Wednesday, October 5, 2022

ಪರ್ಯಾಯ ಉತ್ಸವಕ್ಕೆ ಸ್ಕೆಚ್ ಹಾಕಿದ್ದ ಆಂಧ್ರ ಮೂಲದ ಐದು ಮಂದಿ ಖತರ್ ನಾಕ್ ಕಳ್ಳರ ಬಂಧನ..!!

ಉಡುಪಿ : ಉಡುಪಿಯಲ್ಲಿ ನಡೆಯಲಿರುವ ಪರ್ಯಾಯ ಉತ್ಸವದಲ್ಲಿ ಪಿಕ್ ಪಾಕೆಟ್ ಮತ್ತು ಕಳ್ಳತನಕ್ಕೆ ಸ್ಕೆಚ್ ಹಾಕಿ ಬಂದಿದ್ದ ಅಂತರ್‌ ರಾಜ್ಯ ಕಳ್ಳರ ತಂಡವನ್ನು ಉಡುಪಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ನಗರದ ಶ್ರೀ ಕೃಷ್ಣ ಮಠದಲ್ಲಿ ಮಹಿಳೆಯೊಬ್ಬರ ಬ್ಯಾಗ್ ನಿಂದ ಹತ್ತು ಸಾವಿರ ರೂಪಾಯಿ ಪಿಕ್ ಪಾಕೆಟ್ ಮಾಡಿ ಪರಾರಿಯಾಗಿದ್ದ ಈ ಅಂಧ್ರ ಮೂಲದ ಖತರ್ ನಾಕ್ ಗ್ಯಾಂಗ್ ಕಳ್ಳರನ್ನು ಒಂದೇ ದಿನದಲ್ಲಿ ಪತ್ತೆ ಹಚ್ಚಿ ಬಂಧಿಸುವ ಮೂಲಕ ಈ ಖದೀಮರ ಮುಂದಿನ ಪ್ಲ್ಯಾನ್‌ ಗಳು ವಿಫಲವಾಗಿವೆ.

ಕುಂದಾಪುರ ಮೂಲದ ಲಕ್ಷ್ಮಿ ಎನ್ನುವ ಮಹಿಳೆ ದೇವರ ದರುಶನ‌ ಪಡೆಯುತ್ತಿದ್ದಾಗ ಮಹಿಳೆಯ ಬಟ್ಟೆಯ ಬ್ಯಾಗಿಗೆ ಹರಿತವಾದ ಅಯುಧದಿಂದ ಹರಿದು, ಅದರಲ್ಲಿದ್ದ ಅತ್ಯವಶ್ಯಕ ಬಿಲ್ ಹಾಗೂ ಮನೆ ಕೀ ಸೇರಿದಂತೆ ಪರ್ಸ್ ನಲ್ಲಿದ್ದ ಹತ್ತು ಸಾವಿರ ನಗದು ಕದ್ದು ಪರಾರಿಯಾಗಿದ್ದರು.

ಈ ಘಟನೆ ವಿಚಾರದಲ್ಲಿ ಲಕ್ಷ್ಮೀ ಯವರು ನಗರ ಠಾಣೆಗೆ ದೂರು ನೀಡಿದ್ದಾರೆ.ಕೂಡಲೇ ಕಾರ್ಯಪೃವತ್ತರಾದ ಉಡುಪಿ ನಗರ ಠಾಣೆಯ ಪೊಲೀಸರು ನಗರದ ಸಿಸಿಟಿವಿ ಹಾಗೂ ಡ್ರೋನ್ ವಿಡಿಯೋಗಳನ್ನು ಪರಿಶೀಲಿಸಿದಾಗ ಅರೋಪಿಗಳ ಸುಳಿವು ದೊರೆಕಿತು‌ ಎನ್ನಲಾಗಿದೆ.

ಅರೋಪಿಗಳು ಉಡುಪಿಯ ಶ್ರೀ ರಾಮ್ ರೆಸಿಡೆನ್ಸಿ ಯಲ್ಲಿ ತಂಗಿರುವ ಬಗ್ಗೆ ಮಾಹಿತಿಯ ಮೇರೆಗೆ ಮೂವರು ಮಹಿಳೆ ಸೇರಿ ಐದು ಮಂದಿ ಅರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿಯಲಾಗಿದೆ.

ಬಂಧಿತ ಆರೋಪಿಗಳಾದ ತಮ್ಮಿ ಶೆಟ್ಟಿ ಮಣಿ,ಪ್ರಿಯಾಂಕ‌ ಕಾಕಣಿ,ಇಟ್ಟಾ ಜಾನ್ಸಿ,ಇಟ್ಟಾ ಸಾಗಾರ,ಹರಿಬಾಬು ಬಂಧಿತರಾದ ಖತರ್ ನಾಕ್ ಕಳ್ಳ ರಾಗಿದ್ದು ಇವರೆಲ್ಲರೂ ಅಂಧ್ರ ಮೂಲದವರು ಎಂದು ತಿಳಿದು ಬಂದಿದೆ.

ಪರ್ಯಾಯ ಉತ್ಸವಗಳು ನಡೆಯುವ ಹಿನ್ನಲೆಯಲ್ಲಿ ಕಳವು ಮಾಡುವ ಉದ್ದೇಶ ದಿಂದ ಉಡುಪಿಗೆ ಬಂದಿರುವ ಬಗ್ಗೆ ಪೊಲೀಸರಲ್ಲಿ‌ ಅರೋಪಿಗಳು ಬಾಯಿ ಬಿಟ್ಟಿದ್ದಾರೆ ಎನ್ನಲಾಗಿದೆ.

ಈ ಪೊಲೀಸ್ ಕಾರ್ಯಾಚರಣೆಯಲ್ಲಿ ಉಡುಪಿ‌ ಎಸ್ ಪಿ ಎನ್ ವಿಷ್ಣುವರ್ಧನ್ ಅವರ ಮಾರ್ಗದರ್ಶನದಂತೆ ಎ ಎಸ್ ಪಿ ಕುಮಾರಚಂದ್ರ ಡಿ ವೈ ಎಸ್ ಪಿ ಸದನಂದ ನಾಯ್ಕ್, ಮಾರ್ಗದರ್ಶನದಲ್ಲಿ ಉಡುಪಿ ನಗರ ಠಾಣೆ ಪೊಲೀಸ್ ನೀರಿಕ್ಷಕರಾದ ಪ್ರಮೋದ್ ಕುಮಾರ್ ಪಿ ,ಉಪ ನಿರೀಕ್ಷಕರಾದ ವಾಸಪ್ಪ ನಾಯ್ಕ್ ,ಪಿ ಎಸ್ ಐ ಪ್ರಸಾದ್, ಸುಹಾಸ್,ಎ ಎಸ್ ಐ ವಿಜಯ್ ಸಿಬಂದಿಗಳಾದ ಜೀವನ್,ಸತೀಶ್,ಲೋಕೆಶ್,ಅಶಾಲತ,ಬಾಲಕೃಷ್ಣ ,ರಿಯಾಜ್ ಅಹ್ಮದ್,ಚೇತನ್ ,ಕಿರಣ್ ,ಸಂತೋಷ್,ಸುಷ್ಮಾ,ರೂಪ,ಕಾರ್ತಿಕ್ ಗಂಗಾಧರಪ್ಪ ಪಾಲ್ಗೊಂಡಿದ್ದರು ಎಂದು ಮಾಹಿತಿ‌ ನೀಡಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಎಲ್‌ಇಡಿ ಟಿ.ವಿ ಬ್ಲಾಸ್ಟ್‌..! : ಬಾಲಕ ಸಾವು-ಮನೆ ಗೋಡೆ ಕುಸಿತ

ಲಕ್ನೋ: ಎಲ್‌ಇಡಿ ಟಿ.ವಿ ಸ್ಪೋಟಗೊಂಡ ಪರಿಣಾಮ ಬಾಲಕನೊಬ್ಬ ಸಾವನಪ್ಪಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ.ಮೃತ ಬಾಲಕನನ್ನು ಓಮೇಂದ್ರ (16) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಟಿವಿ ನೋಡುತ್ತಿದ್ದ ಸಂದರ್ಭ ಎಲ್ ಐಡಿ ಟಿವಿ...

ಅರಬ್‌ ನಾಡಲ್ಲಿ ನೂತನ ಹಿಂದೂ ದೇವಾಲಯ: ಉದ್ಘಾಟಿಸಿದ UAE ಸಚಿವ ಶೇಖ್ ನಹ್ಯಾನ್

ದುಬೈ(ಯುಎಇ): ಅರಬ್‌ ನಾಡಲ್ಲಿ ಮೊಟ್ಟ ಮೊದಲ ಸ್ವತಂತ್ರ ಹಿಂದೂ ದೇವಾಲಯ ನಿರ್ಮಾಣಗೊಂಡಿದ್ದು, ನಿನ್ನೆ ಉದ್ಘಾಟನೆಗೊಂಡಿದೆ.ಯುಎಇಯ ಜೆಬೆಲ್‌ ಆಲಿಯಲ್ಲಿರುವ ಆರಾಧನಾ ಗ್ರಾಮದಲ್ಲಿ ಈ ದೇವಾಲಯ ನಿರ್ಮಾಣವಾಗಿದೆ. ಈ ಮೂಲಕ ಭಾರತೀಯರ ದಶಕದ ಕನಸು ಈಡೇರಿದೆ.ಯುಎಇಯ...

ಮಹಾನವಮಿ ಸಂಭ್ರಮ: ಕಟೀಲು ಕ್ಷೇತ್ರದಲ್ಲಿ ಮಹಾ ರಂಗ ಪೂಜೆ

ಮಂಗಳೂರು: ಪುರಾಣ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮಹಾನವಮಿ ಪ್ರಯುಕ್ತ ಮಹಾ ರಂಗ ಪೂಜೆ ನಡೆಯಿತು. ಆರು ನೂರಕ್ಕೂ ಹೆಚ್ಚು ವಿಶಿಷ್ಟ ಆರತಿಗಳಿಂದ ಸುಮಾರು ಒಂದೂಕಾಲು ಗಂಟೆಗಳ ಕಾಲ ನಡೆದ ಮಹಾಪೂಜೆಯನ್ನು...