Wednesday, June 29, 2022

ಪುತ್ತೂರು: ಜಾಗದ ತಕರಾರು-ಅತ್ತಿಗೆ ಮೇಲೆಯೇ ಗುಂಡು ಹಾರಿಸಿದ ಮೈದುನ

ಪುತ್ತೂರು: ತಾಲೂಕಿನ ಶಾಂತಿಗೋಡು ಗ್ರಾಮದ ವೀರಮಂಗಲ ಕೊಯಕುಡೆ ಎಂಬಲ್ಲಿ ಜಾಗದ ತಕರಾರಿನಲ್ಲಿ ಮಾತಿನ ಚಕಮಕಿ ನಡೆದು, ಮೈದುನನೇ ಅತ್ತಿಗೆಯ ಮೇಲೆ ನಾಡ ಬಂದೂಕಿನಲ್ಲಿ ಗುಂಡು ಹಾರಿಸಿ ಕೊಲ್ಲಲು ಯತ್ನಿಸಿದ ಘಟನೆ ನಿನ್ನೆ ನಡೆದಿದೆ. ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ದರ್ನಮ್ಮ(54), ಆಕೆಯ ಗಂಡ ಬಾಬು ಗೌಡ ಮತ್ತು ಅವರ ಮಗ ರವಿ ತಮ್ಮ ಮನೆಯ ಬಳಿಯ ಜಮೀನಿನಲ್ಲಿ ತೊಂಡೆಕಾಯಿ ಬಳ್ಳಿಗೆ ಚಪ್ಪರ ಹಾಕುತ್ತಿದ್ದಾಗ, ಮಹಿಳೆಯ ಮೈದುನನಾಗಿರುವ ದೇವಪ್ಪ ಗೌಡ ತನ್ನ ಬಂದೂಕು ಹಿಡಿದು ತಂದಿದ್ದು ಬೆದರಿಸಿದ್ದಾನೆ.

ಅಲ್ಲದೆ, ಮಹಿಳೆಯನ್ನು ಉದ್ದೇಶಿಸಿ ಈ ಜಾಗ ನನಗೆ ಸೇರಿದ್ದು, ಇಲ್ಲಿ ನೀವು ಏನಾದರೂ ಬೆಳೆದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಹೇಳಿ ಕೈಯಲ್ಲಿದ್ದ ನಾಡ ಬಂದೂಕಿನಲ್ಲಿ ಗುಂಡು ಹಾರಿಸಿದ್ದಾನೆ.

ಆದರೆ, ಈ ವೇಳೆ ಮಹಿಳೆ ಬಗ್ಗಿ ತಪ್ಪಿಸಿಕೊಂಡಿದ್ದರಿಂದ ಗುಂಡು ಮೈಗೆ ತಾಗದೇ ತಪ್ಪಿ ಹೋಗಿದೆ. ಈ ಬಗ್ಗೆ ಮಹಿಳೆ ಪುತ್ತೂರು ನಗರ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ.

ಆರೋಪಿ ದೇವಪ್ಪ ಗೌಡ ವಿರುದ್ಧ ಕೊಲೆಯತ್ನ, ಜೀವ ಬೆದರಿಕೆ ಬಗ್ಗೆ ಪ್ರಕರಣ ದಾಖಲಾಗಿದೆ. ಆರೋಪಿ ಪೊಲೀಸರ ಕೈಗೆ ಸಿಗದೇ ತಪ್ಪಿಸಿಕೊಂಡಿದ್ದಾನೆ.

LEAVE A REPLY

Please enter your comment!
Please enter your name here

Hot Topics

MLC ಕೆ.ಪಿ.ನಂಜುಂಡಿ ಮತ್ತು ಬೆಂಬಲಿಗರಿಗೆ ಸ್ವಲ್ಪ ಬುದ್ಧಿ ಹೇಳಿ: ವಿಶ್ವಕರ್ಮ ಮುಖಂಡರ ನಿಯೋಗದಿಂದ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಮನವಿ

ಸಮಾಜ ಒಡೆಯುತ್ತಿರುವ ಕೆಲಸವನ್ನು ಬೇರಾರೂ ಮಾಡುತ್ತಿಲ್ಲ, ಸ್ವತಃ ನಂಜುಂಡಿಯವರೇ ಮಾಡುತ್ತಿದ್ದಾರೆ ಎಂದು ಮಂಗಳೂರಿನಲ್ಲಿ ವಿಶ್ವಕರ್ಮ ಮುಖಂಡರ ನಿಯೋಗ ಬಿಜೆಪಿ ರಾಜ್ಯಾಧ್ಯಕ್ಷ  ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.ಮಂಗಳೂರು : ಕರ್ನಾಟಕ...

ಕೈ ನಾಯಕನ ವಿವಾದಾತ್ಮಕ ಹೇಳಿಕೆಗೆ VHP ಗರಂ: ಬೆಳ್ತಂಗಡಿಯಲ್ಲಿ ದೂರು ದಾಖಲು

ಬೆಳ್ತಂಗಡಿ: ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡನೊಬ್ಬ ವಿವಾದಾತ್ಮಕ ಹೇಳಿಕೆಯನ್ನು ನೀಡಿರುವುದನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ಬೆಳ್ತಂಗಡಿ ಠಾಣೆಗೆ ದೂರು ನೀಡಿದೆ.ಜೂನ್ 25ರಂದು ಕಾಂಗ್ರೆಸ್ ಪಕ್ಷದ ವಿವಿಧ ವಿಭಾಗಗಳ ಪದಾಧಿಕಾರಿಗಳು ಬೆಳ್ತಂಗಡಿಯಲ್ಲಿ ಪತ್ರಿಕಾಗೋಷ್ಠಿಯನ್ನು...

ಸುಳ್ಯ: ಪುಟ್ಟ ಮಗಳ ಜೊತೆ ಬಾವಿಗೆ ಹಾರಿದ ಮಹಿಳೆ ಜೀವಾಂತ್ಯ-ಮಗು ಸೇಫ್

ಸುಳ್ಯ: ಮಹಿಳೆಯೋರ್ವರು ತನ್ನ ಮಗಳ ಜೊತೆ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿ, ಮಗಳು ಅದೃಷ್ಟವಶಾತ್ ಬದುಕುಳಿದ ಘಟನೆ ಸುಳ್ಯ ತಾಲ್ಲೂಕಿನ ದೇವಚಳ್ಳ ಗ್ರಾಮದ ತಳೂರು ಎಂಬಲ್ಲಿ ನಡೆದಿದೆ.ಅಗ್ನಿಶಾಮಕ ದಳದ ಸಿಬ್ಬಂದಿ ದಯಾನಂದ ಎಂಬವರ...