Monday, August 10, 2020

ಮುಂದಿನ ಮೂರು ತಿಂಗಳು ನಾಡಿಗೆ ಮಾರಕ, ಹಳ್ಳಿ ಹಳ್ಳಿಯಲ್ಲಿ ಕೊರೊನಾ ಮರಣ ಮೃದಂಗ- ಕೋಡಿಮಠ ಸ್ವಾಮೀಜಿ ಭವಿಷ್ಯ..!

Array

ಬ್ರಹ್ಮಗಿರಿ ಬೆಟ್ಟ ಕುಸಿತ ಎರಡೇ ದಿನದಲ್ಲಿ ಕಾರ್ಯಾಚರಣೆ ಮುಗಿಸಿ – ಆರ್ ಅಶೋಕ್

ಕೊಡಗು : ಕೊಡಗಿನ ತಲಕಾವೇರಿ ಬ್ರಹ್ಮಗಿರಿ ಬೆಟ್ಟ ಕುಸಿತವಾಗಿ ಕಣ್ಮರೆಯಾಗಿರುವ ನಾಲ್ವರನ್ನು ಹುಡುಕುವ ಕೆಲಸ ಎರಡೇ ದಿನಗಳಲ್ಲಿ ಮುಗಿಯಬೇಕು ಎಂದು ಕಂದಾಯ ಸಚಿವ ಆರ್ ಅಶೋಕ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಕೊಡಗಿನ ತಲಕಾವೇರಿಯ...

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಳಿಕೆ ಹಾದಿಯಲ್ಲಿ ಕೊರೊನಾ ಪ್ರಕರಣ..!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಳಿಕೆ ಹಾದಿಯಲ್ಲಿ ಕೊರೊನಾ ಪ್ರಕರಣ..! ಮಂಗಳೂರು :ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಸದ್ಯ ಇಳಿಕೆ ಹಾದಿಯಲ್ಲಿದ್ದು, ಇಂದು ಕೇವಲ 132 ಕೊರೊನಾ ಪ್ರಕರಣ ದಾಖಲಾಗಿದೆ. ಆದರೆ ಕೊರೊನಾದಿಂದ ಸಾವನಪ್ಪುತ್ತಿರುವವರ ಸಂಖ್ಯೆ...

ಉಡುಪಿ 6 ಸಾವಿರ ದಾಟಿದ ಕೊರೊನಾ ಒಟ್ಟು ಸೊಂಕಿತರ ಸಂಖ್ಯೆ

ಉಡುಪಿ ; ಉಡುಪಿ ಜಿಲ್ಲೆಯಲ್ಲಿ ಇಂದು ಒಂದೇ ದಿನ 282 ಕೊರೊನಾ ಪ್ರಕರಣ ದಾಖಲಾಗಿದೆ. ಇದರೊಂದಿಗೆ ಉಡುಪಿಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಆರು ಸಾವಿರ ದಾಟಿದೆ. ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೊಂಕಿತರ ಸಂಖ್ಯೆ 6201...

ಬಾಲಿವುಡ್ ಸ್ಟಾರ್ ನಿಧಿ ಅಗ್ರವಾಲ್..!

ಬಾಲಿವುಡ್ ಸ್ಟಾರ್ ನಿಧಿ ಅಗ್ರವಾಲ್...  ಸಮಯ ಸಿಕ್ಕಾಗ ಸೋಷಿಯಲ್ ಮೀಡಿಯಾ ಲೈವ್ ಬರುತ್ತಾ, ಅಭಿಮಾನಿಗಳ ಜೊತೆ ಮಾತನಾಡುತ್ತ ಕಾಲ ಕಳೆಯುವ ಹವ್ಯಾಸ ಇಟ್ಟುಕೊಟ್ಟಿದ್ದಾಳೆ ನಿಧಿ ಅಗ್ರವಾಲ್.. ಹೈದ್ರಾಬಾದ್ ನಲ್ಲಿ ನಲ್ಲಿ ಹುಟ್ಟಿ ಬಳಿಕ...

ಚಾಕಲೇಟ್ ಗಂಟಲಲ್ಲಿ ಸಿಲುಕಿ ಬಾಲಕ ಸಾವು

ಮಂಗಳೂರು: ಚಾಕಲೇಟ್ ಗಂಟಲಲ್ಲಿ ಸಿಲುಕಿದ ಪರಿಣಾಮ ಎಂಟು ವರ್ಷದ ಬಾಲಕ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರು ಹೊರವಲಯದ ಉಳ್ಳಾಲ ಸೋಮೇಶ್ವರ ಗ್ರಾಮದ ಉಚ್ಚಿಲ ಗುಡ್ಡದಲ್ಲಿ ಈ ದುರ್ಘಟನೆ ನಡೆದಿದೆ.ರಹೀಂ ಎಂಬವರ ಮಗ...

ಮುಂದಿನ ಮೂರು ತಿಂಗಳು ನಾಡಿಗೆ ಮಾರಕ, ಹಳ್ಳಿ ಹಳ್ಳಿಯಲ್ಲಿ ಕೊರೊನಾ ಮರಣ ಮೃದಂಗ- ಕೋಡಿಮಠ ಸ್ವಾಮೀಜಿ ಭವಿಷ್ಯ..!

ಹಾಸನ: ಮುಂದಿನ ಮೂರು ತಿಂಗಳು ನಾಡಿಗೆ ಮಾರಕವಾಗಿದ್ದು ಹಳ್ಳೀ ಹಳ್ಳಿಗಳಲ್ಲಿ ಕೊರೊನಾ ಮರಣ ಮೃದಂಗ ಬಾರಿಸಲಿದೆಎಂದು ಕೋಡಿಮಠ ಶ್ರೀ ಗಳು ಎಚ್ಚರಿಕೆ ನೀಡಿದ್ದಾರೆ.

ಅಶ್ವಿಜ ಮತ್ತು ಕಾರ್ತಿಕ ಮಾಸದಲ್ಲಿ ಮರಣ ಮೃದಂಗ ಬಾರಿಸಲಿದೆ ಆದ್ದರಿಂದ ಹಳ್ಳಿಗಳ ಜನರು ಎಚ್ಚರದಿಂದ ಇರಬೇಕು. ಸ್ಚಚ್ಛತೆ, ಸುರಕ್ಷತೆ, ಅಂತರ ಕಾಪಾಡಿಕೊಳ್ಳಬೇಕು.

ಸರ್ಕಾರದ ನಿಯಮ ಕಟ್ಟುನಿಟ್ಟಾಗಿ ಪಾಲಿಸಿ ಎಂದು ಕೋಡಿ ಮಠದ ಶಿವಾನಂದ ಶಿವಾಚಾರ್ಯ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನಲ್ಲಿರುವ ಕೋಡಿ ಮಠದಲ್ಲಿ ಶ್ರೀಗಳು ಈ ಮಾತು ಹೇಳಿದ್ದು ಜನರು ಸ್ಚಚ್ಚತೆ, ಆಚಾರ, ವಿಚಾರ ಕೈಬಿಟ್ಟಿದ್ದಕ್ಕೆ ಈ ಮಾಹಾಮಾರಿ ಹೊಡೆತ ಕೊಟ್ಟಿದೆ.

ಧರ್ಮದ ಹೆಸರಿನ ಆಚರಣೆಗಳು ರೋಗ ರುಜಿನ ತಡೆಯುತ್ತಿದ್ದವು.ಆದರೆ ಆಧುನಿಕತೆ ಹೆಸರಿನಲ್ಲಿ ಅವೆಲ್ಲವೂ ಮಾಯವಾಗಿವೆ. ಕೊರೊನಾ ಎಂಬುದು ಗಂಟಲು ಬೇನೆ ಎಂಬ ಹಳೆಯ ಕಾಯಿಲೆ.

ಅದು ಗಾಳಿಯಲ್ಲಿ ಸಂಚರಿಸಿ ಹರಡೋದು ಕಡಿಮೆ ಎಂದು ಹೇಳಿದ್ದಾರೆ. ಸರ್ಕಾರದ ತೀರ್ಮಾನಗಳು ಕೊರೊನಾ ಕಾಯಿಲೆ ಹೆಚ್ಚುವಂತೆ ಮಾಡಿವೆ. ಹಿಂದೆಯೇ ಮತ್ತೊಂದು ತಿಂಗಳು ಲಾಕ್ ಡೌನ್ ಮುಂದುವರೆಸಿದ್ದರೆ ಕೊರೊನಾ ಕಡಿಮೆಯಾಗುತ್ತಿತ್ತು.

ನಡುವೆ ಲಾಕ್ ಡೌನ್ ತೆರವು ಮಾಡಿದ್ದರಿಂದ ಸೋಂಕು ವಿಪರೀತವಾಗಿ ಈಗ ನಿಯಂತ್ರಣಕ್ಕೆ ಬಾರದಂತಾಗಿದೆ.
ಸರ್ಕಾರ ತನ್ನ ಆರ್ಥಿಕ ದೃಷ್ಟಿಯಿಂದ ಹೆಂಡದಂಗಡಿ ತೆರೆಸಿತು.

ಆದ್ರೆ ಜನರಿಗೆ ಬೇಕಾಗಿದ್ದ ದೇಗುಲ ಮುಚ್ಚಿಬಿಡ್ತು. ವಿನಾಶಕಾರಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿ, ಜನರು ನಂಬಿದ್ದ ಧಾರ್ಮಿಕ ಕೇಂದ್ರ ಮುಚ್ಚಿದಿರಿ.. ಇದರಿಂದಲೇ ದೇವರ ಅವಕೃಪೆಗೆ ಪಾತ್ರವಾಗುವಂತಾಗಿದೆ.

ಸರ್ಕಾರದ ತಪ್ಪು ನಿರ್ಧಾರದಿಂದಲೇ ಕೊರೊನಾ ಹೆಚ್ಚಾಗಿದೆ ಎಂದು ಕೋಡಿ ಶ್ರೀ ಆಕ್ರೋಶ ಹೊರಹಾಕಿದ್ರು.
ಜನರು ಸುರಕ್ಷತೆ ಕಾಪಾಡಿದರೆ ಯಾವುದೇ ಔಷಧಿ ಇಲ್ಲದೆ ಕೊರೊನಾದಿಂದ ಪಾರಾಗಬಹುದು.

ಜನರು ಭಯ, ಆತಂಕಪಡೋ ಅಗತ್ಯ ಇಲ್ಲ. ಆದರೆ, ಪ್ರಕೃತಿ ಮೇಲೆ ಮನುಷ್ಯ ಮಾಡಿದ ದಬ್ಬಾಳಿಕೆಯಿಂದ ಪ್ರಕೃತಿ ಈಗ ಮುನಿದಿದೆ. ಪ್ರಕೃತಿ ಮುನಿದಿದ್ರಿಂದಲೇ ಕೊರೊನಾ ಬಂದಿದೆ ಎಂದು ಸ್ಮಾಮೀಜಿ ಹೇಳಿದ್ದಾರೆ.

Hot Topics

ಕದ್ರಿ ಕಂಬ್ಳ ಜಂಕ್ಷನ್‌ ನಲ್ಲಿ ಭೀಕರ ರಸ್ತೆ ಅಪಘಾತ ಯುವತಿಯ ಮೈಮೇಲೆ ಹರಿದ ಕಾರು..! 

ಕದ್ರಿ ಕಂಬ್ಳ ಜಂಕ್ಷನ್‌ ನಲ್ಲಿ ಭೀಕರ ರಸ್ತೆ ಅಪಘಾತ ಯುವತಿಯ ಮೈಮೇಲೆ ಹರಿದ ಕಾರು..!  ಮಂಗಳೂರು : ಇಂದು ಬೆಳಿಗ್ಗೆ ಮಂಗಳೂರು ನಗರದ ಕದ್ರಿಯಲ್ಲಿ ನಡೆದಿದ್ದ ರಸ್ತೆ ಅಪಘಾತವೊಂದರಲ್ಲಿ ಯುವತಿಯೊಬ್ಬಳು ಗಂಭೀರ ಗಾಯಗೊಂಡಿದ್ದಾಳೆ. ನಗರದ ಕದ್ರಿ...

ಚಾರ್ಮಾಡಿ ಪರಿಸರದಲ್ಲಿ ಭಾರೀ ಮಳೆ :ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ ಮೃತ್ಯಂಜಯ ಹೊಳೆ..!

ಚಾರ್ಮಾಡಿ ಪರಿಸರದಲ್ಲಿ ಭಾರೀ ಮಳೆ :ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ ಮೃತ್ಯಂಜಯ ಹೊಳೆ..! ಬೆಳ್ತಂಗಡಿ : ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟ್ ಪರಿಸರದಲ್ಲಿ ಭಾರೀ ಮಳೆಯಾಗುತ್ತಿದ್ದು, ಸನಿಹದ ಮೃತ್ಯಂಜಯ ಹೊಳೆ ಅಪಾಯದ ಮಟ್ಟದಲ್ಲಿ...

ಕೇರಳ ಮನ್ನಾರ್ ಭೂ ಕುಸಿತಕ್ಕೆ 13 ಬಲಿ..ಮಣ್ಣಿನಡಿ ಸಿಲುಕಿರುವ 80ಕ್ಕೂ ಅಧಿಕ ಮಂದಿ

ತಿರುವನಂತಪುರಂ : ಕೇರಳದ ಇಡುಕ್ಕಿಯಲ್ಲಿ ಇಂದು ಬೆಳಗ್ಗೆ ಭೂಕುಸಿತವಾಗಿ 13 ಜನರು ಸಾವನ್ನಪ್ಪಿದ್ದಾರೆ. ಕೇರಳದ ಪ್ರಸಿದ್ಧ ಪ್ರವಾಸಿತಾಣ ಮುನ್ನಾರ್​​ನಿಂದ 25 ಕಿ.ಮೀ ದೂರದಲ್ಲಿರೋ ರಾಜಮಲೈ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ....
Copy Protected by Chetans WP-Copyprotect.