ಹೊಸದಿಲ್ಲಿ: ಕೇರಳದಲ್ಲಿರುವ ಆಯುರ್ವೇದ ಆಸ್ಪತ್ರೆಯ ಚಿಕಿತ್ಸೆಯಿಂದ ತಮ್ಮ ಪುತ್ರಿಗೆ ದೃಷ್ಟಿ ಮರಳಿ ಬಂದಿರುವುದಾಗಿ ತಿಳಿಸಿರುವ ಕೀನ್ಯಾದ ಮಾಜಿ ಪ್ರಧಾನಿ ರೈಲಾ ಒಡಿಂಗಾ ಅವರು,
ಆಯುರ್ವೇದ ಚಿತ್ಸೆಗೆ ವ್ಯವಸ್ಥೆ ಕಲ್ಪಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
”ಆಯುರ್ವೇದ ಚಿಕಿತ್ಸೆಯಿಂದಾಗಿ ನನ್ನ ಮಗಳ ದೃಷ್ಟಿ ಮರಳಿದೆ ಮತ್ತು ಅವಳ ಆತ್ಮವಿಶ್ವಾಸ ಸಹ ವೃದ್ಧಿಸಿದೆ.
ಈ ಚಿಕಿತ್ಸಾ ವಿಧಾನವನ್ನು ಆಫ್ರಿಕಾದಲ್ಲಿಯೂ ಪರಿಚಯಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡುತ್ತೇನೆ.
ಇದರಿಂದ ಆಫ್ರಿಕಾದ ಜನರಿಗೆ ಬಹಳ ಅನುಕೂಲವಾಗಲಿದೆ. ಈ ಸಂಬಂಧ ಶೀಘ್ರವೇ ಅವರೊಂದಿಗೆ ಮಾತನಾಡುತ್ತೇನೆ,” ಎಂದು ಒಡಿಂಗಾ ತಿಳಿಸಿದ್ದಾರೆ.
ಆಗಿದ್ದು ಏನು?
ಬ್ರೈನ್ ಟ್ಯೂಮರ್‌ನಿಂದ ಬಳಲುತ್ತಿದ್ದ ಒಡಿಂಗಾ ಅವರ ಪುತ್ರಿ ರೋಸ್‌ಮೇರಿ ಅವರಿಗೆ 2017ರಲ್ಲಿ ನೈರೋಬಿಯಲ್ಲಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿತ್ತು. ಶಸ್ತ್ರಚಿಕಿತ್ಸೆ ನಂತರ ಅವರಿಗೆ ದೃಷ್ಟಿ ನಷ್ಟವಾಗಿತ್ತು.
ಅವರನ್ನು 2019ರಲ್ಲಿ ಕೇರಳದ ಕೂಥಟ್ಟುಕುಲಂನ ಆಯುರ್ವೇದ ಕಣ್ಣಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಇಲ್ಲಿನ ಆರಂಭಿಕ ಚಿಕಿತ್ಸೆ ಬಳಿಕ ತನ್ನ ದೇಶಕ್ಕೆ ತೆರಳಿ ಇಲ್ಲಿನ ಆಯುರ್ವೇದ ಚಿಕಿತ್ಸೆ ಚಿಕಿತ್ಸೆ ಮುಂದುವರಿಸಿದ್ದಾರೆ.
ನಿರಂತರ ವೈದ್ಯರ ಸಂಪರ್ಕದಲ್ಲಿ ಇದ್ದುಕೊಂಡೆ ದೃಷ್ಟಿ ಬರುವ ಭರವಸೆಯಲ್ಲಿ ಇದ್ದರು.
ಇದೀಗ ಸತತ ಚಿಕಿತ್ಸೆಯಿಂದ ಮರಳಿ ದೃಷ್ಟಿ ಪಡೆದಿದ್ದಾರೆ. ನನಗೆ ಓದಲು ಸಾಧ್ಯವಾಗುತ್ತಿದೆ. ಫೋನ್ ರಿಸೀವ್ ಮಾಡಲು ಸಾಧ್ಯವಾಗುತ್ತಿದೆ.
ಇದಕ್ಕಿಂತ ಸಂತಸ ಇನ್ನೇನು ಬೇಕು. ನಾನು ಕೇರಳದ ಶ್ರೀಧಾರೀಯಂ ಆಯುರ್ವೇದಾ ಕಣ್ಣಿಗೆ ಆಸ್ಪತ್ರೆಗೆ ನಾನುಆಭಾರಿಯಾಗಿದ್ದೇನೆ ಎಂದು ರೋಸಮೇರಿ ಹೇಳಿದ್ದಾರೆ.