Connect with us

LATEST NEWS

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರ ಬಂಧ ಮುಕ್ತಕ್ಕೆ ಒತ್ತಾಯ:ತಮಿಳುನಾಡು ಸಿಎಂ ಸ್ಟಾಲಿನ್..

Published

on

ಚೆನ್ನೈ:ಇಂದು ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ 30ನೇ ಪುಣ್ಯ ತಿಥಿಯಾಗಿದ್ದು ಈ ಸಂದರ್ಭದಲ್ಲಿ ರಾಜೀವ್ ಗಾಂಧಿ ಹತ್ಯೆಗೈದ ಏಳು ಆರೋಪಿಗಳನ್ನು ಕ್ಷಮಿಸಿ ಶಿಕ್ಷೆಯಿಂದ ಮುಕ್ತಗೊಳಿಸಲು ಅನುಮತಿ ನೀಡಬೇಕೆಂದು 2018ರ ಸೆಪ್ಟೆಂಬರ್ ನಲ್ಲಿ ತಮಿಳುನಾಡು ರಾಜ್ಯ ಸರ್ಕಾರ ಮನವಿ ಸಲ್ಲಿಸಿತ್ತು.

ಆ ಶಿಫಾರಸ್ಸು ಅಂಗೀಕರಿಸಬೇಕೆಂದು ಮುಖ್ಯಮಂತ್ರಿ ಸ್ಟಾಲಿನ್ ರಾಷ್ಟ್ರಪತಿ ರಾಮನಾಥ್ ಕೋವಿಂದ್ಗೆ ಪತ್ರ ಬರೆದಿದ್ದು ರಾಜೀವ್ ಗಾಂಧಿ ಹತ್ಯೆ  ಪ್ರಕರಣದಲ್ಲಿರುವ ಅಪರಾಧಿಗಳು ಸುಮಾರು ಮೂರು ದಶಕಗಳಿಂದ ಜೈಲುವಾಸ ಅನುಭವಿಸುತ್ತಿದ್ದಾರೆ. ಹಾಗಾಗಿ ಅವರನ್ನು ಶೀಘ್ರ ಬಿಡುಗಡೆಗೊಳಿಸುವಂತೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಸ್ಟಾಲಿನ್ ಬರೆದ ಪತ್ರದಲ್ಲಿ ಅಪರಾಧಿಗಳಾದ ಎಸ್.ನಳಿನಿ, ಮುರುಗನ್, ಸಂತನ್, ಎ.ಜಿ. ಪೆರರಿವಾಲನ್, ಜಯಕುಮಾರ್, ರಾಬರ್ಟ್ ಪಯಾಸ್, ಮತ್ತು ಪಿ.ರವಿಚಂದ್ರನ್ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ.

ಇವರಲ್ಲಿ ಸ್ಟಾಲಿನ್ ನಳಿನಿ ಮತ್ತು ಮೂವರ ಮರಣದಂಡನೆ ಶಿಕ್ಷೆಯನ್ನು ಈಗಾಗಲೇ ಜೀವಾವಧಿ ಶಿಕ್ಷೆಗೆ  ಇಳಿಸಿರುವ ಬಗ್ಗೆ ಸುಪ್ರೀಂಕೋರ್ಟ್ ಹೇಳಿದೆ.

ರಾಜ್ಯದ ಬಹುತೇಕ ಎಲ್ಲ ರಾಜಕೀಯ ಪಕ್ಷಗಳು ಈ ಅಪರಾಧಿಗಳನ್ನು ಶಿಕ್ಷೆಯಿಂದ ಮುಕ್ತಗೊಳಿಸಿ, ತಕ್ಷಣ ಬಿಡುಗಡೆ ಮಾಡುವಂತೆ ವಿನಂತಿ ಮಾಡಿವೆ.

ಶಿಕ್ಷೆಯನ್ನು ಕಡಿಮೆಗೊಳಿಸುವ ಇಚ್ಛೆ ಯನ್ನು  ಇಡೀ ಚೆನ್ನೈಜನರು  ವ್ಯಕ್ತಪಡಿಸಿದ್ದಾರೆ.  ಈಗಾಗಲೇ ಅವರು ಭಾರೀ ಬೆಲೆ ತೆತ್ತಿದ್ದಾರೆ, ಶಿಕ್ಷೆಯಿಂದ ಮುಕ್ತಗೊಳಿಸುವಲ್ಲಿ ಸಾಕಷ್ಟು ವಿಳಂಬವಾಗಿದೆ ಎಂದು ಪತ್ರದಲ್ಲಿ ಸ್ಟಾಲಿನ್ ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *

LATEST NEWS

‘ಸಕತ್ತಾಗಿದ್ದೀಯಾ ಡಾರ್ಲಿಂಗ್’ ಎಂದ ನಟನಿಗೆ ಖಡಕ್ ಎಚ್ಚರಿಕೆ ನೀಡಿದ ನಟಿ ನಭಾ ನಟೇಶ್

Published

on

ತೂಕತು ಗಡ ಬಡ ಬಾಯ್ ಬಾಯ್ ಬಡ್ಕಿ…ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ ಕುಣಿದು ಕುಪ್ಪಳಿಸಿದ್ದ ‘ಪಟಾಕ’ ನಭಾ ನಟೇಶ್. ‘ವಜ್ರಕಾಯ’ ಮೂಲಕ ಕನ್ನಡ ಸಿನಿಮಾರಂಗದಲ್ಲಿ ಮಿಂಚಿದ ಕಲಾವಿದೆ. ಬಳಿಕ ಲೀ, ಸಾಹೇಬ ಚಿತ್ರದಲ್ಲಿ ನಟಿಸಿದರು. ಬಳಿಕ ತೆಲುಗು ಚಿತ್ರರಂಗ ಅವರನ್ನು ಕೈ ಬೀಸಿ ಕರೆಯಿತು.

ತೆಲುಗು ಸಿನಿರಂಗದಲ್ಲಿ ಗುರುತಿಸಿಕೊಂಡಿರುವ ನಭಾ ತೆಲುಗು ನಟನ ಮೇಲೆ ಕೋಪಗೊಂಡಿದ್ದಾರೆ. ಅಷ್ಟೇ ಅಲ್ಲ, ಎಚ್ಚರಿಕೆಯನ್ನೂ ನೀಡಿದ್ದಾರೆ.

ಗರಂ ಆದ ನಟಿ :
ತೆಲುಗು ಸಿನಿ ರಂಗದಲ್ಲಿ ಡಾರ್ಲಿಂಗ್ ಅಂದ್ರೆ ಪ್ರಭಾಸ್ ಹೆಸರು ಕೇಳಿ ಬರುತ್ತೆ. ಅವರು ಅಭಿಮಾನಿಗಳನ್ನು, ಆಪ್ತರನ್ನು ಡಾರ್ಲಿಂಗ್ ಎಂದೇ ಸಂಬೋಧಿಸುತ್ತಾರೆ. ಸದ್ಯ ಪ್ರಭಾಸ್ ಹಲವು ಸಂದರ್ಭಗಳಲ್ಲಿ ಡಾರ್ಲಿಂಗ್ ಎಂದಿರುವ ಆಡಿಯೋ ಮಿಕ್ಸ್ ಅಪ್ ಮಾಡಿ ಆಡಿಯೋ ಕ್ರಿಯೆಟ್ ಮಾಡಲಾಗಿದೆ. ಈ ಆಡಿಯೋ ರೀಲ್ಸ್ ಆಗಿ ವೈರಲ್ ಆಗುತ್ತಿದೆ. ನಭಾ ನಟೇಶ್ ಕೂಡ ಡಬ್ ಸ್ಮ್ಯಾಶ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

‘ಹಾಯ್ ಡಾರ್ಲಿಂಗ್ಸ್…ಹೌ ಆರ್ ಯೂ’ ಎಂದು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ನಭಾ ಅಭಿಮಾನಿಗಳು ಮಾತ್ರವಲ್ಲ, ಪ್ರಭಾಸ್ ಫ್ಯಾನ್ಸ್ ಲೈಕ್ಸ್, ಕಮೆಂಟ್ಸ್ ಮಾಡುತ್ತಿದ್ದಾರೆ. ಆದರೆ, ತೆಲುಗು ಹಾಸ್ಯ ನಟ ಪ್ರಿಯದರ್ಶಿ ಪುಲಿಕೊಂಡ ತಮ್ಮ ಎಕ್ಸ್ ಖಾತೆಯಲ್ಲಿ ರೀ-ಪೋಸ್ಟ್ ಮಾಡಿದ್ದಾರೆ. ಅಲ್ಲದೇ, ‘ವಾಹ್ ಸೂಪರ್ ಡಾರ್ಲಿಂಗ್, ಸಖತ್ತಾಗಿದ್ದೀಯಾ’ ಎಂದು ಬರೆದಿದ್ದಾರೆ. ಇದರಿಂದ ನಭಾ ಗರಂ ಆಗಿದ್ದಾರೆ.

ಇದನ್ನೂ ಓದಿ : ಅಂದು ಸುಮಲತಾ, ಇಂದು ಸ್ಟಾರ್ ಚಂದ್ರುಗೆ ಜೈ ಎಂದ ದರ್ಶನ್; ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ನಿಂತ ಡಿ ಬಾಸ್ ಏನಂದ್ರು?

ಎಚ್ಚರಿಕೆ ನೀಡಿದ ನಭಾ ನಟೇಶ್ :

ನಭಾ ನಟೇಶ್, ಪ್ರಿಯದರ್ಶಿ ಡಾರ್ಲಿಂಗ್ ಎಂದಿದ್ದಕ್ಕೆ ಸಿಟ್ಟಾಗಿದ್ದಾರೆ. ಇಬ್ಬರ ನಡುವೆ ಎಕ್ಸ್ ನಲ್ಲಿ ಟಾಕ್ ವಾರ್ ಶುರುವಾಗಿದೆ. ಪ್ರಿಯದರ್ಶಿ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ನಭಾ, ಪರಿಚಯ ಇಲ್ಲದ ಮಹಿಳೆಯನ್ನು ಡಾರ್ಲಿಂಗ್ ಎಂದು ಕರೆಯುವುದು ಕೂಡ ಲೈಂಗಿಕ ದೌರ್ಜನ್ಯವಾಗುತ್ತದೆ ಎಂದು ಹಿಂದೆ ಕೊಲ್ಕತ್ತಾ ಹೈಕೋರ್ಟ್ ತೀರ್ಪು ನೀಡಿತ್ತು. ಅದಕ್ಕೆ ಸಂಬಂಧಿಸಿ ನ್ಯೂಸ್ ಕ್ಲಿಪ್‌ ಅನ್ನು ಶೇರ್ ಮಾಡಿ “ಮಿಸ್ಟರ್, ಮಾತನಾಡುವಾಗ ಎಚ್ಚರಿಕೆ ಇರಲಿ” ಎಂದು ನಭಾ ಪೋಸ್ಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ನಟ ಪ್ರಿಯದರ್ಶಿ, “ನೀವೇನೊ ಡಾರ್ಲಿಂಗ್ ಎಂದು ಕರೆಯಬಹುದು. ನಾವು ಕರೆದರೆ ಐಪಿಸಿ ಸೆಕ್ಷನ್ ಆಗುತ್ತಾ? ತಲೆ ಕೆಡಿಸಿಕೊಳ್ಳಬೇಡ ಡಾರ್ಲಿಂಗ್” ಎಂದು ಮತ್ತೆ ಕಮೆಂಟ್ ಮಾಡಿದ್ದಾರೆ. ಇದಕ್ಕೆ ನಭಾ, ”ಗೆರೆ ದಾಟಬೇಡ! ನೋಡಿಕೊಳ್ತೇನೆ” ಎಂದು ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಮತ್ತೆ, ಓ…ಯಾಕೆ ಈ ಮಿತಿ ಮೀರಿದ ಕೋಪ?’ ಎಂದು ಪ್ರಿಯದರ್ಶಿ ಕಮೆಂಟ್ ಮಾಡಿದ್ದಾರೆ.

 

ಹೊಸ ಚಿತ್ರದ ಪ್ರಮೋಷನ್? :

ಅಂದಹಾಗೆ ಈ ಟಾಕ್ ವಾರ್ ಬಗ್ಗೆ ಹಲವು ಅನುಮಾನ ಹುಟ್ಟಿಕೊಂಡಿತ್ತು. ಇದು ತಮಾಷೆ ಇರಬಹುದು ಎಂಬ ಅನುಮಾನ ಹುಟ್ಟಿಕೊಂಡಿತ್ತು. ಸದ್ಯ ‘ ಡಾರ್ಲಿಂಗ್ ‘ ಅನ್ನೋದು ನಭಾ ನಟೇಶ್ ಅವರ ಮುಂದಿನ ತೆಲುಗು ಸಿನಿಮಾ ಎನ್ನಲಾಗಿದೆ. ಈ ಸಿನಿಮಾದಲ್ಲಿ ಪ್ರಿಯದರ್ಶಿ ಪುಲಿಕೊಂಡ ಜೊತೆಯಾಗುತ್ತಿದ್ದಾರೆ ಎನ್ನಲಾಗಿದೆ. ಅಬ್ಬಾ! ಹೀಗೂ ಪ್ರಮೋಷನ್ ಮಾಡ್ಬೋದಾ? ಅಂಥ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವ ಸರದಿ ನೆಟ್ಟಿಗರದ್ದು.


ಮೂಲತಃ ಶೃಂಗೇರಿಯವರಾದ ನಭಾ ನಟೇಶ್ ‘ನನ್ನು ದೋಚಕುಂಡುವಾಟೆ’ ಸಿನಿಮಾ ಮೂಲಕ ಟಾಲಿವುಡ್ ಗೆ ಪದಾರ್ಪಣೆ ಮಾಡಿದರು. ಬಳಿಕ ‘ಇಸ್ಮಾರ್ಟ್ ಶಂಕರ್’ ಭಾರೀ ಯಶಸ್ಸು ತಂದು ಕೊಟ್ಟಿತು. ಇತ್ತೀಚೆಗೆ ಕೈಗೆ ಪೆಟ್ಟಾದ ಹಿನ್ನೆಲೆ ಸಿನಿರಂಗದಿಂದ ದೂರ ಉಳಿದಿದ್ದರು.

Continue Reading

FILM

ಶಿಲ್ಪಾ ಶೆಟ್ಟಿಗೆ ಶಾಕ್ ನೀಡಿದ ED; ಜಪ್ತಿ ಮಾಡಿದ ಆಸ್ತಿ ಎಷ್ಟು ಗೊತ್ತಾ!?

Published

on

ಮುಂಬೈ : ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಉದ್ಯಮಿ ರಾಜ್‌ ಕುಂದ್ರಾ ದಂಪತಿಗೆ ಜಾರಿ ನಿರ್ದೇಶನಾಲಯ ಅತಿದೊಡ್ಡ ಶಾಕ್‌ ನೀಡಿದೆ. ಜಾರಿ ನಿರ್ದೇಶನಾಲಯ ಅಧಿಕಾರಿಗಳು ಶಿಲ್ಪಾ ಶೆಟ್ಟಿ ದಂಪತಿಗೆ ಸೇರಿದ ಬರೋಬ್ಬರಿ 98 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹಾಗೂ ಫ್ಲಾಟ್‌ ಅನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.

ಉದ್ಯಮಿ ರಾಜ್‌ ಕುಂದ್ರಾ ಅವರನ್ನು ಬಿಟ್‌ಕಾಯಿನ್ ಸೇರಿದಂತೆ ಕೋಟ್ಯಂತರ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್‌ ಕುಂದ್ರಾ ಅವರಿಗೆ ಸಂಬಂಧಪಟ್ಟ ಸ್ಥಿರ ಮತ್ತು ಚರ ಆಸ್ತಿಯ ಜೊತೆಗೆ ಪುಣೆಯಲ್ಲಿರುವ ಬಂಗ್ಲೆ ಮತ್ತು ಷೇರುಗಳನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

2017ರಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ರಾಜ್‌ ಕುಂದ್ರಾ ಅವರನ್ನು 6,600 ಕೋಟಿ ರೂಪಾಯಿ ಹಣ ವರ್ಗಾವಣೆ ಮಾಡಿದ ಆರೋಪದಲ್ಲಿ ತನಿಖೆ ನಡೆಸಿತ್ತು. ಈ ಪ್ರಕರಣದಲ್ಲಿ ಬಿಟ್‌ಕಾಯಿನ್‌ ಮೂಲಕ ಹಲವರಿಗೆ ಶೇಕಡಾ 10 ರಷ್ಟು ಹಣ ರಿಟರ್ನ್‌ ಮಾಡುವ ಭರವಸೆ ನೀಡಿ ಮೋಸ ಮಾಡಿದ ಆರೋಪ ಕೂಡ ಕೇಳಿ ಬಂದಿತ್ತು. ಇದೇ ಹಗರಣದಲ್ಲಿ ತನಿಖೆ ನಡೆಸಿದ ಜಾರಿ ನಿರ್ದೇಶನಾಲಯ ಇದೀಗ ಆಸ್ತಿಯನ್ನು ವಶಕ್ಕೆ ಪಡೆದುಕೊಂಡಿದೆ ಎನ್ನಲಾಗಿದೆ. ಒಟ್ಟಾರೆ ಶಿಲ್ಪಾ ಶೆಟ್ಟಿ ಹಾಗೂ ಉದ್ಯಮಿ ರಾಜ್‌ ಕುಂದ್ರಾ ದಂಪತಿಯ 98 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಸದ್ಯ ಜಾರಿ ನಿರ್ದೇಶನಾಲಯದ ವಶದಲ್ಲಿದೆ.

Continue Reading

DAKSHINA KANNADA

ಕೊರಗಜ್ಜನ ಫೋಟೋವನ್ನು ಮನೆಯಲ್ಲಿ ಇಟ್ಟು ಆರಾಧಿಸಬಹುದಾ?

Published

on

ಇತ್ತೀಚಿನ ದಿನಗಳಲ್ಲಿ ತುಳುನಾಡಿನ ದೈವಾರಾಧನೆ ವಿಶ್ವ ಪ್ರಸಿದ್ದಿಯನ್ನು ಪಡೆದುಕೊಳ್ಳುತ್ತಿದ್ದು, ಸಾವಿರಾರು ಜನ ತುಳುನಾಡ ದೈವಗಳನ್ನು ನಂಬಲು ಆರಂಭಿಸಿದ್ದಾರೆ. ಆದ್ರೆ ದೈವಗಳನ್ನು ನಂಬುವ ಬಗೆ ಹೇಗೆ ಅನ್ನೋದು ಗೊತ್ತಿಲ್ಲದೆ ಇದ್ರೂ ಭಕ್ತಿಯಿಂದ ಕೈ ಮುಗಿದವರನ್ನು ದೈವಗಳು ಎಂದಿಗೂ ಕೈ ಬಿಟ್ಟಿಲ್ಲ. ಹೀಗಾಗಿ ಸೆಲೆಬ್ರೆಟಿಗಳೂ ಸೇರಿದಂತೆ ಪ್ರತಿನಿತ್ಯ ಹಲವಾರು ಜನ ದೈವ ಸಾನಿಧ್ಯಕ್ಕೆ ಬಂದು ಭಕ್ತಿಯಿಂದ ಕೈ ಮುಗಿಯುತ್ತಿದ್ದಾರೆ. ಅದರಲ್ಲೂ ಕುತ್ತಾರು ಕೊರಗಜ್ಜನ ಕ್ಷೇತ್ರವಂತೂ ನಿತ್ಯ ಹೊರ ಜಿಲ್ಲೆಯ ಭಕ್ತರಿಂದ ತುಂಬಿ ತುಳುಕುತ್ತಿರುತ್ತದೆ.

ದೈವಾರಾಧನೆಯೇ ಪ್ರಮುಖವಾಗಿರುವ ತುಳುನಾಡಿನಲ್ಲಿ ಜನ ದೇವರಿಗಿಂತ ಹೆಚ್ಚು ಭಯ ಪಡೋದು ದೈವಗಳಿಗೆ. ಪ್ರಕೃತಿಯ ಆರಾಧನೆಯ ಮೂಲಕ ಇಲ್ಲಿನ ನೆಲ, ಜಲ, ಹಾಗೂ ಪರಿಸರ ಎಲ್ಲದರಲ್ಲೂ ದೈವಗಳನ್ನು ಕಾಣುವ ಸಂಸ್ಕೃತಿ ತುಳುನಾಡಿನದ್ದು. ಸಾವಿರದ ಎರಡು ದೈವಗಳು ಇಲ್ಲಿ ಆರಾಧಿಸಲ್ಪಡುತ್ತದೆ ಅನ್ನೋದು ಇತ್ತೀಚಿನ ವರೆಗೆ ಸಂಶೋಧಕರು ಕಂಡು ಕೊಂಡಿರೋ ಸತ್ಯ ಕೂಡ.

ಕೊರಗಜ್ಜ ಯಾರು ಏನು ಅನ್ನೋದು ಇಲ್ಲಿ ಮುಖ್ಯವಾಗದೇ ಇದ್ರೂ ಕೊರಗಜ್ಜ ಸಮಸ್ಯೆಗಳಿಗೆ ಪರಿಹಾರ ನೀಡ್ತಾನೆ ಅನ್ನೋದು ನಂಬಿ ಬರುವ ಭಕ್ತರಿಗೆ ಇರುವ ಆಶಾಕಿರಣ. ಯಾವುದೇ ಮದ್ಯವರ್ತಿ ಇಲ್ಲದೆ ತಾವೇ ಕೊರಗಜ್ಜನಿಗೆ ಪೂಜೆ ಸಲ್ಲಿಸಿ ಅವರಿಗೆ ಇಷ್ಟವಾದುದನ್ನು ಕೊಟ್ಟು ಕೈ ಮುಗಿದು ಬೇಡಲು ಇಲ್ಲಿ ಅವಕಾಶ ಇದೆ. ಕೊರಗಜ್ಜನಿಗೆ ಮೇಲು ಕೀಳೆಂಬ ಭೇದ-ಭಾವ ಇಲ್ಲ. ಇನ್ನು ಕೊರಗಜ್ಜ ಶ್ರೀಮಂತನಿಂದಲೂ ಬಡವನಿಂದಲೂ ಕೇಳೋದು ಎಲೆ ಅಡಿಕೆ , ಚಕ್ಕುಲಿ, ಹಾಗೂ ಒಂದು ಸ್ವಲ್ಪ ಮದ್ಯ ಅಷ್ಟೇ…

ಕೇವಲ ಎಲೆ-ಅಡಿಕೆಗೆ ನಮ್ಮ ಕಷ್ಟಕಾರ್ಪಣ್ಯಗಳನ್ನು ಪರಿಹಾರ ಮಾಡೊ ದೈವ ಎಂದರೆ ಸ್ವಾಮಿ ಕೊರಗಜ್ಜ. ಅಜ್ಜನನ್ನು ಆರಾಧಿಸಬೇಕೆಂದರೆ ದೊಡ್ಡ ದೊಡ್ಡ ದೈವ ಸ್ಥಾನಗಳೇ ಬೇಕೆಂದಿಲ್ಲ. ಕೇವಲ ಮನಸಿನಲ್ಲೇ ಸ್ವಾಮಿ ಕೊರಗಜ್ಜ ಅಂತ ಕಷ್ಟದ ಸಮಯದಲ್ಲಿ ನೆನೆಸಿದ್ರೆ ಸಾಕು ಅದ್ಯಾವುದೋ ರೂಪದಲ್ಲಿ ಬಂದು ಕಷ್ಟ ಪರಿಹಾರ ಮಾಡ್ತಾರೆ ಅನ್ನೋ ನಂಬಿಕೆ ತುಳುನಾಡಿನ ಜನರಲ್ಲಿ ಇದೆ. ಇನ್ನು ಕೊರಗಜ್ಜನ ಹಲವು ಕ್ಷೇತ್ರಗಳು ತುಳುನಾಡಿನಲ್ಲಿದ್ದು ಅಲ್ಲಿಗೆ ಎಲೆ ಅಡಿಕೆ, ಚಕ್ಕುಲಿ, ಮದ್ಯದ ಹರಕೆ ಹೇಳಿಕೊಂಡ್ರೆ ಮುಗಿತು.

ಇನ್ನು ಕೊರಗಜ್ಜನಿಗೆ ಅಗೇಲು ನೀಡುವ ಸಂಪ್ರದಾಯವಿದ್ದು ಅಲ್ಲಿ ಕೊರಗಜ್ಜನಿಗೆ ಕೋಡೊದು ಅನ್ನ, ಬಸಳೆಯ ಸಾರು, ಮೀನಿನ ಪದಾರ್ಥ, ಕೋಳಿಯ ಪದಾರ್ಥ, ಬೇಯಿಸಿದ ಮೊಟ್ಟೆ, ನಿಂಬೆ ಹಣ್ಣಿನ ಉಪ್ಪಿನಕಾಯಿ ಹಾಗೂ ಮದ್ಯ ಮಾತ್ರ. ಇದಿಷ್ಟಕ್ಕೆ ತೃಪ್ತಿಪಟ್ಟುಕೊಳ್ಳುವ ಕೊರಗಜ್ಜ “ಅಜ್ಜಾ ಕಾಪುಲೆ ನಮನ್.. ಈರೆಗ್ ಬಾಜೆಲ್ ಕೊರ್ಪೆ” ಅಂತ ಹೇಳಿದರೆ ಸಾಕು ಕ್ಷಣ ಮಾತ್ರದಲ್ಲಿ ಭಕ್ತರ ಇಚ್ಛೆಯನ್ನು ನೆರವೇರಿಸುತ್ತಾನೆ.

ನೀವು ಕೊರಗಜ್ಜನ ಫೋಟೊವನ್ನು ಮನೆಯಲ್ಲಿ ಇಡಬಹುದಾ.. ಎಂದು ನೋಡುವುದಾದರೆ ಅಜ್ಜನ ಫೋಟೋ ಮಾತ್ರವಲ್ಲ ಯಾವ ದೈವಗಳ ಫೋಟೋವನ್ನೂ ಮನೆಯಲ್ಲಿ ಇಟ್ಟು ಆರಾಧನೆ ಮಾಡುವ ಪದ್ಧತಿ ಅಷ್ಟು ಬಳಕೆಯಲ್ಲಿಲ್ಲ. ಫೋಟೋ ಇಟ್ಟು ಆರಾಧನೆ ಮಾಡಬೇಕೆಂದು ಎಲ್ಲೂ ಹೇಳಿಲ್ಲ. ತಿನ್ನುವಂತಹ ಆಹಾರದಲ್ಲಿ, ನಾವು ನೋಡುವಂತಹ ನೋಟದಲ್ಲಿ, ನಾವು ಮಾಡುವ ಒಳ್ಳೆಯ ಕೆಲಸದಲ್ಲಿ, ಅಜ್ಜನ ಪ್ರಸಾದದಲ್ಲಿ ಅಜ್ಜ ಇರುತ್ತಾನೆ. ಹೀಗಾಗಿ ಅಜ್ಜನ ಫೋಟೋ ಇಟ್ಟು ಪೂಜಿಸುವ ಕ್ರಮ ಇಲ್ಲ. ಪವಿತ್ರವಾದ ಹೃದಯದಲ್ಲಿ ನಾವು ಯಾವ ದೈವವನ್ನು ನಂಬುತ್ತೇವೊ ಆ ದೈವಕ್ಕೆ ನೆಲೆ ಕೊಟ್ಟರೆ ನಾವು ಎಲ್ಲಿ ನಿಂತು ಕೈ ಮುಗಿದರೂ ಕೂಡ ಕೊರಗಜ್ಜ ಆಗಲಿ ಅಥವಾ ಇನ್ನು ಯಾವೂದೇ ದೈವವಾಗಲಿ ಅಲ್ಲಿ ಬಂದು ನಮ್ಮನ್ನು ಕಾಪಾಡಿಯೇ ಕಾಪಾಡುತ್ತಾರೆ.

Continue Reading

LATEST NEWS

Trending