Home ಕರ್ನಾಟಕ ವಾರ್ತೆ ಲಾಂಗ್ ಹಿಡಿದು ಕಾರು ಚೇಸ್: ದುಷ್ಕರ್ಮಿಗಳಿಂದ ಹೈಡ್ರಾಮಾ.!

ಲಾಂಗ್ ಹಿಡಿದು ಕಾರು ಚೇಸ್: ದುಷ್ಕರ್ಮಿಗಳಿಂದ ಹೈಡ್ರಾಮಾ.!

ಲಾಂಗ್ ಹಿಡಿದು ಕಾರು ಚೇಸ್: ದುಷ್ಕರ್ಮಿಗಳಿಂದ ಹೈಡ್ರಾಮಾ.!

ಕುಂದಾಪುರ: ಕ್ಷುಲ್ಲಕ ಕಾರಣಕ್ಕೆ ಇತ್ತಂಡಗಳ‌ ನಡುವೆ ಗಲಾಟೆ ನಡೆದ ಹಿನ್ನಲೆಯಲ್ಲಿ ಎರಡು ತಂಡಗಳು, ಪ್ರತ್ಯೇಕ ಎರಡು ಕಾರುಗಳಲ್ಲಿ ಲಾಂಗ್ ಹಿಡಿದು ಚೇಸಿಂಗ್ ಮಾಡಿದ ಸಿನಿಮಿಯ ಘಟನೆ ಕುಂದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಈ ಘಟನೆಯಲ್ಲಿ ಒಂದು ತಂಡ‌ ಪ್ರಯಾಣಿಸುತ್ತಿದ್ದ ಕಾರು ಪಲ್ಟಿಯಾಗಿದೆ. ನಾವುಂದ ಕಡೆಯಿಂದ ಎರಡು ಕಾರುಗಳಲ್ಲಿ ದುಷ್ಕರ್ಮಿಗಳು ಚೇಸಿಂಗ್ ಮಾಡಿಕೊಂಡು ಬರುತ್ತಿದ್ದರು.

ಈ ಸಂದರ್ಭದಲ್ಲಿ ಹಟ್ಟಿಯಂಗಡಿ ಗ್ರಾಮಪಂಚಾಯತ್ ಬಳಿಯ ಗುಡ್ಡೆಯಂಗಡಿ ಬಳಿ ಒಂದು ತಂಡದ ಕಾರು ಪಲ್ಟಿಯಾಗಿದೆ.

ಕೆಂಪು ಬಣ್ಣದ ಬಲೆನೋ ಕಾರು ಚರಂಡಿಗೆ ಬಿದ್ದು ಪಲ್ಟಿಯಾಗಿದ್ದು, ಈ ಕಾರಿನಲ್ಲಿ ಲಾಂಗು, ಮಚ್ಚು ಸಿಕ್ಕಿದೆ.

ಎರಡು ದಿನಗಳ ಹಿಂದೆ ಕ್ಷುಲ್ಲಕ ಕಾರಣಕ್ಕೆ ಎರಡು ತಂಡಗಳ ನಡುವೆ ಗಲಾಟೆ ನಡೆದಿತ್ತು. ಅಲ್ಲದೇ ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು.

ಈ ಗಲಾಟೆ ಮುಂದುವರಿದ ಭಾಗವಾಗಿ ಇಂದು ಬೆಳಿಗ್ಗೆ ಕಾರ್ ಚೇಸಿಂಗ್ ನಡೆದಿತ್ತು.

ಸದ್ಯ ಕಾರಿನಲ್ಲಿದ್ದ ಐದಾರು ಮಂದಿ ಪರಾರಿಯಾಗಿದ್ದು, ಇನ್ನೊಂದು ಕಾರಿನಲ್ಲಿದ್ದವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಜೊತೆಗೆ ಪರಾರಿಯಾಗಿದ್ದ ಇಬ್ಬರು ಯುವಕರೂ ಪತ್ತೆಯಾಗಿದ್ದು, ಸದ್ಯ ಗಂಗೊಳ್ಳಿ ಠಾಣೆಯಲ್ಲಿ ವಿಚಾರಣೆ ನಡೆಯುತ್ತಿದೆ.

- Advertisment -

RECENT NEWS

ದಕ್ಷಿಣ ಅಸ್ಸಾಂನ ಬರಾಕ್ ಕಣಿವೆಯಲ್ಲಿ ಭೂಕುಸಿತ: 20ಕ್ಕೂ ಅಧಿಕ ಮಂದಿ ಜೀವಂತ ಸಮಾಧಿ..

ದಕ್ಷಿಣ ಅಸ್ಸಾಂನ ಬರಾಕ್ ಕಣಿವೆಯಲ್ಲಿ ಭೂಕುಸಿತ: 20ಕ್ಕೂ ಅಧಿಕ ಮಂದಿ ಜೀವಂತ ಸಮಾಧಿ.. ಗುವಾಹಟಿ: ದಕ್ಷಿಣ ಅಸ್ಸಾಂನ ಬರಾಕ್​ ಕಣಿವೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದು, ಮಹಿಳೆಯರು, ಮಕ್ಕಳು ಸೇರಿ 20ಕ್ಕೂ ಹೆಚ್ಚು ಜನ...

ಲಾಕ್ ಡೌನ್ ನಿಯಮ ಗಾಳಿಗೆ ತೂರಿ ಸೈಂಟ್ ಮೇರಿಸ್ ದ್ವೀಪದಲ್ಲಿ ಪಾರ್ಟಿ ಮಾಡಿದವರ ವಿರುದ್ಧ ತನಿಖೆ..

ಲಾಕ್ ಡೌನ್ ನಿಯಮ ಗಾಳಿಗೆ ತೂರಿ ಸೈಂಟ್ ಮೇರಿಸ್ ದ್ವೀಪದಲ್ಲಿ ಪಾರ್ಟಿ ಮಾಡಿದವರ ವಿರುದ್ಧ ತನಿಖೆ.. ಉಡುಪಿ: ಕೋವಿಡ್- 19 ಲಾಕ್ ಡೌನ್ ನಿಯಮ ಉಲ್ಲಂಘಿಸಿ, ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿ ಮೇ 9ರಂದು...

ಕರ್ನಾಟಕ ಕಲ್ಚರಲ್ ಫೌಂಡೇಶನ್ ಸೌದಿ ಅರೇಬಿಯ ವತಿಯಿಂದ ನೂತನ ಮನೆ ಹಸ್ತಾಂತರ

ಕರ್ನಾಟಕ ಕಲ್ಚರಲ್ ಫೌಂಡೇಶನ್ ಸೌದಿ ಅರೇಬಿಯ ವತಿಯಿಂದ ನೂತನ ಮನೆ ಹಸ್ತಾಂತರ ಬೆಳ್ತಂಗಡಿ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಸೌದಿ ಅರೇಬಿಯ ಇದರ ವತಿಯಿಂದ ಬೆಳ್ತಂಗಡಿ ತಾಲೂಕಿನ ಬೆದ್ರಬೆಟ್ಟುವಿನಲ್ಲಿ ನಿರ್ಮಿಸಲಾದ ಮನೆಯ ಕೀಲಿ ಕೈ ಹಸ್ತಾಂತರ...

ದಿಟ್ಟ ಕ್ರಮಗಳಿಂದ ಸರಕಾರವನ್ನು ತಟ್ಟಿ ಕೇಳಿದ್ದ ಹಿರಿಯ ಕೆಎಎಸ್ ಅಧಿಕಾರಿ ಕೆ.ಮಥಾಯಿ ಸೇವೆಯಿಂದ ನಿವೃತ್ತಿ

ದಿಟ್ಟ ಕ್ರಮಗಳಿಂದ ಸರಕಾರವನ್ನು ತಟ್ಟಿ ಕೇಳಿದ್ದ ಹಿರಿಯ ಕೆಎಎಸ್ ಅಧಿಕಾರಿ ಕೆ.ಮಥಾಯಿ ಸೇವೆಯಿಂದ ನಿವೃತ್ತಿ ಬೆಂಗಳೂರು: ಹಲವಾರು ದಿಟ್ಟ ಕ್ರಮಗಳಿಂದ ಸರಕಾರವನ್ನು ಹಲವು ಬಾರಿ ಎದುರು ಹಾಕಿಕೊಂಡಿದ್ದ ಹಿರಿಯ ಕೆಎಎಸ್ ಅಧಿಕಾರಿ ಕೆ.ಮಥಾಯಿ ಅವರು...