DAKSHINA KANNADA
ಉಳ್ಳಾಲ ಲಾರಿಯಿಂದ ಮೀನಿನ ತ್ಯಾಜ್ಯ ನೀರು ರಸ್ತೆಗೆ ಬಿದ್ದು ಸರಣಿ ಅಪಘಾತ, ಸ್ಥಳೀಯರಿಂದ ಟ್ಯಾಂಕರಿಗೆ ಘೇರಾವ್..!
ಉಳ್ಳಾಲ: ಫಿಶ್ ಮಿಲ್ ತ್ಯಾಜ್ಯದ ನೀರು ಟ್ಯಾಂಕರ್‌ನಿಂದ ರಸ್ತೆಯುದ್ದಕ್ಕೂ ಹರಿದು, ಸ್ಥಳೀಯರು ಟ್ಯಾಂಕರ್ ಲಾರಿಯನ್ನು ತಡೆದು ಪ್ರತಿಭಟಿಸಿದ ಘಟನೆ ಮಂಗಳೂರು ಉಳ್ಳಾಲದಲ್ಲಿ ಇಂದು ನಡೆದಿದೆ.
ಫಿಶ್ ಮೀಲ್ ತ್ಯಾಜ್ಯ ಹೊತ್ತಿದ್ದ ಟ್ಯಾಂಕರ್ ಇಂದು ಬೆಳಿಗ್ಗೆ ಉಳ್ಳಾಲ ಕೋಟೆಪುರದ ಫ್ಯಾಕ್ಟರಿ ಕಡೆ ಸಾಗುತ್ತಿದ್ದ ವೇಳೆ ಅಬ್ಬಕ್ಕ ವೃತ್ತದಿಂದ ಮೊಗವೀರ ಪಟ್ಣದವರೆಗೆ ರಸ್ತೆಯುದ್ದಕ್ಕೂ ದುರ್ನಾತ ಬೀರುವ ರಾಸಾಯನಿಕ ಮಿಶ್ರಿತ ತ್ಯಾಜ್ಯವನ್ನ ಚೆಲ್ಲುತ್ತಾ ಸಾಗಿದೆ.
ಪರಿಣಾಮ ರಸ್ತೆಯಲ್ಲಿ ಚಲಿಸುತ್ತಿದ್ದ ದ್ವಿಚಕ್ರ ವಾಹನಗಳು ಜಾರಿ ಬಿದ್ದಿದ್ದು,ಸ್ಥಳೀಯರು ತಕ್ಷಣ ಟ್ಯಾಂಕರನ್ನ ತಡೆದು ನಿಲ್ಲಿಸಿ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸ್ಥಳೀಯ ಮೀನುಗಾರರಾದ ಗಣೇಶ್ ಉಳ್ಳಾಲ್ ಮಾತನಾಡಿ ಉಳ್ಳಾಲ ಕೋಟೆಪುರದಲ್ಲಿರುವ ಫಿಶ್ ಮೀಲ್ ಫ್ಯಾಕ್ಟರಿಗಳು ಸರಕಾರದ ನಿಯಮಗಳನ್ನ ಗಾಳಿಗೆ ತೂರಿ ಕಾರ್ಯಾಚರಿಸುತ್ತಿವೆ.
ತಮ್ಮ ಫ್ಯಾಕ್ಟರಿಗಳ ಮಲಿನಗಳನ್ನು ಸಮುದ್ರಕ್ಕೆ ಬಿಟ್ಟು ಮತ್ಸ್ಯ ಸಂತತಿಗಳ ಮಾರಣ ಹೋಮ ನಡೆಸಿವೆ.
ಈ ಟ್ಯಾಂಕರುಗಳು ಉಳ್ಳಾಲ ನಗರವನ್ನೆ ಗಬ್ಬು ನಾರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ಬಗ್ಗೆ ಎಚ್ಚೆತ್ತ ಫಿಶ್ ಮೀಲ್ ಫ್ಯಾಕ್ಟರಿಯವರು ಟ್ಯಾಂಕರ್ ನೀರನ್ನು ಬಳಸಿ ರಸ್ತೆಯನ್ನೇ ಸ್ವಚ್ಛಗೊಳಿಸಿದ್ದಾರೆ.
ಸ್ಥಳಕ್ಕೆ ಉಳ್ಳಾಲ ನಗರ ಸಭೆ ಆಯುಕ್ತರಾದ ವಿದ್ಯಾ ಕಾಳೆ ಭೇಟಿ ನೀಡಿದ್ದು ಟ್ಯಾಂಕರಲ್ಲಿದ್ದ ತ್ಯಾಜ್ಯವನ್ನ ಸುರಕ್ಷಿತವಾಗಿ ವಿಲೇವಾರಿ ನಡೆಸಲು ಚಾಲಕನ ವಿರುದ್ಧ ಕ್ರಮ ಕೈಗೊಂಡಿದ್ದಾರೆ.
BANTWAL
ವೈನ್ ಶಾಪ್ ಗೆ ಬಂದಿದ್ದ ಆಸಾಮಿ ಮೊಬೈಲ್ ಕದ್ದು ಎಸ್ಕೇಪ್..!!
ಪುತ್ತೂರು: ವೈನ್ ಶಾಪ್ ಗೆ ಬಂದಿದ್ದ ವ್ಯಕ್ತಿಯೋರ್ವ ಮೊಬೈಲ್ ಎಗರಿಸಿ ಪರಾರಿಯಾದ ಘಟನೆ ವಿಟ್ಲ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಶ್ರೀರಾಮ್ ವೈನ್ ಶಾಪ್ ನಲ್ಲಿ ನಡೆದಿದೆ.
ವ್ಯಕ್ತಿಯೋರ್ವ ಗ್ರಾಹಕರ ಸೋಗಿನಲ್ಲಿ ವೈನ್ ಶಾಪ್ ಗೆ ಬಂದಿದ್ದ. ಮೊದಲಿಗೆ ಗ್ರಾಹಕರಂತೆ ಬಂದು ಮದ್ಯ ಖರೀದಿಗೆ ಆರ್ಡರ್ ಮಾಡಿ ಟೇಬಲ್ ನಲ್ಲಿದ್ದ ಮೊಬೈಲ್ ಗೆ ಕನ್ನ ಹಾಕಿದ್ದಾನೆ. ಬಳಿಕ ಶಾಪ್ ನವರು ಬೇರೆ ಕಡೆ ತಿರುಗುವಾಗ ಈಚೆಯಿಂದ ಈ ಕದೀಮ ಮೊಬೈಲ್ ಅನ್ನು ಎಗರಿಸಿ ಬ್ಯಾಗ್ ಗೆ ಹಾಕಿಕೊಂಡು ಪರಾರಿಯಾಗಿದ್ದಾನೆ.
ವೈನ್ ಶಾಪ್ ನಲ್ಲಿರುವ ರಾಜೇಶ್ ಎಂಬವರ ಮೊಬೈಲ್ ಕಳವು ಆಗಿತ್ತು. ಕೂಡಲೇ ಅವರು ಸಿಸಿ ಕ್ಯಾಮರಾ ಚೆಕ್ ಮಾಡಿದ್ದಾರೆ. ಆಗ ಮೊಬೈಲ್ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಪತ್ತೆಯಾಗಿದೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BELTHANGADY
ದ.ಕ ದಲ್ಲಿ ಭಾರಿ ಮಳೆ: ಧರ್ಮಸ್ಥಳ ಲಕ್ಷ ದೀಪೋತ್ಸವದಲ್ಲಿದ್ದ ಅಂಗಡಿಗಳಿಗೆ ಹಾನಿ..!!
ಧರ್ಮಸ್ಥಳ: ಧರ್ಮಸ್ಥಳದಲ್ಲಿ 3ನೇ ದಿನದ ಲಕ್ಷ ದೀಪೋತ್ಸವದ ವೈಭವ ಒಂದು ಕಡೆಯಾದರೆ, ಇನ್ನೊಂದೆಡೆ ಗುಡುಗು ಸಹಿತ ಬಾರಿ ಮಳೆ ಅವಾಂತರ ತಂದಿದೆ.
ಕೆಲವು ಅಂಗಡಿಗಳಿಗೆ ಬಹಳ ಹಾನಿ ಆಗಿದೆ. ಮಳೆ ಅಂಗಡಿ ಮಾಲೀಕರಿಗೆ ನಷ್ಟವನ್ನುಂಟು ಮಾಡಿದೆ. ಮಳೆಗೆ ಅಂಗಡಿಯೊಳಗಿದ್ದ ಕೆಲವು ವಸ್ತುಗಳು ಮಳೆಗೆ ಕೊಚ್ಚಿಕೊಂಡು ಹೋಗಿದೆ.
ಧರ್ಮಸ್ಥಳ ಶಾಲಾ ಮೈದಾನದಲ್ಲಿ ನಡೆಯುತ್ತಿದ್ದ ವಸ್ತು ಪ್ರದರ್ಶನಕ್ಕೆ ಬಹಳ ಸಮಸ್ಯೆ ಆಗಿದೆ. ಸಭಾಂಗಣದ ಬಳಿ ಹಾಕಿದ್ದ ಕುರ್ಚಿಗಳು ಒದ್ದೆಯಾಗಿದೆ.
DAKSHINA KANNADA
Putturu: ಮುಸ್ಲಿಂ ವಿದ್ಯಾರ್ಥಿ ಜೋಡಿಗಳ ಮೇಲೆ ಹಲ್ಲೆ..!!
ಪುತ್ತೂರು: ಮುಸ್ಲಿಂ ವಿದ್ಯಾರ್ಥಿಗಳ ಜೋಡಿಯನ್ನು ತಡೆ ಹಿಡಿದು ಹಲ್ಲೆಗೆ ಯತ್ನಿಸಿರುವ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬಾಜಾರು ಎಂಬಲ್ಲಿ ನಡೆದಿದ್ದು, ಅದರ ವಿಡಿಯೋ ಇದೀಗ ಸಾಮಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ಘಟನೆಯು ಕೆಲವು ವಾರಗಳ ಹಿಂದೆ ನಡೆದಿದ್ದು, ಅದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮುಸ್ಲಿಂ ವಿದ್ಯಾರ್ಥಿ ಜೋಡಿಯನ್ನು ತಡೆದ ಮುಸ್ಲಿಂ ಸಮುದಾಯದವರೇ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿರುವ ಆರೋಪಿಗಳು ಪರಾರಿಯಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯ ತಾಯಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಕುರಿತು ಪೊಲೀಸರು ಫೋಕ್ಸೋ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರಿಸಿದ್ದಾರೆ.
- FILM5 days ago
ರಾತ್ರಿ 12.30ಕ್ಕೆ ಆಡಿಷನ್..2.30ಕ್ಕೆ ಆಯ್ಕೆ-ಬೃಂದಾವನ ಸೀರಿಯಲ್ ಹೀರೋ ಕ್ಲಾರಿಟಿ
- FILM4 days ago
ನಮೃತಾ ಗೌಡ ಆವಾಜ್ ಗೆ ಸಂಗೀತಾ ಕಣ್ಣೀರು
- bengaluru7 days ago
Film: ಕಾಂತಾರ ಖ್ಯಾತಿಯ ಸಪ್ತಮಿ ಗೌಡ ಟಾಲಿವುಡ್ ಗೆ ಎಂಟ್ರಿ
- bengaluru5 days ago
ಹೈಕೋರ್ಟ್ ಕಲಾಪವನ್ನೂ ಬಿಡದ ಸೈಬರ್ ಹ್ಯಾಕರ್ಸ್-ವಿಡಿಯೋ ಕಾನ್ಫರೆನ್ಸ್ ಆ್ಯಪ್ನಲ್ಲಿ ಅಶ್ಲೀಲ ದೃಶ್ಯ ಅಪ್ಲೋಡ್