ಬ್ರೆಜಿಲ್: ಫುಟ್‌ಬಾಲ್ ದಂತಕಥೆ ಪೀಲೆ ಎಂದೇ ಖ್ಯಾತಿ ಹೊಂದಿದ ಎಡ್ಸನ್ ಅರಾಂಟೆಸ್ ಡು ನಸಿಮೆಂಟೋ (82) ನಿನ್ನೆ ರಾತ್ರಿ ಅನಾರೋಗ್ಯಕ್ಕೀಡಾಗಿ ಇಹಲೋಕ ತ್ಯಜಿಸಿದ್ದಾರೆ.
ಕಾಲ್ಚೆಂಡಿನ ದಿಗ್ಗಜ ಎಂದೇ ಪ್ರಸಿದ್ಧರಾಗಿರುವ ಇವರು ಕರುಳಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಇವರು ಬ್ರೆಜಿಲ್‌ನ ಮಾಜಿ ಕ್ರೀಡಾ ಸಚಿವರಾಗಿಯೂ ಸೇವೆ ಮಾಡಿದ್ದಾರೆ.
ಅಷ್ಟೇ ಅಲ್ಲದೆ ಈ ಹೀರೋ ಮೂರು ಬಾರಿ ವಿಶ್ವಕಪ್ ಗೆದ್ದು ದೊಡ್ಡ ಪ್ರಮಾಣದ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
ಕರುಳಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಇವರು ಕೀಮೋಥೆರಪಿ ಬಳಿಕ ಶ್ವಾಸಕೋಶ ಸೋಂಕಿನಿಂದ ಉಸಿರಾಟದ ತೊಂದರೆ ಅನುಭವಿಸಿದ್ದರು.
ಮೂರು ಸಲ ಮದುವೆಯಾಗಿದ್ದ ಪೀಲೆಗೆ ಒಟ್ಟು 7 ಮಕ್ಕಳಿದ್ದಾರೆ. ಇವರು ಒಟ್ಟು ಎಲ್ಲಾ ಕ್ಲಬ್‌ಗಳನ್ನು ಸೇರಿಸಿ 840 ಪಂದ್ಯಗಳನ್ನಾಡಿದ್ದು 775 ಗೋಲುಗಳು ಇವರ ಹೆಸರಿನಲ್ಲಿವೆ. 100ಕ್ಕೂ ಹೆಚ್ಚು ಬಾರಿ ಹ್ಯಾಟ್ರಿಕ್ ಪಡೆದ ಆಟಗಾರನೂ ಹೌದು.