ಕಾರ್ಕಳದಲ್ಲಿ ಬಾವಿಯೊಂದಕ್ಕೆ ಬಿದ್ದಿದ್ದ ಜಿಂಕೆಯೊಂನ್ನು ಅರಣ್ಯ ಇಲಾಖಾಧಿಕಾರಿಗಳು ಮತ್ತು ಸಿಬ್ಬಂದಿ ರಕ್ಷಿಸಿದ್ದಾರೆ.
ಕಾರ್ಕಳ : ಕಾರ್ಕಳದಲ್ಲಿ ಬಾವಿಯೊಂದಕ್ಕೆ ಬಿದ್ದಿದ್ದ ಜಿಂಕೆಯೊಂನ್ನು ಅರಣ್ಯ ಇಲಾಖಾಧಿಕಾರಿಗಳು ಮತ್ತು ಸಿಬ್ಬಂದಿ ರಕ್ಷಿಸಿದ್ದಾರೆ.
ಪಳ್ಳಿ ಗ್ರಾಮದ ಜಮೆರೊಟ್ಟು ಮನೆಯ ಬಾವಿಗೆ ಇಂದು ಮುಂಜಾನೆ ಜಿಂಕೆಯೊಂದು ಬಿದ್ದಿದ್ದು, ಬೆಳಿಗ್ಗೆ ಬಾವಿಯ ನೀರು ಕೆಸರಾಗಿರುವುದನ್ನು ಗಮನಿಸಿದಾಗ ಜಿಂಕೆ ಬಾವಿಗೆ ಬಿದ್ದಿರುವುದು ಗಮನಕ್ಕೆ ಬಂದಿದೆ.
ಬಾವಿಯಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದ ಕಾರಣ ಜಿಂಕೆಯ ಪ್ರಾಣಕ್ಕೆ ಯಾವುದೇ ಅಪಾಯ ಉಂಟಾಗಿಲ್ಲ
ಕೂಡಲೇ ಕಾರ್ಕಳ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖಾಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಜಿಂಕೆಯನ್ನು ಜೀವಂತವಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಾವಿಯಿಂದ ಜಿಂಕೆಯನ್ನು ಮೇಲೆಕ್ಕೆತ್ತಿ ಸಿಬ್ಬಂದಿ ಬಲೆಯಿಂದ ಹೊರೆತೆಗೆಯುವ ವೇಳೆಗಾಗಲೇ ಜಿಂಕೆಯು ಕೈ ತಪ್ಪಿ ಸುರಕ್ಷಿತವಾಗಿ ಕಾಡಿಗೆ ಓಡಿದೆ.
ಕಾರ್ಯಾಚರಣೆಯಲ್ಲಿ ಡಿಆರ್‌ಎಫ್‌ಓ ಜಯರಾಮ ಪೂಜಾರಿ, ಕಣಂಜಾರು ಗಸ್ತು ಅರಣ್ಯ ಪಾಲಕ ಶ್ರೀಧರ್ ನರೇಗಲ್ಲು, ಅರಣ್ಯ ವೀಕ್ಷಕ ಸಂಜೀವ ಪರವ, ನಿವೃತ್ತ ಫಾರೆಸ್ಟ್ ಗಾರ್ಡ್ ಪೊನಪ್ಪ ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.