Monday, October 18, 2021

ಫುಟ್ಬಾಲ್‌ ದಂತಕಥೆ ಡಿಯಾಗೋ ಮರಡೋನಾ ಇನ್ನಿಲ್ಲ..!

ಫುಟ್ಬಾಲ್‌ ದಂತಕಥೆ ಡಿಯಾಗೋ ಮರಡೋನಾ ಇನ್ನಿಲ್ಲ..!

ಬ್ಯೂನಸ್ ಐರಿಸ್ : ಫುಟ್ಬಾಲ್‌ ದಂತ ಕಥೆ, ಕೋಟ್ಯಾಂತರ ಕ್ರೀಡಾಭಿಮಾನಿಗಳ ಆರಾಧ್ಯ ದೈವ ಅರ್ಜೈಂಟಿನಾದ ಡಿಯಾಗೋ ಮರಡೋನಾ ವಿಧಿವಶರಾಗಿದ್ದಾರೆ. 

60 ವರ್ಷದ ಮರಡೋನಾ ಖಾಸಗಿ ಆಸ್ಪತ್ರೆಯಲ್ಲಿ ಹೃದಯಸ್ಥಂಭನಕ್ಕೊಳಗಾಗಿ ಕೊನೆಯುಸಿರೆಳೆದಿದ್ದಾರೆಂದು ಮೂಲಗಳು ತಿಳಿಸಿವೆ.

ಇತ್ತೀಚೆಗಷ್ಟೇ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಡಿಯಾಗೋ ಮರಡೋನಾ ಚೇತರಿಸಿಕೊಂಡು ಮನೆಗೆ ಮರಳಿದ್ದರು. ಆದರೆ ಇದೀಗ ಹಠಾತ್‌ ನಿಧನರಾಗುವ ಮೂಲಕ ಬಾರದ ಲೋಕಕ್ಕೆ ತೆರಳಿದ್ದಾರೆ.

1986 ರ ವಿಶ್ವಕಪ್‌ ವಿಜೇತ ಮರಡೋನಾ ಅವರಿಗೆ ಭಾರತವೂ ಸೇರಿದಂತೆ ವಿಶ್ವದಾದ್ಯಂತ ಕೋಟ್ಯಾಂತರ ಅಭಿಮಾನಿಗಳಿದ್ದರು.

2018 ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಮರಡೋನಾ ಈ ಸಂದರ್ಭದಲ್ಲಿ 2008 ರಲ್ಲಿ ಕೋಲ್ಕತ್ತಾಗೆ ಭೇಟಿ ನೀಡಿದ್ದನ್ನು ಮೆಲುಕು ಹಾಕಿದ್ದರು.

ಫುಟ್ಬಾಲ್‌ ನಿಂದ ನಿವೃತ್ತಿಗೊಂಡ ಬಳಿಕ ಅರ್ಜೈಂಟಿನಾದ ಮುಖ್ಯ ಕೋಚ್‌ ಆಗಿಯೂ ಮರಡೋನಾ ಕಾರ್ಯ ನಿರ್ವಹಿಸಿದ್ದರು.

ಕಾಲ್ಚೆಂಡಿನ ಆಟದ ಲೋಕದಲ್ಲಿ ಮಿಂಚಿ ಅತ್ಯಂತ ಕಲರ್​​ಫುಲ್​ ಲೈಪ್​ ಎಂಜಾಯ್ ಮಾಡಿದ್ದ ಮರಡೋನಾ ಇನ್ನು ನೆನಪು ಮಾತ್ರ. ಫುಟ್​​ಬಾಲ್ ಇತಿಹಾಸದಲ್ಲಿ ಐತಿಹಾಸಿಕ ಸಾಧನೆ ಮಾಡಿರುವ ಮರಡೋನಾರ ಬದುಕಲ್ಲಿ ಹಲವು ಸ್ವಾರಸ್ಯಕರ ಘಟನೆಗಳು, ವಿವಾದಾತ್ಮಕ ಘಟನೆಗಳು ನಡೆದು ಹೋಗಿದ್ದವು.

ಸಾಮಾನ್ಯವಾಗಿ ಮರಡೋನಾ ಅಂದ ಕೂಡಲೇ ನೆನಪಾಗೋದೇ ಒಂದು ಫುಟ್​ಬಾಲ್.. ಇನ್ನೊಂದು ಅವರ ವಿವಾದತ್ಮಕ ಬದುಕುಗಳು ನೆನಪಾಗುತ್ತವೆ. ಫುಟ್​ಬಾಲ್ ಜಗತ್ತಿನ ಬ್ಯಾಡ್​ ಬ್ಯಾಯ್ ಎಂದೇ ಕರೆಸಿಕೊಳ್ತಿದ್ದ ಮರಡೋನಾ ಅವರನ್ನ ‘ದೋಷಪೂರಿತ ಪ್ರತಿಭೆ’ ಅಂದವರೂ ಇದ್ದಾರೆ. ಹೀಗಿದ್ದೂ ಅವರನ್ನ ಬೆಂಬಲಿಸುವವರ ಸಂಖ್ಯೆ ಮಾತ್ರ ಲೆಕ್ಕಕ್ಕೆ ಸಿಗಲ್ಲ. ಅದಕ್ಕೆ ಕಾರಣ ಅವರ ಮಿಂಚಿನ ಆಟ, ಅವರಿಗಿದ್ದ ಅತ್ಯದ್ಭುತ ಪ್ರತಿಭೆ.

1986ರಲ್ಲಿ ಅರ್ಜೆಂಟೀನಾ ಮತ್ತು ಇಂಗ್ಲೆಂಡ್ ನಡುವಿನ ಕ್ವಾರ್ಟರ್-ಫೈನಲ್ ಪಂದ್ಯದ ವೇಳೆ ಅವರು ವಿವಾದಾತ್ಮಕ ಗೋಲ್ ಒಂದನ್ನ ಗಳಿಸಿದರು. ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ವಿವಾದಾತ್ಮಕ ಗೋಲು ಇದಾಗಿದೆ ಅಂತಾ ಹೇಳಲಾಗುತ್ತದೆ. ಗೋಲ್ ಕೀಪರ್ ಪೀಟರ್ ಶಿಲ್ಟನ್‌ನನ್ನು ದಾಟಿದ ಅವರು ತಮ್ಮ ಕೈಯಿಂದ ಚೆಂಡನ್ನ ಹೊಡೆದು ಗೋಲ್​ ಮಾಡಿದ್ದರು ಅದನ್ನ ಅವರು ಹ್ಯಾಂಡ್ ಆಫ್ ಗಾಡ್ ಅಂತಾ ಕರೆದಿದ್ರು.

ಮಾದಕ ವಸ್ತುಗಳ ಚಟಕ್ಕೆ ಬಿದ್ದಿದ್ದರಿಂದ ತಮ್ಮ ವೃತ್ತಿ ಜೀವನದಲ್ಲಿ ಸ್ವಲ್ಪ ಏರುಪೇರು ಅನುಭವಿಸಿದರು. 1982ರಲ್ಲಿ ಮಾದಕ ದ್ರವ್ಯ ವಸ್ತುಗಳನ್ನ ಸೇವನೆ ಮಾಡಿ ಸಿಕ್ಕಿಹಾಕಿಕೊಂಡರು. 1991ರಲ್ಲೂ ಸಿಕ್ಕಿಬಿದ್ದರು. ಇದರಿಂದ 15 ತಿಂಗಳ ಕಾಲ ನಿಷೇಧಕ್ಕೆ ಒಳಗಾದರು. ಅಲ್ಲದೇ 1994ರ ಫುಟ್​ಬಾಲ್ ವಿಶ್ವಕಪ್​​ನಲ್ಲಿ ಡ್ರಗ್ಸ್​ ಸೇವಿಸಿರೋದು ದೃಢಪಟ್ಟ ಹಿನ್ನೆಲೆಯಲ್ಲಿ ಅವರನ್ನ ಮನೆಗೆ ಕಳುಹಿಸಲಾಗಿತ್ತು.

ಅಂದ್ಹಾಗೆ ಮರಡೋನಾ 1983ರಲ್ಲಿ ಸ್ಪೇನ್​ಗೆ ತೆರಳಿದ್ದರು. ಅಲ್ಲಿಂದ ದುಶ್ಚಟಗಳಿಗೆ ದಾಸರಾಗಿದ್ದರು ಅಂತಾ ಹೇಳಲಾಗುತ್ತದೆ. ಒಮ್ಮೆ ಮಾದಕ ವಸ್ತುಗಳಿಗೆ ಅಡಿಕ್ಟ್​ ಆದ ಮರಡೋನಾ ಅವರು, ಅದರಿಂದ ಹೊರ ಬರಲಾಗದೇ ಪರದಾಡಿದರು. ಇದರ ಪರಿಣಾಮ ಇತ್ತೀಚೆಗಿನ ದಿನಗಳಲ್ಲಿ ಅವರ ತೂಕ 130 ಕೆಜಿಯಿಂದ ವಿಪರೀತ ಏರಿಕೆ ಕಂಡಿತ್ತು. ಇದರ ಪರಿಣಾಮ ಆರೋಗ್ಯ ಸಮಸ್ಯೆಯನ್ನ ಎದುರಿಸಿದರು. 2007 ಹೆಪಟೈಟಸ್​ಗೆ ಚಿಕಿತ್ಸೆಗೆ ಒಳಗಾಗದ ಅವರು, ಕೊನೆಗೆ ಗ್ಯಾಸ್ಟ್ರಿಕ್ಟ್​ ಸಮಸ್ಯೆ ಹಿನ್ನೆಲೆಯಲ್ಲಿ ಬೈಪಾಸ್ ಸರ್ಜರಿಗೆ ಒಳಗಾಗಿದ್ದರು. ಅಲ್ಲದೆ 2019 ರಲ್ಲಿ ಹೊಟ್ಟೆಯೊಳಗೆ ಇವರಿಗೆ ರಕ್ತಸ್ರಾವ ಕೂಡ ಸಂಭವಿಸಿತ್ತು.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...