Connect with us

    LATEST NEWS

    ಮೂಡುಬಿದಿರೆ: ರಬ್ಬರ್‌ ತೋಟದಲ್ಲಿ ಭಾರೀ ಬೆಂಕಿ-ಎಕ್ರೆಗಟ್ಟಲೆ ಭಸ್ಮ

    Published

    on

    ಮೂಡುಬಿದಿರೆ: ತಾಲೂಕಿನ ಇರುವೈಲು ಗ್ರಾ.ಪಂ ವ್ಯಾಪ್ತಿಯ ಹೊಸ ಮರಾಯ ಪದವಿನಲ್ಲಿ ಕೊರಗಪ್ಪ ಶೆಟ್ಟಿ ಎಂಬವರ ರಬ್ಬರ್ ತೋಟಕ್ಕೆ ನಿನ್ನೆ ಸಂಜೆ ಬೆಂಕಿ ಬಿದ್ದಿದ್ದು 7 ರಿಂದ 8 ಎಕ್ರೆ ಪ್ರದೇಶ ಬೆಂಕಿಗೆ ಆಹುತಿಯಾಗಿದೆ.


    ಆ ಪ್ರದೇಶಕ್ಕೆ ಅಗ್ನಿಶಾಮಕ ವಾಹನ ಹೋಗಲು ಸರಿಯಾದ ದಾರಿ ಇಲ್ಲದಿರುವುದರಿಂದ ಸಮಸ್ಯೆಯಾಗಿತ್ತು.

    ಆದರೂ ಅಗ್ನಿಶಾಮಕ ದಳದ ಠಾಣಾಧಿಕಾರಿ ಅವರ ನೇತೃತ್ವದಲ್ಲಿ ಸಿಬಂದಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ.

    ಗ್ರಾಮಸ್ಥರು ಟ್ಯಾಂಕರ್, ಟಿಪ್ಪರ್ ಮೂಲಕ ನೀರನ್ನು ಹಾಯಿಸಿ ಬೆಂಕಿಯನ್ನ ಕಂಟ್ರೋಲ್‌ಗೆ ತಂದಿದ್ದು, ಮೂಡುಬಿದಿರೆ ಪೊಲೀಸ್ ಉಪನೀರೀಕ್ಷಕ ಸುದೀಪ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

    FILM

    ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

    Published

    on

    ಮುಂಬೈ: ಮುಂಬೈ ಟ್ರಾಫಿಕ್ ಪೊಲೀಸರ ವಾಟ್ಸಾಪ್ ಸಂಖ್ಯೆಗೆ ಬೆದರಿಕೆ ಸಂದೇಶ ಬಂದಿದ್ದು, ಐದು ಕೋಟಿ ಹಣ ಕೊಡಿ ಇಲ್ಲವಾದರೆ ಬಾಬಾ ಸಿದ್ದಿಕಿಗಿಂತ ಭಯಾನಕ ಸಾವು ನಿಮ್ಮದಾಗುತ್ತದೆ ಎಂದು ಬೆದರಿಕೆ ಹಾಕಲಾಗಿದೆ.

    ಇದನ್ನು ಲಘುವಾಗಿ ತೆಗೆದುಕೊಳ್ಳಬೇಡಿ, ಸಲ್ಮಾನ್ ಖಾನ್ ಜೀವಂತವಾಗಿರಲು ಬಯಸಿದರೆ ಮತ್ತು ಲಾರೆನ್ಸ್ ಬಿಷ್ಣೋಯ್ ಅವರೊಂದಿಗಿನ ದ್ವೇಷವನ್ನು ಕೊನೆಗೊಳಿಸಲು ಬಯಸಿದರೆ, ಅವರು ₹ 5 ಕೋಟಿ ಪಾವತಿಸಬೇಕಾಗುತ್ತದೆ. ಹಣ ನೀಡದಿದ್ದರೆ ಸಲ್ಮಾನ್ ಖಾನ್ ಸ್ಥಿತಿ ಬಾಬಾ ಸಿದ್ದಿಕ್ ಗಿಂತ ಕೆಟ್ಟದಾಗಿರುತ್ತದೆ ಎಂದು ಕಳುಹಿಸಿದವರು ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

    ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕ್ (66) ಅವರನ್ನು ಅಕ್ಟೋಬರ್ 12 ರಂದು ಮುಂಬೈನ ಉನ್ನತ ಮಟ್ಟದ ಬಾಂದ್ರಾದಲ್ಲಿರುವ ಅವರ ಶಾಸಕ ಪುತ್ರ ಜೀಶನ್ ಸಿದ್ದಿಕ್ ಅವರ ಕಚೇರಿಯ ಹೊರಗೆ ಗುಂಡಿಕ್ಕಿ ಕೊಲ್ಲಲಾಯಿತು.

    Continue Reading

    LATEST NEWS

    ಬಿಯರ್ ಸೇವಿಸಿ, ನೃತ್ಯ ಮಾಡುವಂತೆ ವಿದ್ಯಾರ್ಥಿನಿಯರಿಗೆ ಕಿರುಕುಳ

    Published

    on

    ಮಂಗಳೂರು/ರಾಮನಗರ: ವಿದ್ಯಾರ್ಥಿನಿಯರಿಗೆ ಬಿಯರ್ ಕುಡಿಸಿ, ಡ್ಯಾನ್ಸ್ ಮಾಡುವಂತೆ ಕಿರುಕುಳ ನೀಡಿದ ಆರೋಪದ ಮೇಲೆ ಕನಕಪುರ ಪಟ್ಟಣದ ರೂರಲ್‌ ಪದವಿ ಪೂರ್ವ ಕಾಲೇಜಿನ ಮೂವರು ಉಪನ್ಯಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಆದೇಶಿಸಿದೆ. ಉಪನ್ಯಾಸಕರಾದ ವಿಶ್ವನಾಥ್​, ಲಕ್ಷ್ಮೀಶ್​, ನಾಗೇಶ್ ವಿರುದ್ಧ ದಾಖಲಾಗಿದೆ. ಅಕ್ಟೋಬರ್​​​ 09 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

     

    ಕನಕಪುರ ಪಟ್ಟಣದ ರೂರಲ್‌ ಪದವಿ ಪೂರ್ವ ಕಾಲೇಜಿನಿಂದ ಅಕ್ಟೋಬರ್​​​ 5 ರಿಂದ 10ರವರೆಗೆ ಮಡಿಕೇರಿ ಪ್ರವಾಸ ಆಯೋಜಿಸಲಾಗಿತ್ತು. ಪ್ರವಾಸದಲ್ಲಿ ಪ್ರಾಂಶುಪಾಲರು ಬಿಯರ್​ ಕುಡಿದಿದ್ದಾರೆ. ಬಳಿಕ ಮೂವರು ವಿದ್ಯಾರ್ಥಿನಿಯರನ್ನು ಕೋಣೆಯಲ್ಲಿ ಕೂಡಿಹಾಕಿ ಬಲವಂತವಾಗಿ ಬಿಯರ್​ ಕುಡಿಸಿದ್ದಾರೆ. ಅಲ್ಲದೇ, ತಮ್ಮ ಜೊತೆ ಡ್ಯಾನ್ಸ್​ ಮಾಡುವಂತೆ ಬಲವಂತ ಮಾಡಿದ್ದಾರೆ.

    ಪ್ರವಾಸದಿಂದ ಕಾಲೇಜಿಗೆ ಬಂದ ಬಳಿಕ ವಿದ್ಯಾರ್ಥಿನಿಯರು ನಡೆದ ಘಟನೆ ಬಗ್ಗೆ ಮಹಿಳಾ ಉಪನ್ಯಾಸಕರಿಗೆ ಹೇಳಿದ್ದಾರೆ. ಅದಕ್ಕೆ ಮಹಿಳಾ ಉಪನ್ಯಾಸಕಿಯರು “ಕಾಲೇಜು ಅಂದಮೇಲೆ ಇದು ಕಾಮನ್” ಎಂದಿದ್ದಾರೆ. ಆದರೆ, ಈ ವಿಚಾರ ಮಕ್ಕಳಾ ಹಕ್ಕುಗಳ ರಕ್ಷಣಾ ಆಯೋಗಕ್ಕೆ ತಿಳಿದಿದೆ.

    ವಿಚಾರ ತಿಳಿದ ಕೂಡಲೇ ಮಕ್ಕಳಾ ಹಕ್ಕುಗಳ ರಕ್ಷಣಾ ಆಯೋಗ, ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಪತ್ರ ಬರೆದು ಉಪನ್ಯಾಸಕರ ವಿರುದ್ಧ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದೆ. ಅಲ್ಲದೇ ಪ್ರಕರಣದ ತನಿಖೆ ನಡೆಸಿ ಏಳು ದಿನದೊಳಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ.

    Continue Reading

    LATEST NEWS

    ಸುಳ್ಯ: ತೂಗು ಸೇತುವೆಯ ರೋಪ್ ತುಂಡಾಗಿ ಬಿದ್ದು ಮೂವರಿಗೆ ಗಾಯ

    Published

    on

    ಸುಳ್ಯ: ಅರಂತೋಡು ಸಮೀಪದ ಅರಮನೆಯ ಶಿಥಿಲಗೊಂಡ ತೂಗು ಸೇತುವೆಯ ರೋಪ್ ತುಂಡಾಗಿ ಬಿದ್ದ ಪರಿಣಾಮ ಮೂವರು ಗಾಯಗೊಂಡ ಘಟನೆ ಗುರುವಾರ ತಡರಾತ್ರಿ ನಡೆದಿದೆ.

    ಕುಸುಮಾಧರ ಉಳುವಾರು, ಚಂದ್ರಶೇಖರ ಕೊಂಪುಳಿ ಮತ್ತು ತೇಜಕುಮಾರ್ ಗಾಯಾಳುಗಳು. ರಾತ್ರಿ ಮರ್ಕಂಜದಲ್ಲಿ ಕೆಲಸ ಮುಗಿಸಿ ಅರಮನೆಗಯದ ತೂಗು ಸೇತುವೆಯ ಮೇಲೆ ಮೂವರು ಹೋಗುತ್ತಿದ್ದ ವೇಳೆ ರೋಪ್ ತುಂಡಾಗಿದೆ.

    ಪರಿಣಾಮ ಕುಸುಮಾಧರ ಉಳುವಾರು ಅವರ ಕೈಗೆ ಗಂಭೀರ ಏಟು ತಗುಲಿದರೆ ತೇಜಕುಮಾರ್ ಅವರು ರೋಪ್ ನಲ್ಲಿ ನೇತಾಡಿಕೊಂಡು ಅಲ್ಪ ಸ್ವಲ್ಪ ಗಾಯದಿಂದ ಪಾರಾಗಿದ್ದಾರೆ. ಚಂದ್ರಶೇಖರ ಅವರು ಗಾಯಗೊಂಡಿದ್ದಾರೆ. ಮೂವರನ್ನು ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

    Continue Reading

    LATEST NEWS

    Trending