Friday, May 27, 2022

ಉಗ್ರರಿಂದ 7 ಟ್ರಕ್​ ಮೇಲೆ ಗುಂಡಿನ ಸುರಿಮಳೆ: 5 ಜನ ಸಾವು ಓರ್ವ ಗಂಭೀರ

ಗುವಾಹಟಿ: ಅಸ್ಸಾಂ ರಾಜ್ಯದ ದಿಮಾ ಹಸಾವೋ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಶಂಕಿತ ಉಗ್ರರು 7 ಟ್ರಕ್​ಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

ಈ ಘಟನೆಯಲ್ಲಿ ಐವರು ಸಾವನ್ನಪ್ಪಿದ್ದು, ಒಬ್ಬರಿಗೆ ಗಂಭೀರ ಗಾಯಗಳಾಗಿವೆ.


ಗುಂಡಿನ ದಾಳಿ ನಡೆಸಿದ ಬಳಿಕ ಉಗ್ರರು ಆ ಟ್ರಕ್​ಗಳಿಗೆ ಬೆಂಕಿ ಹಚ್ಚಿದ್ದಾರೆ. ಇದರಿಂದ 7 ಟ್ರಕ್​ಗಳು ಕೂಡ ಸುಟ್ಟು ಕರಕಲಾಗಿವೆ.

ಗುರುವಾರ ರಾತ್ರಿ ಮಾರ್ಗ ಮಧ್ಯೆ ಟ್ರಕ್​ಗಳನ್ನು ಅಡ್ಡ ಹಾಕಿದ ಉಗ್ರರು ಈ ಕೃತ್ಯ ಎಸಗಿದ್ದಾರೆ.

ದಾಳಿ ನಡೆಸಿದವರು ದಿಮಾಸಾ ನ್ಯಾಷನಲ್ ಲಿಬರೇಷನ್ ಆರ್ಮಿ (ಡಿಎನ್​ಎಲ್​ಎ) ಸಂಘಟನೆಗೆ ಸೇರಿದ ಉಗ್ರರು ಎನ್ನಲಾಗಿದೆ.

ಈ ದಾಳಿಯಲ್ಲಿ 5 ಮಂದಿ ಸಾವನ್ನಪ್ಪಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ.

ರಸ್ತೆಯಲ್ಲಿ ಅಡ್ಡ ಹಾಕಿದ ಉಗ್ರರು ಟ್ರಕ್ ಹಾಗೂ ಟ್ರಕ್ ಚಾಲಕರ ಮೇಲೆ ಹಲವು ಸುತ್ತು ಗುಂಡು ಹಾರಿಸಿದ್ದಾರೆ. ನಿನ್ನೆ ರಾತ್ರಿ 8.30ರ ಸುಮಾರಿಗೆ ಅಸ್ಸಾಂನ ಶಸ್ತ್ರಸಜ್ಜಿತ ಉಗ್ರರ ಗುಂಪು ದಿಮಾ ಹಸಾವೊ ಜಿಲ್ಲೆಯಲ್ಲಿ ಈ ದಾಳಿ ನಡೆಸಿದ್ದು,

ಗಾಯಗೊಂಡ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಗುಂಡು ಹಾರಿಸಿದ ಬಳಿಕ ಬೆಂಕಿ ಹಚ್ಚಿದ್ದರಿಂದ ಸಿಮೆಂಟ್ ಸಾಗಿಸುತ್ತಿದ್ದ 6 ಟ್ರಕ್​ಗಳು ಮತ್ತು ಕಲ್ಲಿದ್ದಲು ತುಂಬಿದ 1 ಟ್ರಕ್ ಸುಟ್ಟು ಕರಕಲಾಗಿವೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಪಡೆಗಳನ್ನು ಕಳುಹಿಸಲಾಗಿದೆ. ಘಟನೆಯಲ್ಲಿ ಭಾಗಿಯಾಗಿರುವವರನ್ನು ಬಂಧಿಸಲು ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿದೆ. ಮೊದಲು ಉಗ್ರರು ಆಟೋಮ್ಯಾಟಿಕ್ ಗನ್​ಗಳಿಂದ ಗುಂಡು ಹಾರಿಸಿದ್ದಾರೆ.

ನಂತರ ಟ್ರಕ್​ಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ದಾಳಿಯ ಹಿಂದೆ ಡಿಎನ್​ಎಲ್​ಎ ಉಗ್ರರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.

ಸಾವನ್ನಪ್ಪಿರುವ ಐವರಲ್ಲಿ ಟ್ರಕ್ ಚಾಲಕರು ಹಾಗೂ ಸಹಾಯಕರು ಸೇರಿದ್ದಾರೆ ಎಂದು ದಿಮಾ ಹಸಾವೋ ಜಿಲ್ಲೆಯ ಎಸ್​ಪಿ ಜಯಂತ್ ಸಿಂಗ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics