲ್ಲಿ ಈಜಲು ಹೋದ ಮೂವರು ಹಾಗೂ ಅವರ ರಕ್ಷಣೆಗಿಳಿದ ಮತ್ತೊಬ್ಬ ಸೇರಿ ನಾಲ್ವರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದುರಂತ ನಿನ್ನೆ ನಡೆದಿದ್ದು, ಮನೆಯಲ್ಲಿ ಸೂತಕದ ಛಾಯೆ ಮಡುಗಟ್ಟಿದೆ.

ವಾಮಂಜೂರು ಮೂಡುಶೆಡ್ಡೆಯ ನಿಖಿಲ್(18), ಆತನ ಸಹೋದರಿ ಹರ್ಷಿತಾ (20) ವೇಣೂರಿನ ಸುಭಾಸ್ (18) ಮತ್ತು ಬಜ್ಪೆ ಪೆರಾರಿನ ರವಿ ಆಚಾರ್ಯ (30) ನಿನ್ನೆ ನೀರುಪಾಲಾಗಿ ಸಾವನ್ನಪ್ಪಿದ್ದರು. ಊರವರು ಹಾಗೂ ಅಗ್ನಿಶಾಮಕ ದಳದವರ ನೆರವಿನಿಂದ ಹರ್ಷಿತಾ ಮತ್ತು ಸುಭಾಸ್‌ ಶವವನ್ನು ಮೇಲಕ್ಕೆತ್ತಲಾಗಿತ್ತು. ಉಳಿದಿಬ್ಬರ ಶವಕ್ಕಾಗಿ ಶೋಧ ಮುಂದುವರಿದಿತ್ತು.

ಕಡಂದಲೆಯ ಶ್ರೀಧರ್ ಆಚಾರ್ಯರ ಮಗನಿಗೆ ಭಾನುವಾರ ಕಿನ್ನಿಗೋಳಿಯಲ್ಲಿ ಮದುವೆ ನಡೆದಿದ್ದು, ಸೋಮವಾರ ಮನೆಯಲ್ಲಿ ಔತಣಕೂಟ ಏರ್ಪಡಿಸಲಾಗಿತ್ತು.

ಮದುವೆ ಮನೆಗೆ ಬಂದಿದ್ದವರ ಪೈಕಿ ಕೆಲವರು ಪಟ್ಲಗುಂಡಿಯಲ್ಲಿ ಹರಿಯುವ ಶಾಂಭವಿ ನದಿಯ ಉಪನದಿಗೆ ಬಟ್ಟೆ ಒಗೆಯಲು ತೆರಳಿದ್ದರು. ಅವರ ಜತೆ ಒಂಬತ್ತು ಮಕ್ಕಳು ಹೊರಟಿದ್ದರು.

ಹರ್ಷಿತಾ, ನಿಖಿಲ್ ಮತ್ತು ಸುಭಾಸ್ ಒಂದು ಕಡೆ ನೀರಿಗಿಳಿದಾಗ ಆಳಕ್ಕೆ ಸಿಲುಕಿದ್ದು, ರಕ್ಷಣೆಗಾಗಿ ಕೂಗಲು ಆರಂಭಿಸಿದರು. ಇದನ್ನು ಗಮನಿಸಿದ ರವಿ ಅವರನ್ನು ಹಿಂಬಾಲಿಸಿಕೊಂಡು ಹೋಗಿದ್ದು, ನದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಉಳಿದ ಐದು ಮಂದಿಯನ್ನು ದಡಕ್ಕೆ ವಾಪಸ್‌ ಕಳಹಿಸಿದ್ದಾರೆ.

ಮೃತ ಹರ್ಷಿತಾ ಅಂತಿಮ ಪದವಿ ವಿದ್ಯಾರ್ಥಿನಿಯಾಗಿದ್ದು, ನಿಖಿಲ್ ದ್ವಿತೀಯ ಪಿಯುಸಿ ಹಾಗೂ ಸುಭಾಸ್ ಡಿಪ್ಲೊಮಾ ವಿದ್ಯಾರ್ಥಿಯಾಗಿದ್ದರು. ರವಿ ಮರದ ಕೆಲಸ ಮಾಡುತ್ತಿದ್ದರು. ಮದುವೆ ಮನೆಯಲ್ಲಿ ಸೂತಕದ ಛಾಯೆ ಆವರಿಸಿದ್ದು, ಪಾಲಕರು, ಮನೆಯವರ ರೋದನ ಮುಗಿಲು ಮುಟ್ಟಿದೆ.

ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ತನಿಖೆ ನಡೆಸುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *

DAKSHINA KANNADA

PUTTUR : ಅಂಗನವಾಡಿಯಲ್ಲಿ ಆಮ್ಲೇಟ್‌ ತಯಾರಿ; ಆರೋಗ್ಯ ಕೇಂದ್ರದ ಸಿಸಿ ಟಿವಿ ಕದ್ದು ಪರಾರಿ; ಕಿಡಿಗೇಡಿಗಳ ಅನೈತಿಕ ಚಟುವಟಿಕೆಗೆ ಯಾವಾಗ ಬ್ರೇಕ್!?

Published

on

ಪುತ್ತೂರು : ನಗರದ ಹೃದಯಭಾಗದಲ್ಲಿರುವ ಅಂಗನವಾಡಿ ಕೇಂದ್ರ ಹಾಗೂ ಆರೋಗ್ಯ ಕೇಂದ್ರಕ್ಕೆ ನುಗ್ಗಿದ ಕಿಡಿಗೇಡಿಗಳು ಮಾಡಬಾರದ್ದು ಮಾಡಿ ಸಿಸಿ ಕ್ಯಾಮೆರಾ ಸಹಿತ ಪರಾರಿಯಾಗಿದ್ದಾರೆ. ಆದ್ರೆ, ಪ್ರಕರಣ ದಾಖಲಿಸಿ ಅಂತ ಪೊಲೀಸ್ ಠಾಣೆಗೆ ಹೋದ್ರೆ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ.

ಅಂಗನವಾಡಿ ಕೇಂದ್ರಕ್ಕೆ ನುಗ್ಗಿ ಮಕ್ಕಳಿಗೆ ಅಂತ ಇಟ್ಟಿದ್ದ ಮೊಟ್ಟೆಗಳನ್ನು ಆಮ್ಲೇಟ್ ಮಾಡಿ ತಿಂದಿರುವ ಕಿಡಿಗೇಡಿಗಳು, ಬಳಿಕ ಪಕ್ಕದಲ್ಲೇ ಇರೋ ಆರೋಗ್ಯ ಕೇಂದ್ರದಲ್ಲಿ ಏನಾದ್ರೂ ಸಿಗತ್ತದಾ ಎಂದು ತಡಕಾಡಿದ್ದಾರೆ. ಇನ್ನು ಇಲ್ಲೇ ಅನೈತಿಕ ಚಟುವಟಿಕೆ ನಡೆಸಿರುವುದಕ್ಕೆ ಸಾಕ್ಷಿ ಬಿಟ್ಟು ಹೋಗಿದ್ದಾರೆ. ಹೀಗಾಗಿ ಇದು ಕೇವಲ ಕಿಡಿಗೇಡಿಗಳ ಕೃತ್ಯ ಮಾತ್ರ ಆಗಿರದೆ ಅನೈತಿಕ ದಂಧೆಯವರೂ ಇದರ ಹಿಂದೆ ಇದ್ದಾರೆ ಅನ್ನೋ ಅನುಮಾನ ಸ್ಥಳಿಯರದ್ದು.

ಯಾಕಂದ್ರೆ ನಗರದ ನಡುವೆ ಇದ್ರೂ ಕೂಡಾ ರಾತ್ರಿಯಾದ ಮೇಲೆ ಇದೊಂದು ನಿರ್ಜನ ಪ್ರದೇಶವಾಗಿ ಜನ ಓಡಾಟ ಇರೋದು ಕಡಿಮೆ. ಹೀಗಾಗಿ ತಮ್ಮ ಅನೈತಿಕ ಚಟುವಟಿಕೆಗೆ ಈ ಜಾಗವನ್ನೇ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಅನ್ನೋದು ಸ್ಥಳಿಯರ ಅನುಮಾನ.

ಈ ಹಿಂದೆಯೂ ಅನೇಕ ಬಾರಿ ಇಂತಹ ಘಟನೆ ಇದೇ ಅಂಗನವಾಡಿ ಹಾಗೂ ಆರೋಗ್ಯ ಕೇಂದ್ರದಲ್ಲಿ ನಡೆದಿದ್ದು, ಆಗಲೂ ಪೊಲೀಸರಿಂದ ಯಾವುದೇ ಕ್ರಮ ಆಗಿರಲಿಲ್ಲ. ಇತ್ತೀಚೆಗೆ ಇಲ್ಲಿ ಸಿಸಿ ಟಿವಿ ಅಳವಡಿಸಿದ್ದು, ಈ ಬಾರಿ ಕಿಡಿಗೇಡಿಗಳು ಗುರುತು ಪತ್ತೆಯಾಗಬಾರದು ಅಂತ ಸಿಸಿಟಿವಿನ್ನೇ ಹೊತ್ತೊಯ್ದಿದ್ದಾರೆ.
ಶಾಲೆ ಹಾಗೂ ಆರೋಗ್ಯ ಕೇಂದ್ರ ಒಂದೇ ಕಡೆ ಇದ್ರೂ ಇದಕ್ಕೆ ಸೂಕ್ತ ಭದ್ರತೆ ಇಲ್ಲ. ಆವರಣ ಗೋಡೆಯೂ ಇಲ್ಲದೆ ಇರೋದ್ರಿಂದ ಇಂತಹ ಕಿಡಿಗೇಡಿಗಳಿಗೆ ಕೃತ್ಯ ನಡೆಸಲು ಅನುಕೂಲ ಆಗಿದೆ. ಆದ್ರೆ, ಪೊಲೀಸರು ಈ ಬಗ್ಗೆ ದೂರು ಸ್ವೀಕರಿಸಿ ಕ್ರಮ ಕೈಗೊಳ್ಳುವ ಬದಲಾಗಿ ಮೌನಕ್ಕೆ ಶರಣಾಗಿರುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Continue Reading

LATEST NEWS

ದೇವಸ್ಥಾನದಲ್ಲಿ ದೇವರಿಗೆ ದೀಪ ಹಚ್ಚುವ ವೇಳೆ ಅವಘಡ; ಬ*ಲಿಯಾಯ್ತು ಒಂದನೇ ತರಗತಿ ಮಗು!

Published

on

ತುಮಕೂರು : ದೇವಸ್ಥಾನದಲ್ಲಿ ದೀಪ ಹಚ್ಚಲು ಹೋಗಿ ಒಂದನೇ ತರಗತಿಯ ಮಗುವೊಂದು ಮೃ*ತ ಪಟ್ಟ ಘಟನೆ ತುಮಕೂರು ಜಿಲ್ಲೆಯ ಶಿರಾದಲ್ಲಿ ನಡೆದಿದೆ. ದೀಕ್ಷಾ ಮೃ*ತ ಮಗು. ದೀಕ್ಷಾ ಇಲಲಿನ ಗೌಡಗೆರೆ ಹೋಬಳಿಯ ಮೇಳಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯಾಗಿದ್ದಳು. \

ಏನಿದು ಘಟನೆ?
ಮಧ್ಯಾಹ್ನ ಊಟದ ವೇಳೆಗೆ ಶಾಲೆಯ ಪಕ್ಕದಲ್ಲೇ ಇರುವ ದೇವಸ್ಥಾನಕ್ಕೆ ನಾಲ್ಕು ಮಕ್ಕಳು ಆಟವಾಡಲು ಹೋಗಿದ್ದಾರೆ. ಈ ವೇಳೆ ದೀಕ್ಷಾ ದೇವಸ್ಥಾನದಲ್ಲಿ ಇದ್ದ ದೇವರ ದೀಪವನ್ನು ಉರಿಸಲು ಹೋಗಿದ್ದಾಳೆ. ಈ ಸಂದರ್ಭ ದೀಪದ ಬೆಂಕಿ ಬಟ್ಟೆಗೆ ಅಂಟಿಕೊಂಡಿದ್ದು, ಇಡೀ ದೇಹಕ್ಕೆ ಬೆಂಕಿ ತಗುಲಿದೆ.
ತಕ್ಷಣ ಗಮನ ಹರಿಸಿದ ಸ್ಥಳಿಯರು ಬೆಂಕಿಯನ್ನು ನಂದಿಸಿ ಮಗುವನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಮಗುವನ್ನು ಬೆಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮಗು ಮೃ*ತಪಟ್ಟಿದೆ.

ಶಿಕ್ಷಕರ ಅಮಾನತು :

ಶಾಲೆಯ ಊಟದ ಬಿಡುವಿನ ಸಮಯದಲ್ಲಿ ಈ ಘಟನೆ ನಡೆದಿದ್ದರೂ ಶಿಕ್ಷಕರು ಪುಟ್ಟ ಮಕ್ಕಳ ಮೇಲೆ ನಿಗಾ ವಹಿಸದ ಹಿನ್ನಲೆಯಲ್ಲಿ ಇಬ್ಬರು ಶಿಕ್ಷಕರನ್ನು ಅಮಾನತು ಮಾಡಲಾಗಿದೆ. ಒಂದರಿಂದ ಏಳನೇ ತರಗತಿ ವರೆಗೆ ಇರುವ ಈ ಶಾಲೆಯಲ್ಲಿ 75 ವಿದ್ಯಾರ್ಥಿಗಳಿದ್ದು, ನಾಲ್ವರು ಶಿಕ್ಷಕರಿದ್ದಾರೆ. ಇಬ್ಬರು ಖಾಯಂ ಶಿಕ್ಷಕರಾಗಿದ್ದರೆ, ಇಬ್ಬರು ಗುತ್ತಿಗೆ ಆಧಾರದ ಶಿಕ್ಷಕರು. ಇದೀಗ ಇಬ್ಬರು ಖಾಯಂ ಶಿಕ್ಷರನ್ನು ಸೇವೆಯಿಂದ ಅಮಾನತು ಮಾಡಿ ಬಿಇಒ ಆದೇಶ ಹೊರಡಿಸಿದ್ದಾರೆ.

Continue Reading

DAKSHINA KANNADA

ಮಾರ್ಚ್ 25 ರ ವರೆಗೆ ರಾಜ್ಯದ ಈ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಮುನ್ಸೂಚನೆ!

Published

on

ಸುಡು ಬಿಸಿಲಿನಿಂದ ಕರ್ನಾಟಕವೇ ಸುಡುತ್ತಿದೆ. ಅದರಲ್ಲೂ ಕರಾವಳಿ ಭಾಗದ ಬಗ್ಗೆಯಂತೂ ಹೇಳತೀರದು. ಈ ನಡುವೆ ಕೆಲವೆಡೆ ಈಗಾಗಲೇ ಮಳೆ ತಂಪೆರೆದಿದೆ. ಮಾರ್ಚ್ 25ರ ವರೆಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉತ್ತಮ ಮಳೆ ಆಗಲಿದೆ ಎಂದು ಭಾರತಿಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕಚೇರಿ ಮುನ್ಸೂಚನೆ ನೀಡಿದೆ.

ಹವಾಮಾನ ಇಲಾಖೆಯ ಪ್ರಕಾರ, ಇಂದಿನಿಂದ ಒಳನಾಡು, ಕರಾವಳಿ ಭಾಗದ ಜಿಲ್ಲೆಗಳಲ್ಲಿ ಪ್ರತ್ಯೇಕ ದಿನಗಳಲ್ಲಿ ಮಳೆ ಬರಲಿದೆ ಎಂದು ತಿಳಿಸಲಾಗಿದೆ. ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ವ್ಯಾಪಕ ಮಳೆ ಸಾಧ್ಯತೆ ಇದೆ.

ಹವಾಮಾನದಲ್ಲಿ ತೀವ್ರ ತರಹದ ಬದಲಾವಣೆಗಳು ಆಗಿವೆ. ಸಮುದ್ರ ಮೇಲ್ಮೈ ಸುಳಿಗಾಳಿಯ ತೀವ್ರತೆ ಹೆಚ್ಚಾದ ಪರಿಣಾಮ ಮಳೆಯಾಗುತ್ತಿದೆ. ಇಂದಿನಿಂದ (ಮಾರ್ಚ್ 19-21) ಮೂರು ದಿನ ಒಳನಾಡು ಜಿಲ್ಲೆಗಳಾದ ಬೀದರ್, ರಾಯಚೂರು ಮತ್ತು ಕೊಪ್ಪಳದ ಕೆಲವೆಡೆ ಮಳೆ ಸುರಿಯಲಿದೆ.

ಎಲ್ಲೆಲ್ಲಿ ಮಳೆ?
ಮಾರ್ಚ್ 22ರಂದು ಇಲ್ಲೆಲ್ಲಾ ವ್ಯಾಪಕ ಮಳೆ ಮಾರ್ಚ್ 22ರಂದು ಕೊಪ್ಪಳ, ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು ಮತ್ತು ಚಿತ್ರದುರ್ಗದಲ್ಲಿ ಮಳೆ ಆರ್ಭಟಿಸಲಿದೆ.

ಮಾರ್ಚ್ 23ರಿಂದ ಮಾರ್ಚ್ 25ರವರೆಗೆ ಮೂರು ದಿನ ಕರಾವಳಿ ಭಾಗದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಜಿಲ್ಲೆಗಳು ಒಳಗೊಂಡಂತೆ ಒಂದು ದಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ವಿವಿಧೆಡೆ ವ್ಯಾಪಕ ಮಳೆ ಆಗುವ ನಿರೀಕ್ಷೆಗಳು ಇವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ತಾಪಮಾನ ಇಳಿಕೆ?
ಕರಾವಳಿ ಸೇರಿದಂತೆ ಒಳನಾಡು ಭಾಗದಲ್ಲಿ ಉಂಟಾಗಿದ್ದ ಶಾಖ ಅಲೆಯ ವಾತಾವರಣ ತುಸು ಇಳಿಕೆ ಆಗಲಿದೆ. ಆಗಾಗ ಬಿಸಿಲು ಕಂಡರೂ ಸಹಿತ ಅಷ್ಟಾಗಿ ಗರಿಷ್ಠ ತಾಪಮಾನ ಇರಲಾರದು ಎನ್ನಲಾಗಿದೆ.

ಮಳೆಯ ಆಗಮನದಿಂದಾಗಿ ಹಿನ್ನೆಲೆಯಲ್ಲಿ ಆಯಾ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ಇಳಿಕೆ ಆಗಲಿದೆ. ಒಂದೆರಡು ದಿನಗಳಿಂದ ಬೀದರ್, ಕಲಬುರಗಿ, ಕೊಡಗು ಜಿಲ್ಲೆಗಳ ಹಲವೆಡೆ ಜೋರು ಮಳೆ ದಾಖಲಾಗಿದೆ. ಬಿಸಿಲಿನಿಂದ ಕಂಗೆಟ್ಟಿದ್ದ ಜನ, ಜಾನುವಾರುಗಳಿಗೆ ಈ ತಾತ್ಕಾಲಿಕ ಮಳೆಯಿಂದ ಕೊಂಚ ಸುಧಾರಿಸಿಕೊಳ್ಳುವಂತಾಗಿದೆ.

Continue Reading

LATEST NEWS

Trending