Wednesday, May 18, 2022

ರಸ್ತೆಯಲ್ಲೇ ಡೀಸೆಲ್​ ಟ್ಯಾಂಕರ್‌ಗೆ ​ಹತ್ತಿಕೊಂಡ ಬೆಂಕಿ: ಧಗ ಧಗ ಉರಿದ ವಾಹನ

ರಾಯಚೂರು: ಆಂಧ್ರ-ಕರ್ನಾಟಕ ಸಂಪರ್ಕ ಕಲ್ಪಿಸುವ ಕೃಷ್ಣಾ ಸೇತುವೆಯ ಶಕ್ತಿನಗರದ ಬಳಿ ಡೀಸೆಲ್​ ಟ್ಯಾಂಕರ್​ವೊಂದಕ್ಕೆ ಬೆಂಕಿ ಹೊತ್ತಿಕೊಂಡು ಧಗ ಧಗನೇ ಉರಿದಿರುವ ಘಟನೆ ತಡರಾತ್ರಿ ಸಂಭವಿಸಿದೆ.

ತಾಲೂಕಿನ ಶಕ್ತಿನಗರದ ದೇವಸೂಗೂರು ಬಳಿ ಬರುವ ಕೃಷ್ಣಾ ಸೇತುವೆ ಮೇಲೆ ಈ ಅವಘಡ ನಡೆದಿದೆ.

ಇದು ಡೀಸೆಲ್ ಸಾಗಿಸುವ ಟ್ಯಾಂಕರ್​ ಆಗಿದ್ದು, ಡಿಸೇಲ್ ಖಾಲಿ ಮಾಡಿಕೊಂಡು ಟ್ಯಾಂಕರ್​ ಕರ್ನಾಟಕದ ಕಡೆ ಬರುವ ವೇಳೆ ಬೆಂಕಿ ತಗುಲಿದೆ.

ಟ್ಯಾಂಕರ್​ಗೆ ಬೆಂಕಿ ಹತ್ತಿರುವುದನ್ನು ಗಮನಿಸಿದ ಚಾಲಕ ಕೂಡಲೇ ಕೆಳಗಿಳಿದು ಹೊರಗಡೆ ಬಂದಿದ್ದರಿಂದ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಧಗ ಧಗನೇ ಹೊತ್ತಿ ಉರಿದ ಡೀಸೆಲ್​ ಟ್ಯಾಂಕರ್​ಕೃಷ್ಣಾ ಸೇತುವೆ ಮೇಲೆ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಪರಿಣಾಮ ಕೆಲ ಗಂಟೆಗಳ ಕಾಲ ಎರಡು ಕಡೆ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.

ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ ಬಳಿಕ, ಪೊಲೀಸರು ಸಂಚಾರ ವ್ಯವಸ್ಥೆ ಸುಗಮಗೊಳಿಸಿದರು‌.

LEAVE A REPLY

Please enter your comment!
Please enter your name here

Hot Topics

ಕಿನ್ನಿಗೋಳಿ: ಗಾಳಿಮಳೆಗೆ ರಸ್ತೆಗೆ ಉರುಳಿದ ಮರ

ಕಿನ್ನಿಗೋಳಿ: ಮುಂಜಾನೆಯಿಂದಲೇ ಸುರಿಯುತ್ತಿರುವ ಧಾರಾಕಾರ ಗಾಳಿ ಮಳೆಯಿಂದಾಗಿ ಮರವೊಂದು ರಸ್ತೆಗೆ ಅಡ್ಡವಾಗಿ ಉರುಳಿದ ಘಟನೆ ಕಿನ್ನಿಗೋಳಿಯ ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಏಳಿಂಜೆ ಮುತ್ತಾಯಕೆರೆಯ ಬಳಿ ನಡೆದಿದೆ.ಬೆಳ್ಳಂಬೆಳಗ್ಗೆ ನಡೆದ ಘಟನೆಯಿಂದಾಗಿ ಮರವು ವಿದ್ಯುತ್...

MRPL ಉದ್ಯೋಗಿ ನಾಪತ್ತೆ: ಪ್ರಕರಣ ದಾಖಲು

ಸುರತ್ಕಲ್: ಎಂಆರ್‌ಪಿಎಲ್‌ನಲ್ಲಿ ಎಂಜಿನಿಯರ್ ಆಗಿದ್ದ ಸಕಲೇಶಪುರ ಮೂಲದ ಕಾಟಿಪಳ್ಳ ಶಾರದಾ ನಗರ ನಿವಾಸಿ ರಾಘವೇಂದ್ರ ಕೆ.ಆರ್ (52) ಎಂಬವರು ಮೇ 16ರಿಂದ ನಾಪತ್ತೆಯಾಗಿದ್ದಾರೆ.'ಫ್ಲೀಸ್ ತನ್ನನ್‌ನು ಹುಡುಕಬೇಡಿ' ಎಂದು ಚೀಟಿ ಬರೆದಿಟ್ಟು ಹೋಗಿದ್ದಾರೆ.ಹೋಗುವಾಗ ಬಟ್ಟೆ,...

ಉಪ್ಪಿನಂಗಡಿ: ನಿಯಂತ್ರಣ ತಪ್ಪಿ ಬಸ್‌ ಪಲ್ಟಿ

ಉಪ್ಪಿನಂಗಡಿ: ಚಾಲಕನ ನಿಯಂತ್ರಣ ಕಳೆದುಕೊಂಡು ಖಾಸಗಿ ಬಸ್ ರಸ್ತೆ ಬದಿಗೆ ಉರುಳಿದ ಬಿದ್ದ ಘಟನೆ ಉಪ್ಪಿನಂಗಡಿಯ ನೀರಕಟ್ಟೆ ಎಂಬಲ್ಲಿ ಸಂಭವಿಸಿದೆ.ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ 'ಭಾರತಿ' ಸಂಸ್ಥೆಗೆ ಸೇರಿದ ಖಾಸಗಿ ಬಸ್ ಪಲ್ಟಿ ಹೊಡೆದಿದೆ....