Connect with us

ಕಡಲಿಗಿಳಿದು ಹುಚ್ಚಾಟ ಮಾಡಿದ ಯುವಕನನ್ನು ರಕ್ಷಿಸಿ ಸಾಹಸ ಮೆರೆದ ಮೀನುಗಾರ ಯುವಕರು..!!

Published

on

ಕಡಲಿಗಿಳಿದು ಹುಚ್ಚಾಟ ಮಾಡಿದ ಯುವಕನನ್ನು ರಕ್ಷಿಸಿ ಸಾಹಸ ಮೆರೆದ ಮೀನುಗಾರ ಯುವಕರು..!!

ಸುರತ್ಕಲ್: ಕಡಲ ವಿಹಾರಕ್ಕೆ ಬಂದ ಯುವಕರು ಬೇಜವಬ್ದಾರಿಯಿಂದ ಕಡಲಲ್ಲಿ ಈಜುತ್ತಿರುವಾಗ, ಕಡಲ ಸೆಳೆಗೆ ಸಿಕ್ಕಿ ಸ್ಥಳೀಯರು ತಮ್ಮ ಪ್ರಾಣ ಒತ್ತೆ ಇಟ್ಟು ಯುವಕನನ್ನು ರಕ್ಷಿಸಿದ ಘಟನೆ ಸುರತ್ಕಲ್ ನ ಗೊಡ್ಲೆಕೊಪ್ಪ ಸಮುದ್ರ ಕಿನಾರೆಯಲ್ಲಿ ನಿನ್ನೆ (ಜೂನ್ 28) ನಡೆದಿದೆ.

ಪುತ್ತೂರು ಕಡೆಯಿಂದ ಗುಡ್ಡಕೊಪ್ಳ ಕಡಲ ಕಿನಾರೆಗೆ ವಿಹಾರಕ್ಕೆ ಬಂದ ಆರು ಮಂದಿ ಯುವಕರ ತಂಡ ಸ್ಥಳೀಯರ ಸೂಚನೆ ಮೇರೆಗೂ ಧಿಕ್ಕರಿಸಿ, ಸಮುದ್ರಕ್ಕೆ ಇಳಿದು ಹುಚ್ಚಾಟ ನಡೆಸಿದ್ದಾರೆ.

ಈ ಸಂಧರ್ಭ ಸಮುದ್ರದ ಅಲೆಯ ರಭಸಕ್ಕೆ ಯುವಕ ಕೊಚ್ಚಿ ಹೋಗಿದ್ದು, ಡ್ರೆಜ್ಜರ್ ಹಿಡಿದು ಸಹಾಯಕ್ಕೆ ಅಂಗಲಾಚುತ್ತಿದ್ದ ಯುವಕನನ್ನು ರಕ್ಷಿಸಲು,

ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಕರಾವಳಿ ರಕ್ಷಣಾ ಪಡೆಗೆ ಡ್ರಜ್ಜರ್ ಕಡೆಗೆ ಹೋಗಿ ಯುವಕನನ್ನು ರಕ್ಷಿಸಲು ಅಸಾಧ್ಯವಾಗಿತ್ತು.

ಈ ಸಂಧರ್ಭ ಸ್ಥಳೀಯ ಯುವಕರಾದ ಶ್ರೀಯಾನ್ ಮತ್ತು ಸುಮನ್ ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ಈಜುತ್ತಾ, ಡ್ರಜರ್ ಕಡೆಗೆ ಹೋಗಿ ಯುವಕನನ್ನು ಹಿಡಿದು ದಡಕ್ಕೆ ತಲುಪಿಸಿ,

ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನನ್ನು ರಕ್ಷಣೆ ಮಾಡಿ ಬದುಕಿಸಿ ಸಾಹಸ ಮೆರೆದಿದ್ದಾರೆ.

Click to comment

Leave a Reply

Your email address will not be published. Required fields are marked *

FILM

ತುಳುಚಲನಚಿತ್ರ ನಿರ್ಮಾಪಕರ ಸಂಘದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ

Published

on

ಮಂಗಳೂರು: ತುಳು ಚಲನ ಚಿತ್ರಗಳಿಗೆ ಸಬ್ಸಿಡಿ, ಪ್ರಾದೇಶಿಕ ಭಾಷಾ ಸಿನಿಮಾಗಳಿಗೆ ಪ್ರಶಸ್ತಿ, ಮಲ್ಟಿಫ್ಲೆಕ್ಸ್ ಗಳಲ್ಲಿ ಕನ್ನಡ ಸಿನಿಮಾಗಳಿಗೆ ನೀಡುವಂತೆ ಶೇಕಡಾವಾರು ಷೇರು, ತುಳುಚಲನಚಿತ್ರ ನಿರ್ಮಾಪಕರ ಸಂಘದ ಕಟ್ಟಡ ನಿರ್ಮಾಣಕ್ಕೆ ಜಾಗ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತುಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಆರ್.ಧನರಾಜ್ ನೇತೃತ್ವದಲ್ಲಿ ಮನವಿ  ಸಲ್ಲಿಸಲಾಯಿತು.

ನಿಯೋಗದಲ್ಲಿ ಸಂಘದ ಉಪಾಧ್ಯಕ್ಷ ಪ್ರವೀಣ್ ಕುಮಾರ್ ಕೊಂಚಾಡಿ, ಸಚಿನ್ ಎ.ಎಸ್, ಪ್ರೀತಂ ಸಾಗರ್ ಉಪಸ್ಥಿತರಿದ್ದರು.‌

Continue Reading

LATEST NEWS

ಭಾರತೀಯರಿಗೆ ಬಿಗ್ ಶಾ*ಕ್; ಸೌದಿ ಅರೇಬಿಯಾದಲ್ಲಿ ಹೊಸ ವೀಸಾ ನಿಯಮಗಳು ಜಾರಿ

Published

on

ಮಂಗಳೂರು/ ನವದೆಹಲಿ : ಸೌದಿ ಅರೇಬಿಯಾ ಸರಕಾರವು ದೇಶದಲ್ಲಿ ವಿದೇಶಿ ಉದ್ಯೋಗಿಗಳಿಗೆ ವೀಸಾ ನಿಯಮಗಳನ್ನು ಬಿಗಿಗೊಳಿಸಿದೆ. ಅದರಲ್ಲೂ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡಲು ಹೋಗುವ ಭಾರತೀಯರಿಗೆ ಶೈಕ್ಷಣಿಕ ಮತ್ತು ವೃತ್ತಿಪರ ಅರ್ಹತೆಗಳ ಪರಿಶೀಲನೆಯನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.

ಸೌದಿ ಸರ್ಕಾರವು ತನ್ನ ‘ವಿಷನ್ 2030’ ಅನ್ನು ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ನೇತೃತ್ವದಲ್ಲಿ ನಡೆಸುತ್ತಿದೆ. ಇದು ತನ್ನ ನಾಗರಿಕರಿಗೆ ಹೆಚ್ಚಿನ ಉದ್ಯೋಗವಕಾಶ ಕಲ್ಪಿಸುವತ್ತ ಗಮನ ಹರಿಸುತ್ತಿದ್ದು, ಸೌದಿ ಕಾರ್ಮಿಕ ವಲಯದಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತಿದೆ.

ನಿಯಮಗಳ ಪ್ರಕಾರ,  ಎಲ್ಲಾ ಭಾರತೀಯ ಕಾರ್ಮಿಕರು ತಮ್ಮ ಉದ್ಯೋಗದ ಪ್ರಾಮಾಣಿಕತೆ ಹಾಗೂ ಅರ್ಹತೆಯನ್ನು ದೃಢೀಕರಿಸಲು ಕೆಲವು ಹೊಸ ದಾಖಲೆ ಪ್ರಕ್ರಿಯೆ ಅನುಸರಿಸಬೇಕು. ಈ ಕ್ರಮ ದೇಶದಲ್ಲಿ ಕಾರ್ಮಿಕ ನಿಯಮಗಳನ್ನು ಸುಧಾರಿಸಲು ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಪಾರದರ್ಶಕತೆಯನ್ನು ಖಾತ್ರಿಪಡಿಸಲು ರಚಿಸಲಾಗಿದೆ.  ಈ ಹೊಸ ನೀತಿಯು ಭಾರತೀಯ ಕಾರ್ಮಿಕರ ಕೆಲಸದ ಪರಿಸ್ಥಿತಿಯನ್ನು  ಸುಧಾರಿಸುವಲ್ಲಿ ಮಹತ್ವದ  ಪಾತ್ರ ವಹಿಸುತ್ತದೆ ಎಂದು ಸೌದಿ ಸರ್ಕಾರ ತಿಳಿಸಿದೆ.

ಇದನ್ನೂ ಓದಿ : WATCH : ಆ ಒಂದು ರೀಲ್ಸ್‌ನಿಂದ ಗಿನ್ನಿಸ್ ದಾಖಲೆ ಬರೆದ ಕೇರಳದ ಯುವಕ

ಸೌದಿ ಅರೇಬಿಯಾ ವಿದೇಶಿ ಕಾರ್ಮಿಕರ ನಿವಾಸ ಪರವಾನಗಿ ನವೀಕರಣ ಮತ್ತು ನಿರ್ಗಮನ – ಪುನಃಪ್ರವೇಶ ವೀಸಾದ ಅವಧಿ ವಿಸ್ತರಣೆಗೆ ಸಂಬಂಧಿಸಿದ ನಿಯಮಗಳನ್ನು ತಿದ್ದುಪಡಿ ಮಾಡಿದೆ. ಸೌದಿ ಅರೇಬಿಯಾದಲ್ಲಿ ಕೆಲಸ ವೀಸಾ ಪಡೆಯಲು ಭಾರತೀಯ ನಾಗರಿಕರು ಈಗ ತಮ್ಮ ವೃತ್ತಿ ಮತ್ತು ಶೈಕ್ಷಣಿಕ ಅರ್ಹತೆಗಳ ಪೂರ್ವಪರಿಶೀಲನೆ ಪ್ರಕ್ರಿಯೆ ಮೂಲಕ ಹೋದರೆ ಮಾತ್ರ ಸಾಧ್ಯ.

Continue Reading

LATEST NEWS

ಅಮೆರಿಕ ಗಡಗಡ… ಒಳಾಂಗಣದಲ್ಲಿ ಟ್ರಂಪ್ ಪ್ರಮಾಣವಚನ

Published

on

ಮಂಗಳೂರು/ವಾಷಿಂಗ್ಟನ್ : ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿ ಸೋಮವಾರ (ಜನವರಿ 20ರಂದು) ಕ್ಯಾಪಿಟಲ್ ಕಟ್ಟಡದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅಮೆರಿಕ ಅಧ್ಯಕ್ಷರ ಪದಗ್ರಹಣವು ಈ ರೀತಿ ಒಳಾಂಗಣದಲ್ಲಿ ಆಗುತ್ತಿರುವುದು 40 ವರ್ಷಗಳಲ್ಲಿ ಇದೇ ಮೊದಲು.

ಹವಾಮಾನ ಇಲಾಖೆ ನೀಡಿರುವ ಎಚ್ಚರಿಕೆಯಿಂದಾಗಿ ಟ್ರಂಪ್ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸ್ಥಳ ಬದಲಾಗಿದೆ. ಹೊರಾಂಗಣದಲ್ಲಿ ನಡೆಯಬೇಕಿದ್ದ ಪ್ರಮಾಣವಚನ ಕಾರ್ಯಕ್ರಮವು US ಕ್ಯಾಪಿಟಲ್ ಒಳಗೆ ನಡೆಯಲಿದೆ. ಅದಕ್ಕೆ ಕಾರಣ ವಿಪರೀತ ಚಳಿ. 40 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಮೆರಿಕದ ಅಧ್ಯಕ್ಷರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ವ್ಯತ್ಯಾಸ ಆಗಿದೆ. ಈ ಸಮಾರಂಭವು ಸಾಂಪ್ರದಾಯಿಕವಾಗಿ ಯುಎಸ್ ಕ್ಯಾಪಿಟಲ್‌ನ ಹೊರಗಿನ ನ್ಯಾಷನಲ್ ಮಾಲ್‌ನಲ್ಲಿ ನಡೆಯುತ್ತಿತ್ತು.

ಇದನ್ನೂ ಓದಿ:WATCH : ಆ ಒಂದು ರೀಲ್ಸ್‌ನಿಂದ ಗಿನ್ನಿಸ್ ದಾಖಲೆ ಬರೆದ ಕೇರಳದ ಯುವಕ

‘ಆರ್ಕ್ಟಿಕ್ ಸ್ಪೋಟದಿಂದಾಗಿ ತೀವ್ರ ಚಳಿಗಾಳಿ ಬೀಸುತ್ತಿದ್ದು, ಜನರು ಪರಿತಪಿಸುತ್ತಿದ್ದಾರೆ. ನಾಗರಿಕರು ಸಂಕಷ್ಟ ಅನುಭವಿಸುವುದನ್ನು ನೋಡಲಾರೆ. ಹಾಗಾಗಿ, ಪ್ರಮಾಣವಚನ, ಪ್ರಾರ್ಥನೆ ಮತ್ತು ಇತರ ಭಾಷಣ ಕಾರ್ಯಕ್ರಮಗಳನ್ನು ಯುಎಸ್ ಕ್ಯಾಪಿಟಲ್‌ಗೆ ಸ್ಥಳಾಂತರಿಸುವಂತೆ ಆದೇಶಿಸಿದ್ದೇನೆ’ ಎಂದು ಸಾಮಾಜಿಕ ಮಾಧ್ಯಮ ವೇದಿಕೆ ‘ಟ್ರುತ್’ನಲ್ಲಿ ಟ್ರಂಪ್ ಹೇಳಿದ್ದಾರೆ.

ಜನವರಿ 20ರಂದು ಟ್ರಂಪ್ ಪ್ರಮಾಣವಚನ ನಡೆಯುವ ಸಮಯಕ್ಕೆ ವಾಷಿಂಗ್ಟನ್‌ನ ತಾಪಮಾನವು-7 ಡಿಗ್ರಿ ಸೆಲ್ಸಿಯಸ್ ಇರಲಿದೆ. ಆದರೆ, ತಂಪು ಗಾಳಿ ಬೀಸುವುದರಿಂದ ವಿಪರೀತ ಚಳಿ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

40 ವರ್ಷಗಳ ಹಿಂದೆ ಇದೇ ರೀತಿ ಆಗಿತ್ತು
ಅಮೆರಿಕದ ಮಾಜಿ ಅಧ್ಯಕ್ಷ ರೊನಾಲ್ಡ್ ರೇಗನ್ ಕೂಡ ಚಳಿಯಿಂದಾಗಿ ಪ್ರಮಾಣ ವಚನ ಸಮಾರಂಭದ ಸ್ಥಳ ಬದಲಾಯಿಸಿದ್ದರು. 1985ರಲ್ಲೂ ಇದೇ ರೀತಿ ಆಗಿತ್ತು. ರಿಪಬ್ಲಿಕನ್ ಪಕ್ಷದಿಂದ ಚುನಾಯಿತರಾಗಿದ್ದ ರೊನಾಲ್ಡ್ ರೇಗನ್ ಅವರು ತೀವ್ರ ಚಳಿಯಿಂದಾಗಿ ಪದಗ್ರಹಣ ಕಾರ್ಯಕ್ರಮವನ್ನು ರೋಟುಂಡಾದಲ್ಲಿ ನಡೆಸಿದ್ದರು. ಆಗ, ತಾಪಮಾನವು-23 ಡಿಗ್ರಿ ಸೆಲ್ಸಿಯಸ್‌ನಿಂದ-29 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿತ್ತು.

Continue Reading

LATEST NEWS

Trending

Exit mobile version