ಕೊಪ್ಪಳ: ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಪ್ರತಿ ಸಿಲಿಂಡರ್ಗೆ 25 ರೂಪಾಯಿ ಏರಿಕೆ ಮಾಡಲಾಗಿದೆ.
ಈ ಬಗ್ಗೆ ಪ್ರಶ್ನೆ ಮಾಡಿದಾಗ ಸಂಸದ ಸಂಗಣ್ಣ ಕರಡಿ ಉಡಾಫೆಯಾಗಿ ಮಾತನಾಡಿದ್ದು, ಸಾಲ ಮಾಡಿಯಾಗಿದೆ, ಈಗ ಸಾಲ ಹರಿಬೇಕಲ್ಲ ಎಂದು ಹೇಳುವ ಮೂಲಕ ಬೆಲೆ ಏರಿಕೆಯನ್ನೂ ಸಮರ್ಥಿಸಿಕೊಂಡಿದ್ದಾರೆ.
UPA ಸರ್ಕಾರ ಇದ್ದಾಗ ತೈಲ ಕಂಪನಿಗಳಿಗೆ ಬಾಂಡ್ ಕೊಟ್ಟಿದ್ರು,
ನಮ್ಮ ಸರ್ಕಾರ 59 ಸಾವಿರ ಕೋಟಿ ರೂಪಾಯಿ ಹಾಗೂ 35 ಸಾವಿರ ಕೋಟಿ ರೂಪಾಯಿ ಸಾಲ ತುಂಬಿದೆ. ಇನ್ನು ಒಂದು ಲಕ್ಷ ಕೋಟಿ ರೂ. ಬಾಕಿ ಇದೆ ಎಂದಿದ್ದಾರೆ.
ಹಾಗಾದರೆ ಇದಕ್ಕೆಲ್ಲಾ ಯುಪಿಎ ಸರ್ಕಾರ ಕಾರಣ ಅಂತ ಹೇಳ್ತೀರಾ ಎಂದು ಕೇಳಿದಾಗ ಸಿಡಿಮಿಡಿಯಾದ ಅವರು, ನಿಮ್ಮಪ್ಪ ಸಾಲ ಮಾಡಿದ್ರೆ ಮಗನಾಗಿ ನೀನು ಸಾಲ ತೀರಿಸ್ತೀಯಾ ಇಲ್ವಾ? ನಾವು ಕೂಡಾ ಹಂಗೆ ಸಾಲ ತೀರಿಸ್ತಿದಿವಿ ಎಂದು ಹೇಳಿದ್ದಾರೆ.
ಬಡವರಿಗೆ ಏನ್ ಸಹಾಯ ಮಾಡಬೇಕೋ ಮಾಡಿದೀವಿ. ಜನರು ಸಾಲ ಮಾಡಬೇಕಾ ಅಂತಾ ಕೇಳಿದ್ರೆ ಏನ್ ಹೇಳೋದು.
ದೇಶ ಒತ್ತೆ ಇಡಬೇಕಾ ನಾವು? ಬಡವರ ಬಗ್ಗೆ ನೀವು ಕೇಳೋದನ್ನು ನಾನು ಒಪ್ಕೋತಿನಿ. ಆದರೆ, ಸರ್ಕಾರ ನಡೆಸಬೇಕಲ್ಲ ನಾವು, ಕೊವಿಡ್ನಿಂದ ಸರ್ಕಾರಕ್ಕೆ ಏನೂ ಆದಾಯ ಇಲ್ಲ ಎಂದು ಸಮಜಾಯಿಷಿ ಕೊಟ್ಟಿದ್ದಾರೆ.