Saturday, November 27, 2021

ಸುಳ್ಯ: ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ-ಚಾಲಕ ಪಾರು

ಸುಳ್ಯ: ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಸುಳ್ಯ ತಾಲೂಕಿನ ಅಜ್ಜಾವರ ಸಮೀಪ ನಡೆದಿದೆ.‌ ಚಾಲಕ ಪವಾಡ ಸದೃಶವಾಗಿ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.


ಭುವನ್ ಎಂಬವರು ಚಲಾಯಿಸುತ್ತಿದ್ದ ಮಾರುತಿ ವ್ಯಾಗನರ್ ಕಾರು ಬೆಂಕಿಗೆ ಅಹುತಿಯಾಗಿದೆ. ರಾತ್ರಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಭುವನ್ ರವರು ಕಾರಿನಲ್ಲಿ ಹೊರಟು ಮಾವಿನಪಳ್ಳ ರಸ್ತೆ ತಲುಪಿದ ವೇಳೆ ಕಾರಿನ ಬೋನೆಟ್ ನಿಂದ ಹೊಗೆ ಬರಲಾರಂಭಿಸಿದು, ಇದನ್ನು ಗಮನಿಸಿದ ಭುವನ್ ಕಾರನ್ನು ಬದಿಗೆ ನಿಲ್ಲಿಸಿದರು.

ಈ ವೇಳೆ ಕಾರು ಏಕಾಏಕಿ ಲಾಕ್ ಆಗಿದೆ. ಕೆಲ ಹೊತ್ತಿನಲ್ಲಿ ಬಾನೆಟ್ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಅತಂಕಕ್ಕೆ ಒಳಗಾದ ಭುವನ್ ಹರಸಾಹಸ ಪಟ್ಟು ಡೋರ್ ತೆರೆದು ಕಾರಿನಿಂದ ಹೊರಗೆ ಇಳಿದಿದ್ದಾರೆ.

ಬಳಿಕ ಅಲ್ಲೇ ರಸ್ತೆಯ ಪಕ್ಕದಲ್ಲಿದ್ದ ಮನೆಯವರಿಗೆ ವಿಷಯ ತಿಳಿಸಿದ್ದು, ಅವರ ನೆರವಿನಿಂದ ಕಾರಿಗೆ ನೀರು ಸುರಿದು ಬೆಂಕಿಯನ್ನು ನಂದಿಸಿದ್ದಾರೆ.

ಇದರಿಂದ ಕಾರು ಸಂಪೂರ್ಣ ಸುಟ್ಟು ಹೋಗುವುದು ತಪ್ಪಿದರೂ ಕಾರಿನ ಇಂಜಿನ್ ಸಂಪೂರ್ಣ ಸುಟ್ಟು ಹಾನಿಯಾಗಿದೆ.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...