LATEST NEWS
ಬಾಸ್ ಜೊತೆ ಮಲಗುವಂತೆ ಒತ್ತಾಯ; ಒಪ್ಪದ ಹೆಂಡತಿಗೆ ಗಂಡನಿಂದ ತ್ರಿವಳಿ ತಾಲಕ್
Published
1 day agoon
ಮಂಗಳೂರು/ಮಹಾರಾಷ್ಟ್ರ : ಎರಡನೇ ಪತ್ನಿ ತನ್ನ ಬಾಸ್ ಜತೆ ಮಲಗಲು ಒಪ್ಪದ ಕಾರಣ ಪತಿಯು ತ್ರಿವಳಿ ತಲಾಖ್ ನೀಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಡಿಸೆಂಬರ್ 19 ರಂದು 45 ವರ್ಷದ ವ್ಯಕ್ತಿಯೊಬ್ಬ ತನ್ನ 28 ವರ್ಷದ ಹೆಂಡತಿಯನ್ನು ಪಾರ್ಟಿಯಲ್ಲಿ ತನ್ನ ಬಾಸ್ ಜೊತೆ ಇರಲು ಹೇಳಿದ್ದನ್ನು ನಿರಾಕರಿಸಿದ ಕಾರಣ ತ್ರಿವಳಿ ತಾಲಖ್ ನೀಡಿದ್ದಾನೆ.
ಅಷ್ಟು ಮಾತ್ರವಲ್ಲದೆ, ಎರಡನೇ ಪತ್ನಿಯ ಪೋಷಕರ ಮನೆಯಿಂದ 15 ಲಕ್ಷ ರೂ. ತರುವಂತೆ ಒತ್ತಡ ಹಾಕಿದ್ದ. ಆಕೆಗೂ ಆತ ತಲಾಖ್ ನೀಡಿದ್ದಾನೆ. ಆರೋಪಿ ವಿರುದ್ಧ ರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 115(2), 351(2), 351(3) ಮತ್ತು 352 ಮತ್ತು ಮುಸ್ಲಿಂ ಮಹಿಳೆಯರ (ಮದುವೆಯ ಹಕ್ಕುಗಳ ರಕ್ಷಣೆ) ಕಾಯ್ದೆ, 2019 ರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತೆ ಈ ವರ್ಷದ ಜನವರಿಯಲ್ಲಿ ಮದುವೆಯಾಗಿದ್ದರು. ಪತಿ ಹಣಕ್ಕಾಗಿ ಕಿರುಕುಳ ನೀಡಲು ಪ್ರಾರಂಭಿಸುವ ಮೊದಲು ಹೆಂಡತಿ ಮೊದಲ ಕೆಲವು ತಿಂಗಳು ಸಂತೋಷದ ಜೀವನ ಸಾಗಿಸುತ್ತಿದ್ದರು.
ಮೊದಲ ಪತ್ನಿಗೆ ವಿಚ್ಛೇದನ ನೀಡಲು 15 ಲಕ್ಷ ರೂಪಾಯಿ ಬೇಕು ಎಂದು ಪತಿ ಹೇಳಿದ್ದು, ಆ ಮೊತ್ತವನ್ನು ಪೋಷಕರಿಂದ ಪಡೆಯಲು ಎರಡನೇ ಪತ್ನಿಗೆ ಪೀಡಿಸಿದ್ದಾನೆ. ಪತಿ ತನ್ನ ಎರಡನೇ ಹೆಂಡತಿ ತನ್ನ ಬಾಸ್ ಜೊತೆ ಮಲಗಲು ನಿರಾಕರಿಸಿದಳು ಎಂದು ದೈಹಿಕವಾಗಿ ಕಿರುಕುಳ ನೀಡಿದ್ದಾನೆ. ತಕ್ಷಣ ತಲಾಖ್ ನೀಡಿದ ಬಳಿಕ ಪತ್ನಿಯನ್ನು ಮನೆಯಿಂದ ಹೊರ ಹಾಕಿದ್ದಾನೆ.ಡಿಸೆಂಬರ್ 19 ರಂದು ಪತಿ ವಿರುದ್ಧ ಪ್ರಕರಣ ದಾಖಲಿಸಲು ಪತ್ನಿ ಸಂಭಾಜಿ ನಗರ ಠಾಣೆಗೆ ತೆರಳಿದ್ದರು. ಮರುದಿನ ಪ್ರಕರಣವನ್ನು ಕಲ್ಯಾಣ್‌ನ ಬಜಾರ್‌ಪೇತ್ ಠಾಣೆಗೆ ವರ್ಗಾಯಿಸಲಾಯಿತು.
ಮಂಗಳೂರು/ಬೆಂಗಳೂರು: ಜಾತಿ ನಿಂದನೆ ಹಾಗೂ ಹಲವು ಆರೋಪಗಳ ಮೇಲೆ ಜೈಲಿಗೆ ಹೋಗಿ ಜಾಮೀನಿನ ಮೇಲೆ ಆಚೆ ಬಂದಿರುವ ಮಾಜಿ ಶಾಸಕ ಹಾಗೂ ಕನ್ನಡ ಚಿತ್ರ ನಿರ್ಮಾಪಕ ಮುನಿರತ್ನ ಅವರ ತಲೆಗೆ ಮೊಟ್ಟೆ ಹೊಡೆದ ಘಟನೆ ಲಗ್ಗೆರೆ ಸಮೀಪದ ಲಕ್ಷೀದೇವಿನಗರದಲ್ಲಿ ನಡೆದಿದೆ.
ಲಕ್ಷ್ಮೀ ದೇವಿ ನಗರ ವಾರ್ಡ್ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನಾಚಾರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶಾಸಕ ಮುನಿರತ್ನ ಹೋಗುತ್ತಿದ್ದ ವೇಳೆ ಕಂಠೀರವ ಸ್ಟುಡಿಯೋ ಬಳಿ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಜಮ್ಮುವಿನಲ್ಲಿ ಸೇನಾ ವಾಹನ ಅಪಘಾತ; ಉಡುಪಿ ಮೂಲದ ಯೋಧ ಸೇರಿ ಐವರು ಹುತಾತ್ಮ
ಈ ವೇಳೆ ಶಾಸಕ ಮುನಿರತ್ನ ಅವರು ತಮ್ಮ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ. ನಂತರ ಅವರು ಅಲ್ಲಿಂದ ತೆರಳಿದ್ದಾರೆ. ಬಳಿಕ ಕಾಂಗ್ರೆಸ್ ಕಾರ್ಯಕರ್ತರು ಮುನಿರತ್ನ ಬೆಂಬಲಿಗರ ನಡುವೆ ಗಲಾಟೆ ನಡೆದಿದ್ದು 2ರಿಂದ 3 ಕಾರು ಜಖಂ ಆಗಿ ಹಲವರಿಗೆ ಗಾಯವಾಗಿದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರ ಮೇಲೂ ಶಾಸಕ ಮುನಿರತ್ನ ಬೆಂಬಲಿಗರು ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.
International news
ವಿಶ್ವ ಪ್ರಸಿದ್ದ ಪ್ಯಾರೀಸ್ ನ ಐಫೆಲ್ ಟವರ್ ನಲ್ಲಿ ಬೆಂಕಿ ಅವಘಡ; 1200 ಪ್ರವಾಸಿಗರ ಸ್ಥಳಾಂತರ
Published
1 hour agoon
25/12/2024By
NEWS DESK3ಮಂಗಳೂರು/ಪ್ಯಾರಿಸ್: ಪ್ಯಾರಿಸ್ ನ ಐಫೆಲ್ ಟವರ್ ನಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದೆ. ತಾಂತ್ರಿಕ ಸಮಸ್ಯೆಯಿಂದ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ.
ಈಗಗಾಲೇ 1200 ಜನರನ್ನು ಸುರಕ್ಷಿತವಾಗಿ ಹೊರಕ್ಕೆ ಕರೆತರಲಾಗಿದೆ. ಪ್ಯಾರಿಸ್ ನ ಐಕಾನಿಕ್ ಲ್ಯಾಂಡ್ ಮಾರ್ಕ್ ನಲ್ಲಿ ಬೆಂಕಿ ಕಾಣಿಸಿಕೊಂಡ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಬೆಂಕಿಯನ್ನು ನಿಯಂತ್ರಿಸಲು ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತುರ್ತು ಸೇವೆಗಳನ್ನು ನಿಯೋಜಿಸಲಾಯಿತು.
ಫ್ರೆಂಚ್ ಅಧಿಕಾರಿಗಳ ಪ್ರಕಾರ, ಐಫೆಲ್ ಟವರ್ ನಲ್ಲಿ ಬೆಂಕಿ ಅದರ ಲಿಫ್ಟ್ ನಲ್ಲಿ ಕಾಣಿಸಿಕೊಂಡಿದೆ. ಈ ಬೆಂಕಿಯು ಮೊದಲ ಮತ್ತು ಎರಡನೇ ಮಹಡಿಯ ನಡುವಿನ ಲಿಫ್ಟ್ ಶಾಫ್ಟ್ ನಲ್ಲಿ ಕಾಣಿಸಿಕೊಂಡಿತು. ಬೆಂಕಿ ಕಾಣಿಸಿಕೊಂಡ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ತುರ್ತು ಸಹಾಯಕರು, ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದರು. ನಂತರ ಬೆಂಕಿ ತೀವ್ರವಾಗಿ ಹರಡಿದ್ದರಿಂದ ರಕ್ಷಣಾ ಕಾರ್ಯಾಚರಣೆ ಕಷ್ಟಕರವಾಯಿತು. ಸುಮಾರು 1200 ಜನರನ್ನು ಟವರ್ ನಿಂದ ಹೊರಕ್ಕೆ ಕರೆತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಪಾಕ್ ನಿಂದ ಅಕ್ರಮವಾಗಿ ಭಾರತಕ್ಕೆ ಬಂದಿದ್ದ ಸೀಮಾ ಹೈದರ್ ಗರ್ಭಿಣಿ !
ಅವಘಡದಲ್ಲಿ ಸಿಲುಕಿ ಹಾಕಿಕೊಂಡ ಎಲ್ಲರನ್ನೂ ರಕ್ಷಣೆ ಮಾಡಲಾಗಿದೆ, ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಘಟನೆ ಬಳಿಕ ಐಫೆಲ್ ಟವರ್ ಗೋಪುರವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದ್ದು, ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಐಫೆಲ್ ಟವರ್ ವಿಶ್ವದ ಅತ್ಯಂತ ಜನಪ್ರಿಯ ತಾಣಗಳಲ್ಲಿ ಒಂದಾಗಿದೆ. ಅಂಕಿಅಂಶಗಳ ಪ್ರಕಾರ ಪ್ರತಿದಿನ 15,000 ಮತ್ತು 25,000 ಸಂದರ್ಶಕರು ಇಲ್ಲಿಗೆ ಭೇಟಿ ನೀಡುತ್ತಾರೆ.
ಸ್ಮಾರಕಕ್ಕೆ ಬೆಂಕಿ ಬಿದ್ದಿರುವುದು ಇದು ಮೊದಲನೇ ಸಲ ಅಲ್ಲ. ಜನವರಿ 1956 ರಲ್ಲಿ, ಗೋಪುರದ ದೂರದರ್ಶನ ಪ್ರಸರಣ ಕೊಠಡಿಯಲ್ಲಿ ಬೆಂಕಿ ಸಂಭವಿಸಿ ಅಪಾರ ಪ್ರಮಾಣದಲ್ಲಿ ಹಾನಿ ಉಂಟು ಮಾಡಿತ್ತು.
LATEST NEWS
ಬಿಹಾರದಲ್ಲಿ ಪುರುಷ ಶಿಕ್ಷಕ ಗರ್ಭಿಣಿ : ಶಿಕ್ಷಣ ಇಲಾಖೆಯಿಂದಲೂ `ಹೆರಿಗೆ ರಜೆ’ ಮಂಜೂರು.!
Published
2 hours agoon
25/12/2024By
NEWS DESK2ಪಾಟ್ನಾ: ಬಿಹಾರದ ಶಿಕ್ಷಣ ಇಲಾಖೆ ಆಗಾಗ ಸುದ್ದಿಯಲ್ಲಿದೆ. ಶಿಕ್ಷಣ ಇಲಾಖೆ ಪುರುಷ ಬಿಪಿಎಸ್‌ಸಿ ಶಿಕ್ಷಕನನ್ನು ಗರ್ಭಿಣಿಯನ್ನಾಗಿ ಮಾಡಿ ಹೆರಿಗೆ ರಜೆಯನ್ನೂ ನೀಡಿದೆ. ಈ ಸುದ್ದಿ ಹೊರಬಿದ್ದ ಬೆನ್ನಲ್ಲೇ ಇದೀಗ ಬಿಹಾರ ಶಿಕ್ಷಣ ಇಲಾಖೆ ಎಡವಟ್ಟು ಹೊರಬಿದ್ದಿದೆ.
ಶಿಕ್ಷಣ ಇಲಾಖೆಯು ಹಾಜಿಪುರ್ ಮಹುವಾ ಬ್ಲಾಕ್ ಪ್ರದೇಶದ ಹಸನ್‌ಪುರ ಒಸಟಿ ಪ್ರೌಢಶಾಲೆಗೆ ಸಂಬಂಧಿಸಿದೆ. ಇಲ್ಲಿ ನೇಮಕಗೊಂಡಿರುವ ಬಿಪಿಎಸ್‌ಸಿ ಶಿಕ್ಷಕ ಜಿತೇಂದ್ರ ಕುಮಾರ್ ಸಿಂಗ್ ಅವರು ಗರ್ಭಿಣಿ ಎಂದು ಹೆರಿಗೆ ರಜೆ ಮಾಡಿದೆ. ಜಿತೇಂದ್ರ ಕುಮಾರ್ ಸಿಂಗ್ ಅವರಿಗೆ ಶಿಕ್ಷಣ ಇಲಾಖೆಯ ಪೋರ್ಟಲ್ ಇ-ಶಿಕ್ಷಾ ಕೋಶ್‌ನಲ್ಲಿ ಹೆರಿಗೆ ರಜೆ ನೀಡಲಾಗಿದೆ. ಶಿಕ್ಷಣ ಇಲಾಖೆಯ ದೃಷ್ಟಿಯಲ್ಲಿ ಮತ್ತು ಅಧಿಕೃತ ವೆಬ್‌ಸೈಟ್ ಪ್ರಕಾರ, ಶಿಕ್ಷಕ ಜಿತೇಂದ್ರ ಕುಮಾರ್ ಸಿಂಗ್ ಗರ್ಭಿಣಿಯಾಗಿದ್ದು, ರಜೆಯಲ್ಲಿದ್ದಾರೆ ಎಂದು ನಮೂದಾಗಿದೆ.
ಹೆರಿಗೆ ರಜೆ ಮಹಿಳಾ ಶಿಕ್ಷಕರಿಗೆ ಮಾತ್ರ ಎಂಬುದು ಗಮನಿಸಬೇಕಾದ ಸಂಗತಿ. ಮಹಿಳಾ ಶಿಕ್ಷಕರು ಗರ್ಭಿಣಿಯಾಗಿದ್ದಾಗ ಮತ್ತು ಮಗುವಿಗೆ ಜನ್ಮ ನೀಡುವ ಸಮಯದಲ್ಲಿ ಈ ರಜೆಯನ್ನು ಪಡೆಯುತ್ತಾರೆ. ಆದರೆ ಹಾಜಿಪುರದಲ್ಲಿ ಪರಿಸ್ಥಿತಿ ಬದಲಾಗಿದೆ. ಇಲ್ಲಿ ಪುರುಷ ಶಿಕ್ಷಕರಿಗೂ ಹೆರಿಗೆ ರಜೆ ನೀಡಿ ಶಿಕ್ಷಣ ಇಲಾಖೆ ಎಡವಟ್ಟು ಮಾಡಿಕೊಂಡಿದೆ.
ಈ ವಿಚಾರದಲ್ಲಿ ಬ್ಲಾಕ್ ಶಿಕ್ಷಣಾಧಿಕಾರಿ ಅರ್ಚನಾ ಕುಮಾರಿ ಅವರು ಇಲಾಖೆಯ ತಪ್ಪನ್ನು ಒಪ್ಪಿಕೊಂಡು ಪೋರ್ಟಲ್‌ನಲ್ಲಿನ ದೋಷದಿಂದ ಈ ರೀತಿ ಆಗಿದೆ ಎಂದು ಹೇಳಿದ್ದಾರೆ. ಪುರುಷ ಶಿಕ್ಷಕರಿಗೆ ಈ ರೀತಿಯ ರಜೆ ನೀಡುವುದಿಲ್ಲ. ಇದನ್ನು ಶೀಘ್ರದಲ್ಲೇ ಸುಧಾರಿಸಲಾಗುವುದು. ಶಿಕ್ಷಕಿಯೊಬ್ಬರು ಮಹಿಳೆಯರಿಗೆ ರಜೆ ನೀಡಿರುವ ರೀತಿ ಜಿಲ್ಲೆಯ ಪುರುಷ ಶಿಕ್ಷಕರನ್ನು ಕೆರಳಿಸಿದ್ದು ವಿಶಿಷ್ಟ ನಗೆಪಾಟಲಿಗೀಡಾಗಿದೆ.
LATEST NEWS
ಗ್ಯಾಸ್ ಸ್ಟವ್ ಈ ಬಣ್ಣದಲ್ಲಿ ಉರಿದರೆ ಕೂಡಲೇ ಎಚ್ಚೆತ್ತುಕೊಳ್ಳಿ
ನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಟೀಂ ಇಂಡಿಯಾ ಕ್ರಿಕೆಟಿಗ ?
ಕಡಬ : ಮೇಯುತ್ತಿದ್ದ ದನದ ಕಾಲು ಕ*ಡಿದ ಪಾ*ಪಿ
ಬಿಪಿ, ಮಧುಮೇಹ ಮಾತ್ರೆಗಳ ಬೆಲೆ ಕಡಿತಗೊಳಿಸಿದ ಸರ್ಕಾರ !
ಮಲದ ಗುಂಡಿಗೆ ಇಳಿದ ಕಾರ್ಮಿಕ ಉಸಿರುಗಟ್ಟಿ ಸಾವು.!
ಸೈಬರ್ ಕ್ರೈಂ ಕಾರ್ಯಾಚರಣೆ; ಕೇರಳದ ಆರೋಪಿಗಳಿಬ್ಬರು ಅರೆಸ್ಟ್
Trending
- FILM22 hours ago
ಆ ಒಂದು ದೃಶ್ಯದಿಂದ ಪುಷ್ಪ 2 ಚಿತ್ರಕ್ಕೆ ಮತ್ತೆ ಸಂಕಷ್ಟ!
- FILM22 hours ago
ಸಂಭಾವನೆಯಲ್ಲಿ ದಾಖಲೆ ಬರೆದ ಯಶ್ !
- bangalore23 hours ago
ಡಿಕೆ ಸುರೇಶ್ ತಂಗಿ ಎಂದು ಹೇಳಿಕೊಂಡು ಚಿನ್ನ ಖರೀದಿಸಿ ವಂಚನೆ; ನಟ ಧಮೇಂದ್ರ ವಿರುದ್ದ ಎಫ್ ಐ ಆರ್ ದಾಖಲು !
- LATEST NEWS7 days ago
ದಹಿ ಪುರಿ ಚಾಟ್ಸ್ ಬದಲು ಪೂರಿ, ಮೊಸರು ಕಳುಹಿಸಿಕೊಟ್ಟ ರೆಸ್ಟೋರೆಂಟ್