Saturday, August 20, 2022

ಗುಂಡಿನ ದಾಳಿಗೆ ಜಪಾನ್ ಮಾಜಿ ಪ್ರಧಾನಿ ಸಾವು: ನಾಳೆ ಭಾರತದಲ್ಲಿ ಶೋಕಾಚರಣೆ

ಟೋಕಿಯೋ: ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.


ಭಾನುವಾರ ನಡೆಯಲಿರುವ ಮೇಲ್ಮನೆ ಚುನಾವಣೆ ಪ್ರಯುಕ್ತ ಜಪಾನ್‌ನ ನಾರಾ ಪ್ರದೇಶದಲ್ಲಿನ ರೈಲ್ವೆ ನಿಲ್ದಾಣದ ಹೊರಭಾಗದಲ್ಲಿ ಶುಕ್ರವಾರ ಪ್ರಚಾರ ನಡೆಸುತ್ತಿದ್ದ 67 ವರ್ಷದ ಶಿಂಜೋ ಅಬೆ ಅವರ ಮೇಲೆ ಬೆಳಿಗ್ಗೆ 11.30ರ ವೇಳೆಗೆ ಆಗಂತುಕನೊಬ್ಬ ಬಂದ ದುಷ್ಕರ್ಮಿ, ಅವರ ಮೇಲೆ ಎರಡು ಗುಂಡುಗಳನ್ನು ಹಾರಿಸಿದ್ದ.

ಎದೆಯ ಭಾಗಕ್ಕೆ ಗುಂಡು ತಗುಲಿದ್ದರಿಂದ ಕುಸಿದು ಬಿದ್ದ ಅವರಿಗೆ ಹೃದಯಾಘಾತ ಕೂಡ ಆಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಶಿಂಜೋ ಅಬೆ ಅವರ ಮರಣದ ಕಾರಣ ಅವರ ಗೌರವಾರ್ಥ ಭಾರತದಲ್ಲಿ ಜುಲೈ ನಾಳೆ ರಾಷ್ಟ್ರೀಯ ಶೋಕಾಚರಣೆಗೆ ನಿರ್ಧರಿಸಲಾಗಿದೆ.

LEAVE A REPLY

Please enter your comment!
Please enter your name here

Hot Topics