ಮಂಗಳೂರು: ಸುರತ್ಕಲ್ ಸಮೀಪದ ಎಸ್‌ಇಝಡ್‌ನಲ್ಲಿರುವ ಸುಗಂಧದ್ರವ್ಯ ತಯಾರಿಕಾ ಘಟಕ ಕ್ಯಾಟಸಿಂತ್ ಕೆಮಿಕಲ್ಸ್ ಪ್ರೈವೇಟ್ ಲಿ. ಕಂಪೆನಿಯಲ್ಲಿ ಇಂದು ಬೆಂಕಿ ಹೊತ್ತಿಕೊಂಡಿದೆ.
ಕಳೆದ ವರ್ಷ ಈ ಕಂಪೆನಿಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಅದರ ದುರಸ್ತಿ ಕಾರ್ಯವು ಈಗಲೂ ಮುಂದುವರಿದಿದ್ದು, ಈ ಮಧ್ಯೆ ಮತ್ತೆ ಬೆಂಕಿ ತಗುಲಿ ದಟ್ಟ ಹೊಗೆ ಕಾಣಿಸಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮಂಗಳೂರು ಕದ್ರಿ ಅಗ್ನಿಶಾಮಕ ದಳ, ಎಚ್‌ಪಿಸಿಎಲ್, ಎನ್‌ಎಂಪಿಟಿ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಯಿತು. ಘಟನಾ ಸ್ಥಳಕ್ಕೆ ಬಜ್ಪೆ ಪೊಲೀಸರು ಭೇಟಿ ನೀಡಿದ್ದಾರೆ.