Connect with us

LATEST NEWS

ಉಡುಪಿ: ಪ್ರಕ್ಷುಬ್ಧಗೊಂಡ ಸಮುದ್ರ ಮತ್ತೆ ಸಹಜ ಸ್ಥಿತಿಯತ್ತ-ಕಡಲಿಗಿಳಿದ ಬೋಟ್

Published

on

ಉಡುಪಿ: ಉಡುಪಿಯ ಮಲ್ಪೆಯಲ್ಲಿ ಗಾಳಿ ಮಳೆಯಿಂದಾಗಿ ಸಮುದ್ರ ಪ್ರಕ್ಷುಬ್ಧಗೊಂಡು 7-8 ದಿನಗಳಿಂದ ಸ್ಥಗಿತಗೊಂಡಿದ್ದ ಮೀನುಗಾರಿಕೆ ಮತ್ತೆ ಆರಂಭಗೊಂಡಿದೆ.


ಸಮುದ್ರ ನಿಧಾನವಾಗಿ ಸಹಜ ಸ್ಥಿತಿಗೆ ಬರುತ್ತಿದ್ದು, ಯಾಂತ್ರಿಕ ಬೋಟುಗಳು ಕಡಲಿಗೆ ಇಳಿಯಲು ಆರಂಭಿಸಿದೆ.

ಬುಧವಾರ ಮಲ್ಪೆ ಬಂದರಿನಿಂದ ಸುಮಾರು ಶೇ. 40ರಷ್ಟು ಆಳಸಮುದ್ರ ಬೋಟುಗಳು ಕಡಲಿಗಿಳಿದಿವೆ. ಬಹುತೇಕ ಫರ್ಸೀನ್ ಬೋಟುಗಳು ಬೆಳಗ್ಗೆಯೇ ಮೀನುಗಾರಿಕೆಗೆ ತೆರಳಿದ್ದವು.

ಇನ್ನು ಕೆಲವು ಬೋಟುಗಳು ಕಡಲಿಗಿಳಿಯಲು ಸಿದ್ಧತೆ ನಡೆಸುತ್ತಿವೆ. ಮೀನುಗಾರಿಕೆ ಋತು ಆರಂಭಗೊಂಡ ಒಂದು ತಿಂಗಳು ಕಳೆದು ಕೊಂಚ ಆದಾಯಗಳಿಸುವಷ್ಟರಲ್ಲೇ ಪ್ರತಿಕೂಲ ಹವಾಮಾನ ಸಂಭವಿಸಿದ್ದು ಮೀನುಗಾರಿಕೆಯನ್ನು ನಡೆಸದಂತಾಗಿತ್ತು.

8 ದಿನಗಳಲ್ಲಿ ನಿತ್ಯ ಕೋಟ್ಯಂತರ ರೂಪಾಯಿ ವ್ಯವಹಾರಕ್ಕೆ ಹೊಡೆತ ಉಂಟಾಗಿತ್ತು.

ಇದೀಗ ಮೀನುಗಾರಿಕೆಗೆ ಪೂರಕ ವಾತಾವರಣ ನಿರ್ಮಾಣವಾಗಿದ್ದು, ಮೀನುಗಾರರು ಕಡಲಿಗಿಳಿಯಲು ಸಜ್ಜಾಗಿದ್ದಾರೆ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಕೆ. ಸುವರ್ಣ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

FILM

ನೇಹಾ ಹ*ತ್ಯೆ ಪ್ರಕರಣ : ಆಕ್ರೋಶ ಹೊರ ಹಾಕಿದ ಸಿನಿತಾರೆಯರು

Published

on

ಬೆಂಗಳೂರು : ಹುಬ್ಬಳ್ಳಿ ಕಾರ್ಪೊರೇಟರ್ ನಿರಂಜನ್ ಹಿರೇಮಠ್ ಪುತ್ರಿ ನೇಹಾ ಹ*ತ್ಯೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಪೊಲೀಸರು ಈಗಾಗಲೇ ಆರೋಪಿ ಫಯಾಜ್ ನನ್ನು ಬಂಧಿಸಿದ್ದಾರೆ. ಈ ಘಟನೆಗೆ ರಾಜ್ಯವ್ಯಾಪಿ ಆಕ್ರೋಶ ಕೇಳಿ ಬಂದಿದೆ.
ಇದೀಗ ಸಿನಿ ತಾರೆಯರೂ ಕೂಡ ಘಟನೆಗೆ ಕಿಡಿಕಾರಿದ್ದಾರೆ. ಈ ಬಗ್ಗೆ ಆಕ್ರೋಶ ಹೊರಹಾಕುತ್ತಿದ್ದಾರೆ.

 

ಅತ್ಯಂತ ಹೀನ ಕೃತ್ಯ

ನಟ ಧ್ರುವ ಸರ್ಜಾ ಅವರು ಟ್ವೀಟ್ ಮಾಡಿ, ಸಹೋದರಿ ನೇಹಾ ಹಿರೇಮಠ್ ರ ಹ*ತ್ಯೆ ಅತ್ಯಂತ ಹೀನ ಕೃತ್ಯ. ಕ್ಯಾಂಪಸ್ ಲಿ ಹ*ತ್ಯೆ ನಿಜಕ್ಕೂ ಆತಂಕ ಮೂಡಿಸುತ್ತದೆ. ಸರ್ಕಾರ ಶೀಘ್ರದಲ್ಲೇ ತ್ವರಿತಗತಿ ನ್ಯಾಯಾಲಯದಲ್ಲಿ ಈ ಕೇಸ್ ತೀರ್ಪು ಬರಲು ವರ್ಗಾಯಿಸಬೇಕು. ಹಾಗು ಇದನ್ನ ಎಲ್ಲಾ ಆಯಮದಲ್ಲೂ ತನಿಖೆ ನಡೆಸಿ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡುವಂತಾಗಬೇಕು. ಜೈ ಆಂಜನೇಯ ಎಂದಿದ್ದಾರೆ.

ಮಹಿಳೆಯರಿಗೆ ಸುರಕ್ಷತೆ ಎಲ್ಲಿದೆ? 


ಘಟನೆ ಬಗ್ಗೆ ನಟಿ, ನಿರ್ಮಾಪಕಿ ರಕ್ಷಿತಾ ಪ್ರೇಮ್ ಆಕ್ರೋಶ ಹೊರ ಹಾಕಿದ್ದಾರೆ. ನೇಹಾ ಹಿರೇಮಠ್‌ಗೆ ನ್ಯಾಯ ಸಿಗಲೇಬೇಕು. ಮಹಿಳೆಯರಿಗೆ ಸುರಕ್ಷತೆ ಎಲ್ಲಿದೆ? ಕಾಲೇಜಿಗೆ ಹೋಗುವ ಯುವತಿಯರಿಗೂ ಕೂಡ ರಕ್ಷಣೆ ಇಲ್ಲ. ಶೇಮ್ ಶೇಮ್ ಎಂದಿದ್ದಾರೆ.


ಪ್ರೀತಿಸಬೇಕು ಅಂತ ಅದ್ಹೇಗೆ ಒತ್ತಾಯಿಸಲು ಸಾಧ್ಯ? ಪ್ರೀತಿಯನ್ನ ಒಪ್ಪಿಕೊಳ್ಳಲಿಲ್ಲ ಅಂತ ಬರ್ಬರವಾಗಿ ಹುಬ್ಬಳ್ಳಿ ಕಾಲೇಜ್ ಕ್ಯಾಂಪಸ್‌ನಲ್ಲೇ ಹ*ತ್ಯೆ ಮಾಡಿದ್ದಾನೆ. ಅದೆಂಥಾ ಮೈಂಡ್‌ ಸೆಟ್ ಹೊಂದಿದ್ದಾರೆ ಆ ವಯಸ್ಸಿನ ಹುಡುಗರು? ಪೋಷಕರಾಗಿ ನಮ್ಮ ಗಂಡು ಮಕ್ಕಳಿಗೆ ಕೆಲವು ಬೇಸಿಕ್ ಸಂಗತಿಗಳನ್ನ ನಾವು ಹೇಳಿಕೊಡಲೇಬೇಕು. ಅದನ್ನೆಲ್ಲಾ ಶಾಲಾ ಕಾಲೇಜುಗಳಲ್ಲಿ ಕಲಿಸುವುದಿಲ್ಲ. ಇದನ್ನ ಸಹಿಸಲು ಸಾಧ್ಯವೇ ಇಲ್ಲ. ಶೇಮ್ ಶೇಮ್. ಪೋಷಕರಾಗಿ ನನ್ನ ಹೃದಯ ಛಿದ್ರವಾಗುತ್ತಿದೆ ಎಂದು ರಕ್ಷಿತಾ ಪ್ರೇಮ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ನಗರ ಸಭೆ ಉಪಾಧ್ಯಕ್ಷೆ ಮಗ ಸೇರಿ ನಾಲ್ವರ ಹ*ತ್ಯೆ! ಹಂ*ತಕರ ಪತ್ತೆಗೆ ವಿಶೇಷ ತಂಡ ರಚನೆ

ಎನ್ಕೌಂಟರ್ ಮಾಡಬೇಕು :


ನಟಿ ಕಾವ್ಯಾ ಶಾಸ್ತ್ರಿಯೂ ತಮ್ಮ ಇನ್ಸ್ಟಾ ಗ್ರಾಂ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ. ಹಂ*ತಕ ಫಯಾಜ್‌ನನ್ನು ಎನ್ಕೌಂಟರ್ ಮಾಡಬೇಕು. ಅವನಿಗೆ ಯಾವುದೇ ಕರುಣೆ ಬೇಕಾಗಿಲ್ಲ. ನೇಹಾ ಹಿರೇಮಠ್ ಕೊ*ಲೆ ಖಂಡನೀಯ. ಕೊ*ಲೆಗಾರನಿಗೆ ಸಿಗುವ ಶಿಕ್ಷೆ ಎಲ್ಲರಿಗೂ ಪಾಠವಾಗಬೇಕು ಎಂದು ಬರೆದುಕೊಂಡಿದ್ದಾರೆ.

ಘಟನೆ ಏನು ?

ಹುಬ್ಬಳ್ಳಿ ಕಾರ್ಪೋರೇಟರ್ ನಿರಂಜನ್ ಹಿರೇಮಠ ಅವರ ಮಗಳು ನೇಹಾ ಹಿರೇಮಠಳನ್ನು ಫಯಾಜ್ ಎಂಬಾತ ಕಾಲೇಜ್ ಕ್ಯಾಂಪಸ್ ನಲ್ಲಿ ಚಾಕುವಿನಿಂದ ಇರಿದು ಎಪ್ರಿಲ್ 18 ರಂದು ಹ*ತ್ಯೆ  ಮಾಡಿದ್ದ. ಹುಬ್ಬಳ್ಳಿಯ ಕೆಎಲ್ ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನೇಹಾ ಪ್ರಥಮ ವರ್ಷದ ಎಂಸಿಎ ಓದುತ್ತಿದ್ದಳು. ಸದ್ಯ ಪ್ರಕರಣದ ಬಗ್ಗೆ ತೀವ್ರ ಆಕ್ರೋಶ ಕೇಳಿ ಬಂದಿದೆ. ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು ಎಂಬ ಆಗ್ರಹ ಕೇಳಿ ಬಂದಿದೆ.

Continue Reading

LATEST NEWS

ಮೋದಿ ಹಾಡು ಶೇರ್ ಮಾಡಿ ಎಂದಿದಕ್ಕೆ ಹಿಗ್ಗಾಮುಗ್ಗ ಯುವಕನಿಗೆ ಥಳಿತ..! ಏನಿದು ಪ್ರಕರಣ?

Published

on

ಮೈಸೂರು: ಯುವಕನೊಬ್ಬ ಪ್ರಧಾನಿ ನರೇಂದ್ರ ಮೋದಿ ಕುರಿತಾದ ಹಾಡೊಂದನ್ನು ಶೇರ್ ಮಾಡುವಂತೆ ಹೇಳಿದ್ದಕ್ಕೆ ಅನ್ಯಕೋಮಿನ ಯುವಕರು ಹಿಗ್ಗಾಮುಗ್ಗ ಥಳಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.  ಪ್ರಕರಣದ ಕುರಿತು ನಜರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

rohith

Read More..; ಚುನಾವಣಾ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಬಸ್ ಪಲ್ಟಿ.. 40 ಮಂದಿಗೆ ಗಾಯ

ಏನಿದು ಪ್ರಕರಣ?

ರೋಹಿತ್ ರಮಣ ಎಂಬ ಯುವಕ ಮೋದಿಗೆ ಸಂಬಂಧಪಟ್ಟ ಹಾಡನ್ನು ಎಲ್ಲೆಡೆ ಶೇರ್ ಮಾಡುತ್ತಿದ್ದರು. ಮೈಸೂರಿನ ಸರಕಾರಿ ಗೆಸ್ಟ್ ಹೌಸ್‌ನಲ್ಲಿ ರೋಹಿತ್ ಕುಳಿತಿದ್ದಾಗ, ಈ ವೇಳೆ ಅಲ್ಲಿಗೆ ಬಂದ ಯುವಕನೊಬ್ಬನಿಗೆ ಮೋದಿಯ ಹಾಡನ್ನು ತೋರಿಸುತ್ತಾನೆ. ಆತ ಸಾಂಗ್ ಬಹಳ ಚೆನ್ನಾಗಿದೆ. ನನ್ನ ಸ್ನೇಹಿತರಿಗೂ ತೋರಿಸು ಎಂದು ಹೇಳಿ ನಿರ್ಜನ ಪ್ರದೇಶಕ್ಕೆ ರೋಹಿತ್‌ನನ್ನು ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಅನ್ಯಕೋಮಿನ ಯುವಕರ ತಂಡ ರೋಹಿತ್‌ನನ್ನು ಹಿಗ್ಗಾಮುಗ್ಗ ಥಳಿಸಿ, ಮುಖಕ್ಕೆ ಬಿಯರ್ ಸುರಿದರು. ನನ್ನ ಕೈ ಕೊಯ್ದು ಮೈಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ಷ್ಮಿಪುರಂ ಪೊಲೀಸ್ ನೇತೃತ್ವದಲ್ಲಿ ಹಲ್ಲೆಗೊಳಗಾದ ಯುವಕ ರೋಹಿತ್‌ನ ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಪ್ರಕರಣ ನಜರಬಾದ್ ಠಾಣೆ ವ್ಯಾಪ್ತಿಗೆ ಬರುವುದರಿಂದ ಅಲ್ಲಿಗೆ ವರ್ಗಾಯಿಸಲಾಗಿದೆ.

 

Continue Reading

LATEST NEWS

ನಗರ ಸಭೆ ಉಪಾಧ್ಯಕ್ಷೆ ಮಗ ಸೇರಿ ನಾಲ್ವರ ಹ*ತ್ಯೆ! ಹಂ*ತಕರ ಪತ್ತೆಗೆ ವಿಶೇಷ ತಂಡ ರಚನೆ

Published

on

ಗದಗ : ಗದಗ ಬೆಟಗೇರಿ ಅವಳಿ ನಗರದಲ್ಲಿ ಒಂದೇ ಕುಟುಂಬದ ನಾಲ್ಕು ಜನರನ್ನು ಬರ್ಬರ ಹ*ತ್ಯೆ ಮಾಡಲಾಗಿದೆ. ನಗರಸಭೆ ಉಪಾಧ್ಯಕ್ಷೆಯ ಮಗ ಸೇರಿದಂತೆ ನಾಲ್ವರನ್ನು ರಾತೋರಾತ್ರಿ ಹತ್ಯೆ ಮಾಡಲಾಗಿದೆ. ಗದಗ ನಗರದ ದಾಸರ್ ಓಣಿಯ ನಿವಾಸಿಯಾದ ಪ್ರಕಾಶ ಬಾಕಳೆ ಅವರ ಮನೆಯಲ್ಲಿ ಈ ಹ*ತ್ಯಾಕಾಂಡ ನಡೆದಿದೆ.


ಗದಗ ಬೆಟಗೇರಿ ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಅವರ ಪುತ್ರ 27 ವರ್ಷದ ಕಾರ್ತಿಕ್ ಬಾಕಳೆ, ಸಂಬಂಧಿಕರಾದ 66 ವರ್ಷದ ಪರಶುರಾಮ, 45 ವರ್ಷದ ಲಕ್ಷ್ಮಿ ಹಾಗೂ 16 ವರ್ಷದ ಆಕಾಂಕ್ಷಾ ಎನ್ನುವವರ ಕೊ*ಲೆಯಾಗಿದೆ.

 

ಚರಂಡಿಯಲ್ಲಿ ಮಾರಕಾಸ್ತ್ರ ಪತ್ತೆ :

ಮಧ್ಯರಾತ್ರಿ 1 ಗಂಟೆಯಿಂದ 2 ಗಂಟೆಯ ಅವಧಿಯಲ್ಲಿ ಮನೆಯ ಹಿಂದಿನ ಕಿಟಕಿ ಮೂಲಕ ಎಂಟ್ರಿ ಹೊಡೆದ ದುಷ್ಕರ್ಮಿಗಳು ಮೊದಲು ಒಂದನೇಯ ಮಹಡಿಯಲ್ಲಿ ಮಲಗಿಕೊಂಡಿದ್ದ ಕಾರ್ತಿಕ ಹಾಗೂ ಪರಶುರಾಮ ಅವರನ್ನು ಹ*ತ್ಯೆ ಮಾಡಿದ್ದಾರೆ. ಬಳಿಕ ತಳ ಮಹಡಿಯಲ್ಲಿ ಮಲಗಿಕೊಂಡಿದ್ದ ತಾಯಿ ಲಕ್ಷ್ಮಿ ಹಾಗೂ ಮಗಳು ಆಕಾಂಕ್ಷಾ ಅವರನ್ನು ಮಾರಕಾಸ್ತ್ರಗಳಿಂದ ಕೊ*ಚ್ಚಿ ಕೊ*ಲೆ ಮಾಡಿದ್ದಾರೆ.


ಈ ವೇಳೆ ಪಕ್ಕದ ರೂಮಿನಲ್ಲಿದ್ದ ಪ್ರಕಾಶ ಬಾಕಳೆ ಹಾಗೂ ಸುನಂದಾ ಬಾಕಳೆ ಎಂಬವರು ರೂಮ್ ಬಾಗಿಲು ತೆರೆಯದೆ ಪೊಲೀಸರಿಗೆ ಫೋನ್ ಮಾಡಿದ್ದಾರೆ. ಪೊಲೀಸರು ಬರುತ್ತಾ ಇದ್ದಂತೆ, ಹಂ*ತಕರು ಮನೆಯ ಹಿಂದಿನ ಕಿಟಕಿ ‌ಮೂಲಕ ಎಸ್ಕೇಪಾಗಿದ್ದಾರೆ. ಈ ವೇಳೆ ಹಂ*ತಕರು ಉಪಯೋಗ ಮಾಡಿದ್ದ ಮಾರಕಾಸ್ತ್ರಗಳನ್ನು ಚರಂಡಿಯಲ್ಲಿ ಎಸೆದು ಎಸ್ಕೇಪ್ ಆಗಿದ್ದಾರೆ.

ಇದನ್ನೂ ಓದಿ : ಚುನಾವಣಾ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಬಸ್ ಪಲ್ಟಿ.. 40 ಮಂದಿಗೆ ಗಾಯ
ಬಿಜೆಪಿ ಮುಖಂಡ ಹಾಗೂ ನಗರಸಭೆ ಉಪಾಧ್ಯಕ್ಷೆಯ ಪತಿಯಾದ ಪ್ರಕಾಶ ಬಾಕಳೆಗೆ ಇಬ್ಬರು ಪತ್ನಿಯರು. ಮೊದಲ ಪತ್ನಿ ಈ ಹಿಂದಿಯೇ ಸಾವನ್ನಪ್ಪಿದ್ದಾಳೆ. ಎರಡನೇಯ ಪತ್ನಿಯಾದ ಸುನಂದಾಳ ಜೊತೆಗೆ ಇದೇ ಮನೆಯಲ್ಲಿ ಜೀವನ ನಡೆಸುತ್ತಿದ್ದ. ಏಪ್ರಿಲ್ 17 ರಂದು ಎರಡನೇಯ ಪತ್ನಿ ಸುನಂದಾ ಬಾಕಳೆ ಅವ್ರ ಪುತ್ರ ಕಾರ್ತಿಕ್ ಎಂಗೇಜ್ಮೆಂಟ್ ಸಮಾರಂಭ ನಡೆಸಲಾಗಿತ್ತು.
ಮೊದಲ ಪತ್ನಿಯ ಸಹೋದರ ಪರಶುರಾಮ ಅವರ ಪತ್ನಿ ಲಕ್ಷ್ಮಿ, ಅವರ ಪುತ್ರಿ ಆಕಾಂಕ್ಷಾ ಕೊಪ್ಪಳ ಜಿಲ್ಲೆಯಿಂದ ಎಂಗೇಜ್ಮೆಂಟ್ ಕಾರ್ಯಕ್ಕೆ ಬಂದಿದ್ದರು. ಆದ್ರೆ, ಎಂಗೇಜ್ಮೆಂಟ್ ಮುಗಿಸಿ ವಾಪಾಸಾಗಬೇಕಾದವರು ಕಾರಣಾಂತರದಿಂದ ಇಲ್ಲೇ ಉಳಿದುಕೊಂಡಿದ್ದರು.

ತನಿಖೆಗೆ 4 ತಂಡ ರಚನೆ :

ಉತ್ತರ ವಲಯ ಐಜಿಪಿ ವಿಕಾಸಕುಮಾರ ಅವರು ಘಟನಾ ಸ್ಥಳವನ್ನು ಪರಿಶೀಲನೆ ಮಾಡಿದರು. ಈಗಾಗಲೇ ಗದಗ ಎಸ್ಪಿ ಬಿ.ಎಸ್.ನೇಮಗೌಡ ಅವರ ನೇತೃತ್ವದಲ್ಲಿ 4 ತಂಡವನ್ನು ರಚನೆ ಮಾಡಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಕೊ*ಲೆ ಮಾಡಿರೋದು ದರೋಡೆಕೋರರ ಅಲ್ಲಾ ಅಥವಾ ಇನ್ಯಾರು ಎಂಬ ಬಗ್ಗೆ ಎಲ್ಲಾ ಆಯಾಮಗಳಲ್ಲಿ ತನಿಖೆ ‌‌ಮಾಡ್ತಾಯಿದ್ದೇವೆ, ಆದಷ್ಟು ಬೇಗ ಹಂತಕರನ್ನು ಪತ್ತೆ ಮಾಡುವ ಭರವಸೆ ನೀಡಿದ್ದಾರೆ.

ರಾಜಕೀಯ ಹಿನ್ನೆಲೆ, ರಿಯಲ್ ಎಸ್ಟೇಟ್, ಕೌಟುಂಬಿಕ ಕಲಹ ಸೇರಿದಂತೆ ಎಲ್ಲಾ ಆ್ಯಂಗಲ್ ‌ಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ, ಒಂದು ಕುಟುಂಬದ ನಾಲ್ಕು ಜನರ ಹತ್ಯೆ ಮಾಡುವಷ್ಟು ದ್ವೇಷ ಏನೂ ಎನ್ನುವುದು ಪೊಲೀಸರ ಸಮಗ್ರ ತನಿಖೆಯಿಂದಲೇ ಬಯಲಾಗಬೇಕಾಗಿದೆ.

Continue Reading

LATEST NEWS

Trending