Connect with us

    International news

    ಮಾಜಿ ಪ್ರಧಾನಿಗೆ ಪಾಕ್‌ನಲ್ಲಿ ಕಂಬನಿ..! ಶಾಲೆಗೆ ಮನಮೋಹನ್ ಸಿಂಗ್ ಹೆಸರು..!

    Published

    on

    ಮಂಗಳೂರು/ ಇಸ್ಲಾಮಾಬಾದ್‌ : ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಅಂತ್ಯ ಸಂಸ್ಕಾರ ದೆಹಲಿಯಲ್ಲಿ ನಡೆಯುತ್ತಿದ್ದರೆ, ಪಾಕಿಸ್ತಾನದ ಗ್ರಾಮವೊಂದರಲ್ಲಿ ಭಾರತದ ಮಾಜಿ ಪ್ರಧಾನಿಗಾಗಿ ಸಂತಾಪ ಸಭೆ ನಡೆಸಲಾಗಿದೆ. ಆ ಇಡೀ ಗ್ರಾಮದಲ್ಲಿ ಶೋಕಾಚರಣೆ ಮಾಡಲಾಗಿದ್ದು, ಪಾಕಿಸ್ತಾನದ ಆ ಶಾಲೆಯೊಂದಕ್ಕೆ ಭಾರತದ ಮಾಜಿ ಪ್ರಧಾನಿಯ ಹೆಸರು ಇಡುವ ಬಗ್ಗೆ ಗ್ರಾಮದ ಜನ ಚರ್ಚೆಗಳನ್ನು ನಡೆಸಿದ್ದಾರೆ. ಈ ಬಗ್ಗೆ ದಿ ಹಿಂದೂ ಪತ್ರಿಕೆ ವರದಿ ಮಾಡಿದ್ದು, ಅದರ ಡಿಟೇಲ್ಸ್ ಇಲ್ಲಿದೆ.

    ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಿಂದ ನೈಋತ್ಯಕ್ಕೆ 100 ಕಿಲೋ ಮೀಟರ್ ದೂರದ ಝೀಲಂ ಜಿಲ್ಲೆಯ ಭಾಗವಾಗಿದ್ದ, ಪ್ರಸ್ತುತ ಚಕ್ವಾಲ್ ಜಿಲ್ಲೆಗೆ ಸೇರಿದ ಗಾಹ್‌ ಗ್ರಾಮದಲ್ಲಿ ಭಾರತದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಅ*ಗಲಿಕೆಗೆ ಶೋ*ಕಾಚರಣೆ ಮಾಡಲಾಗಿದೆ. ಇದೇ ಗ್ರಾಮದ ಶಾಲೆಯಲ್ಲಿ ಡಾ. ಮನಮೋಹನ್ ಸಿಂಗ್ ಅವರು 4 ನೇ ತರಗತಿ ತನಕ ಶಿಕ್ಷಣ ಪಡೆದಿದ್ದರು. 1937 ರ ಎಪ್ರಿಲ್ 17 ರಂದು ಗಾಹ್ ಶಾಲೆಯಲ್ಲಿ ಪ್ರವೇಶ ಪಡೆದಿದ್ದ ಮನಮೋಹನ್ ಸಿಂಗ್ ಅವರ ಪ್ರವೇಶ ಸಂಖ್ಯೆ 187 ಆಗಿತ್ತು ಅಂತ ಶಾಲೆಯ ಶಿಕ್ಷಕ ಅಲ್ತಾಫ್ ಹುಸೇನ್ ಎಂಬವರು ಮಾಹಿತಿ ನೀಡಿದ್ದಾರೆ.

    ದೇಶ ವಿಭಜನೆಯ ಕೆಲ ಸಮಯ ಮೊದಲು ಡಾ.ಮನಮೋಹನ್ ಸಿಂಗ್ ಅವರ ಕುಟುಂಬ ಈ ಗ್ರಾಮ ತೊರೆದು ಅಮೃತ್ ಸರಕ್ಕೆ ಬಂದು ನೆಲೆಸಿದ್ದರು. ಆದ್ರೆ, ಅವರ ಕುಟುಂಬದ ಹಲವರು ಇಂದಿಗೂ ಈ ಗ್ರಾಮದಲ್ಲಿ ವಾಸವಾಗಿದ್ದು, ಅವರು ಕುಟುಂಬದ ಸಂಪರ್ಕದಲ್ಲಿ ಇದ್ದಾರೆ.

    2004 ರಲ್ಲಿ ಭಾರತದ ಪ್ರಧಾನಿಯಾಗಿ ಡಾ. ಮನಮೋಹನ್ ಸಿಂಗ್ ಅವರು ಅಧಿಕಾರ ವಹಿಸಿಕೊಂಡಾಗ ಈ ಗ್ರಾಮದ ಜನ ಸಂಭ್ರಮ ಪಟ್ಟಿದ್ದರು. ” ನಮ್ಮ ಗ್ರಾಮದ ಹುಡುಗ ಭಾರತದ ಪ್ರಧಾನಿಯಾದ ಎಂಬುದಕ್ಕೆ ಅಂದು ಸಂಭ್ರಮಿಸಿದ್ದಾಗಿ ಡಾ.ಮನಮೋಹನ್ ಸಿಂಗ್ ಅವರ ಸ್ನೇಹಿತರಲ್ಲಿ ಒಬ್ಬರಾದ ಆಶೀಕ್ ಅಲಿ ಎಂಬವರು ಹೇಳಿದ್ದಾರೆ.

    2008 ರಲ್ಲಿ ಇದೇ ಗ್ರಾಮದ ರಾಜಾ ಮಹಮ್ಮದ್ ಅಲಿ ಎಂಬವರು ದೆಹಲಿಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗಿದ್ದರು. ಬಳಿಕ ಒಂದೆರಡು ಗೆಳೆಯರೂ ಕೂಡ ಪ್ರಧಾನಿ ಮನಮೋಹನ್ ಸಿಂಗ್ ಭೇಟಿಗಾಗಿ ದೆಹಲಿಗೆ ಬಂದಿದ್ದರು. ಆದ್ರೆ, ಅವರೆಲ್ಲರೂ 2010 -14 ರ ನಡುವೆ ಇಹಲೋಕದ ಯಾತ್ರೆ ಮುಗಿಸಿದ್ದಾರೆ. ಆದ್ರೆ ಅವರು ಭೇಟಿಯಾಗಿದ್ದ ಸಂದರ್ಭದಲ್ಲಿ ಒಂದು ದಿನ ಗಾಹ್ ಗ್ರಾಮಕ್ಕೆ ಬರುವುದಾಗಿ ಹೇಳಿದ್ದರಾದ್ರೂ ಇದೀಗ ಅವರ ನಿಧನದ ಸುದ್ದಿ ಬಂದಿದೆ. ” ನಮ್ಮ ಗ್ರಾಮದ ಒಬ್ಬ ಆತ್ಮೀಯನನ್ನು ಕಳೆದುಕೊಂಡಷ್ಟು ನಮಗೆ ನೋವು ಉಂಟಾಗಿದೆ” ಎಂದು ಗ್ರಾಮದ ಹಿರಿಯರು ಹೇಳಿದ್ದಾರೆ. ನಾವು ಅವರ ಅಂ*ತಿಮ ದರ್ಶನ ಪಡೆಯಲು ಪ್ರಯತ್ನಿಸಿದೆವಾದ್ರೂ ಅದು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.

    ಇದನ್ನೂ ಓದಿ : ಪಂಚಭೂತಗಳಲ್ಲಿ ಲೀನರಾದ ಮನಮೋಹನ…ಧೀಮಂತ ನಾಯಕನಿಗೆ ಅಂತಿಮ ನಮನ

    ಡಾ. ಮನಮೋಹನ್ ಸಿಂಗ್ ಅವರು ಕಲಿತ ಗಾಹ್ ಗ್ರಾಮದ ಶಾಲೆಗೆ ಅವರ ಹೆಸರನ್ನು ಇರಿಸುವ ಬಗ್ಗೆ ಚರ್ಚೆಗಳನ್ನು ನಡೆಸಲಾಗಿದೆ. ಗ್ರಾಮದ ಹಿರಿಯರೆಲ್ಲರೂ ಸೇರಿ ಶೋ*ಕಾಚರಣೆ ಮಾಡಿದ್ದು ಈ ವೇಳೆ ಪಂಚಾಯತ್ ಪ್ರಮುಖರಲ್ಲಿ ಈ ಬೇಡಿಕೆಯನ್ನು ಇಟ್ಟಿದ್ದಾರೆ. ಬದುಕಿದ್ದಾಗ ಸಂಪರ್ಕದಲ್ಲಿ ಇದ್ರೂ ಮನಮೋಹನ್ ಸಿಂಗ್ ಅವರು ಈ ಗ್ರಾಮಕ್ಕೆ ಬರಲಾಗಿರಲಿಲ್ಲ. ಆದ್ರೆ ಮುಂದೆ ಅವರ ಕುಟುಂಬಸ್ಥರಾದ್ರೂ ಒಮ್ಮೆ ಭೇಟಿ ನೀಡಲಿ ಅಂತ ಗ್ರಾಮದ ಜನ ಮನವಿ ಮಾಡಿದ್ದಾರೆ.

    International news

    ಮುಂಬೈ ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಸಾವು !

    Published

    on

    ಬೆಂಗಳೂರು/ಲಾಹೋರ್: 2006ರ ಮುಂಬೈ ದಾಳಿಯ ರೂವಾರಿ, ಉಗ್ರ ಹಫೀಜ್ ಸಯೀದ್ ಅವರ ಸಂಬಂಧಿ ಮತ್ತು ನಿಷೇಧಿತ ಭಯೋತ್ಪಾದಕ ಸಂಘಟನೆ ಜಮಾತ್-ಉದ್-ದವಾ (ಜೆಯುಡಿ) ಉಪ ನಾಯಕ ಹಫೀಜ್ ಅಬ್ದುಲ್ ರಹಮಾನ್ ಮಕ್ಕಿ ಅವರು ಡಿಸೆಂಬರ್ 27ರಂದು ಹೃದಯಾಘಾತದಿಂದ ಮೃತಪಟ್ಟಿದ್ದಾನೆ.

    ಜೆಯುಡಿ ಪ್ರಕಾರ, ಅಬ್ದುಲ್ ರಹಮಾನ್ ಮಕ್ಕಿ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದನು. ಮಧುಮೇಹ ಸಮಸ್ಯೆ ಬಿಗಡಾಯಿಸಿದ್ದರಿಂದ ಲಾಹೋರ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು.

    ಇದನ್ನೂ ಓದಿ: ಹಿಂದೂ ಸಂಘಟನೆಗಳ ತೀವ್ರ ವಿರೋಧದ ಹಿನ್ನೆಲೆ: ಸಜಂಕಾ ಡಿಜೆ ಪಾರ್ಟಿ ರದ್ದು

    ‘ಮಕ್ಕಿಗೆ ಬೆಳಗ್ಗೆ ಹೃದಯಸ್ತಂಭನವಾಗಿದೆ. ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ’ ಎಂದು ಜೆಯುಡಿ ತಿಳಿಸಿದೆ.

    2019 ಮೇನಲ್ಲಿ ಮಕ್ಕಿಯನ್ನು ಪಾಕಿಸ್ತಾನದಲ್ಲಿ ಬಂಧಿಸಲಾಯಿತು. ಇದಾದ ನಂತರ ಆತನನ್ನು ಲಾಹೋರ್ ನಲ್ಲಿ ಗೃಹಬಂಧನದಲ್ಲಿ ಇರಿಸಲಾಗಿತ್ತು. ಮಕ್ಕಿಗೆ ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪದಡಿ 2020ರಲ್ಲಿ ಭಯೋತ್ಪಾದನೆ ನಿಗ್ರಹ ನ್ಯಾಯಾಲಯ 6 ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು.

    ಜನವರಿ 2023ರಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಮಕ್ಕಿಯನ್ನು ‘ಜಾಗತಿಕ ಭಯೋತ್ಪಾದಕ’ ಎಂದು ಘೋಷಿಸಿತು. ಈ ಸಂಬಂಧ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಲಾಯಿತು. ಜೊತೆಗೆ ಪ್ರಯಾಣ ಮತ್ತು ಶಸ್ತ್ರಾಸ್ತ್ರ ಬಳಕೆಗೆ ನಿರ್ಬಂಧ ಹೇರಲಾಗಿತ್ತು.

    Continue Reading

    International news

    ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ವಿಧಿವಶ

    Published

    on

    ಮಂಗಳೂರು/ಟೋಕಿಯೋ: ಮಾರುತಿ ಸುಜುಕಿ ಮೋಟಾರ್ ಕಾರ್ಪೊರೇಶನ್ ನ ನಿರ್ದೇಶಕ ಮತ್ತು ಗೌರವ ಅಧ್ಯಕ್ಷರಾಗಿದ್ದ ಒಸಾಮು ಸುಜುಕಿ ಅವರು ವಿಧಿವಶರಾಗಿದ್ದಾರೆ.

    ಜಪಾನ್ ನ ಸುಜುಕಿ ಮೋಟಾರ್ ಕಾರ್ಪೊರೇಷನ್ ಶುಕ್ರವಾರ ಹಂಚಿಕೊಂಡ ಮಾಹಿತಿಯ ಪ್ರಕಾರ,  ಒಸಾಮುರವರು ಲಿಂಪೋಮಾದಿಂದ ಬಳಲುತ್ತಿದ್ದರು. ಒಸಾಮು ಸುಜುಕಿ 94ನೇ ವಯಸ್ಸಿನಲ್ಲಿ (ಡಿ.25) ನಿಧನ ಹೊಂದಿದ್ದಾರೆ.

    ಭಾರತದಲ್ಲಿ ಆಟೋಮೊಬೈಲ್ ಕಂಪನಿಯನ್ನು ಕಟ್ಟಿ ಬೆಳೆಸಲು ಅನೇಕರು ಹಿಂದೇಟು ಹಾಕುತ್ತಿದ್ದ ವೇಳೆ ಪಂಥವಾಗಿ ಸ್ವೀಕರಿಸಿ ಅಪಾಯವನ್ನು ತೆಗೆದುಕೊಂಡು ಕಾರ್ಯಸಾಧ್ಯವಾಗಿಸಿ ತೋರಿಸಿದ ದಿಗ್ಗಜ ಒಸಾಮು ಸುಜುಕಿ.

    ಪರವಾನಗಿ ಆಡಳಿತದ ಅಡಿಯಲ್ಲಿ ಭಾರತವು ಇನ್ನೂ ಆರ್ಥಿಕತೆಯಲ್ಲಿ ಪ್ರಗತಿಯನ್ನು ಸಾಧಿಸದೇ ಇದ್ದ ಕಾಲದಲ್ಲಿ, ದೇಶದಲ್ಲಿ ವಾಹನ ಉದ್ಯಮವನ್ನು ಉತ್ತೇಜಿಸಿದ ಸಾಹಸಿ ಎಂದು ಒಸಾಮು ಸುಜುಕಿ ಅವರು ವ್ಯಾಪಕವಾಗಿ ಪ್ರಶಂಸೆಗೊಳಗಾದವರು.

     

     

    ಮಾರುತಿ ಉದ್ಯೋಗ್ ಲಿಮಿಟೆಡ್ ಸಂಸ್ಥೆ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಆಗಿ ಮಾರ್ಪಟ್ಟಿತು. 2007 ರಲ್ಲಿ ಸುಜುಕಿ ಮೋಟಾರ್ ಕಾರ್ಪೊರೇಷನ್ ಬಹುಪಾಲು ಪಾಲನ್ನು ಹೊಂದುವುದರೊಂದಿಗೆ ಅದರ ನಿರ್ಗಮನವನ್ನು ಪೂರ್ಣಗೊಳಿಸಿತು.

    ಇದನ್ನೂ ಓದಿ: ದಿ।ಮನಮೋಹನ್ ಸಿಂಗ್ ಸಹಿ ಇರುವ ರೂ 1ರ ನೋಟು ರೂ.100 ಕ್ಕೆ ಮಾರಾಟ…!

    ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (MSIL) ಅಧ್ಯಕ್ಷ ಆರ್.ಸಿ. ಭಾರ್ಗವ ಅವರು, “ಒಸಾಮು ಸುಜುಕಿ ಅವರ ದೂರದೃಷ್ಟಿ ಮತ್ತು ದೂರದೃಷ್ಟಿಯಿಲ್ಲದೆ, ಯಾರೂ ತೆಗೆದುಕೊಳ್ಳಲು ಸಿದ್ದರಿಲ್ಲದ ಅಪಾಯವನ್ನು ತೆಗೆದುಕ್ಕೊಳ್ಳುವ ಅವರ ಇಚ್ಛೆ, ಭಾರತದ ಬಗ್ಗೆ ಅವರ ಆಳವಾದ ಮತ್ತು ಅಚಲವಾದ ಪ್ರೀತಿ ಮತ್ತು ಮಾರ್ಗದರ್ಶಕರಾಗಿ ಅವರ ಅಪಾರ ಸಾಮಾರ್ಥ್ಯಗಳು, ಭಾರತೀಯ ಆಟೋಮೊಬೈಲ್ ಉದ್ಯಮವು ಶಕ್ತಿಶಾಲಿಯಾಗಲು ಸಾಧ್ಯವಾಯಿತು ಎಂದು ನಾನು ನಂಬುತ್ತೇನೆ” ಎಂದು ಸಂತಾಪ ಸೂಚಿಸಿದ್ದಾರೆ.

    ಒಸಾಮು ಸುಜುಕಿ ಅವರು 30 ಜನವರಿ 1930 ರಲ್ಲಿ ಜನಿಸಿದರು. ಸುಜುಕಿ ಚುವೊ ವಿಶ್ವವಿದ್ಯಾನಿಲಯದ ಕಾನೂನು ವಿಭಾಗದಿಂದ ಪದವಿ ಪಡೆದಿದ್ದರು. 1958 ಏಪ್ರೀಲ್ ನಲ್ಲಿ ಆಗಿನ ಸುಜುಕಿ ಮೋಟಾರ್ ಕೋ ಲಿಮಿಟೆಡ್ ಗೆ ಸೇರಿದ್ದರು. 1963 ನವೆಂಬರ್ ನಲ್ಲಿ ನಿರ್ದೇಶಕರಾಗಿ ನೇಮಕಗೊಂಡು, 1967ರಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. 2000 ರಲ್ಲಿ ಸುಜುಕಿ ಮೋಟಾರ್ ಕಾರ್ಪೊರೇಶನ್ ನ ಅಧ್ಯಕ್ಷರಾದರು. ಜೂನ್ 2021ರಲ್ಲಿ, ಅವರ ಹಿರಿಯ ಮಗ ತೋಶಿಹಿರೊ ಸುಜುಕಿ ಅಧಿಕಾರವನ್ನು ವಹಿಸಿಕೊಂಡ ಬಳಿಕ ಒಸಾಮು ಸುಜುಕಿ ಅವರನ್ನು ಹಿರಿಯ ಸಲಹೆಗಾರರನ್ನಾಗಿ ನೇಮಿಸಲಾಗಿತ್ತು.

    Continue Reading

    International news

    ಆಸೀಸ್ ಭರ್ಜರಿ ಬ್ಯಾಟಿಂಗ್: ಕೊಹ್ಲಿ ಗೆ ಖಡಕ್ ಎಚ್ಚರಿಕೆ ನೀಡಿದ ಐಸಿಸಿ !

    Published

    on

    ಮಂಗಳೂರು/ಮೆಲ್ಬೋರ್ನ್: ಮೆಲ್ಬೋರ್ನ್ ನಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 4ನೇ ಪಂದ್ಯದ ಮೊದಲ ದಿನದಾಟ ಮುಗಿದಿದೆ. ಟಾಸ್ ಗೆದ್ದುಕೊಂಡ ಆಸೀಸ್ ಭರ್ಜರಿ ಬ್ಯಾಟಿಂಗ್ ಮಾಡಿದೆ.

    ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಉಸ್ಮಾನ್ ಖ್ವಾಜಾ ಹಾಗೂ ಸ್ಯಾಮ್ ಕೊನ್ ಸ್ಟಾಸ್ ಉತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್ ಗೆ 89 ರನ್ ಗಳ ಜೊತೆಯಾಟವಾಡಿದ ಬಳಿಕ ಕೊನ್ ಸ್ಟಾಸ್ ವಿಕೆಟ್ ಒಪ್ಪಿಸಿದರು. ಆದರೆ ಇದಕ್ಕೂ ಮುನ್ನ ಯುವ ದಾಂಡಿಗ ಕೇವಲ 65 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 6 ಫೋರ್ ಗಳೊಂದಿಗೆ 60 ರನ್ ಚಚ್ಚಿದ್ದರು.

    ಆದರೆ ಮಾರ್ನಸ್ ಲಾಬುಶೇನ್ (72) ಔಟಾದ ಬಳಿಕ ಆಗಮಿಸಿದ ಟ್ರಾವಿಸ್ ಹೆಡ್ (0) ಬುಮ್ರಾ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ನಂತರ ಬಂದ ಮಿಚೆಲ್ ಮಾರ್ಷ್ (4) ಕೂಡ ವಿಕೆಟ್ ಕೀಪರ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

    ಜವಾಬ್ದಾರಿಯುತ ಬ್ಯಾಟಿಂಗ್ ಮುಂದುವರೆಸಿದ ಸ್ಟೀವ್ ಸ್ಮಿತ್ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಅಲೆಕ್ಸ್ ಕ್ಯಾರಿ ಜೊತೆಗೂಡಿ ಇನ್ನಿಂಗ್ಸ್ ಕಟ್ಟಿದರು. 6ನೇ ವಿಕೆಟ್ ಗೆ 53 ರನ್ ಗಳ ಜೊತೆಯಾಟವಾಡಿದರು. ಈ ಹಂತದಲ್ಲಿ ಆಕಾಶ್ ದೀಪ್ ಎಸೆತದಲ್ಲಿ ಅಲೆಕ್ಸ್ ಕ್ಯಾರಿ (31) ಔಟಾದರು.

    ಆದರೆ ಮತ್ತೊಂದೆಡೆ ಕ್ರೀಸ್ ಕಚ್ಚಿ ನಿಂತ ಸ್ಟೀವ್ ಸ್ಮಿತ್ (68) ಹಾಗೂ ಪ್ಯಾಟ್ ಕಮ್ಮಿನ್ಸ್ ಅಜೇಯರಾಗಿ ಉಳಿದರು. ಈ ಮೂಲಕ ಮೊದಲ ದಿನದಾಟದಲ್ಲಿ ಆಸ್ಟ್ರೇಲಿಯಾ ತಂಡವು 6 ವಿಕೆಟ್ ಕಳೆದುಕೊಂಡು 311 ರನ್ ಕಲೆಹಾಕಿದೆ.

    ಇದನ್ನೂ ಓದಿ: ಆರ್ ಸಿಬಿಗೆ ನಂದಿನಿ ಬಲ; ಫ್ಯಾನ್ಸ್ ಗೆ ಮತ್ತೊಂದು ಖುಷಿಯ ವಿಚಾರ

    ಟೀಂ ಇಂಡಿಯಾ ಪರ ಜಸ್ ಪ್ರೀತ್ ಬುಮ್ರಾ 3 ವಿಕೆಟ್ ಪಡೆದರೆ, ಆಕಾಶ್ ದೀಪ್, ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್ ಸುಂದರ್ ತಲಾ ಒಂದು ವಿಕೆಟ್ ಕಬಳಿಸಿದರು.

    ವಿರಾಟ್ ಕೊಹ್ಲಿ ಕಿರಿಕ್
    ಮೆಲ್ಬೋರ್ನ್ ನ ಎಂಸಿಜಿ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ದದ 4ನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ಸ್ಯಾಮ್ ಕೊನ್ ಸ್ಟಾಸ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಪಂದ್ಯದ 10ನೇ ಓವರ್ ಮುಕ್ತಾಯದ ವೇಳೆ ಭುಜದಿಂದ ಗುದ್ದುವ ಮೂಲಕ ಕೊಹ್ಲಿ ಆಸ್ಟ್ರೇಲಿಯಾ ಬ್ಯಾಟರ್ ನನ್ನು ಕೆಣಕ್ಕಿದ್ದರು.

    ಕೊಹ್ಲಿಗೆ ದಂಡ ವಿಧಿಸಿದ ಐಸಿಸಿ
    ಮೊದಲ ದಿನದಾಟದಲ್ಲಿ ಆಕ್ರಮಣಕಾರಿ ವರ್ತನೆ ತೋರಿದ್ದಕ್ಕಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ವಿರಾಟ್ ಕೊಹ್ಲಿಗೆ ದಂಡ ವಿಧಿಸಿದೆ. ಈ ದಂಡದೊಂದಿಗೆ ಒಂದು ಡಿಮೆರಿಟ್ ಅಂಕಗಳನ್ನು ನೀಡಲಾಗಿದೆ.

    ವಿರಾಟ್ ಕೊಹ್ಲಿಯ ಪಂದ್ಯದ ಶುಲ್ಕದ ಶೇ.20 ರಷ್ಟು ದಂಡ ವಿಧಿಸಲಾಗಿದ್ದು, ಇದರ ಜೊತೆಗೆ ಅನುಚಿತ ವರ್ತನೆಗಾಗಿ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ. ಹೀಗಾಗಿ ಮುಂಬರುವ ಇನ್ನಿಂಗ್ಸ್ ವೇಳೆ ವಿರಾಟ್ ಕೊಹ್ಲಿ ಶಿಸ್ತಿನಿಂದ ಆಡಬೇಕಾಗುತ್ತದೆ.

    ಏಕೆಂದರೆ ಐಸಿಸಿ ನಿಯಮಗಳ ಪ್ರಕಾರ, 24 ತಿಂಗಳ ಅವಧಿಯಲ್ಲಿ 4 ಡಿಮೆರಿಟ್ ಪಡೆದರೆ, ಆ ಆಟಗಾರನನ್ನು ಒಂದು ಟೆಸ್ಟ್ ಅಥವಾ ಏಕದಿನ ಪಂದ್ಯಗಳಿಂದ ನಿಷೇಧಿಸಲಾಗುತ್ತದೆ. ಹೀಗಾಗಿ ಮತ್ತೆ ಡಿಮೆರಿಟ್ ಪಾಯಿಂಟ್ಸ್ ಗೆ ಒಳಗಾಗದಂತೆ ಕೊಹ್ಲಿ ಎಚ್ಚರಿಕೆ ವಹಿಸಬೇಕಾಗಿರುವುದು ಅನಿವಾರ್ಯ.

    ಸ್ಪಷ್ಟನೆ ಕೊಟ್ಟ ಸ್ಯಾಮ್ ಕಾನ್ ಸ್ಟಸ್
    ಸ್ಯಾಮ್ ಕಾನ್ ಸ್ಟಸ್ ಬ್ಯಾಟಿಂಗ್ ಮಾಡುವಾಗ ನಡೆದ ಘಟನೆ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ನನ್ನ ನಡುವೆ ನಡೆದಿರುವುದು ಭಾವನೆಗಳಷ್ಟೇ. ಕೈಗೆ ಗ್ಲೌಸ್ ಸರಿ ಮಾಡಿಕೊಳ್ಳುವಾಗ ನಡೆದಿದೆ. ಈ ರೀತಿ ಕ್ರಿಕೆಟ್ ನಲ್ಲಿ ನಡೆಯುವುದು ಸರ್ವೇ ಸಾಮಾನ್ಯ.

    ಅರ್ಧ ಶತಕ ಸಿಡಿಸಿದ್ದಕ್ಕೆ ನನಗೆ ಸಂತೋಷವಾಗಿದೆ. ಬ್ಯಾಟ್ ಎತ್ತಿ ಸಂಭ್ರಮಿಸುವಾಗ ಅಭಿಮಾನಿಗಳು ಚೀಯರ್ ಮಾಡಿರುವುದು ನನಗೆ ರೋಮಾಂಚನವಾಯಿತು. ಎಲ್ಲರೂ ನನಗೆ ಸಪೋರ್ಟ್ ಮಾಡಿದ್ದಾರೆ. ಇನ್ ಸ್ಟಾದಲ್ಲಿ ಫಾಲೋವರ್ಸ್ ಹೆಚ್ಚಳವಾಗಿರುವುದು ಸಂತಸವಾಗಿದೆ.

     

    Continue Reading

    LATEST NEWS

    Trending