ಮಂಗಳೂರು/ತುಮಕೂರು : ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಆರ್.ನಾರಾಯಣ್ ವಿ*ಧಿವಶರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.
ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು (ಡಿ.12) ಚಿಕಿತ್ಸೆ ಫಲಿಸದೆ ಕೊ*ನೆಯುಸಿರೆಳೆದಿದ್ದಾರೆ. ಆರ್.ನಾರಾಯಣ್ ಅವಿವಾಹಿತರಾಗಿದ್ದು, ತುಮಕೂರಿನ ರೈಲ್ವೇ ನಿಲ್ದಾಣದ ಸಿಎಸ್‌ಐ ಲೇ ಔಟ್‌ನಲ್ಲಿ ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದರು ಎನ್ನಲಾಗಿದೆ.
ನಾರಾಯಣ್ ತುಮಕೂರಿನ ಬೆಳ್ಳಾವಿ ಕ್ಷೇತ್ರದಿಂದ 3 ಬಾರಿ(1989, 1994, 1999) ಶಾಸಕರಾಗಿ ಆಯ್ಕೆಯಾಗಿದ್ದರು. ಮಾಜಿ ಮುಖ್ಯಮಂತ್ರಿ ದಿ. ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ಕರ್ನಾಟಕ ಹೌಸಿಂಗ್ ಬೋರ್ಡ್ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು.
ಮಂಗಳೂರು/ನವದೆಹಲಿ: ಕಳೆದ ತಿಂಗಳು ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಬಿಹಾರ ಮೂಲದ 13 ವರ್ಷದ ಸೂರ್ಯವಂಶಿ ಅವರನ್ನು ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ, ಬರೊಬ್ಬರಿ 1.10 ಕೋಟಿ ನೀಡಿ ಖರೀದಿಸಿತ್ತು.
ಐಪಿಎಲ್ ಟಿ-20 ಕ್ರಿಕೆಟ್ ಟೂರ್ನಿಯ ಇತಿಹಾಸದಲ್ಲೇ ಕೋಟ್ಯಧಿಪತಿಯಾದ ಅತಿ ಕಿರಿಯ ಆಟಗಾರ ಎನಿಸಿರುವ ವೈಭವ್ ಸೂರ್ಯವಂಶಿ, ಭಾರತದ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಆಡಲು ಕಾತರದಲ್ಲಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಈ ಯುವ ಎಡಗೈ ಆರಂಭಿಕ ಬ್ಯಾಟರ್, ‘ನನಗೆ ಐಪಿಎಲ್ ಗಿಂತ ಮಿಗಿಲಾಗಿ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಆಡಲು ಉತ್ಸುಕನಾಗಿದ್ದಾನೆ’ ಎಂದು ತಿಳಿಸಿದ್ದಾರೆ.
‘ಐಪಿಎಲ್ ಗಾಗಿ ಯಾವುದೇ ವಿಶೇಷ ಯೋಜನೆ ರೂಪಿಸಿಲ್ಲ. ಸಹಜ ರೀತಿಯಲ್ಲೇ ಆಡಲಿದ್ದೇನೆ. ಐಪಿಎಲ್ ನಲ್ಲಿ ಆಡಲು ಅವಕಾಶ ಸಿಕ್ಕಿರುವುದಕ್ಕೆ ತುಂಬಾ ಸಂತಸಗೊಂಡಿದ್ದೇನೆ. ದ್ರಾವಿಡ್ ಸರ್ ಮಾರ್ಗದರ್ಶನದಲ್ಲಿ ಆಡಲು ಉತ್ಸುಕನಾಗಿದ್ದಾನೆ. ಐಪಿಎಲ್ ಗಿಂತ ಹೆಚ್ಚಾಗಿ ದ್ರಾವಿಡ್ ಅಡಿಯಲ್ಲಿ ಆಡಲು ಖುಷಿಯಾಗುತ್ತಿದೆ’ ಎಂದು ವೈಭವ್ ಸೂರ್ಯವಂಶಿ ಹೇಳಿದ್ದಾರೆ.
ಇತ್ತೀಚಿಗೆ ನಾಗಚೈತನ್ಯ ಹಾಗೂ ಶೋಭಿತಾ ಮದುವೆ ಅದ್ದೂರಿಯಾಗಿ ನೆರವೇರಿದ್ದು, ದಂಪತಿ ಹನಿಮೂನ್ಗೆ ಹೋಗಿದ್ದಾರೆ. ಮಾಜಿ ಪತಿ ಹೊಸ ಜೀವನ ಶುರುಮಾಡಿ ಆಯ್ತು. ಸ್ಯಾಮ್ ಯಾವಾಗ ಹೊಸ ಲೈಫ್ ಸ್ಟಾರ್ಟ್ ಮಾಡ್ತಾರಾ ಎನ್ನುವ ವಿಷಯ ಚರ್ಚೆ ಹುಟ್ಟಿಹಾಕಿದೆ.
ನಟಿ ಸಮಂತಾ ರುತ್ ಪ್ರಭು ಅವರ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏಳು-ಬೀಳುಗಳು ಉಂಟಾಗಿವೆ. ನಾಗ ಚೈತನ್ಯ ಜೊತೆಗಿನ ಅವರ ದಾಂಪತ್ಯ ಅಂತ್ಯವಾಯ್ತು. ಗಂಭೀರವಾದ ಆರೋಗ್ಯ ಸಮಸ್ಯೆ ಕೂಡ ಎದುರಾಯಿತು. ಅದರಿಂದಾಗಿ ಅವರ ವೃತ್ತಿ ಜೀವನದ ಮೇಲೂ ಪರಿಣಾಮ ಬಿತ್ತು. ಎಲ್ಲ ಸಮಸ್ಯೆಗಳನ್ನೂ ಎದುರಿಸಿ ಸ್ಯಾಂ ಅವರು ಮುನ್ನುಗ್ಗುತ್ತಿದ್ದಾರೆ. 2024ರ ವರ್ಷ ಕಳೆಯುತ್ತಿದೆ. 2025ರ ಸ್ವಾಗತಕ್ಕೆ ಎಲ್ಲರೂ ಸಜ್ಜಾಗಿದ್ದಾರೆ. ಈ ಸಂದರ್ಭದಲ್ಲಿ ಸಮಂತಾ ರುತ್ ಪ್ರಭು ಅವರು ಒಂದು ಸೂಚನೆ ನೀಡಿದ್ದಾರೆ. ಅದನ್ನು ಕಂಡು ಅಭಿಮಾನಿಗಳ ಕೌತುಕ ಹೆಚ್ಚಾಗಿದೆ.
ಕೆಲವೇ ದಿನಗಳ ಹಿಂದೆ ಸಮಂತಾ ರುತ್ ಪ್ರಭು ಅವರ ಮಾಜಿ ಪತಿ ನಾಗ ಚೈತನ್ಯ ಎರಡನೇ ಮದುವೆ ನಡೆಯಿತು. ನಟಿ ಶೋಭಿತಾ ಧುಲಿಪಾಲ ಜೊತೆ ನಾಗ ಚೈತನ್ಯ ಹಸೆಮಣೆ ಏರಿದರು. ಹಾಗಾದರೆ ಸಮಂತಾ ಅವರು ಇನ್ನೊಂದು ಮದುವೆ ಆಗುವುದು ಯಾವಾಗ ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಇದೆ. 2025ರಲ್ಲಿ ಸಮಂತಾ ಅವರು ಈ ಬಗ್ಗೆ ಯೋಚಿಸಬಹುದು ಎಂಬುದಕ್ಕೆ ಈಗ ಸೂಚನೆ ಸಿಕ್ಕಿದೆ.
ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಸಮಂತಾ ರುತ್ ಪ್ರಭು ಅವರು ಒಂದು ಸ್ಟೋರಿ ಶೇರ್ ಮಾಡಿಕೊಂಡಿದ್ದಾರೆ. 2025ರಲ್ಲಿ ತಮ್ಮ ರಾಶಿಫಲ ಏನಿದೆ ಎಂಬುದನ್ನು ಈ ಪೋಸ್ಟ್ ವಿವರಿಸುತ್ತಿದೆ. ಸಮಂತಾ ಅವರದ್ದು ವೃಷಭ ರಾಶಿ. ಈ ರಾಶಿಯವರು 2025ರ ವರ್ಷದಲ್ಲಿ ಏನನ್ನೆಲ್ಲ ನಿರೀಕ್ಷೆ ಮಾಡಬಹುದು ಎಂಬ ಪಟ್ಟಿಯನ್ನು ಸಮಂತಾ ಹಂಚಿಕೊಂಡು, ‘ಹಾಗೆಯೇ ಆಗಲಿ’ ಎಂದು ಕ್ಯಾಪ್ಷನ್ ನೀಡಿದ್ದಾರೆ. ಮದುವೆ ಮತ್ತು ಮಕ್ಕಳ ಬಗ್ಗೆ ಇದರಲ್ಲಿ ಸೂಚನೆ ಇದೆ.
‘ನಿಮಗೆ ನಿಷ್ಠಾವಂತ ಮತ್ತು ಪ್ರೀತಿಯ ಬಾಳಸಂಗಾತಿ ಸಿಗಲಿದ್ದಾರೆ. ಮಕ್ಕಳನ್ನು ಪಡೆಯಲಿದ್ದೀರಿ’ ಎಂಬ ಸಾಲುಗಳು ರಾಶಿ ಫಲದಲ್ಲಿ ಇದೆ. ಇದನ್ನು ಸಮಂತಾ ಅವರು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿರುವುದರಿಂದ ಬರುವ ವರ್ಷ ಅವರು ಮದುವೆ ಮತ್ತು ಮಗು ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಅಭಿಮಾನಿಗಳು ಊಹಿಸಿದ್ದಾರೆ. ಊಹೆ ನಿಜವಾಗಲಿ ಎಂದು ಕೂಡ ಫ್ಯಾನ್ಸ್ ಆಶಿಸಿದ್ದಾರೆ.
‘2025ರ ವರ್ಷ ನೀವು ತುಂಬ ಬ್ಯುಸಿ ಆಗಿರಲಿದ್ದೀರಿ. ಕೌಶಲ ವೃದ್ಧಿ ಆಗಲಿದ್ದು, ಅದರಿಂದ ನಿಮಗೆ ಹೆಚ್ಚಿನ ಆದಾಯ ಬರಲಿದೆ. ಆರ್ಥಕ ಸ್ಥಿರತೆ ಸಿಗಲಿದೆ. ಹಲವು ವರ್ಷಗಳಿಂದ ಇಟ್ಟುಕೊಂಡಿದ್ದ ಗುರಿಯನ್ನು ಸಾಧಿಸುತ್ತೀರಿ. ಆದಾಯದ ಮೂಲಗಳು ಹೆಚ್ಚಲಿವೆ. ಮಾನಸಿಕ ಮತ್ತು ದೈಹಿಕ ಆರೋಗ್ಯ ಸುಧಾರಿಸಲಿದೆ’ ಎಂಬ ಸಾಧ್ಯತೆಗಳನ್ನು ಕೂಡ ಸಮಂತಾ ಅವರ ರಾಶಿಫಲದಲ್ಲಿ ಬರೆಯಲಾಗಿದೆ.
ನಟಿ ಕೀರ್ತಿ ಸುರೇಶ್ ಅವರ ಜೀವನದಲ್ಲಿ ಹೊಸ ಅಧ್ಯಾಯ ಆರಂಭ ಆಗಿದೆ. ಇಂದು (ಡಿ.12) ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಗೋವಾದಲ್ಲಿ ನಡೆದ ವಿವಾಹ ಸಮಾರಂಭಕ್ಕೆ ಆಪ್ತರು ಸಾಕ್ಷಿಯಾಗಿದ್ದಾರೆ. ಮದುವೆಯ ಫೋಟೋಗಳನ್ನು ಕೀರ್ತಿ ಸುರೇಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅವುಗಳಿಗೆ ಫ್ಯಾನ್ಸ್ ಕಮೆಂಟ್ ಮಾಡುವ ಮೂಲಕ ವಿಶ್ ಮಾಡಿದ್ದಾರೆ.
ಖ್ಯಾತ ನಟಿ ಕೀರ್ತಿ ಸುರೇಶ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಾಲ್ಯದ ಗೆಳೆಯ ಆಂಟೊನಿ ತಟ್ಟಿಲ್ ಜೊತೆ ಅವರು ಹಸೆಮಣೆ ಏರಿದ್ದಾರೆ. ದಕ್ಷಿಣ ಭಾರತದ ಸಂಪ್ರದಾಯದ ರೀತಿ ಕೀರ್ತಿ ಸುರೇಶ್ ಅವರ ಮದುವೆ ನಡೆದಿದೆ. ಇಂದು (ಡಿಸೆಂಬರ್ 12) ಗೋವಾದಲ್ಲಿ ಕುಟುಂಬದವರು ಮತ್ತು ಆಪ್ತರ ಸಮ್ಮುಖದಲ್ಲಿ ಕೀರ್ತಿ ಸುರೇಶ್ ಮತ್ತು ಆಂಟೊನಿ ಅವರು ಮದುವೆ ಆಗಿದ್ದಾರೆ. ಅಭಿಮಾನಿಗಳು, ಸೆಲೆಬ್ರಿಟಿಗಳು, ಆಪ್ತರು ‘ಮಹಾನಟಿ’ ಕೀರ್ತಿ ಸುರೇಶ್ಗೆ ಅಭಿನಂದನೆ ತಿಳಿಸುತ್ತಿದ್ದಾರೆ.