ಕಾಪು : ಸೇಲ್ ಮಾಡಿದ ಬಸ್ಸನ್ನು ತಾವೇ ಕದ್ದಿದ್ದಾರೆ ಎಂದು ಆರೋಪಿಸಿ ಉಡುಪಿ ಜಿಲ್ಲೆಯ ಕಾಪು ಠಾಣೆಯಲ್ಲಿ ತಂದೆ, ಮಗನ ವಿರುದ್ಧ ದೂರು ದಾಖಲಾಗಿತ್ತು. ಇದೀಗ ತನ್ನ ವಿರುದ್ಧ ಮಾಡಲಾಗಿರುವ ಆರೋಪಗಳು ಸುಳ್ಳಾಗಿದ್ದು, ಸುಳ್ಳು ದೂರು ದಾಖಲಿಸಲಾಗಿದೆ ಎಂದು ವಿದೇಶದಲ್ಲಿರುವ ಬಸ್ ಮಾಲಕ ಸಮೀರ್ ಸ್ಪಷ್ಟನೆ ನೀಡಿದ್ದಾರೆ.
ನಾನು ಯಾವುದೇ ಬಸ್ಸನ್ನು ಕದ್ದಿಲ್ಲ. ನನ್ನ ಬಸ್ಸನ್ನು ನಾನು ವಾಪಾಸ್ ಪಡೆದುಕೊಂಡಿದ್ದೇನೆ. ಅಲ್ಲದೆ ನನಗೆ ಬಸ್ಸಿನ ಎಲ್ಲ ಮೊತ್ತ ಇದುವರೆಗೂ ಸಿಕ್ಕಿಲ್ಲ ಎಂದು ಸಮೀರ್ ಹೇಳಿದ್ದಾರೆ.
ಏನಿದು ಬಸ್ ಕಥೆ?
ತಮ್ಮ ಬಸ್ಸನ್ನು ತುಮಕೂರಿನ ಮೊಹಮ್ಮದ್ ಗೌಸ್ ಎಂಬವರಿಗೆ ಮಾರಾಟ ಮಾಡಲಾಗಿತ್ತು. ಅದನ್ನು 9,50,000 ರೂಪಾಯಿಗಳಿಗೆ ಮಾರಾಟ ಮಾಡಲಾಗಿತ್ತು. ಮೊಹಮ್ಮದ್ ಗೌಸ್ ಅವರು ತಮಗೆ ಚೆಕ್ ಮುಖಾಂತರ 9.50 ಲಕ್ಷ ಪಾವತಿಸಿದ್ದರು. ಆದರೆ ಈ ನಡುವೆ ನಗದೀಕರಣಕ್ಕೆ ಚೆಕ್ ಬ್ಯಾಂಕಿಗೆ ಹಾಕಿದಾಗ ಅದು ಬೌನ್ಸ್ ಆಗಿದೆ. ಅಲ್ಲದೆ ಅವರು ಫೋನ್ ಪೇ ಮುಖಾಂತರ 2.26 ಲಕ್ಷ ಹಾಕಿದ್ದಾರೆ. ಒಂದು ಲಕ್ಷ ನಗದು ಹಣ ಕೊಟ್ಟಿದ್ದಾರೆ. ಬಳಿಕ ನನಗೆ ಸೇರಬೇಕಾದ ಹಣವನ್ನು ಅವರು ಕೊಟ್ಟಿಲ್ಲ. ಆರು ತಿಂಗಳಾದರೂ ಹಣ ಬಂದಿಲ್ಲ. ಹೀಗಾಗಿ ಹಣ ಕೇಳಿದಾಗ ನಾಳೆ ಕೊಡುತ್ತೇವೆ, ನಾಡಿದ್ದು ಕೊಡುತ್ತೇವೆ ಅಂತಿದ್ದರು. ಈ ನಡುವೆ ಅವರು ಆರು ತಿಂಗಳ ಕಾಲ ಬಸ್ಸನ್ನು ತುಮಕೂರಿನಲ್ಲಿ ಬಳಸಿದ್ದಾರೆ. ದಾಖಲೆ ಇಲ್ಲದೆ ಬಸ್ ಓಡಿಸಬೇಡಿ ಎಂದರೂ ಕೇಳಿಲ್ಲ. ನನಗೆ ಬೆದರಿಕೆ ಹಾಕಿದ್ದರಿಂದ ಅಲ್ಲದೆ ಹಣವನ್ನೂ ಪಾವತಿಸದೇ ಇದ್ದಿದ್ದರಿಂದ ಬಸ್ಸನ್ನು ಮರಳಿ ವಾಪಾಸ್ ತಂದಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಗೌಸ್ ಆರೋಪ ಏನು?
ತುಮಕೂರಿನ ನಿವಾಸಿ , ಮೊಹಮ್ಮದ್ ಗೌಸ್ ಎಂಬವರು ಸ್ನೇಹಿತರಲ್ಲಿ ಸೆಕೆಂಡ್ ಹ್ಯಾಂಡ್ ಬಸ್ ಖರೀದಿಸುವ ಇಚ್ಛೆ ವ್ಯಕ್ತಪಡಿಸಿದಾಗ ಒಎಲ್‌ಎಕ್ಸ್ ಮೂಲಕ ಉಡುಪಿಯ ಕಾಪುವಿನ ಸಮೀರ್ ಅವರ ಬಳಿ ಸೆಕೆಂಡ್ ಹ್ಯಾಂಡ್ ಬಸ್ ಇರುವ ಮಾಹಿತಿ ಪಡೆದುಕೊಂಡಿದ್ದರು. ಸಮೀರ್ ಅವರನ್ನು ಸಂಪರ್ಕಿಸಿ ಬಸ್ ಖರೀದಿಗೆ ಮಗ ಸಿದ್ದೀಕ್ ಹಾಗೂ ಸ್ನೇಹಿತ ಜಾವೇದ್ ಜೊತೆಯಲ್ಲಿ ಕಾಪುವಿನ ಮಲ್ಲಾರ್ ಎಂಬಲ್ಲಿಗೆ ಬಂದಿದ್ದರು.
ಅಲ್ಲಿ ಸಮೀರ್ ಇವರಿಗೆ ಬಸ್ ತೋರಿಸಿದ್ದು, ದಾಖಲೆ ಪತ್ರ ಮತ್ತೆ ಕೊಡುವುದಾಗಿ ಹೇಳಿ ಎರಡು ಲಕ್ಷ ಮುಂಗಡ ಪಡೆದುಕೊಂಡಿದ್ದು, ಬಾಕಿ ಹಣವನ್ನು ಹದಿನೈದು ದಿನಗಳಲ್ಲಿ ಪಡೆದುಕೊಂಡಿದ್ದ. ಆದ್ರೆ, ತುಮಕೂರಿನಲ್ಲಿ ನಿಲ್ಲಿಸಿದ ಬಸ್ಸನ್ನು ಮತ್ತೆ ಉಡುಪಿಗೆ ತಂದಿದ್ದಾರೆ ಎಂದು ಆರೋಪಿಸಿದ್ದರು. ತಂದೆ ಮಗ ಇಬ್ಬರೂ ಸೇರಿ ವಂಚಿಸಿದ್ದಾಗಿ ಕಾಪು ಠಾಣೆಗೆ ಗೌಸ್ ದೂರು ನೀಡಿದ್ದರು.
ನಾಗ ಚೈತನ್ಯ ಜೊತೆ ನಟಿ ಸಮಂತಾ, ವಿಚ್ಛೇದನ ಪಡೆದು ಮೂರು ವರ್ಷ ಕಳೆದಿದೆ. ನಾಗ ಚೈತನ್ಯ ಈಗಾಗಲೇ ಎರಡನೇ ಮದುವೆಯಾಗಿದ್ದಾರೆ. ಆದರೆ ನಟಿ ಸಮಂತಾ ಮಾತ್ರ ಸಿಂಗಲ್ ಆಗಿ ಉಳಿದಿದ್ದಾರೆ. ಆದರೆ ಸಮಂತಾ, ಖ್ಯಾತ ನಿರ್ದೇಶಕನೊಬ್ಬನೊಟ್ಟಿಗೆ ಪ್ರೀತಿಯಲ್ಲಿದ್ದಾರೆ ಎನ್ನಲಾಗುತ್ತಿದೆ. ಚಿತ್ರಕತೆ, ವೆಬ್ ಸರಣಿಗಳನ್ನು ನಿರ್ದೇಶನ ಮಾಡುತ್ತಿರುವ ನಿರ್ದೇಶಕನ ಜೊತೆ ಸಮಂತಾ ಪ್ರೀತಿಯಲ್ಲಿದ್ದಾರೆ ಎಂಬ ಸುದ್ದಿ ಈ ಹಿಂದೆಯೂ ಹರಿದಾಡಿತ್ತು. ಆದರೆ ಇದೀಗ ಸುದ್ದಿ ಖಾತ್ರಿಯಾಗಿದೆ ಎನ್ನಲಾಗುತ್ತಿದೆ.
ಸಮಂತಾ, ಇತ್ತೀಚೆಗೆ ಗಲಾಟಾ ಇಂಡಿಯಾ ಹೆಸರಿನ ತಮಿಳು ಯೂಟ್ಯೂಬ್ ಚಾನೆಲ್ಗೆ ಸಂದೇಶ ನೀಡುತ್ತಿದ್ದರಂತೆ. ಸಂದರ್ಶನದ ಮಧ್ಯೆ ಸಮಂತಾ ವಾಟ್ಸ್ಆಪ್ಗೆ ಸಂದೇಶವೊಂದು ಬಂತಂತೆ. ಅದೂ ಆಡಿಯೋ ಸಂದೇಶ. ಆ ಆಡಿಯೋ ಸಂದೇಶವನ್ನು, ಸಂದರ್ಶನದ ನಡುವೆಯೇ ಸಮಂತಾ ತೆರೆದು ಕೇಳಿಸಿಕೊಂಡಿದ್ದಾರೆ. ಆ ಬಳಿಕ ಅವರ ಮುಖ ಚಹರೆಯೇ ಬದಲಾಯ್ತಂತೆ. ಸಂದೇಶ ಕೇಳಿಸಿಕೊಂಡ ಬಳಿಕ ನಟಿ ನಾಚಿ ನೀರಾದರಂತೆ. ಆ ಬಳಿಕ ಇನ್ನಷ್ಟು ಉತ್ಸಾಹದಿಂದ ಸಂದರ್ಶನ ಮುಂದುವರೆಸಿದರಂತೆ. ಅಲ್ಲೇ ಇದ್ದವರ ಪ್ರಕಾರ ಆ ಸಂದೇಶ ಒಬ್ಬ ಯುವ ನಿರ್ದೇಶಕನದ್ದು.
ಖ್ಯಾತ ವೆಬ್ ಸರಣಿ ನಿರ್ದೇಶಕ ಜೋಡಿಯಾದ ರಾಜ್ ಆಂಡ್ ಡಿಕೆ ಅವರಲ್ಲಿ ರಾಜ್ ಜೊತೆಗೆ ಸಮಂತಾ ಪ್ರೀತಿಗೆ ಬಿದ್ದಿದ್ದಾರೆ ಎಂಬ ಸುದ್ದಿ ಕಳೆದ ಕೆಲ ತಿಂಗಳುಗಳಿಂದಲೂ ಹರಿದಾಡುತ್ತಲೇ ಇದೆ. ಇದೀಗ ಸಮಂತಾ, ಗಲಾಟಾ ಇಂಡಿಯಾ ಸಂದರ್ಶನದ ಸಮಯದಲ್ಲಿ ರಾಜ್ ಅವರಿಂದಲೇ ಸಂದೇಶ ಸ್ವೀಕರಿಸಿದ್ದರು ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ರಾಜ್ ಕಳಿಸಿದ್ದಾರೆ ಎನ್ನಲಾಗುತ್ತಿರುವ ಆ ಆಡಿಯೋ ಸಂದೇಶದಲ್ಲಿ ನಿಖರವಾಗಿ ಏನಿತ್ತು ಎಂಬುದು ತಿಳಿದು ಬಂದಿಲ್ಲ. ರಾಜ್ ನಿಧಿಮೋರು ಖ್ಯಾತ ನಿರ್ದೇಶಕ. ಈ ಮುಂಚೆ ಟಿವಿ ಎಪಿಸೋಡ್ಗಳಿಗೆ ಚಿತ್ರಕತೆ ಬರೆಯುತ್ತಿದ್ದರು. ಸಮಂತಾ ನಟಿಸಿದ ಮೊದಲ ವೆಬ್ ಸರಣಿ ‘ದಿ ಫ್ಯಾಮಿಲಿ ಮ್ಯಾನ್’ ಇವರೇ ನಿರ್ದೇಶನ ಮಾಡಿದ್ದರು. ಅದರ ಹೊರತಾಗಿ ‘ಗನ್ಸ್ ಆಂಡ್ ಗುಲಾಬ್ಸ್’, ‘ಫರ್ಜಿ’ ಇನ್ನೂ ಕೆಲವು ವೆಬ್ ಸರಣಿಗಳನ್ನು ನಿರ್ದೇಶನ ಮಾಡಿದ್ದಾರೆ. ಇದೀಗ ಸಮಂತಾ ನಟಿಸುತ್ತಿರುವ ‘ರಕ್ತ ಬ್ರಹ್ಮಾಂಡ್’ ವೆಬ್ ಸರಣಿಗೆ ಇವರೇ ನಿರ್ಮಾಪಕರು. ಅಂದಹಾಗೆ ಸಮಂತಾ ಜೊತೆಗೆ ಹೆಸರು ಕೇಳಿ ಬರುತ್ತಿರುವ ರಾಜ್ಗೆ ಈಗಾಗಲೇ ಮದುವೆ ಆಗಿದೆ.
ಮಂಗಳೂರು : ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರು ಜ. 20 ಮತ್ತು 21ರಂದು ಬಿಹಾರಕ್ಕೆ ತೆರಳಿದ್ದಾರೆ.
ಪಾಟ್ನಾದಲ್ಲಿ ನಡೆಯಲಿರುವ 85ನೇ ಅಖಿಲ ಭಾರತ ಪೀಠಾಸೀನಾ ಅಧಿಕಾರಿಗಳ ಸಮ್ಮೇಳನದಲ್ಲಿ ಭಾಗವಹಿಸಲಿರುವ ಅವರು “ಸಂವಿಧಾನದ 75ನೇ ವಾರ್ಷಿಕೋತ್ಸವ: ಸಂವಿಧಾನಿಕ ಮೌಲ್ಯಗಳನ್ನು ಬಲಪಡಿಸುವಲ್ಲಿ ಸಂಸತ್ತು ಮತ್ತು ಶಾಸಕಾಂಗ ಸಂಸ್ಥೆಗಳ ಕೊಡುಗೆ” ಎಂಬ ವಿಷಯದಲ್ಲಿ ತಮ್ಮ ಅನಿಸಿಕೆಗಳನ್ನು ಮಂಡಿಸಲಿದ್ದಾರೆ.