Friday, August 12, 2022

ಶಿರೂರು ದೋಣಿ ದುರಂತ ಸ್ಥಳಕ್ಕೆ ಭೇಟಿ ನೀಡದ ಸಚಿವರ ವಿರುದ್ಧ ಮೀನುಗಾರರ ಪ್ರತಿಭಟನೆ

ಬೈಂದೂರು: ಶಿರೂರಿನಲ್ಲಿ ದೋಣಿ ದುರಂತ ಸ್ಥಳಕ್ಕೆ ತಹಶೀಲ್ದಾರರನ್ನು ಹೊರತುಪಡಿಸಿ ಸಚಿವರು ಮತ್ತು ಅಧಿಕಾರಿಗಳು ಬಾರದೆ ಇರುವುದನ್ನು ಖಂಡಿಸಿ ಇಂದು ಬೈಂದೂರು ತಾಲೂಕು ಕಚೇರಿಯಲ್ಲಿ ಮೀನುಗಾರ ಬಾಂಧವರು ಬೃಹತ್ ಪ್ರತಿಭಟನೆ ನಡೆಸಿದರು.

ಶಿರೂರಿನ ಅಳ್ವೆ ಗೆದ್ದೆಯಲ್ಲಿ ಲಂಗರ್ ಹಾಕಿರುವ 50ಕ್ಕೆ ಹೆಚ್ಚು ದೋಣಿಗಳು ಸಮುದ್ರ ಪಾಲಾಗಿ ಹಲವು ದೋಣಿಗಳು ಹಾನಿಗಳಾಗಿದ್ದು ಸ್ಥಳಕ್ಕೆ ಯಾವುದೇ ಸಚಿವರಾಗಲಿ ಶಾಸಕ ಶಾಸಕರಾಗಲಿ ಇತ್ತ ಕಡೆ ಗಮನಹರಿಸದೆ ಮೀನುಗಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.


ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಪಕ್ಕದ ಜಿಲ್ಲೆಗೆ ಬಂದಿದ್ದು, ಸಚಿವರಾಗಲಿ ಅಥವಾ ಅಧಿಕಾರಿಗಳಾಗಲಿ ಪಕ್ಕದ ಊರಾದ ಶಿರೂರಿಗೆ ಬಾರದೆ ಇರುವುದು ಹಾಗೂ ಇತ್ತ ಕಡೆ ಗಮನಹರಿಸದೆ ಇರುದರಿಂದ ಸರ್ಕಾರ ಇಂದು ಮೀನುಗಾರರನ್ನು ಕಡೆಗಣಿಸುತ್ತಿದೆ ಎಂದು ಮೀನುಗಾರರು ಆಕ್ರೋಶಗೊಂಡರು.

ನಮಗೆ ಸರಿಯಾದ ಬಂದರು ವ್ಯವಸ್ಥೆ ಇಲ್ಲ. ನಮ್ಮನ್ನು ರಸ್ತೆಗೆ ಇಳಿಸಬೇಡಿ, ನಮ್ಮ ತಾಳ್ಮೆಗೆ ಒಂದು ಮಿತಿ ಇದೆ,ಇನ್ನೂ ಹತ್ತು ದಿನದ ಒಳಗೆ ಇನ್ನೊಂದು ಪ್ರತಿಭಟನೆಗೆ ಅವಕಾಶ ನೀಡಬೇಡಿ ಎಂಬ ಖಡಕ್ ಎಚ್ಚರಿಕೆ ನೀಡುವ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.


ಬೈಂದೂರು ತಾಲೂಕು ತಹಶೀಲ್ದಾರ್ ಕೀರಣ್ ಗೋರಯ್ಯರವರ ಮೂಲಕ ಮನವಿ ನೀಡಿದರು.
ಪ್ರತಿಭಟನೆಯಲ್ಲಿ ರಾಣಿಬಲೆ ಅಧ್ಯಕ್ಷರಾದ ವೆಂಕಟರಮಣ ಖಾರ್ವಿ, ಬೈಂದೂರು ವಲಯ ನಾಡ ದೋಣಿ ಮಾಜಿ ಅಧ್ಯಕ್ಷರಾದ ಮದನ್ ಕುಮಾರ್, ಜಗದೀಶ್ ಕುಮಾರ್, ಜನಸೇವಕ ಸುಬ್ರಹ್ಮಣ್ಯ ,ಪೊಲೀಸ್ ಅಧಿಕಾರಿಗಳು ಮೀನುಗಾರ ಬಾಂಧವರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

Hot Topics

ಸಂಸದ ಡಾ. ಡಿ.ವಿ ಹೆಗ್ಗಡೆಯವರ ನೂತನ ಕಾರ್ಯಾಲಯ ಉದ್ಘಾಟನೆ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥನ ಕ್ಷೇತ್ರದ ಧರ್ಮಾಧಿಕಾರಿಗಳು ಆಗಿರುವ ಹಾಗು ರಾಜ್ಯ ಸಭೆಯ ಸಂಸದರಾಗಿ ಆಯ್ಕೆಯಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ನೂತನ 'ಸಂಸದರ ಕಾರ್ಯಾಲಯ'ವು ಧರ್ಮಸ್ಥಳದ ಮಂಜೂಷಾ ವಸ್ತು ಸಂಗ್ರಹಾಲಯದ ಬಳಿ ಉದ್ಘಾಟನೆಗೊಂಡಿತು.ಸ್ಥಳೀಯ...

ಮಂಗಳೂರಿನಲ್ಲಿರುವ ರಸ್ತೆ ಹೊಂಡ ಗುಂಡಿಗಳ ವಿರುದ್ಧ patholeseazaadi ಅಭಿಯಾನ

ಮಂಗಳೂರು: ನಗರದ ಬಿಕರ್ನಕಟ್ಟೆ ಕಂಡೆಟ್ಟು ಕ್ರಾಸ್ ಬಳಿ ಕಳೆದ ಆ.5 ರಂದು ರಸ್ತೆ ಗುಂಡಿ ತಪ್ಪಿಸಲು ಹೋಗಿ ಎಂಜಿನಿಯರಿಂಗ್‌ ವಿದ್ಯಾರ್ಥಿ ಆತಿಶ್ (20) ಮೃತಪಟ್ಟ ನಂತರ ರಾಷ್ಟ್ರೀಯ ಹೆದ್ದಾರಿ ಸಹಿತ ಮಂಗಳೂರು ನಗರದಲ್ಲಿರುವ...

ಶರತ್ ಮಡಿವಾಳ ಹತ್ಯೆಗೆ 5 ವರ್ಷ : ಇನ್ನೂ ಸಿಕ್ಕಿಲ್ಲ ಓರ್ವ ಆರೋಪಿ- ಅರೆಸ್ಟಾದವರೆಲ್ಲರೂ ರಿಲೀಸ್..!

ವಿಶೇಷ ವರದಿಮಂಗಳೂರು: ರಾಜ್ಯದಲ್ಲೇ ಸಂಚಲನ ಮೂಡಿಸಿದ್ದ ಹಾಗೂ ರಾಜ್ಯ ರಾಜಕೀಯ ಇತಿಹಾಸದಲ್ಲಿ ಹಲವರನ್ನು ಮನೆಗೆ ಕಳುಹಿಸಿ ಮತ್ತೆ ಕೆಲವರನ್ನು ವಿಧಾನಸಭೆಯ ಮೊಗಸಾಲೆಗೆ ಕಳುಹಿಸಿದ್ದ ಬಂಟ್ವಾಳ ಶರತ್ ಮಡಿವಾಳ ಕೊಲೆ ಪ್ರಕರಣ ನಡೆದು ಐದು...